ಸುಸ್ತಾಗದಂತೆ ಸುತ್ತಾಡಲಿಕ್ಕೆ ಒಳ್ಳೆಯ ಗೆಳೆಯ ಟಾಟಾ ಆಲ್ಟ್ರೋಸ್‌ ಡಿಸಿಎ!

By Kannadaprabha NewsFirst Published Apr 5, 2022, 11:15 AM IST
Highlights

ಟಾಟಾ ಪ್ರಿಯರಿಗೆ ಆಲ್ಟೊ್ರೕಜ್‌ ಹೊಸದೇನಲ್ಲ. ಮಾರುಕಟ್ಟೆಗೆ ಬಂದಾಗ ಅನೇಕ ಸೆಗ್‌ಮೆಂಟ್‌ ಫಸ್ಟ್‌ ಸೌಲಭ್ಯಗಳನ್ನು ಒಳಗೊಂಡಿದ್ದ ಈ ಕಾರು ಎಲ್ಲರ ಫೇವರಿಟ್‌ ಕೂಡ ಆಗಿಬಿಟ್ಟಿತ್ತು. 

ಇದೀಗ ಅದೇ ಕಾರು ಹೊಸ ರೂಪದಲ್ಲಿ ಬಂದಿದೆ. ಪೆಟ್ರೋಲ್‌ ವರ್ಷನ್‌ನೊಂದಿಗೆ ಡ್ಯುಯಲ್‌ ಕ್ಲಚ್‌ ಅಥವಾ ಡಿಸಿಎ ಎಂಬ ಹೆಸರಿನೊಂದಿಗೆ ಗ್ರಾಹಕರಿಗೆ ದೊರೆಯುತ್ತಿದೆ. ಅಂದ ಹಾಗೆ ಇದು ಎಟಿ, ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಕಾರು.

ಬೆಂಗಳೂರಿಗೆ ಈಗ ಆಟೋ ಟ್ರಾನ್ಸ್‌ಮಿಷನ್‌ ಇರುವ ಕಾರುಗಳು ಹೇಳಿಮಾಡಿಸಿದಂತಿರುತ್ತವೆ. ಟ್ರಾಫಿಕ್ಕಿನ ನಡುವೆ ಕ್ಲಚ್‌, ಬ್ರೇಕ್‌, ಆ್ಯಕ್ಸಲರೇಟರುಗಳನ್ನು ನಿಭಾಯಿಸುವುದು ಕಷ್ಟ, ಅದಕ್ಕಿಂತ ಎಟಿ ಕಾರುಗಳೇ ಎಷ್ಟೋ ವಾಸಿ ಎಂದು ಒಮ್ಮೆ ಆಟೋಮ್ಯಾಟಿಕ್‌ ಕಾರುಗಳ ಸುಖ ಅನುಭವಿಸಿದವರು ಒಪ್ಪಿಕೊಳ್ಳುತ್ತಾರೆ. ಡಿಸಿಎ ಕೂಡ ಅಂಥವರಿಗೆ ಅಚ್ಚುಮೆಚ್ಚಿನ ಕಾರು ಆಗಲಿದೆ.

ಇದು ದುಬಾರಿ ಕಾರೇನಲ್ಲ. ಬೆಂಗಳೂರಿನಲ್ಲಿ ಈ ಕಾರಿನ ಟಾಪ್‌ಎಂಡ್‌ 8.10 ಲಕ್ಷಕ್ಕೆ ಸಿಗುತ್ತದೆ. ಒಳ್ಳೆಯ ಮೈಲೇಜ್‌ ಇದೆ ಅಂತ ಹೇಳಿಕೊಂಡರೂ ನಾವು ಕಾರು ಓಡಿಸುವಾಗ ಅದೇನೂ ಅನುಭವಕ್ಕೆ ಬರಲಿಲ್ಲ. ಹಾಗೆಯೇ ಇದು ಅಂಥ ಪವರ್‌ ಇರುವ ಕಾರೂ ಅಲ್ಲ, ಆದರೆ ಸಿಟಿಯೊಳಗೆ ಓಡಾಡುವುದಕ್ಕೆ ಇದು ಸಾಕೋ ಸಾಕು.

NFT ಪ್ರವೇಶಿಸಿ ಮಹೀಂದ್ರಾ ಥಾರ್‌: ಒಂದು ವಾರದಲ್ಲಿ 11 ಲಕ್ಷ ರೂ. ಬಿಡ್ಡಿಂಗ್!

