ಅತ್ಯಾಕರ್ಷಕ, ಐಕಾನಿಕ್ ಬ್ರ್ಯಾಂಡ್ ಮಹೀಂದ್ರ ಸ್ಕಾರ್ಪಿಯೋ ಕ್ಲಾಸಿಕ್ ಬಿಡುಗಡೆ!

By Suvarna News  |  First Published Aug 12, 2022, 8:01 PM IST

ಲೆಜೆಂಡರಿ ಸ್ಕಾರ್ಪಿಯೋ ಮತ್ತೆ ಬಂದಿದೆ. ಇದೀಗ ಕ್ಲಾಸಿಕ್ ವರ್ಶನ್ ಬಿಡುಗಡೆ ಮಾಡಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ, ಹಲವು ವಿಶೇಷತೆಗಳನ್ನು ಹೊಂದಿರುವ ಈ ಕಾರು ಮೊದಲ ನೋಟಕ್ಕೆ ಗ್ರಾಹಕರನ್ನು ಖರೀದಿಗೆ ಉತ್ತೇಜಿಸಲಿದೆ. ಈ ಕಾರಿನ ಸಂಪೂರ್ಣ ಮಾಹಿತಿ ಇಲ್ಲಿದೆ.
 


ಮುಂಬೈ(ಆ.12): ಭಾರತದಲ್ಲಿ ಎಸ್‌ಯುವಿ ಕ್ಷೇತ್ರದಲ್ಲಿ ಪ್ರವರ್ತಕ ಕಂಪನಿಯಾದ   ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್, ಇಂದು ತನ್ನ ಐಕಾನಿಕ್ ಬ್ರಾಂಡ್ ಸ್ಕಾರ್ಪಿಯೋದ ಹೊಸ ಅವತಾರವಾದ ಸ್ಕಾರ್ಪಿಯೋ ಕ್ಲಾಸಿಕ್ ಬಿಡುಗಡೆ ಮಾಡಿದೆ. 20 ವರ್ಷಕ್ಕೂ ಹೆಚ್ಚು ಕಾಲದಿಂದ ಸ್ಕಾರ್ಪಿಯೋ ಲೆಜೆಂಡರಿ ಸ್ಥಾನಮಾನ ಗಳಿಸಿದೆ ಮತ್ತು ಮಹೀಂದ್ರಾ ಎಸ್‌ಯುವಿಯ ಕಠಿಣ ಹಾಗೂ ಅಧಿಕೃತ ಡಿಎನ್‌ಎಯನ್ನು ಪ್ರತಿನಿಧಿಸಿದೆ. ಎರಡು ದಶಕಗಳ ಈ ಐತಿಹಾಸಿಕ ಸಾಧನೆಯನ್ನು ಆಚರಿಸಲು, ಮೂಲದ ಛಾಯೆಯನ್ನು ಉಳಿಸಿಕೊಂಡಿರುವ ಹಾಗೂ ತಾಜಾ ನೋಟ, ಸಮಕಾಲೀನ ಇಂಟೀರಿಯರ್‌ಗಳು ಮತ್ತು ಹೊಸ ಶಕ್ತಿಶಾಲಿ ಎಂಜಿನ್, ಮತ್ತಿತರ ಅಂಶಗಳನ್ನು ಒಳಗೊಂಡ ಸ್ಕಾರ್ಫೀಯೋ ಕ್ಲಾಸಿಕ್‌ಅನ್ನು ಮಹೀಂದ್ರಾ ಬಿಡುಗಡೆ ಮಾಡಿದೆ.

ಸ್ಕಾರ್ಪಿಯೋ ಬ್ರಾಂಡ್ ಗ್ರಾಹಕರ ಅಗತ್ಯಗಳನ್ನು ಪೂರೈಸುವಲ್ಲಿ ಅನೇಕ ವರ್ಷಗಳಿಂದ ವಿಕಾಸ ಹೊಂದಿದೆ ಹಾಗೂ ಕಠಿಣ, ಶಕ್ತಿಶಾಲಿ, ಮತ್ತು ಸಮರ್ಥ `ಪ್ರಮಾಣೀಕೃತ' ಎಸ್‌ಯುವಿ ಬಯಸುವ ಉತ್ಸಾಹಶಾಲಿಗಳ ಜನಪ್ರಿಯ ಆಯ್ಕೆಯಾಗಿ ಉಳಿದುಕೊಂಡಿದೆ. ಸ್ಕಾರ್ಪಿಯೋ ಕ್ಲಾಸಿಕ್ ತನ್ನದೇ ಆದ ಅಸಾಧಾರಣ ವಿನ್ಯಾಸ, ತಪ್ಪಿಸಿಕೊಳ್ಳಲಾಗದ ಅಸ್ತಿತ್ವ, ಮತ್ತು ಪ್ರಬಲವಾದ ಕಾರ್ಯಾಚರಣೆಯ  ಗುಣಗಳನ್ನು ಮುಂದುವರಿಸಲಿದೆ. 

