ನವದೆಹಲಿ(ಸೆ.03): ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಮುನ್ನಡೆಸಿದ ಶಿಖರ್ ಧವನ್ ಸದ್ಯ ಐಪಿಎಲ್ ಟೂರ್ನಿ ತಯಾರಿಯಲ್ಲಿದ್ದಾರೆ. ಐಪಿಎಲ್ ಎರಡನೇ ಭಾಗ ಆರಂಭಕ್ಕೂ ಮುನ್ನ ಶಿಖರ್ ಧವನ್ ದುಬಾರಿ ಹಾಗೂ ಐಷಾರಾಮಿ ಕಾರು ಖರೀದಿಸಿ ಎಲ್ಲರ ಗಮನಸೆಳೆದಿದ್ದಾರೆ. ಶಿಖರ್ ಧವನ್ BMW M8 ಕೂಪ್ ಕಾರು ಖರೀದಿಸಿದ್ದಾರೆ. 2.18 ಕೋಟಿ ರೂಪಾಯಿ ಬೆಲೆಯ ಈ ಕಾರು ಹಲವು ವಿಶೇಷತೆ ಹೊಂದಿದೆ.
ಯಡಿಯೂರಪ್ಪ ಖರೀದಿಸಿದ 1 ಕೋಟಿ ಬೆಲೆಯ ಟೋಯೋಟಾ ವೆಲ್‌ಫೈರ್ ಕಾರಿನ ವಿಶೇಷತೆ ಏನು?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ಕಾರು ಕ್ರೇಜ್ ಇತರ ಕ್ರಿಕೆಟಿಗರಿಗಿಂತ ತುಸು ಹೆಚ್ಚಿದೆ. ಎಂ.ಎಸ್.ಧೋನಿಗೆ ವಿಂಟೇಜ್ ಕಾರು ಬೈಕ್ ಮೇಲೆ ಮೋಹ ಹೆಚ್ಚಿದ್ದರೆ, ಕೊಹ್ಲಿಗೆ ಆಡಿ ಕ್ರೇಜ್ ಇದೆ. ಇತ್ತ ಶಿಖರ್ ಧವನ್ ಇದೀಗ ತಮ್ಮ ಕಾರು ಕಲೆಕ್ಷನ್‌ಗೆ ಮತ್ತೊಂದು ಐಷಾರಾಮಿ ಕಾರು ಸೇರ್ಪಡೆಗೊಳಿಸಿದ್ದಾರೆ. ಧವನ್ ಖರೀದಿಸಿದ ನೂತನ ಕಾರು ಆಡಿ RS7 ಹಾಗೂ ಮರ್ಸಡೀಸ್ AMG GT-63 ಕಾರುನ್ನು ಮೀರಿಸುವ ಪರ್ಫಾಮೆನ್ಸ್ ಹಾಗೂ ಲಕ್ಷುರಿಯಸ್ ಆಗಿದೆ.
500 ಕಿ.ಮೀ ಮೈಲೇಜ್, 10 ಲಕ್ಷ ರೂಪಾಯಿ; ಶೀಘ್ರದಲ್ಲೇ ಟಾಟಾ ಅಲ್ಟ್ರೋಜ್ EV ಬಿಡುಗಡೆ!
ಧವನ್ ಖರೀದಿಸಿದ BMW M8 ಕೂಪ್ ಬೋಲ್ಡ್ ಬ್ಲಾಕ್ ಬಣ್ಣದ್ದಾಗಿದೆ. ಮುಂಭಾಗದಲ್ಲಿ ಸಿಲ್ವರ್ ಗ್ರಿಲ್, ಸ್ಪೋರ್ಟ್ ಲುಕ್ ಹೊಂದಿದೆ.
ಜರ್ಮನ್ ಆಟೋಮೇಕರ್ BMW ಉತ್ಪಾದಿಸಿದ ಕಾರುಗಳ ಪೈಕಿ BMW M8 ಕೂಪ್ ಐಷಾರಾಮಿ ಹಾಗೂ ದುಬಾರಿ ಕಾರಾಗಿದೆ. 20 ಇಂಚಿನ ಅಲೋಯ್ ವೀಲ್, M-ಸ್ಪೆಕ್ xDrive ಆಲ್ ವೀಲ್ ಡ್ರೈವ್ ಸಿಸ್ಟಮ್ ಹೊಂದಿದೆ.
BMW M8 ಕೂಪ್ ಕಾರು ಅತ್ಯಂತ ಬಲಿಷ್ಠ ಎಂಜಿನ್ ಹಾಗೂ ಪರ್ಫಾಮೆನ್ಸ್ ನೀಡುವ ಕಾರಾಗಿದೆ. 592bhp ಪವರ್ ಹಾಗೂ 750Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 4.4-ಲೀಟರ್ V8 ಎಂಜಿನ್, 8 ಸ್ಪೀಡ್ ಸ್ಟೆಪ್‌ಟ್ರಾನಿಕ್ ಟ್ರಾನ್ಸ್‌ಮಿಶನ್ ಹೊಂದಿದೆ. 0-100 ಕಿ.ಮೀ ವೇಗವನ್ನು ಕೇವಲ 3.3 ಸೆಕೆಂಡ್‌ಗಳಲ್ಲಿ ತಲುಪುತ್ತದೆ. ಕಾರಿನ ಗರಿಷ್ಠ ವೇಗ 250kmph.
ಈ ಕಾರಿನ ಬೆಲೆ 2.18 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ಶಿಖರ್ ಧವನ್ ಖರೀದಿಸಿದ ಕಾರಿನ ಆನ್‌ರೋಡ್ ಬೆಲೆ ಸರಿಸುಮಾರು 3 ಕೋಟಿ ಆಗಲಿದೆ. ಧವನ್ ಖರೀದಿಸಿದ BMW M8 ಕೂಪ್ ಕಾರು ಮರ್ಸಿಡೀಸ್ -AMG GT Rಕೂಪ್, ಆಸ್ಟನ್ ಮಾರ್ಟಿನ್ V8 ವ್ಯಾಂಟೇಜ್, ಬೆಂಟ್ಲೇ ಕಾಂಟಿನೆಂಟಲ್ ಜಿಟಿ ಕಾರಿಗೆ ಪ್ರತಿಸ್ಪರ್ಧಿಯಾಗಿದೆ.
BMW M8 ಕೂಪ್ ಕಾರು 10.25 ಇಂಚಿನ ಇನ್ಫೋಟೈನ್ಮೆಂಟ್ ಟಚ್‌ಸ್ಕ್ರೀನ್, M ಸ್ಪೋರ್ಟ್ಸ್ ಸೀಟ್ ಹಾಗೂ ಸ್ಟೀರಿಂಗ್ ವೀಲ್, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಹೊಂದಿದೆ. ಇದರ ಜೊತೆಗೆ ಗರಿಷ್ಠ ಸುರಕ್ಷತೆ ಫೀಚರ್ಸ್ ಹೊಂದಿದೆ.