Skoda Car ಸ್ಕೋಡಾ ಕುಶಾಖ್ ಮಾಂಟೆ ಕಾರ್ಲೋ ಎಡಿಶನ್ ಕಾರು ಬಿಡುಗಡೆ!

By Suvarna News  |  First Published May 9, 2022, 3:40 PM IST
  • ಸ್ಕೋಡಾದಿಂದ ಮಾಂಟೆ ಕಾರ್ಲೊ ರ‍್ಯಾಲಿಗೆ ಗೌರವ
  • ನೂತನ ಕಾರಿನ ಬೆಲೆ 15.99 ಲಕ್ಷ ರೂಪಾಯಿಂದ ಆರಂಭ
  • 1.5 ಲೀಟರ್ ಎಂಜಿನ್ ಹಾಗೂ ಅತ್ಯುತ್ತಮ ಸಾಮರ್ಥ್ಯ
     

ಮುಂಬೈ(ಮೇ.10): ಮಾಂಟೆ ಕಾರ್ಲೋ ರ‍್ಯಾಲಿಯಲ್ಲಿ ಹಲವು ದಾಖಲೆ ಬರೆದಿರುವ ಸ್ಕೋಡಾ ಆಟೋ ಇದೀಗ ಹೊಸ ಮೈಲಿಗಲ್ಲು ನಿರ್ಮಿಸಿದೆ. ಮಾಂಟೆ ಕಾರ್ಲೋ ರ‍್ಯಾಲಿಗೆ ಗೌರವ ಸೂಚಿಸಲು ಸ್ಕೋಡಾ ಅಟೋ ಸ್ಕೋಡಾ ಮಾಂಟೆ ಕಾರ್ಲೋ ಎಡಿಶನ್ ಕಾರು ಬಿಡುಗಡೆ ಮಾಡಿದೆ. 

ಸ್ಕೋಡಾ ಆಟೊ ಮಾಂಟೆ ಕಾರ್ಲೊ ಆವೃತ್ತಿಗೆ ಪ್ರವೇಶಿಸಿದ ದಿನದಿಂದಲೂ ನಿರ್ದಿಷ್ಟವಾಗಿ ಪ್ರಖ್ಯಾತ `ಕ್ವೀನ್ ಆಫ್ ರ‍್ಯಾಲೀಸ್‌ನಲ್ಲಿ ಮತ್ತು ವಲ್ರ್ಡ್ ರ‍್ಯಾಲಿ ಚಾಂಪಿಯನ್‍ಶಿಪ್‍ಗಳಲ್ಲಿ ಈ ಯಶಸ್ಸನ್ನು ಸಂಭ್ರಮಿಸುತ್ತಿದೆ. ಸ್ಕೋಡಾದ ರ‍್ಯಾಲಿಗೆ ಮತ್ತು ಮೋಟಾರ್ ಸ್ಪೋರ್ಟ್ಸ್ ಪರಂಪರೆಗೆ ಮತ್ತು ಇಂಡಿಯಾ 2.0 ಯಶಸ್ಸಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸ್ಕೋಡಾ ಆಟೊ ಇಂಡಿಯಾ ಹೊಸ ಕುಶಾಕ್ ಮಾಂಟೆ ಕಾರ್ಲೊ ಶ್ರೇಣಿಯನ್ನು ಪರಿಚಯಿಸಿದೆ. 

Latest Videos

undefined

ಬಿಡುಗಡೆಯಾದ ಒಂದೇ ತಿಂಗಳಲ್ಲಿ ದಾಖಲೆ, ಸ್ಕೋಡಾ ಸ್ಲಾವಿಯಾ 10 ಸಾವಿರ ಬುಕಿಂಗ್!