Latest Videos

undefined

5 ಮಹೀಂದ್ರಾ ಆಲ್ ಎಲೆಕ್ಟ್ರಿಕ್ ಎಸ್ಯುವಿ ವಿನ್ಯಾಸ, ಟೀಸರ್ ಬಿಡುಗಡೆ

ಸ್ಕಾರ್ಪಿಯೋ ಅಧಿಕೃತ ಮತ್ತು ಜನರು ಹೆಚ್ಚಾಗಿ ಬಯಸುವ ಎಸ್‌ಯುವಿಗಳ ಉತ್ಪಾದಕ ಎಂಬ ಮಹೀಂದ್ರಾದ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ ಹೆಗ್ಗುರುತಿನ ಮಾದರಿಯಾಗಿದೆ (ಮಾಡೆಲ್). ಎಂಟು ಲಕ್ಷಕ್ಕೂ ಅಧಿಕ ಗ್ರಾಹಕರನ್ನು ಹೊಂದಿರುವುದರೊಂದಿಗೆ, ಅಜೇಯವಾದ ಅಭಿಮಾನಿಗಳನ್ನು ಸ್ಕಾರ್ಪಿಯೋ ಹೊಂದಿದೆ ಹಾಗೂ ಹೆಮ್ಮೆಯ ಮಾಲೀಕರು ಪ್ರೀತಿಸುವುದು  ಮತ್ತು ಸಶಸ್ತ್ರ ಪಡೆಗಳು, ಅರೆ-ಸೇನಾ ಮತ್ತು ಆಂತರಿಕ ಭದ್ರತಾ ಪಡೆಗಳಂಥ ಸಂಸ್ಥೆಗಳು ವಿಶ್ವಾಸವಿರಿಸುವುದು ಮುಂದುವರಿದಿದೆ. ಸ್ಕಾರ್ಪಿಯೋ ಕ್ಲಾಸಿಕ್‌ನ ಆರಂಭದೊಂದಿಗೆ  ನಾವು ಸ್ಕಾರ್ಪಿಯೋ ಅಭಿಮಾನಿಗಳು ಮತ್ತು ಉತ್ಸಾಹಿಗಳಿಗೆ ಒಂದು ಕಠಿಣ,  ಆದರೆ ಪ್ರಮಾಣೀಕೃತವಾದ ಹಿಂದೆಂದೂ ಇಲ್ಲದಂಥ `ವರ್ತನೆ'ಯನ್ನು ಪ್ರದರ್ಶಿಸಲು ನಿರ್ಮಿಸಲಾದ ಎಸ್‌ಯುವಿಯನ್ನು ನೀಡುತ್ತಿದ್ದೇವೆ ಎಂದು  ಮಹೀಂದ್ರ ಆಟೋಮೋಟಿವ್ ವಿಭಾಗದ ವೀಜಯ್ ನಕ್ರಾ ಹೇಳಿದ್ದಾರೆ.

ಪ್ರಪ್ರಥಮ ಆಧುನಿಕ ಎಸ್‌ಯುವಿ ಸ್ಕಾರ್ಪಿಯೋವನ್ನು ಕಂಪನಿಯ ಒಳಗೇ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದ್ದು ಮಹೀಂದ್ರಾ ಎಂಜಿನಿಯರ್‌ಗಳ ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸಿದೆ. ಅದರ ಅಪಾರ ಜನಪ್ರಿಯತೆಯು ಮಹೀಂದ್ರಾ ಜಾಗತಿಕವಾಗಿ ಸ್ವೀಕೃತವಾದ ಒಂದು ಕಠಿಣ ಆದರೆ ಅತ್ಯಾಧುನಿಕವಾದ ಆಟೋಮೊಬೈಲ್‌ಗಳ ಉತ್ಪಾದಕ ಎಂಬ ಖ್ಯಾತಿಯನ್ನು ಸಂಸ್ಥಾಪಿಸಿದೆ. ಸ್ಕಾರ್ಪಿಯೋದ ಪರಂಪರೆಯನ್ನು ಮುಂದಕ್ಕೊಯ್ಯಲು ತನ್ನ ಅಸಾಧಾರಣ ವಿನ್ಯಾಸ, ಇನ್‌ಬಿಲ್ಟ್-ತಂತ್ರಜ್ಞಾನ, ಪ್ರಬಲ ಕಾರ್ಯಾಚರಣೆ ಮತ್ತು ಅಮೂಲ್ಯ ಇಂಟೀರಿಯರ್‌ಗಳನ್ನು  ಹೊಂದಿದೆ ಎಂದು ಮಹೀಂದ್ರ  ಟೆಕ್ನಾಲಜಿ ಅಂಡ್ ಪ್ರೊಡಕ್ಟ್ ಅಧ್ಯಕ್ಷ ಆರ್. ವೇಲುಸ್ವಾಮಿ,  ಹೇಳಿದ್ದಾರೆ.

