ಟಾಟಾ ಕಾರುಗಳು ಸುರಕ್ಷಿತ ಅನ್ನೋ ಟ್ಯಾಗ್ ಲೈನ್ ಪಡೆದುಕೊಂಡಿದೆ. ಇದೀಗ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು ಹೊಸ ದಾಖಲೆ ಬರೆದಿದೆ. ಭಾರತದ ಸುರಕ್ಷಿತ ಎಲೆಕ್ಟ್ರಿಕ್ ಕಾರು ಅನ್ನೋ ಹಿರಿಮೆಗೆ ಪಾತ್ರವಾಗಿದೆ.
ನವದೆಹಲಿ(ಜೂ.14) ಕೈಗೆಟುಕುವ ದರ, ಅತ್ಯಂತ ಆಕರ್ಷಕ ವಿನ್ಯಾಸ, ಪರ್ಫಾಮೆನ್ಸ್ ಸೇರಿದಂತೆ ಎಲ್ಲದರಲ್ಲೂ ಟಾಟಾ ಮುಂಚೂಣಿಯಲ್ಲಿದೆ. ಇದಕ್ಕಿಂತ ಪ್ರಮುಖವಾಗಿ ಸುರಕ್ಷತೆ ವಿಚಾರದಲ್ಲಿ ಟಾಟಾ ರಾಜಿಯಾಗಿಲ್ಲ. ಟಾಟಾ ಗ್ರಾಹಕರಿಗೆ ಗರಿಷ್ಠ ಸುರಕ್ಷತೆ ಕಾರುಗಳನ್ನು ನೀಡುತ್ತಿದೆ. ಇದೀಗ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು ಭಾರತದ ಸುರಕ್ಷಿತಿ ಇವಿ ಅನ್ನೋ ದಾಖಲೆ ಬರೆದಿದೆ. ಭಾರತ್-ಎನ್‌ಸಿಎಪಿ ಕ್ರಾಶ್‌ಟೆಸ್ಟ್‌ನಲ್ಲಿ ಅತ್ಯಧಿಕ ಸ್ಕೋರ್ ಪಡೆದು 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ.
ಪಂಚ್ ಎಲೆಕ್ಟ್ರಿಕ್ ಕಾರು ಇಲ್ಲಿಯವರೆಗೆ ಯಾವುದೇ ವಾಹನ ಕೂಡ ಗಳಿಸದೇ ಇದ್ದ ಅತ್ಯಧಿಕ ಸ್ಕೋರ್ ಪಡೆಯುವ ಮೂಲಕ ಮೈಲಿಗಲ್ಲು ಸ್ಥಾಪಿಸಿದೆ. ಪಂಚ್.ಇವಿ ಅಡಲ್ಟ್ ಆಕ್ಯುಪೆಂಟ್ಸ್ ಪ್ರೊಟೆಕ್ಷನ್(ಎಓಪಿ) ಅಂದ್ರೆ ವಯಸ್ಕರ ರಕ್ಷಣೆ ವಿಭಾಗದಲ್ಲಿ ದಾಖಲೆಯ 31.46/32 ಪಾಯಿಂಟ್ಸ್, ಚಿಲ್ಡ್ರನ್ ಆಕ್ಯುಪೆಂಟ್ ಪ್ರೊಟೆಕ್ಷನ್ (ಸಿಓಪಿ) ಅಂದ್ರೆ ಮಕ್ಕಳ ರಕ್ಷಣೆ ವಿಭಾಗದಲ್ಲಿ 45/49 ಅಂಕಗಳನ್ನು ಪಡೆದುಕೊಂಡಿದೆ. ನೆಕ್ಸಾನ್.ಇವಿ ಎಓಪಿ ಮತ್ತು ಸಿಓಪಿಯಲ್ಲಿ ಕ್ರಮವಾಗಿ 29.86/32 ಮತ್ತು 44.95/49 ಅಂಕಗಳನ್ನು ಗಳಿಸಿದೆ. ಈ ಮೂಲಕ ಟಾಟಾ ಮೋಟಾರ್ಸ್ ಈಗ ಭಾರತ್-ಎನ್‌ಸಿಎಪಿ ಮತ್ತು ಗ್ಲೋಬಲ್-ಎನ್‌ಸಿಎಪಿ ಪರೀಕ್ಷೆಗಳಲ್ಲಿ 5-ಸ್ಟಾರ್‌ಗಳನ್ನು ಗಳಿಸಿರುವ ಅತಿ ಸುರಕ್ಷಿತ ಶ್ರೇಣಿಯ ಎಸ್‌ಯುವಿ ಉತ್ಪನ್ನ ಶ್ರೇಣಿಗಳನ್ನು ಹೊಂದಿರುವ ಏಕೈಕ ಒಇಎಂ ಆಗಿದೆ.
