ಕೆಜಿಎಫ್ 2 ದೊಡ್ಡಮ್ಮನ ಥರ ಮಹೀಂದ್ರಾದ ಬಿಗ್‌ ಡ್ಯಾಡಿ Mahindra Scorpio 2022

By Suvarna News  |  First Published May 9, 2022, 1:16 PM IST

ಮಹೀಂದ್ರಾ ಹೊಸ ಬಗೆಯ ವೆಹಿಕಲ್‌ಅನ್ನು ಮಾರುಕಟ್ಟೆಗೆ ಬಿಡುವುದರಲ್ಲಿ ಎಷ್ಟು ಕ್ರಿಯೇಟಿವ್‌ ಇದೆಯೋ ತನ್ನ ವಾಹನಗಳಿಗೆ ಹೆಸರನ್ನಿಡೋದ್ರಲ್ಲೂ ಅಷ್ಟೇ ಕ್ರಿಯೇಟಿವ್‌. ಸದ್ಯಕ್ಕೀಗ ಹೊರ ಬಿಡುತ್ತಿರೋ ಮಹೀಂದ್ರಾ ಸ್ಕಾರ್ಪಿಯೋಗೆ ಬಿಗ್‌ ಡ್ಯಾಡಿ ಅಂತ ಕರೆದು ಪ್ರಚಾರ ಮಾಡ್ತಿದೆ.


ಮಹೀಂದ್ರಾ(Mahidra) ವೆಹಿಕಲ್‌ಗಳೆಂದರೆ  ಜನರಿಗೆ ವಿಶ್ವಾಸ ಜಾಸ್ತಿ. ಮಹೀಂದ್ರಾ ಎಸ್‌ಯುವಿ(SUV)ಗಳಿಂದ ಹಿಡಿದು ಮಹೀಂದ್ರಾ ಥಾರ್‌(Mahindre Thar) ವರೆಗೆ ಜನರ ವಿಶ್ವಾಸವನ್ನು ಉಳಿಸಿಕೊಂಡು ವಾಹನ ಬಿಡುಗಡೆ ಮಾಡುತ್ತಿದೆ ಮಹೀಂದ್ರಾ. ಅಷ್ಟೇ ಅಲ್ಲ ತನ್ನ ಸಖತ್ ಎಫೀಷಿಯೆಂಟ್‌ ಆಗಿ ವಾಹನಗಳ ಉತ್ಪಾದನೆ ಮಾಡೋದಷ್ಟೇ ಅಲ್ಲ. ಕ್ರಿಯೇಟಿವ್‌ ಆಗಿ ಆ ಕಾರಿನ ಪ್ರಚಾರ ಮಾಡೋದ್ರಲ್ಲೂ ಮಹೀಂದ್ರಾ ಕಂಪನಿ ಎತ್ತಿದ ಕೈ. ಸದ್ಯಕ್ಕೀಗ ಈ ಕಂಪನಿಯ ಮಹೀಂದ್ರಾ ಸ್ಕಾರ್ಪಿಯೋ (Mahindra scorpio 2022) ಗೆ ಎಸ್‌ಯುವಿ ಪ್ರಿಯರು ಎದುರು ನೋಡುತ್ತಿದ್ದಾರೆ. ಇನ್ನೊಂದೆಡೆ ಮಹೀಂದ್ರಾ ಥಾರ್​ (Mahindra Thar) ಇಂದಿಗೂ ತನ್ನ ಬೇಡಿಕೆ ಉಳಿಸಿಕೊಂಡಿದೆ. ಥಾರ್‌ಗೆ ಇಂದಿಗೂ ಯಾವ ಪರಿ ಬೇಡಿಕೆ ಇದೆ ಅಂದರೆ ಬೇಡಿಕೆಗೆ ತಕ್ಕಷ್ಟು ವಾಹನ ಪೂರೈಸೋದೇ ಸವಾಲಾಗ್ತಿದೆ ಅಂತ ಇತ್ತೀಚೆಗೆ ಆನಂದ ಮಹೀಂದ್ರಾ ಸಂದರ್ಶನವೊಂದರಲ್ಲಿ ಹೇಳುತ್ತಿದ್ದರು. ಮಹೀಂದ್ರಾ ಥಾರ್​ ಗೆ ಬುಕಿಂಗ್​ (Booking) ಮಾಡಿದ ಹಲವರು ಅದರ ಆಗಮನದ ನಿರೀಕ್ಷೆಯಲ್ಲಿದ್ದಾರೆ.

