Break issue: ಲಕ್ಷಾಂತರ ಕಾರು ಹಿಂಪಡೆದ ಐಷಾರಾಮಿ ಮರ್ಸಿಡೆಸ್ ಬೆಂಜ್

By Suvarna News  |  First Published Jun 9, 2022, 5:02 PM IST

ಮರ್ಸಿಡೀಸ್‌ ಬೆನ್ಸ್‌ (Mercedes-Benz) ನ ಹಲವು ಕಾರುಗಳಲ್ಲಿ ಬ್ರೇಕಿಂಗ್‌ ಸಮಸ್ಯೆ ಎದುರಾಗಿದೆ. ಇದರ ಪರಿಣಾಮವಾಗಿ ಕಂಪನಿ ತನ್ನ ಹಳೆಯ ಎಂಎಲ್‌ (ML) ಮತ್ತು ಜಿಎಲ್‌ ಎಸ್‌ಯುವಿ (GL SUV)ಗಳನ್ನು ಜಾಗತಿಕವಾಗಿ ಹಿಂಪಡೆಯಲಿದೆ. 


ಜಾಗತಿಕ ಐಷಾರಾಮಿ ಕಾರು ತಯಾರಕ ಕಂಪನಿ ಮರ್ಸಿಡೀಸ್‌ ಬೆನ್ಸ್ (Mercedes-Benz) ನ ಹಲವು ಕಾರುಗಳಲ್ಲಿ ಬ್ರೇಕಿಂಗ್‌ ಸಮಸ್ಯೆ ಎದುರಾಗಿದೆ. ಇದರ ಪರಿಣಾಮವಾಗಿ ಕಂಪನಿ ತನ್ನ ಹಳೆಯ ಎಂಎಲ್ (ML) ಮತ್ತು ಜಿಎಲ್‌ ಎಸ್‌ಯುವಿ (GL SUV)ಗಳನ್ನು ಜಾಗತಿಕವಾಗಿ ಹಿಂಪಡೆಯಲಿದೆ.  ದೋಷಪೂರಿತ ಕಾರುಗಳ ಹಿನ್ನೆಲೆಯಲ್ಲಿ 2004 ರಿಂದ 2015ರ ನಡುವೆ ಮಾರಾಟ ಮಾಡಿರುವ ಆರ್‌-ಕ್ಲಾಸ್‌ ಎಂಪಿವಿ (R-ಕ್ಲಾಸ್ MPV) ಅನ್ನು ಹಿಂಪಡೆಯಲಿದೆ ಎಂದು ಜರ್ಮನ್ ಸಾರಿಗೆ ಪ್ರಾಧಿಕಾರದ (KBA) ವರದಿಯು ಬಹಿರಂಗಪಡಿಸಿದೆ.

ಈ ಹಿಂಪಡೆಯುವ ವಾಹನಗಳ ಸಂಖ್ಯೆ ಒಂದು ಮಿಲಿಯನ್‌ನಷ್ಟಿದೆ. ಇದಕ್ಕೆ ಪ್ರಮುಖ ಕಾರಣ ಬ್ರೇಕಿಂಗ್ ಸಿಸ್ಟಮ್ನೊಂದಿಗೆ ಸಂಭಾವ್ಯ ಸಮಸ್ಯೆ. ಆ ಕೆಲವು ವಾಹನಗಳಲ್ಲಿ, ಬ್ರೇಕ್ ಬೂಸ್ಟರ್ನಲ್ಲಿ ತುಕ್ಕು ಕಾಣಿಸಿಕೊಂಡಿದೆ. ಇದು ಕಾರಿನ ಬ್ರೇಕಿಂಗ್‌ ಸಮಸ್ಯೆಗೆ ಕಾರಣವಾಗಿದೆ ಎಂಬುದು ತಿಳಿದುಬಂದಿದೆ ಎಂದು ಮರ್ಸಿಡಿಸ್ ಜಾಗತಿಕ ಪ್ರತಿನಿಧಿ ಮಾಹಿತಿ ನೀಡಿದ್ದಾರೆ. ಈ ಕುರಿತು ತಕ್ಷಣ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಮರ್ಸಿಡಿಸ್-ಬೆನ್ಜ್ ಇಂಡಿಯಾ ಶೀಘ್ರದಲ್ಲೇ ಹೇಳಿಕೆ ನೀಡುವುದಾಗಿ ತಿಳಿಸಿದೆ.