ಪ್ರಖ್ಯಾತ ಮಾಂಟೆ ಕಾರ್ಲೊ ರ‍್ಯಾಲಿಯಲ್ಲಿ ಸ್ಕೋಡಾ ಸುದೀರ್ಘ  ಅಸಂಖ್ಯ ವಿಜಯಗಳನ್ನು ಒಳಗೊಂಡಿದೆ. ಲೌರಿನ್ ಅಂಡ್ ಕ್ಲೆಮೆಂಟ್ ವಾಹನಗಳು 1912ರಲ್ಲಿ ರ‍್ಯಾಲಿ ಕ್ಲಾಸಿಕ್‍ನ ಎರಡನೆಯ ಓಟಕ್ಕೆ ಪ್ರವೇಶಿಸಿದವು ಮತ್ತು 1936ರಲ್ಲಿ ಮೊದಲ ಬಾರಿಗೆ ಈ ಪ್ರಖ್ಯಾತ ಸ್ಪರ್ಧೆಗೆ ರೆಕ್ಕೆಯ ಬಾಣದ ಮಾದರಿಯು ಈ ಸರಣಿ ಪ್ರಾರಂಭಿಸಿತು. ಈ ಪಾಪುಲರ್ ಸ್ಪೋರ್ಟ್ ರೋಡ್‍ಸ್ಟರ್ 1.5 ಲೀಟರ್ ವರ್ಗದಲ್ಲಿ ಎರಡನೆಯ ಸ್ಥಾನ ಪೂರೈಸಿತು. 

ನಮ್ಮ ಇತ್ತೀಚಿನ ಯಶಸ್ಸುಗಳು ಮತ್ತು ಭಾರತದಲ್ಲಿ ನಮ್ಮ ಅತ್ಯಂತ ದೊಡ್ಡ ತಿಂಗಳೊಂದಿಗೆ ನಾವು ಸ್ಕೋಡಾದಲ್ಲಿ ವಿಜಯದ ಸ್ಫೂರ್ತಿಯನ್ನು ಸಂಭ್ರಮಿಸುವುದು ಅತ್ಯಂತ ಸೂಕ್ತವಾಗಿದೆ. ಮಾಂಟೆ ಕಾರ್ಲೊ ಹೃದಯಕ್ಕೆ ಹತ್ತಿರವಾದ ಕಾರು ಆಗಿದ್ದು ಈ ವಿಶಿಷ್ಟ, ಸೂಕ್ಷ್ಮ ಮತ್ತು ಸ್ಪೋರ್ಟಿ ಈಸ್ಥೆಟಿಕ್ಸ್ ಕೊಳ್ಳಲು ಹೆಚ್ಚು ಪ್ರಯತ್ನ ಮಾಡುವ ಬಯಕೆ ಹೊಂದಿರುತ್ತಾರೆ. ಮಾಂಟೆ ಕಾರ್ಲೊ ಅತ್ಯಂತ ನಿಚ್ಚಳವಾದ ಸ್ಟೈಲ್ ಎತ್ತಿ ತೋರಿಸುತ್ತದೆ. ಇದು ವಂಶಾವಳಿಯಲ್ಲಿ ಸೇರಿದ ಹೆಸರಿನ ಮತ್ತು ಥ್ರಿಲ್ಲಿಂಗ್ ಅನುಭವ ನೀಡುವ ರ್ಯಾಲಿ ಕ್ರೀಡೆಯ ಪರಂಪರೆಯನ್ನು ಚಾಲನೆ ಮಾಡಲು ಬಯಸಿದರೆ ಇದು ಗೌರವ ನೀಡುತ್ತದೆ ಎಂದು  ಸ್ಕೋಡಾ ಆಟೊ ಇಂಡಿಯಾದ ಬ್ರಾಂಡ್ ಡೈರೆಕ್ಟರ್  ಝಾಕ್ ಹೊಲ್ಲಿಸ್ ಹೇಳಿದ್ದಾರೆ.

ಕುಶಾಕ್ ಮಾಂಟೆ ಕಾರ್ಲೊ ಅನ್ನು ಎಕ್ಸ್-ಶೋರೂಂ ಬೆಲೆ 1.0 ಟಿಎಸ್‍ಐ 6-ಸ್ಪೀಡ್ ಮ್ಯಾನ್ಯುಯಲ್‍ಗೆ  15,99,000 ರೂಪಾಯಿ(ಎಕ್ಸ್ ಶೋ ರೂಂ).  1.5 ಟಿಎಸ್‍ಐ 7-ಸ್ಪೀಡ್ ಡಿಎಸ್‍ಜಿಗೆ 19,49,000 ರೂಪಾಯಿ(ಎಕ್ಸ್ ಶೋ ರೂಂ) ಹೊಂದಿದೆ. ಕುಶಾಕ್‍ನ ಈ ಆವೃತ್ತಿಯು ವಿಶೇಷವಾಗಿ ಟಾರ್ನೆಡೊ ರೆಡ್ ಮತ್ತು ಕ್ಯಾಂಡಿ ವೈಟ್ ಬಣ್ಣಗಳಲ್ಲಿ ಲಭ್ಯ. ಅಲ್ಲದೆ ಕುಶಾಕ್ ಮಾಂಟೆ ಕಾರ್ಲೊದ 1.0 ಟಿಎಸ್‍ಐ ಸ್ಟಾರ್ಟ್-ಸ್ಟಾಪ್ ರಿಕುಪರೇಷನ್ ಇದ್ದು ಅದು ಇಂಧನ ಕ್ಷಮತೆ ಸುಧಾರಿಸುತ್ತದೆ. 