ಇದರ ಗಮ್ಮತ್ತೆಂದರೆ ಅಚ್ಚುಕಟ್ಟಾಗಿ ಟ್ಯೂನ್‌ ಆಗಿರುವ ಇಂಜಿನ್‌. ಕಾರಿನೊಳಗೆ ಕುಳಿತರೆ ಧ್ಯಾನಮಾಡುವಷ್ಟುನಿಶ್ಯಬ್ಧ ಪ್ರಾಪ್ತಿ. ಅಲ್ಲದೇ, ಡಬಲ್‌ ಕ್ಲಚ್‌ ತಂತ್ರಜ್ಞಾನ ಕೂಡ ಹೊಸತು. ಅದಕ್ಕೆಂದೇ ಈ ಮಾಡೆಲ್ಲಿನ ಹೆಸರು ಆಲ್ಟೊ್ರೕಜ್‌ ಡಿಸಿಎ, ಡಬಲ್‌ ಕ್ಲಚ್‌ ಆಟೋಮೇಷನ್‌. ಇದರಿಂದಾಗಿ ಕಾರು ಬಹಳ ಸರಾಗವಾಗಿ ಚಲಿಸುತ್ತದೆ ಮತ್ತು ಎಲ್ಲಿಯೂ ನಮಗೆ ಜರ್ಕ್ ಅನುಭವ ಆಗುವುದಿಲ್ಲ. ಅದೇ ಎಎಂಟಿ ತಂತ್ರಜ್ಞಾನದಲ್ಲಿ ಗೇರ್‌ ಬದಲಾಗುವುದು ಸ್ಪಷ್ಟವಾಗಿಯೇ ತಿಳಿಯುತ್ತದೆ. ಡಬಲ್‌ ಕ್ಲಚ್‌ ತಂತ್ರಜ್ಞಾನದಲ್ಲಿ ಒಂದರ ಹಿಂದೊಂದರಂತೆ ಎರಡು ಕ್ಲಚ್‌ಗಳು ಗೇರ್‌ ಬದಲಾಯಿಸುವ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತವೆ.

ಟಾಟಾ ಮೋಟಾರ್ಸ್‌ಗೆ ನಮ್ಮ ರಸ್ತೆಯ ಗುಣಾವಗುಣಗಳು ಗೊತ್ತು. ನಮ್ಮ ಹವಾಮಾನವೂ ಗೊತ್ತು. ಹೀಗಾಗಿ ಅದು ಭಾರತೀಯ ರಸ್ತೆಗಳಿಗೆ ಹೊಂದುವ ಕಾರುಗಳನ್ನು ನಿರ್ಮಿಸುತ್ತದೆ. ಟಾಟಾ ಆಲ್ಟೊ್ರೕಸ್‌ ಕಾರಲ್ಲಿ ವೆಟ್‌ಕ್ಲಚ್‌ ಇದೆ. ಆ್ಯಕ್ಚಿವ್‌ ಕೂಲಿಂಗ್‌ ತಂತ್ರಜ್ಞಾನವೂ ಇದೆ. ಇದರೊಟ್ಟಿಗೆ ಆಟೋ ಪಾರ್ಕಿಂಗ್‌ ಲಾಕ್‌ ಫೀಚರ್‌ ಕೂಡ ಇದೆ. ಅಂದರೆ ಕಾರನ್ನು ಪಾರ್ಕಿಂಗ್‌ ಮೋಡ್‌ಗೆ ಹಾಕಲು ನೀವು ಮರೆತರೂ ಕಾರು ಮರೆಯುವುದಿಲ್ಲ. ಹಾಗೆಯೇ ಗೇರ್‌ಬಾಕ್ಸಿನ ಧೂಳು ತೆಗೆಯುವ ವ್ಯವಸ್ಥೆಯೂ ಆಟೋಮ್ಯಾಟಿಕ್‌.

VW Polo Legend ವೋಕ್ಸ್‌ವ್ಯಾಗನ್ ಪೊಲೋ ಲೆಜೆಂಡ್ ಎಡಿಶನ್ ಕಾರು ಬಿಡುಗಡೆ, ಇದು ಕೊನೆಯ ಪೊಲೋ ಕಾರು!

ಕಾರಿನೊಳಗೆ ಕುಳಿತರೆ ಭದ್ರತೆಯ ಅನುಭವ ಆಗುತ್ತದೆ. ಸುಂದರವಾದ ಒಳಾಂಗಣ, ಚೆಂದದ ಗೇರ್‌ಶಿಫ್ಟ್‌, ಅದ್ಭುತವಾದ ಸೌಂಡ್‌ ಸಿಸ್ಟಮ್‌, ಇಡೀ ಕಾರನ್ನು ತಣ್ಣಗಿಡುವ ಏರ್‌ಕಂಡೀಷನರ್‌, ಅಗಲವಾಗಿ ತೆರೆದುಕೊಳ್ಳುವ ಡೋರ್‌, ಹಿಂಬದಿಯಲ್ಲಿ ಕೂತವರಿಗೆ ಕಾಲುಚಾಚಲು ಬೇಕಾದಷ್ಟುಜಾಗ ಎಲ್ಲವೂ ಉಂಟು. ನಾವು ಓಡಿಸಿದ ಕಾರಿನ ಹಾರ್ನ್‌ ಒತ್ತುವುದಕ್ಕೆ ಮಾತ್ರ ಹೆಚ್ಚು ಶಕ್ತಿ ಬೇಕು. ಮಕ್ಕಳಿಗಂತೂ ಹಾರ್ನ್‌ ಮಾಡುವುದು ಸಾಧ್ಯವೇ ಇಲ್ಲ.

ಅದೇನೇ ಇದ್ದರೂ ಇದು ಹತ್ತು ಲಕ್ಷದೊಳಗಿನ ಕಾರು. ನಗರದಲ್ಲಿ ದಿನನಿತ್ಯ ಹತ್ತಿಪ್ಪತ್ತು ಕಿಲೋಮೀಟರ್‌ ಓಡಾಡುವವರಿಗೆ ಹೇಳಿ ಮಾಡಿಸಿದ್ದು. ಸುಸ್ತಾಗದಂತೆ ಸುತ್ತಾಡಲಿಕ್ಕೆ ಒಳ್ಳೆಯ ಆಯ್ಕೆ.

click me!