ಈ ಸಮಸ್ಯೆ ಕಂಡುಬಂದಿರುವ ಮಾದರಿಗಳನ್ನು 2004 ಮತ್ತು 2015 ರ ನಡುವೆ ಮಾರಾಟ ಮಾಡಲಾಗಿದೆ ಮತ್ತು ಎಲ್ಲವನ್ನೂ ಒಂದೇ ದೊಡ್ಡ ಮೊನೊಕಾಕ್ ಪ್ಲಾಟ್ಫಾರ್ಮ್ನಲ್ಲಿ ನಿರ್ಮಿಸಲಾಗಿದೆ. ಈ ಕಾರುಗಳು ಯಾವುವೆಂದರೆ, ಎರಡನೇ ತಲೆಮಾರಿನ ಮರ್ಸಿಡೀಸ್‌-ಬೆನ್ಸ್‌ ಎಂಎಲ್ (Mercedes-Benz ML -W164), ಮೊದಲ ತಲೆಮಾರಿನ ಜಿಎಲ್‌ (ಎಕ್ಸ್164) GL (X164) ಮತ್ತು ಆರ್‌ ಕ್ಲಾಸ್ (ಡಬ್ಲ್ಯು251) R-Class (W251), ಇವೆಲ್ಲವೂ ಭಾರತದಲ್ಲಿ ನಿರ್ದಿಷ್ಟ ಸಮಯದವರೆಗೆ ಮಾರಾಟಕ್ಕಿದ್ದವು.

ಐಷಾರಾಮಿ ಕಾರು ಒಡತಿಯಾದ ಕಂಗನಾ

ಆದರೆ, ಈ ಬೃಹತ್ ಹಿಂಪಡೆಯುವಿಕೆಯಿಂದ ಭಾರತೀಯ-ಮಾರುಕಟ್ಟೆ ಮಾದರಿಗಳು ಪರಿಣಾಮ ಬೀರುತ್ತವೆಯೇ ಎಂಬುದು ಈ ಹಂತದಲ್ಲಿ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಏಕೆಂದರೆ, ಬ್ರೇಕಿಂಗ್‌ ಸಮಸ್ಯೆ ಕಾಣಿಸಿಕೊಂಡಿರುವ ಒಟ್ಟು 9,93,407 ಕಾರುಗಳಲ್ಲಿ ಸುಮಾರು 70,000 ಕಾರುಗಳು ಜರ್ಮನಿಯ ಮಾರುಕಟ್ಟೆಯೇ ಇವೆ. ಕೆಬಿಎ ಹೇಳಿಕೆ ಪ್ರಕಾರ, ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಅತಿಯಾದ ತುಕ್ಕು, ಬಲವಾದ ಅಥವಾ ಗಟ್ಟಿಯಾದ ಬ್ರೇಕಿಂಗ್ ಬ್ರೇಕ್ ಬೂಸ್ಟರ್ಗೆ ಹಾನಿಯನ್ನುಂಟುಮಾಡುತ್ತದೆ, ಬ್ರೇಕ್ ಪೆಡಲ್ ಮತ್ತು ಬ್ರೇಕಿಂಗ್ ಸಿಸ್ಟಮ್ ನಡುವಿನ ಸಂಪರ್ಕವನ್ನು ಕಡಿತಗೊಳಿಸುತ್ತದೆ.