ಕೊಡಿಯಾಕ್ SUVಗೆ ಭಾರಿ ಬೇಡಿಕೆ, ಮುಂದಿನ 4 ತಿಂಗಳವರೆಗಿನ ಕಾರು ಸೋಲ್ಡ್ ಔಟ್

ಕುಶಾಕ್ ಮಾಂಟೆ ಕಾರ್ಲೊದಲ್ಲಿ ಸ್ಕೋಡಾ ಸಿಗ್ನೇಚರ್ ಗ್ರಿಲ್ ಗ್ಲಾಸಿ ಬ್ಲಾಕ್ ಸರೌಂಡ್ ಹೊಂದಿದೆ. ಒಆರ್‍ವಿಎಂಗಳು ಕೂಡಾ ಗ್ಲಾಸಿ ಬ್ಲಾಕ್ ಹೊಂದಿವೆ. ಚಕ್ರಗಳು ಆರ್17 ಡ್ಯುಯಲ್-ಟೋನ್ ವೆಗಾ 43.18 ಸೆಂ.ಮೀ. ಅಲಾಯ್‍ಗಳು ನೇರವಾಗಿ ಆಕ್ಟಾವಿಯಾ ವಿಆರ್‍ಎಸ್ 245ನಿಂದ ನೇರ ಇಳಿಯುತ್ತವೆ, ಇವು ಸ್ಕೋಡಾದ ಅತ್ಯಂತ ವೇಗದ ಉತ್ಪಾದನೆಯಾಗಿದೆ. ಹೊಸ ಕುಶಾಕ್ ಈಗ ಸ್ಕೋಡಾ ಬ್ಯಾಡ್ಜ್ ಸ್ಥಳದಲ್ಲಿ ಮಾಂಟೆ ಕಾರ್ಲೊ ಫೆಂಡರ್ ಗಾರ್ನಿಷ್ ಹೊಂದಿದೆ. ಬಾಡಿಯ ಬಣ್ಣವು ಟಾರ್ನೆಡೊ ರೆಡ್ ಮತ್ತು ಕ್ಯಾಂಡಿ ವೈಟ್ ಆಯ್ಕೆ ನೀಡಿದರೆ ರೂಫ್ ಕಾಂಟ್ರಾಸ್ಟ್‍ನ ಗ್ಲಾಸಿ ಕಾರ್ಬನ್ ಸ್ಟೀಲ್ ಪೇಂಟ್‍ನೊಂದಿಗೆ ಹೊಂದಿದ್ದು ಮಾಂಟೆ ಕಾರ್ಲೊ ಡ್ಯುಯಲ್ ಟೋನ್ ಈಸ್ಥೆಟಿಕ್ ಹೊಂದಿದೆ. 

