ಖ್ಯಾತ ನಟಿ ಶಿಲ್ಪಾ ಶೆಟ್ಟಿ (Shilpa Shetty) ಇತ್ತೀಚೆಗೆ ತನ್ನ 47 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಸಂಪೂರ್ಣವಾಗಿ ಕಸ್ಟಮೈಸ್ಡ್ ಮಾಡಿದ ವ್ಯಾನಿಟಿ ವ್ಯಾನ್ ಖರೀದಿಸಿದ್ದಾರೆ.
ಬಾಲಿವುಡ್ ವ್ಯಕ್ತಿಗಳು ಮತ್ತು ವ್ಯಾನಿಟಿ ವ್ಯಾನ್‌ಗಳತ್ತ (Vanity Van) ಅವರ ಆಕರ್ಷಣೆ ಹೊಸ ವಿಷಯವೇನಲ್ಲ. ಈ ಹಿಂದೆಯೂ ನಾವು ಬಾಲಿವುಡ್ ನಟ ಮತ್ತು ನಟಿಯರ ಐಷಾರಾಮಿ (luxury) ಮತ್ತು ಕಸ್ಟಮೈಸ್ ಮಾಡಿದ ವ್ಯಾನಿಟಿ ವ್ಯಾನ್ಗಳ ಬಗ್ಗೆ ಕೇಳಿದ್ದೇವೆ. ಈಗ ಈ ಪಟ್ಟಿಗೆ ಸೇರುತ್ತಿರುವುದು ಖ್ಯಾತ ನಟಿ ಶಿಲ್ಪಾ ಶೆಟ್ಟಿ (Shilpa Shetty). ಇತ್ತೀಚೆಗೆ ತನ್ನ 47 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಸಂಪೂರ್ಣವಾಗಿ ಕಸ್ಟಮೈಸ್ ಮಾಡಿದ ವ್ಯಾನಿಟಿ ವ್ಯಾನ್ ಖರೀದಿಸಿದ್ದಾರೆ.
ಕಪ್ಪು ಬಣ್ಣದ ಈ ವ್ಯಾನಿಟಿ ವ್ಯಾನ್ ಐಷಾರಾಮಿ ಮತ್ತು ಫಿಟ್ನೆಸ್‌ನ ಅಂಶಗಳನ್ನು ಒಳಗೊಂಡಿದೆ. ಹೊರಭಾಗದಲ್ಲಿ, ವ್ಯಾನಿಟಿ ವ್ಯಾನ್ ಕಪ್ಪು ಛಾಯೆ, ಮುಂಭಾಗದಲ್ಲಿ ತೆಳುವಾದ ಮತ್ತು ಕೋನೀಯ ಹೆಡ್‌ಲ್ಯಾಂಪ್‌ಗಳು ಮತ್ತು ಮುಂಭಾಗದ ಬಂಪರ್‌ನ ಮೇಲೆ ದುಂಡಾದ ಹ್ಯಾಲೊಜೆನ್ (halogen) ದೀಪಗಳು ಇದಕ್ಕೆ ವಿಶೇಷ ಲುಕ್ ನೀಡಿದೆ. ಗ್ರಿಲ್‌ನ ಮಧ್ಯದಲ್ಲಿ, ಈ ವ್ಯಾನಿಟಿ ವ್ಯಾನ್‌ನಲ್ಲಿ ಶಿಲ್ಪಾ ಶೆಟ್ಟಿ ಕುಂದ್ರಾ (ಎಸ್‌ಎಸ್‌ಕೆ-SSK) ಎಂಬ ಅಕ್ಷರಗಳು ಪ್ರಮುಖ ಆಕರ್ಷಣೆಯಾಗಿದೆ.
