ರೆನೋಗೆ 10 ವರ್ಷ: ಹೊಸ 2021 ಕ್ವಿಡ್ ಲಾಂಚ್, ವಿಶೇಷ ಆಫರ್ಸ್!

By Suvarna News  |  First Published Sep 3, 2021, 6:12 PM IST

ಭಾರತದ ಜನಪ್ರಿಯ ಎಂಟ್ರಿ  ಲೆವಲ್ ಹ್ಯಾಚ್‌ಬ್ಯಾಕ್ ಕಾರ್ ಕ್ವಿಡ್ ‌ಹೊಸ ಅಪ್‌ಡೇಟ್‌ಗಳೊಂದಿಗೆ ಲಾಂಚ್ ಆಗಿದೆ. 10ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕಂಪನಿಯು ಕ್ವಿಡ್‌ನ ಹೊಸ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಜೊತೆಗೆ ವಿಶೇಷ ಆಫರ್ಸ್‌ಗಳನ್ನು ಕಂಪನಿಯು ಘೋಷಿಸಿದೆ.


ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಮತ್ತು ಜನಪ್ರಿಯ ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ರೆನೋ ಕ್ವಿಡ್ ಇದೀಗ ಮತ್ತಷ್ಟು ಸುಧಾರಿತ ಅವತಾರದಲ್ಲಿ ಗ್ರಾಹಕರ ಮುಂದೆ ಬಂದಿದೆ.

ಹೌದು. ಭಾರತದಲ್ಲಿ ರೆನೋ ಆರಂಭವಾಗಿ ಹತ್ತು ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಕಂಪನಿಯು, ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್  2021 ಕ್ವಿಡ್‌ನ ಹೊಸ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. 

Tap to resize

Latest Videos

undefined

ರಗಡ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದ ಇಬೈಕ್‌ಗೋ, ಬೆಲೆ ಎಷ್ಟು?

ಭಾರತೀಯ ಮಾರುಕಟ್ಟೆಯಲ್ಲಿ ಕ್ವಿಡ್ ಕಾರ್‌ಗಳು ಸಿಕ್ಕಾಪಟ್ಟೆ ಜನಪ್ರಿಯವಾಗಿವೆ. ಮಾರುತಿ ಸುಜುಕಿಯ ಅಲ್ಟೋ ಕಾರ್‌ಗಳಿಗೆ ಯಾವುದಾದರೂ ಬ್ರ್ಯಾಂಡ್ ತೀವ್ರ ಪೈಪೋಟಿ ನಿಡಿದ್ದರೆ ಅದು ಕ್ವಿಡ್ ಮಾತ್ರ. ಭಾರತದಲ್ಲಿ ಕ್ವಿಡ್ ಲಾಂಚ್ ಆಗುತ್ತಿದ್ದಂತೆ ಬಹುಬೇಗ ಜನಪ್ರಿಯತೆಯನ್ನು ಪಡೆದುಕೊಂಡಿತು.

ಕ್ವಿಡ್‌ ಲುಕ್‌ನಿಂದಾಗಿ ಹೆಚ್ಚು ಗಮನ ಸೆಳೆಯುತ್ತದೆ. ಅದು ನೋಡಲು ಮಿನಿ ಎಸ್‌ಯುವಿ ತರಹವೇ ಕಾಣುತ್ತದೆ. ಮತ್ತು ಬೆಲೆಯ ದೃಷ್ಟಿಯಿಂದಲೂ ಹೆಚ್ಚು ಆಕರ್ಷಕವಾಗಿದೆ. ಮಾರುತಿಯ ಅಲ್ಟೋ ರೇಂಜ್‌ನಲ್ಲೇ ಬೆಲೆ ಇರುವುದರಿಂದ ಗ್ರಾಹಕರು ಮಾರುತಿಗಿಂತ ಕ್ವಿಡ್‌ಗೆ ಹೆಚ್ಚು ಮಾರು ಹೋದರು. ಪರಿಣಾಮ ಕೆಲವೇ ವರ್ಷಗಳಲ್ಲಿ ಕ್ವಿಡ್ ಜನಪ್ರಿಯ ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಎಂಬ ಗರಿಮೆಗೆ ಪಾತ್ರವಾಯಿತು. 