ಈ ರೂಫ್ ಆ್ಯಂಟಿ-ಪಿಂಚ್ ತಂತ್ರಜ್ಞಾನದೊಂದಿಗೆ ಎಲೆಕ್ಟ್ರಿಕ್ ಸನ್‍ರೂಫ್ ಅನ್ನು ಸ್ಟಾಂಡರ್ಡ್ ಆಗಿ ಬಂದಿದೆ. ಕಾರ್ಬನ್ ಸ್ಟೀಲ್ ರೂಫ್ ಮ್ಯಾಟ್ ಬ್ಲಾಕ್ ರೂಫ್ ರೈಲ್ಸ್‍ಗೆ ಪೂರಕವಾಗಿದ್ದು ಅಂಚಿನವರೆಗೂ ಮತ್ತು ಕೆಳಗಿನ ಹೊರಗಿನ ಡಾರ್ಕ್ ಕ್ರೋಮ್ ಎಕ್ಸ್‍ಟರ್ನಲ್ ಡೋರ್ ಹ್ಯಾಂಡಲ್ಸ್‍ವರೆಗೂ ಚಲಿಸುತ್ತದೆ. 
ರೂಫ್ ಡ್ಯುಯಲ್ ಟೋನ್ ಟೈಲ್‍ಗೇಟ್ ಸ್ಪಾಯ್ಲರ್ ಪ್ರಾರಂಭವಾಗುವ ಕಡೆಯಲ್ಲಿ ಅಂತ್ಯಗೊಳ್ಳುತ್ತದೆ. ಹಿಂಬದಿಯ ಕೆಳಗೆ ಬೂಟ್ ಬಾಗಿಲಲ್ಲಿ ಟ್ರಂಕ್ ಗಾರ್ನಿಶ್ ಇದೆ ಮತ್ತು ರಿಯರ್ ಬಂಪರ್ ಅಡಿಯಲ್ಲಿ ಡಿಫ್ಯೂಸರ್ ಇದ್ದು ಎರಡೂ ಗ್ಲಾಸಿ ಬ್ಲಾಕ್‍ನಲ್ಲಿದ್ದು ಕುಶಾಕ್ ಮಾಂಟೆ ಕಾರ್ಲೊದ ಗತಿ ಮತ್ತು ಗ್ಲಾಮರ್ ಹೆಚ್ಚಿಸುತ್ತದೆ. ಇದು ಮಾಂಟೆ ಕಾರ್ಲೊದ ಮುಂಬದಿಯಲ್ಲಿ ಗ್ಲಾಸಿ ಬ್ಲಾಕ್ ಡಿಫ್ಯೂಸರ್‍ನೊಂದಿಗೆ ಸಮತೋಲನಗೊಂಡಿದೆ. ಸ್ಕೋಡಾಮತ್ತು ಕುಶಾಕ್‍ನ ಕ್ರೋಮ್ ಫಲಕಗಳು ಹಿಂಬದಿಯಲ್ಲಿದ್ದು ಈಗ ಗ್ಲಾಸಿ ಬ್ಲಾಕ್‍ನಲ್ಲಿವೆ. ಹಾಗೆಯೇ ಮುಂಬದಿಯ ಬಂಪರ್‍ನಲ್ಲಿ ಏರ್ ವೆಂಟ್‍ಗಳಿಗೆ ಎಲ್-ಆಕಾರದ ಸರೌಂಡ್‍ಗಳಿವೆ. 

1.0 ಟಿಎಸ್‍ಐ ಮತ್ತು 1.5 ಟಿಎಸ್‍ಐ ಎಂಜಿನ್‍ಗಳ ನಡುವೆ ಮೊಟ್ಟಮೊದಲ ಗೋಚರವಾಗುವ ಡಿಫರೆನ್ಷಿಯೇಟರ್ ಕುಶಾಕ್ ಮಾಂಟೆ ಕಾರ್ಲೊ 1.5 ಟಿಎಸ್‍ಐ ಮುಂಬದಿಯ ಚಕ್ರಗಳಿಗೆ ಸ್ಪೋರ್ಟಿ ರೆಡ್ ಕ್ಯಾಲಿಪರ್ಸ್ ಹೊಂದಿದ್ದು ಇದು ತನ್ನ 1.0 ಟಿಎಸ್‍ಐ ಸ್ಟೇಬಲ್‍ಮೇಟ್‍ಗಿಂತ ಎದ್ದು ಕಾಣುವಂತೆ ಮಾಡುತ್ತದೆ. 