ಒಳಭಾಗದಲ್ಲಿ ಈ ವ್ಯಾನಿಟಿ ವ್ಯಾನ್ ಯಾವುದೇ ಪಂಚತಾರಾ ಹೋಟೆಲ್‌ನ ಸೂಟ್‌ಗಿಂತ ಕಡಿಮೆಯಿಲ್ಲ. ಕ್ಯಾಬಿನ್ ಒಂದು ಅಡುಗೆಮನೆ, ವಿಶ್ರಾಂತಿ ಕೋಣೆ ಮತ್ತು ಮೇಕಪ್ ಕೋಣೆ ಸೇರಿದಂತೆ ಹಲವಾರು ಸೌಕರ್ಯಗಳನ್ನು ಹೊಂದಿದೆ. ಅಡುಗೆಮನೆಯಲ್ಲಿ ಮೈಕ್ರೋವೇವ್ ಓವನ್, ಚಿಮಣಿ, ಚಾಕು,ಕತ್ತರಿಗಳು ಮತ್ತು ಕಪಾಟುಗಳಂತಹ ಆಧುನಿಕ ವಸ್ತುಗಳನ್ನು ಹೊಂದಿರುವ ಎಲ್-ಆಕಾರದ ಕ್ಯಾಬಿನೆಟ್ ಇದೆ. ಹವಾನಿಯಂತ್ರಿತ ಲಾಂಜ್ ಕೂಡ ಮಂಚ, ಸೋಫಾ ಕುರ್ಚಿ, ಮೇಜು, ಕುಶನ್‌ಗಳು, ದೊಡ್ಡ ಕನ್ನಡಿ, ಮತ್ತು ರೂಫ್‌ಟಾಪ್ ಲೈಟ್ಗಳೊಂದಿಗೆ ಲಕ್ಸುರಿಯಾಗಿದೆ. ಮೇಕಪ್ ಕೊಠಡಿಯು ಸಣ್ಣ ಹೇರ್ ಸ್ಪಾ ಮತ್ತು ಸಲೂನ್ಗಳನ್ನು ಒಳಗೊಂಡಿದ್ದು, ಒಂದು ಐಷಾರಾಮಿ ಮನೆಯಲ್ಲಿ ನೀವು ನಿರೀಕ್ಷಿಸಬಹುದಾದ ಎಲ್ಲಾ ಸೌಲಭ್ಯಗಳಿಂದ ಇದು ಸುಸಜ್ಜಿತವಾಗಿ ಕಾಣುತ್ತದೆ.
ಇದನ್ನೂ ಓದಿ: ಕಾಂಡೋಮ್ ಕಂಪೆನಿಯ ಸೇಲ್ಸ್ ಗರ್ಲ್ ಆಗಿ ನಟಿ Nusrat Bharucha !
ಈ ಐಷಾರಾಮಿ ವ್ಯಾನಿಟಿ ವ್ಯಾನ್ನಲ್ಲಿ ಪ್ರತ್ಯೇಕ ಫಿಟ್‌ನೆಸ್ ವಿಭಾಗವಿದೆ. ವ್ಯಾನ್‌ನ ಮೇಲ್ಛಾವಣಿಯ ಮೇಲೆ ಮೀಸಲಾದ ಯೋಗ ಡೆಕ್ ಅನ್ನು ಒಳಗೊಂಡಿದ್ದು, ಕ್ಯಾಬಿನ್ ಒಳಗೆ ಇರುವ ಸಣ್ಣ ಮೆಟ್ಟಿಲುಗಳ ಮೂಲಕ ಇದನ್ನು ಪ್ರವೇಶಿಸಬಹುದು. ಡೆಕ್‌ಗೆ ನೆಲ ಮತ್ತು ಮೆಟ್ಟಿಲುಗಳನ್ನು ಕೃತಕ ಹುಲ್ಲಿನ ಕಾರ್ಪೆಟ್ಗಳನ್ನು ಹಾಕಲಾಗಿದೆ. ನೆಲದ ಮೇಲೆ ಯೋಗ ಚಾಪೆ, ಮಡಚಬಹುದಾದ ಕುರ್ಚಿ ಮತ್ತು ಕೆಟಲ್‌ಬೆಲ್‌ಗಳಂತಹ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಶಿಲ್ಪಾ ಶೆಟ್ಟಿ ಕುಂದ್ರಾ ಯೋಗ ಉತ್ಸಾಹಿಯಾಗಿರುವುದರಿಂದ ಅವರ ಅಭಿರುಚಿಗೆ ತಕ್ಕಂತೆ ಇದನ್ನು ವೈಯಕ್ತೀಕರಿಸಲಾಗಿದೆ.