2022 KTM RC390 ಭಾರತದಲ್ಲಿ ಲಾಂಚ್:‌ ಬೆಲೆ ಎಷ್ಟು ನೋಡಿ

Tap to resize

Latest Videos

ಸದ್ಯಕ್ಕೀಗ ಮಹೀಂದ್ರಾ ವೆಹಿಕಲ್‌ ಪ್ರಿಯರ ಮನಸ್ಸಿಗೆ ಚೇಳು ಬಿಟ್ಟಿದೆ. ಮಹೀಂದ್ರಾ ಸ್ಕಾರ್ಪಿಯೊನ ಹೊಸ ಲುಕ್ ಗಳನ್ನು, ಅತ್ಯಾಧುನಿಕ ಫೀಚರ್‌ಗಳನ್ನು ಆಕರ್ಷಕವಾಗಿ ತೋರಿಸಿ ಆಸೆ ಹುಟ್ಟಿಸುತ್ತಿದೆ. ಮಹೀಂದ್ರಾ ಹೊರಬಿಟ್ಟಿರುವ ತನ್ನ ಹೊಸ ಮಹೀಂದ್ರಾ ಸ್ಕಾರ್ಪಿಯೋ ಟೀಸರ್‌ (Mahindra Scorpio 2022 Teaser) ಸಖತ್ ಕುತೂಹಲ ಕೆರಳಿಸುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವಿನ್ಯಾಸ ಆಕರ್ಷಕ ಲುಕ್​ನಲ್ಲಿ ಮಾರುಕಟ್ಟೆಗೆ (Market) ಬರಲು ಈ ನೂತನ ವಾಹನ ಲೇಟೆಸ್ಟಾಗಿ ಎಂಟ್ರಿ ಕೊಡಲಿದೆ.

Tata Nexon EV Max ಮೇ 11 ರಂದು ಖರೀದಿಗೆ ಲಭ್ಯ:‌ ಬೆಲೆ ಎಷ್ಟು? ವಿನ್ಯಾಸ ಹೇಗಿದೆ?

ಇಷ್ಟೇ ಆದ್ರೆ ಇದೊಂದು ಕಾರು ಬಿಡುಗಡೆಯ ವಿಚಾರ ಅನ್ನಬಹುದೇನೋ. ಆದರೆ ಮಹೀಂದ್ರಾದವ್ರು ಈ ಕಾರಿಗೆ ಇಟ್ಟ ಪೆಟ್‌ ನೇಮ್ ಅಥವಾ ಅಡ್ಡ ಹೆಸರು ನೋಡಿ ಕೆಲವರು ಮಜವಾಗಿ ಕಾಲೆಳೆಯುತ್ತಿದ್ದಾರೆ. ಕೆಜಿಎಫ್‌ 2 (KGF 2)ನಲ್ಲಿ ರಾಕಿಭಾಯ್ ಪೊಲೀಸ್‌ ಸ್ಟೇಶನ್ನನ್ನೇ ಉಡೀಸ್ ಮಾಡೋ, ಜೀಪ್‌ ಹಾರಿಸೋ ದೃಶ್ಯ ಒಂದಿದೆ. ಯಶ್‌ ಹೀಗೆ ಹುಡಿ ಹಾರಿಸೋ ಬೃಹತ್‌ ಗನ್‌ ಗೆ ಅಡ್ಡ ಹೆಸರು ದೊಡ್ಡಮ್ಮ ಅಂತ. ಕೆಜಿಎಫ್‌ 2 ನೋಡಿದವರೆಲ್ಲರಿಗೂ ಈ ದೊಡ್ಡಮ್ಮ ಚಿರಪರಿಚಿತ. ಇದೀಗ 'ಬಿಗ್‌ ಡ್ಯಾಡಿ' ಅನ್ನೋ ಅಡ್ಡ ಹೆಸರಿನೊಂದಿಗೆ ಮಹೀಂದ್ರಾ ಸ್ಕಾರ್ಪಿಯೋ ಎಂಟ್ರಿ ಕೊಡೋಕೆ ರೆಡಿ ಆಗ್ತಿದೆ. ಅದಕ್ಕೆ 'ದೊಡ್ಡಪ್ಪ' ಅಂತ ಕರೆದು ನೆಟಿಜನ್ಸ್ ಮಜಾ ತಗೊಳ್ತಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಈ ಬಿಗ್‌ಡ್ಯಾಡಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಕಂಪನಿಯ ಈ ಹೊಸ ಸ್ಕಾರ್ಪಿಯೊ ಮುಂದಿನ ತಿಂಗಳು ಅಂದರೆ ಜೂನ್‌ನಲ್ಲಿ ಮಾರುಕಟ್ಟೆಗೆ ಬರಬಹುದು. ಜೂನ್​ನಲ್ಲಿ SUV ಪರಿಚಯಿಸಿ 20 ವರ್ಷವಾದ ಹಿನ್ನೆಲೆಯಲ್ಲಿ ಇದಕ್ಕಾಗಿ ವಾರ್ಷಿಕೋತ್ಸವ ಏರ್ಪಡಿಸಿ, ಆ ಸಂಭ್ರಮದಲ್ಲಿ "ದೊಡ್ಡಪ್ಪ' ಐ ಮೀನ್ 'ಬಿಗ್‌ ಡ್ಯಾಡಿ' 'ಮಹೀಂದ್ರಾ ಸ್ಕಾರ್ಪಿಯೋ 2022' ಅನ್ನು ಪರಿಚಯಿಸಲಿದೆ.