ಹೊಸ ವರ್ಚುಯಲ್ ಕಾಕ್‍ಪಿಟ್ ರ್ಯಾಲಿ-ಬ್ರೆಡ್ ಇಂಟೀರಿಯರ್ಸ್ 
ಕುಶಾಕ್ ಮಾಂಟೆ ಕಾರ್ಲೊ ಮೋಟಾರ್‍ಸ್ಪೋರ್ಟ್ ಪರಂಪರೆಯನ್ನು ಐಷಾರಾಮಿ ಇಂಟೀರಿಯರ್ ಮೂಲಕ ಕೆಂಪು ಮತ್ತು ಕಪ್ಪು ಡ್ಯುಯಲ್ ಟೋನ್ ಅಪ್‍ಹೋಲ್ಸ್‍ಟ್ರಿ ಮತ್ತು ರೂಬಿ ರೆಡ್ ಮೆಟಾಲಿಕ್ ಇನ್ಸಟ್ರ್ಸ್ ಹೊಂದಿದೆ. ಈ ಅಲಂಕರಣವು ಕುಶಾಕ್ ಮಾಂಟೆ ಕಾರ್ಲೊದ ಸೌಂದರ್ಯಪ್ರಜ್ಞೆ, ಕ್ರೀಡಾತನ ಮತ್ತು ವೈಶಾಲ್ಯದ ಭಾವನೆಯಿಂದ ಮತ್ತಷ್ಟು ಹೆಚ್ಚಿಸುತ್ತದೆ. ರೂಬಿ ರೆಡ್ ಮೆಟಾಲಿಕ್ ಇನ್ಸಟ್ರ್ಸ್ ಅನ್ನು ಅಭಿರುಚಿಪೂರ್ವಕವಾಗಿ ಡ್ಯಾಶ್‍ಬೋರ್ಡ್‍ನ ಅಗಲಕ್ಕೆ ಅಲಂಕರಿಸಲಾಗಿದ್ದು ಅವು ಸೆಂಟರ್ ಕನ್ಸೋಲ್‍ನಿಂದ ಕೆಳಕ್ಕೆ ಬಂದಿವೆ ಮತ್ತು ಮುಂದುವರಿದು ಮುಂದಿನ ಬಾಗಿಲಿನತ್ತ ಸಾಗಿವೆ.

ಮುಂಬದಿಯು ವೆಂಟಿಲೇಡೆಡ್ ರೆಡ್ ಮತ್ತು ಬ್ಲಾಕ್ ಲೆದರ್ ಸೀಟುಗಳನ್ನು ಹೊಂದಿದ್ದು ಹೆಡ್‍ರೆಸ್ಟ್‍ಗಳ ಮೇಲೆ `ಮಾಂಟೆ ಕಾರ್ಲೊ’ ಹೆಸರು ಕೆತ್ತನೆಗೊಂಡಿರುತ್ತದೆ. ಹಿಂಬದಿಯಲ್ಲಿ ಕೆಂಪು ಮತ್ತು ಕಪ್ಪು ಲೆದರೆಟ್ಟೆ ಸೀಟುಗಳು `ಮಾಂಟೆ ಕಾರ್ಲೊ’ ಹೆಸರಿನೊಂದಿಗೆ ಎರಡು ಹೆಡ್‍ರೆಸ್ಟ್‍ಗಳೊಂದಿಗೆ ಅದೇ ಸಾಲಿನಲ್ಲಿ ಮುಂದುವರಿಯುತ್ತವೆ. ಚಾಲಕ ಮತ್ತು ಪ್ರಯಾಣಿಕ ಸದಾ ಸಂವಹನ ನಡೆಸುವ ಇತರೆ ಪ್ರದೇಶಗಳಾದ ಡೋರ್ ಆರ್ಮ್‍ರೆಸ್ಟ್‍ಗಳು ಮತ್ತು ಮುಂಬದಿಯಲ್ಲಿ ಒಂದರಲ್ಲಿ ಕೆಂಪು ಹೊಲಿಗೆ ಇರುತ್ತದೆ. 2-ಸ್ಪೋಕ್ ಮಲ್ಟಿ-ಫಂಕ್ಷನ್ ಸ್ಟೀರಿಂಗ್‍ನ ಮೇಲೆ ಲೆದರ್ ರ್ಯಾಪ್, ಚಾಲಕ ಅತ್ಯಂತ ಹೆಚ್ಚು ಸಂವಹನ ನಡೆಸುವ ಭಾಗವು ಕೂಡಾ ಪ್ರಮುಖ, ಅಭಿರುಚಿಪೂರ್ವಕ ಹೊಲಿಕೆ ಅದರ ಮೇಲಿದೆ. ಮುಂಬದಿಯ ಪ್ರಯಾಣಿಕರ ಡ್ಯಾಶ್‍ಬೋರ್ಡ್‍ನಲ್ಲಿ ಕೆಂಪು ಆಂಬಿಯೆಂಟ್ ಲೈಟಿಂಗ್ ಬೆಚ್ಚಗಿನ ಕೆಂಪು ಬೆಳಕನ್ನು ಮುಂಬದಿ ಪ್ರಯಾಣಿಕರ ಡ್ಯಾಶ್‍ಬೋರ್ಡ್‍ನಲ್ಲಿ ನೀಡುವ ಮೂಲಕ ಕುಶಾಕ್ ಮಾಂಟೆ ಕಾರ್ಲೊ ಕ್ಯಾಬಿನ್‍ನಲ್ಲಿ ಕೆಂಪು ಕಾಂತಿಯನ್ನು ನೀಡುತ್ತದೆ. 