ಈ ಐಷಾರಾಮಿ ವ್ಯಾನಿಟಿ ವ್ಯಾನ್, ಶಿಲ್ಪಾ ಶೆಟ್ಟಿ ಕುಂದ್ರಾ ಹೊಂದಿರುವ ಅತ್ಯಂತ ದುಬಾರಿ ಖರೀದಿಗಳಲ್ಲಿ ಒಂದು ಎಂದಿರುವ ನಟಿಯ ತಂಡ, ಫಿಟ್ನೆಸ್ ಅವರ ಪ್ರಮುಖ ಆಸಕ್ತಿಗಳಲ್ಲಿ ಒಂದಾಗಿದೆ. ವ್ಯಾನಿಟಿ ವ್ಯಾನ್‌ನಲ್ಲಿ ಶೂಟಿಂಗ್ ಸ್ಥಳಕ್ಕೆ ತೆರಳುತ್ತಿರುವಾಗಲೂ ಯೋಗಾಭ್ಯಾಸ ಮಾಡುವ ಸೌಲಭ್ಯ ಇರಬೇಕೆಂದು ಅವರು ಯಾವಾಗಲೂ ಬಯಸುತ್ತಿದ್ದಳು. ವ್ಯಾನಿಟಿ ವ್ಯಾನ್ ಅನ್ನು ಯಾರು ಕಸ್ಟಮೈಸ್ ಮಾಡಿದ್ದಾರೆ ಮತ್ತು ಸಂಪೂರ್ಣ ಬೆಲೆ ಎಷ್ಟು ಎಂಬುದು ಸ್ಪಷ್ಟವಾಗಿಲ್ಲ.
ಇದನ್ನೂ ಓದಿ: 22 ವರ್ಷ ಹಳೆಯ ಸ್ಮೀಮ್‌ಸೂಟ್ ಫೋಟೋ ಶೇರ್ ಮಾಡಿದ Priyanka Chopra ಗುರುತೇ ಸಿಗೋಲ್ಲ!
ಕರ್ನಾಟಕ ಕರಾವಳಿ ಮೂಲದ ಶಿಲ್ಪಾ ಶೆಟ್ಟಿ, 1993ರಲ್ಲಿ ಚಿತ್ರರಂಗ ಪ್ರವೇಶಿಸಿದ ಶಿಲ್ಪಾ ಶೆಟ್ಟಿ ಈಗ ಸಬೀರ್ ಖಾನ್ ನಿರ್ದೇಶನದ ನಿಕಮ್ಮಾ ಚಿತ್ರದಲ್ಲಿ ನಟಿಸುತ್ತಿದ್ದು, ಅದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಜೊತೆಗೆ, ಸೋನಲ್ ಜೋಷಿ ನಿರ್ದೇಶನದ ಸುಖೀ ಚಿತ್ರ ಡಿಸೆಂಬರ್ 10ರಂದು ಬಿಡುಗಡೆಯಾಗಲಿದೆ. ಬಾಜೀಗರ್ ಚಿತ್ರದಿಂದ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದ ಅವರು, ಈಗ ಯಶಸ್ವಿ ಉದ್ಯಮಿಯಾಗಿದ್ದು, ತಮ್ಮದೇ ಆದ ಯೋಗ ಆ್ಯಪ್ ಅನ್ನು ಕೂಡ ಹೊಂದಿದ್ದಾರೆ.