 

We complete 10 phenomenal years in India. Celebrate with us & get amazing offers on your new Renault. View offers: https://t.co/8GkYBf48oR pic.twitter.com/WbAHfXU4I7

— Renault India (@RenaultIndia)

 

ಇದೀಗ ರೆನೋ ಕಂಪನಿಯ 10ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಜನಪ್ರಿಯ ಹ್ಯಾಚ್‌ಬ್ಯಾಕ್ ಕ್ವಿಡ್ ಅನ್ನು ಹೊಸ ಆವೃತ್ತಿಯಲ್ಲಿ ಬಿಡುಗಡೆ ಮಾಡುತ್ತಿದೆ. ಈ 2021 ಕ್ವಿಡ್ ಹ್ಯಾಚ್‌ಬ್ಯಾಕ್ ಕಾರಿನ ಬೆಲೆ 4.06 ಲಕ್ಷ ರೂ.ನಿಂದ ಆರಂಭವಾಗಿ 5.51 ಲಕ್ಷ ರೂಪಾಯಿವರೆಗೂ ಇದೆ(ಎಕ್ಸ್‌ಶೋರೂಮ್).

ಹುಂಡೈ ಕ್ಯಾಸ್ಪರ್ ಮೈಕ್ರೋ ಎಸ್‌ಯುವಿ ಅನಾವರಣ; ಟಾಟಾಗೆ ‘ಪಂಚ್’ ಕೊಡುತ್ತಾ?

ಭಾರತೀಯ ಆಟೋ ಮಾರುಕಟ್ಟೆಯಲ್ಲಿ ಕ್ವಿಡ್ ಗೇಮ್ ಚೇಂಜರ್ ಆಗಿದೆ. 2021 ಆವೃತ್ತಿಯು ಎಂಟ್ರಿ-ಲೆವೆಲ್ ಕಾರಿಗೆ ಹೊಸ ವೈಶಿಷ್ಟ್ಯಗಳನ್ನು ತರುತ್ತದೆ. 2021 ರೆನೋ ಕ್ವಿಡ್‌ನಲ್ಲಿನ ದೊಡ್ಡ ಅಪ್‌ಡೇಟ್ ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಎಲ್ಲಾ ವೆರಿಯಂಟ್‌ಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಸೇರಿಸಲಾಗಿದೆ. ಮಾದರಿಯು ಅಪ್‌ಡೇಟ್‌ನ ಭಾಗವಾಗಿ ಡ್ರೈವರ್ ಸೈಡ್ ಪೈರೋಟೆಕ್ ಮತ್ತು ಪ್ರಿಟೆನ್ಶನರ್‌ನೊಂದಿಗೆ ಬರುತ್ತದೆ. 