ಚಾಲಕ ಇನ್ಸ್‍ಟ್ರುಮೆಂಟ್ ಕನ್ಸೋಲ್ 20.32 ಸೆಂ.ಮೀ. ಸ್ಕೋಡಾ ವರ್ಚುಯಲ್ ಕಾಕ್‍ಪಿಟ್ ಅನ್ನು ಕೆಂಪು ವಿಷಯದೊಂದಿಗೆ ಪಡೆಯುತ್ತದೆ. ಡ್ಯಾಶ್‍ಬೋರ್ಡ್ ಮಧ್ಯವು 25.4 ಸೆಂ.ಮೀ. ಇನ್ಫೊಟೈನ್‍ಮೆಂಟ್ ಸಿಸ್ಟಂ ಅನ್ನು ಸ್ಕೋಡಾ ಪ್ಲೇ ಆ್ಯಪ್‍ಗಳೊಂದಿಗೆ ಹೊಂದಿದೆ ಮತ್ತು ಕೆಂಪು ಥೀಮ್ ಹೊಂದಿದೆ. ಆಕ್ಸಲರೇಟಿಂಗ್, ಬ್ರೇಕಿಂಗ್ ಮತ್ತು ಕ್ಲಚ್ ಕಾರ್ಯಗಳನ್ನು ಸುಂದರ ಮತ್ತು ಹೆಚ್ಚುವರಿ ಹಿಡಿತದ ಅಲು ಪೆಡಲ್ಸ್ ನಿರ್ವಹಿಸುತ್ತವೆ. ನೀವು ಬಾಗಿಲು ತೆಗೆದ ತಕ್ಷಣ ಅಭಿರುಚಿಪೂರ್ವಕ ಮಾಂಟೆ ಕಾರ್ಲೊ ಹೆಸರಿನ ಸ್ಕಫ್ ಪ್ಲೇಟ್‍ಗಳು ಡೋರ್ ಸಿಲ್‍ಗಳ ಮೇಲೆ ನಿಮ್ಮನ್ನು ಕ್ಯಾಬಿನ್‍ಗೆ ಸ್ವಾಗತಿಸುತ್ತವೆ. 

ಕುಶಾಕ್‍ನ ಹೊಸ ಮಾಂಟೆ ಕಾರ್ಲೊ ಆವೃತ್ತಿಯು ಮಾಂಟೆ ಕಾರ್ಲೊದಲ್ಲಿ ಸ್ಕೋಡಾದ ವಿಜಯವನ್ನು ಮತ್ತು 2022ರಲ್ಲಿ ಸ್ಕೋಡಾ ಆಟೊ ಇಂಡಿಯಾದ ಅಪಾರ ಪ್ರಗತಿ ಮತ್ತು ಯಶಸ್ಸಿಗೆ ಕುಶಾಕ್‍ನ ಕೊಡುಗೆಯನ್ನು ಪ್ರತಿಫಲಿಸುತ್ತದೆ. ಕುಶಾಕ್ ಕಂಪನಿಯ ಇಂಡಿಯಾ 2.0 ಯೋಜನೆಯ ಜ್ಯೋತಿಧಾರಕವಾಗಿದ್ದು ಭಾರತದಲ್ಲಿ ದಾಖಲೆ ಮುರಿಯುವ ಮೊದಲ ತ್ರೈಮಾಸಿಕ ಸಾಧಿಸಿದೆ. ಈ ಯಶಸ್ಸಿನ ಬೆಳಕು ಸ್ಕೋಡಾದಲ್ಲಿ ವಿಜಯದ ಸ್ಫೂರ್ತಿಯನ್ನು ಪ್ರತಿನಿಧಿಸುವ ಗುರುತನ್ನು ಪಡೆಯುತ್ತದೆ.

click me!