ಮಾರುತಿ ಸಿಎನ್‌ಜಿ ಕಾರುಗಳಿಗೆ ಭಾರಿ ಬೇಡಿಕೆ: ವಿತರಣೆಗೆ ಕಾಯುತ್ತಿದ್ದಾರೆ 1.29 ಲಕ್ಷ ಗ್ರಾಹಕರು

ಸದ್ಯಕ್ಕೆ ಈ ನೂತನ ಸ್ಕಾರ್ಪಿಯೊ 2022 ರ ಅಧಿಕೃತ ಟೀಸರ್ ಅನ್ನು ಮಹೀಂದ್ರಾ ಬಿಡುಗಡೆ ಮಾಡಿದೆ, ಇದಕ್ಕೆ ಬಾಲಿವುಡ್‌ ಸೂಪರ್‌ಸ್ಟಾರ್‌ ಬಿಗ್‌ ಬಿ ಅಮಿತಾಬ್ ಬಚ್ಚನ್ ಅವರ ಧ್ವನಿ ಇದೆ. ಹೊಸ ತಲೆಮಾರಿನ ಸ್ಕಾರ್ಪಿಯೊವನ್ನು ಎಸ್‌ಯುವಿಯ 'ಬಿಗ್ ಡ್ಯಾಡಿ' ಎಂದು ಪ್ರಚಾರ ಮಾಡುತ್ತಿದೆ ಮಹೀಂದ್ರಾ. ಇದರ ಒಳಾಂಗಣ ಹಾಗೂ ಹೊರಾಂಗಣ ವಿನ್ಯಾಸಲ್ಲಿ ಸಾಕಷ್ಟು ಹೊಸತನವಿದೆ. ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಹೊಸತಾಗಿ ಪರಿಚಯಿಸಲಾಗಿದೆ. ಒಳಗೆ ೯ ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್ ಇತ್ಯಾದಿ ಸ್ಫಿಸಿಫಿಕೇಶನ್‌ (specification)ಗಳಿವೆ.

ಹೊಸ ಬಗೆಯ ನಿಯಂತ್ರಣ ವ್ಯವಸ್ಥೆ ಇದೆ. ಎಲೆಕ್ಟ್ರಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜಿಂಗ್, ಫ್ರಂಟ್ ಡೋರ್ ಸ್ಪೀಕರ್‌ಗಳು, ಹೊಸ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕ್ರೂಸ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್ / ಸ್ಟಾಪ್ ಬಟನ್ ಇತ್ಯಾದಿ ಫೀಚರ್‌ಗಳು ಸ್ಕಾರ್ಪಿಯೋವನ್ನು ಮೇಲ್ದರ್ಜೆಗೇರಿಸಿದೆ. ಎಲ್‌ಇಡಿ ಲೈಟ್‌ಗಳು, 6 ಏರ್‌ಬ್ಯಾಗ್‌ಗಳು ಮತ್ತು ರೋಡ್‌ಸೈಡ್‌ ಅಸಿಸ್ಟೆನ್ಸ್‌ ನಂಥಾ ವ್ಯವಸ್ಥೆ ಇದೆ. 360 ಡಿಗ್ರಿ ಕ್ಯಾಮೆರಾವಿದ್ದು ಸುರಕ್ಷತೆಯ ದೃಷ್ಟಿಯಿಂದ ಉತ್ತಮ ಫೀಚರ್‌ ಎನಿಸಿದೆ.

2.0-ಲೀಟರ್ mHawk ಟರ್ಬೊ ಪೆಟ್ರೋಲ್ ಇಂಜಿನ್‌ ಹೊಂದಿದೆ. 155 bhp ಪವರ್ ಮತ್ತು 360 Nm ಪೀಕ್ ಟಾರ್ಕ್ ಇದೆ. 6-ಸ್ಪೀಡ್ ಗೇರ್‌ಬಾಕ್ಸ್ ಇದೆ. ರೇಟೆಷ್ಟು ಅಂತ ಕೇಳಿದ್ರೆ ಸುಮಾರು 10 ಲಕ್ಷ (Rs.10 Lakh) ಎಕ್ಸ್‌ಶೋರೂಮ್‌ ದರ ಇರಬಹುದು. ಅಲ್ಲಿಗೆ ದೊಡ್ಡಪ್ಪ ಪವರ್‌ಫುಲ್‌ ಆದ್ರೂ ದುಬಾರಿ ಅಲ್ಲ ಅಂತ ನಿಟ್ಟುಸಿರು ಬಿಡಬಹುದು.

click me!