ಕ್ವಿಡ್‌ನ ಹೈಎಂಡ್ ಆಗಿರುವ ಕ್ಲೈಂಬರ್ ಕೂಡ ಹೊಸ ಡುಯಲ್ ಟೋನ್ ಹಾಗೂ ಬ್ಲ್ಯಾಕ್ ರೂಪ್ ಪೇಂಟ್ ಪಡೆದುಕೊಂಡಿದೆ. ಇದೇ ವೆರಿಯೆಂಟ್‌ನಲ್ಲಿ ಎಲೆಕ್ಟ್ರಿಕ್ ಕಾರ್ಯಾಚರಣೆಯನ್ನು ಒಆರ್‌ವಿಎಂಗಳನ್ನು ಕಾಣಬಹುದು. ಇವುದು ಡೇ ಆಂಡ್ ನೈಟ್ ಒಆರ್‌ವಿಎಂಗಳಾಗಿವೆ. ಈ ಹ್ಯಾಚ್‌ಬ್ಯಾಕ್ ನಿಮಗೆ 8.0 ಲೀ ಮತ್ತು 1.0  ಲೀಟರ್ ಎಂಜಿನ್‌ ಆವೃತ್ತಿಗಳಲ್ಲಿ ಸಿಗಲಿದೆ. ಎರಡೂ ಎಂಜಿನ್‌ಗಳು 5 ಸ್ಪೀಡ್ ಮ್ಯಾನುಯೆಲ್ ಗಿಯರ್ ಬಾಕ್ಸ್ ಹೊಂದಿವೆ. ಅದೇ ವೇಳೆ, 1.0 ಲೀ. ಎಂಜಿನ್ ನಿಮಗೆ 5 ಸ್ಪೀಡ್ ಆಟೋಮೆಟಿಕ್ ಎಂಜಿನ್‌ನಲ್ಲಿ ಸಿಗುತ್ತದೆ. ಎಂಜಿನ್ ದೃಷ್ಟಿಯಿಂದ 2021ರ ಹೊಸ ಕ್ವಿಡ್‌ನಲ್ಲಿ ಅಂಥ ಬದಲಾವಣಗಳೇನೂ ಆಗಿಲ್ಲ.

ವಿಶೇಷ ಎಂದರೆ, ಹೊಸ ಆವೃತ್ತಿಗಳ ಬಿಡುಗಡೆ ಜತೆಗೆ ಕಂಪನಿಯು ಖರೀದಿದಾರರಿಗ ವಿಶೇಷ ರಿಯಾಯ್ತಿಗಳನ್ನು ಘೋಷಿಸಿದೆ. ಸೆಪ್ಟೆಂಬರ್‌ನಲ್ಲಿ ಕ್ವಿಡ್ ಖರೀದಿಸಿದರೆ ನಿಮಗೆ ಅನೇಕ ಲಾಭಗಳು ಸಿಗಲಿವೆ. ಕಂಪನಿ ಹೇಳಿಕೊಂಡಿರುವ ಪ್ರಕಾರ, ಗ್ರಾಹಕರು ಕ್ವಿಡ್‌ನ ಆಯ್ದ ಮಾದರಿಗಳ ಮೇಲೆ 80 ಸಾವಿರ ರೂಪಾಯಿವರೆಗೂ ಲಾಭ ಪಡೆದುಕೊಳ್ಳಬಹುದು. 

ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್: ಟಾಟಾ ಟಿಗೋರ್ ಇವಿ ಗರಿಷ್ಠ ಸುರಕ್ಷೆಯ ಕಾರ್

ಕಂಪನಿಯ ಹತ್ತು ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ಹತ್ತು ವಿಶಿಷ್ಟ ಲಾಯಲ್ಟಿ ರಿವಾರ್ಡ್ಸ್‌ಗಳನ್ನು ಪರಿಚಯಿಸಿದೆ. ಆ ಮೂಲಕ ಗರಿಷ್ಠ 1.10 ಲಕ್ಷ ರೂ.ವರೆಗೂ ಲಾಭ ಪಡೆದುಕೊಳ್ಳಬಹುದು.  ಇದರ ಜತೆಗೆ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಗುಜರಾತ್ ಮತ್ತು ಗೋವಾ ರಾಜ್ಯಗಳ ಗ್ರಾಹಕರು ಸೆಪ್ಟೆಂಬರ್ 1ರಿಂದ 10ರವರೆಗೆ ವಿಶೇಷ ಆಫರ್‌ಗಳನ್ನು ಪಡೆಯಬಹುದು. ಇದರೊಂದಿಗೆ ರೆನೋ ಕಂಪನಿಯು ತನ್ನ 10ನೇ ವರ್ಷಾಚರಣೆಯನ್ನು ಭರ್ಜರಿಯಾಗಿ ಆಚರಿಸಿಕೊಳ್ಳುತ್ತಿದೆ.

click me!