ಎಜಿಯು ಹಿಂಪಡೆಯುವಿಕೆಯನ್ನು ತಕ್ಷಣ ಪ್ರಾರಂಭಿಸುವುದಾಗಿ ಮರ್ಸಿಡಿಸ್-ಬೆನ್ಜ್ ಸಮೂಹ ಹೇಳಿದೆ. ಈ ಪ್ರಕ್ರಿಯೆ ಮಾಲೀಕರನ್ನು ಸಂಪರ್ಕಿಸುವುದು, ಸಂಭಾವ್ಯ ಹಾನಿಗೊಳಗಾದ ವಾಹನಗಳನ್ನು ಪರಿಶೀಲಿಸುವುದು ಮತ್ತು ಅಗತ್ಯವಿರುವಲ್ಲಿ ಭಾಗಗಳನ್ನು ಬದಲಾಯಿಸುವುದನ್ನು ಒಳಗೊಂಡಿರುತ್ತದೆ ಎಂದು ಹೇಳಿದೆ. ನಿಗದಿತ ಅವಧಿಯಲ್ಲಿ ಮಾರಾಟವಾಗಿರುವ  ಸಂಭಾವ್ಯ ಹಾನಿಗೊಳಗಾದ ವಾಹನಗಳನ್ನು ಸದ್ಯಕ್ಕೆ ಚಾಲನೆ ಮಾಡದಂತೆ ಮಾಲೀಕರಿಗೆ ಕಂಪನಿ ಶಿಫಾರಸು ಮಾಡಿದೆ.

ನಿಷ್ಕ್ರಿಯಗೊಂಡ ಕಾರು

ಮರ್ಸಿಡೀಸ್‌ ತನ್ನ ಕಾರುಗಳನ್ನು ಹಿಂಪಡೆಯುತ್ತಿರುವುದು ಇದೇ ಮೊದಲೇನಲ್ಲ. 2021ರಲ್ಲಿ, ಮರ್ಸಿಡೀಶ್‌ ಬೆನ್ಸ್ (Mercedes-Benz) 2018 ಮತ್ತು 2019 ರ ನಡುವೆ US ನಲ್ಲಿ ಮಾರಾಟವಾದ ಸುಮಾರು 1.3 ಮಿಲಿಯನ್ ಕಾರುಗಳನ್ನು ಹಿಂತೆಗೆದುಕೊಂಡಿತು. ಇದರಲ್ಲಿ ತುರ್ತು ಕರೆ ವ್ಯವಸ್ಥೆಯಲ್ಲಿ ದೋಷ ಕಂಡುಬಂದಿದ್ದು, ಅದು ತುರ್ತು ಸೇವೆಗಳನ್ನು ತಪ್ಪಾದ ಕಡೆಗೆ ಒದಗಿಸುತ್ತಿತ್ತು. ಈ ದೋಷವನ್ನು ಓವರ್‌ ದಿ ಏರ್  (ಒಟಿಎ-OTA) ಅಪ್ಡೇಟ್ ಅಥವಾ ಡೀಲರ್ಶಿಪ್ನಲ್ಲಿ ಸರಿಪಡಿಸಬಹುದಾಗಿತ್ತು. ಇತ್ತೀಚೆಗಷ್ಟೇ ಮರ್ಸಿಡೀಶ್ –ಬೆನ್ಸ್ ಇಂಡಿಯಾ (Mercedes Benz India) ಹೊಸ ತಲೆಮಾರಿನ C-ಕ್ಲಾಸ್ ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ 55 ಲಕ್ಷ ರೂ.ಗಳಷ್ಟಿದೆ. ಸಿ-ಕ್ಲಾಸ್ ಭಾರತದಲ್ಲಿ 2001 ರಿಂದ ಮಾರಾಟದಲ್ಲಿದೆ ಮತ್ತು ಇದು 2021 ರ ಆರಂಭದಲ್ಲಿ ಇದು 5 ನೇ ತಲೆಮಾರಿನ (W206) ಮಾದರಿಯಾಗಿದೆ. ಇಲ್ಲಿಯವರೆಗೆ, ಮರ್ಸಿಡಿಸ್ ಸಿ- ನ 37,000 ವಾಹನಗಳನ್ನು ಮಾರಾಟ ಮಾಡಿದೆ.

click me!