ಬೆಂಗಳೂರಿನಲ್ಲಿ ಎರಡನೇ ಅತ್ಯಾಧುನಿಕ ಸ್ಕೋಡಾ ಡೀಲರ್‌ಶಿಪ್ ಘಟಕ ಉದ್ಘಾಟನೆಯಾಗಿದೆ. ಸ್ಕೋಡಾ ಅಟೋ ಗ್ರಾಹಕರ ಒಟ್ಟಾರೆ ಖರೀದಿ ಮತ್ತು ಮಾಲೀಕತ್ವ ಅನುಭವವನ್ನು ಸುಧಾರಿಸಲು ಹೊಸ ಘಟಕ ತಲೆ ಎತ್ತಿದೆ. ನೂತನ ಶೂರೂಮ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಬೆಂಗಳೂರು(ಫೆ.11): ಬೆಂಗಳೂರಿನಲ್ಲಿ ಎರಡನೇ ಪಿಪಿಎಸ್ ಮೋಟಾರ್ಸ್ ಸೌಲಭ್ಯವನ್ನು ಪರಿಚಯಿಸುವುದರೊಂದಿಗೆ, ಕರ್ನಾಟಕದಲ್ಲಿ ಸ್ಕೋಡಾ ಅಟೋ ಇಂಡಿಯಾ ಮತ್ತಷ್ಟು ವಿಸ್ತಾರ ಹೊಂದಿದೆ. ದಕ್ಷಿಣ ಭಾರತದ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಬೆಂಗಳೂರಿನಲ್ಲಿ ಹೊಸ ಅತ್ಯಾಧುನಿಕ ಘಟಕ, ಹೊಸ ಕಾರ್ಪೋರೇಟ್ ಐಡೆಂಟಿಟಿ ಹಾಗೂ ವಿನ್ಯಾಸ್ ಗೊಂದಿದ್ದು, ಗ್ರಾಹಕರ ಅಪರಿಮಿತ ಸೇವೆ ನೀಡಲಿದೆ.
ಹೊಚ್ಚ ಹೊಸ Skoda ರ‍್ಯಾಪಿಡ್ TSI ಅಟೊಮ್ಯಾಟಿಕ್ ಕಾರು ಬಿಡುಗಡೆ
undefined
2.0 ಪ್ರಾಜೆಕ್ಟ್ ಅಡಿಯಲ್ಲಿ, ದುಪ್ಪಟ್ಟು ಸೇಲ್ಸ್ ಮತ್ತು ಸರ್ವೀಸ್ ಟಚ್‍ಪಾಯಿಂಟ್‍ಗಳನ್ನು 2022 ರ ವೇಳೆಗೆ ಹೊಂದಲಿದೆ. ದಕ್ಷಿಣ ಭಾರತದಲ್ಲಿ 39 ಘಟಕಗಳು ಇದ್ದು, ಇಂಡಿಯಾ 2.0 ಪ್ರಾಜೆಕ್ಟ್ ಅಡಿಯಲ್ಲಿ ಬೆಂಗಳೂರಿನಲ್ಲಿ 7 ಡೀಲರ್‌ಶಿಪ್ ಘಟಕಗಳನ್ನು ಸ್ಥಾಪಿಸುವ ಉದ್ದೇಶವನ್ನು ಸ್ಕೋಡಾ ಅಟೋ ಇಂಡಿಯಾ ಹೊಂದಿದೆ.