ವಯಸ್ಕರು-ಮಕ್ಕಳಿಗೆ ಗರಿಷ್ಠ ಸುರಕ್ಷತೆ, ಗ್ಲೋಬಲ್ NCAP ಕ್ರಾಶ್ ಟೆಸ್ಟ್‌ನಲ್ಲಿ ಟಾಟಾ ನೆಕ್ಸಾನ್‌ಗೆ 5 ಸ್ಟಾರ್!
ನೆಕ್ಸಾನ್.ಇವಿ ಮತ್ತು ಪಂಚ್.ಇವಿ ಭಾರತ್-ಎನ್‌ಸಿಎಪಿಯಲ್ಲಿ 5-ಸ್ಟಾರ್ ರೇಟಿಂಗ್ ಅನ್ನು ಪಡೆದಿದೆ. ಈ ಮಹತ್ವದ ಸಾಧನೆ ಮಾಡಿದ್ದಕ್ಕಾಗಿ ನಾನು ಟಾಟಾ ಮೋಟಾರ್ಸ್‌ಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ದೇಶದಲ್ಲಿ ಸುರಕ್ಷಿತ ವಾಹನಗಳು ಇರಬೇಕು ಎನ್ನುವ ಭಾರತ ಸರ್ಕಾರದ ದೃಷ್ಟಿಗೆ ಈ ಪ್ರಮಾಣೀಕರಣವು ಸೂಕ್ತವಾಗಿ ಹೊಂದಿಕೆಯಾಗುತ್ತದೆ ಮತ್ತು ಭಾರತದ ಆಟೋಮೊಬೈಲ್ ಉದ್ಯಮವನ್ನು 'ಆತ್ಮನಿರ್ಭರ' ಮಾಡುವಲ್ಲಿ ಭಾರತ್-ಎನ್‌ಸಿಎಪಿಯ ಪಾತ್ರವನ್ನು ಒತ್ತಿಹೇಳುತ್ತದೆ ಎಂದಿದ್ದಾರೆ.
ನಿರೀಕ್ಷೆಗೂ ಮೀರಿದ ಸುರಕ್ಷತೆ 6 ಏರ್ ಬ್ಯಾಗ್ ಗಳು (ಸ್ಟಾಂಡರ್ಡ್) 360 ಡಿಗ್ರಿ ಎಸ್ ವಿ ಎಸ್, ಎಲೆಕ್ಟ್ರಿಕ್ ಸ್ಟೆಬಿಲಿಟಿ ಪ್ರೋಗ್ರಾಮ್ (ಸ್ಟಾಂಡರ್ಡ್) ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಐಸೋಫಿಕ್ಸ್ (ಸ್ಟಾಂಡರ್ಡ್)ಎಸ್ಓಎಸ್ ಕಾಲಿಂಗ್, ಹಿಲ್ ಹೋಲ್ಡ್ ಅಸಿಸ್ಟ್ (ಸ್ಟಾಂಡರ್ಡ್) ಆಟೋ ಹೋಲ್ಡ್ ಜೊತೆಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ರೋಲ್ ಓವರ್ ಮಿಟಿಗೇಷನ್ (ಸ್ಟಾಂಡರ್ಡ್)ಎಲ್ಲಾ 4 ಡಿಸ್ಕ್ ಬ್ರೇಕ್ ಗಳು, ಐಟಿಪಿಎಂಎಸ್ (ಸ್ಟಾಂಡರ್ಡ್) ಹಿಲ್ ಡಿಸೆಂಟ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್ ಇದರಲ್ಲಿದೆ.
ಗ್ಲೋಬಲ್ ಎನ್‌ಸಿಎಪಿ ಪರೀಕ್ಷೆಯಲ್ಲಿ 5 ಸ್ಟಾರ್ ಸುರಕ್ಷತಾ ರೇಟಿಂಗ್: ಇವೇ ಟಾಟಾ ಮೋಟಾರ್ಸ್‌ನ ಸುರಕ್ಷಿತ ಕಾರುಗಳು!