ಏರ್‌ಪೋರ್ಟ್ ರಸ್ತೆ ಜಕ್ಕೂರ್ ಪ್ಲಾಂಟೇಶನ್ ವಿಲೇಜ್ ಬಳಿ ನೂತನ ಡಿಲರ್‌ಶಿಪ್ ಘಟಕ ಆರಂಭಿಸಲಾಗಿದೆ. ಇಂಡಿಯಾ 2.0 ಬಿಡುಗಡೆಗಳಿಗೆ ಸಿದ್ಧತೆಯನ್ನು ಮಾಡುವುದಕ್ಕಾಗಿ, ಇಡೀ ದೇಶದಲ್ಲಿ ನಮ್ಮ ನೆಟ್‍ವರ್ಕ್ ಅನ್ನು ವಿಸ್ತರಿಸಲು ಶ್ರಮಸುತ್ತಿದ್ದೇವೆ. ಇದರಿಂದ, ಹೆಚ್ಚು ಗ್ರಾಹಕರು ನಮ್ಮ ಉತ್ಪನ್ನಗಳ ಅನುಭವ ಪಡೆಯಬಹುದು ಮತ್ತು ನಮ್ಮ ಗ್ರಾಹಕ ಕೇಂದ್ರಿತ ಮಾರಾಟ ನಂತರದ ಸೌಲಭ್ಯಗಳನ್ನು ಸುಲಭವಾಗಿ ಬಳಸಬಹುದಾಗಿದೆ. ದಕ್ಷಿಣ ಭಾರತದಲ್ಲಿ ಬೆಂಗಳೂರು ಪ್ರಮುಖ ಮಾರುಕಟ್ಟೆಯಾಗಿದೆ ಮತ್ತು ಪಿಪಿಎಸ್ ಮೋಟಾರ್ಸ್ ಜೊತೆಗೆ ನಮ್ಮ ಪಾಲುದಾರಿಕೆಯು ಬ್ರ್ಯಾಂಡ್‍ಗೆ ಪ್ರಮುಖ ಎಂದು ನಾವು ವಿಶ್ವಾಸ ಹೊಂದಿದ್ದೇವೆ ಮತ್ತು ಕರ್ನಾಟಕದಲ್ಲಿ ನಮ್ಮ ಹೆಜ್ಜೆ ಗುರುತನ್ನು ಇನ್ನಷ್ಟು ವಿಸ್ತರಿಸಲಿದ್ದೇವೆ ಎಂದು ಸ್ಕೋಡಾ ಅಟೋ ಇಂಡಿಯಾದ ಬ್ರ್ಯಾಂಡ್ ಡೈರೆಕ್ಟರ್ ಝಾಕ್ ಹಾಲಿಸ್ ಹೇಳಿದ್ದಾರೆ.
ಕುತೂಹಲ ಕೆರಳಿಸಿದೆ ಸ್ಕೋಡಾ Enyaq iV ಎಲೆಕ್ಟ್ರಿಕ್ ಕಾರು !..
ಸ್ಕೋಡಾ ಅಟೋ ಇಂಡಿಯಾದ ಜೊತೆಗೆ ನಮ್ಮ ಪಾಲುದಾರಿಕೆಯಲ್ಲಿ ಮತ್ತು ಬೆಂಗಳೂರಿನಲ್ಲಿ ಹೊಸ ಡೀಲರ್‍ಶಿಪ್ ಘಟಕವನ್ನು ಸ್ಥಾಪಿಸುತ್ತಿರುವ ಬಗ್ಗೆ ನಮಗೆ ಹೆಮ್ಮೆ ಇದೆ. ಸ್ಕೋಡಾ ಅಟೋದ ಜಾಗತಿಕ ಉತ್ತಮ ಅಭ್ಯಾಸಗಳು ಮತ್ತು ಪ್ರಕ್ರಿಯೆಗಳಿಂದಾಗಿ, ಗ್ರಾಹಕರಿಗೆ ಆದ್ಯತೆ ನೀಡುವಲ್ಲಿ ನಮ್ಮ ಹೊಸ ವಿಧಾನಗಳು ಮತ್ತು ಅವುಗಳನ್ನು ಅಳವಡಿಸಿಕೊಳ್ಳುವ ನಮ್ಮ ಕಾರ್ಯತಂತ್ರಗಳು ಉತ್ತಮ ಗ್ರಾಹಕ ಅನುಭವವನ್ನು ಒದಗಿಸುತ್ತವೆ ಎಂದು ಪಿಪಿಎಸ್ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಡೀಲರ್ ಪ್ರಿನ್ಸಿಪಲ್ ರಾಜೀವ್ ಸಂಘ್ವಿ ಹೇಳಿದರು.