ಸ್ಕಾರ್ಪಿಯೋ ಕ್ಲಾಸಿಕ್ ಕುರಿತು
 ಸ್ಕಾರ್ಪಿಯೋ ಕ್ಲಾಸಿಕ್‌ಅನ್ನು ನೂತನ ದಿಟ್ಟವಾದ ಗ್ರಿಲ್ ಮತ್ತು ಹುಡ್ ಸ್ಕೂಪ್‌ನೊಂದಿಗಿನ ದೃಢವಾದ ಬಾನೆಟ್ ಹಾಗೂ ಟ್ವಿನ್-ಪೀಕ್ ಲೋಗೋ ಹೊಂದಿದೆ.   ವಿಶಿಷ್ಟವಾದ ಸ್ಕಾರ್ಪಿಯೋ ಟವರ್ ಎಲ್‌ಇಡಿ ಟೇಯ್ಲ್ ದೀಪಗಳ ಹೊಸ ಡಿಆರ್‌ಎಲ್‌ಗಳು ಮತ್ತು ಹೊಸ ಆರ್ 17 ಡೈಮಂಡ್-ಕಟ್ ಮಿಶ್ರಲೋಹದ ಚಕ್ರಗಳು ಮೂಲ ಸ್ವರೂಪದ ನೋಟಕ್ಕೆ ಇನ್ನಷ್ಟು ಮೆರುಗು ತುಂಬುತ್ತವೆ.

 

ಮಹೀಂದ್ರಾ ಬೊಲೆರೋ ಎಲೆಕ್ಟ್ರಿಕ್ ಪಿಕ್ಅಪ್ ಟೀಸರ್ ಬಿಡುಗಡೆ

ಸ್ಕಾರ್ಪಿಯೋ ಕ್ಲಾಸಿಕ್ ಭಾರಿಯಾದ 97 KW ಶಕ್ತಿ ಹಾಗೂ 300 ಎನ್‌ಎಂ ಟಾರ್ಕ್ ಉತ್ಪಾದಿಸುವ, ಸರ್ವ-ಅಲ್ಯುಮಿನಿಯಂ ಹಗುರಭಾರದ ಜನ್-೨ ಎಂಹಾಕ್ ಎಂಜಿನ್ ಶಕ್ತಿಯಿಂದ ಅತ್ಯುತ್ತಮ ಕಾರ್ಯಾಚರಣೆ ಸಾಮರ್ಥ್ಯದ ಹೆಮ್ಮೆಯನ್ನು ಹೊಂದಿದೆ. ಕೇವಲ 1000 ಆರ್‌ಪಿಎಂಗೆ ಗಣನೀಯವಾದ 230 ಎನ್‌ಎಂ ಲೋ-ಎಂಡ್ ಟಾರ್ಕ್ಅನ್ನು ಉತ್ಪಾದಿಸಲಾಗುತ್ತದೆ.

ಎಂಜಿನ್ 55 ಕಿಲೋ ಹಗುರವಾಗಿದೆ ಹಾಗೂ ಹಿಂದಿನ ಎಂಜಿನ್ ಮಾದರಿಗೆ ಹೋಲಿಸಿದರೆ ಶೇಕಡ 14 ರಷ್ಟು ಇಂಧನ ದಕ್ಷತೆಯನ್ನು ಹೊಂದಿದೆ. ಚಾಲನಾ ಅನುಭವವನ್ನು ಇನ್ನಷ್ಟು ಸುಧಾರಿಸಲು ಮ್ಯಾನುಯಲ್ ಟ್ರಾನ್ಸ್ಮಿಷನ್‌ನಲ್ಲಿ ಒಂದು ನೂತನ ಸಿಕ್ಸ್-ಸ್ಪೀಡ್ ಕೇಬಲ್ ಶಿಫ್ಟ್ಅನ್ನು ಅಳವಡಿಲಾಗಿದೆ.  ಸಸ್ಪೆನ್ಶನ್ ಸೆಟ್‌ಅಪ್‌ಅನ್ನು ಅತ್ಯುತ್ತಮ ಚಾಲನೆ ಮತ್ತು ನಿರ್ವಹಣೆಯನ್ನು ಒದಗಿಸುವ ಉದ್ದೇಶದಿಂದ ಎಂಟಿವಿ-ಸಿಎಲ್ ತಂತ್ರಜ್ಞಾನದೊಂದಿಗೆ ಎತ್ತರಿಸಲಾಗಿದೆ. ಸುಲಭ ಚಾಲನೆ ಮತ್ತು ನಿಯಂತ್ರಣಕ್ಕಾಗಿ ಸ್ಟೀರಿಂಗ್ ವ್ಯವಸ್ಥೆಯನ್ನು ಗಣನೀಯವಾಗಿ ಸುಧಾರಿಸಲಾಗಿದೆ. ತನ್ನ ಸುಧಾರಿತ  ಎಸ್‌ಯುವಿ ಇಂಟೀರಿಯರ್‌ಗಳಿಗಾಗಿ ಸ್ಕಾರ್ಪಿಯೋ ಸದಾ ಮುಂಚೂಣಿಯಲ್ಲಿದೆ. ಸ್ಕಾರ್ಪಿಯೋ ಕ್ಲಾಸಿಕ್ ಅದನ್ನು ನೂತನ ಟೂ-ಟೋನ್ ಬೀಜ್-ಅಂಡ್-ಬ್ಲ್ಯಾಕ್ ಇಂಟೀರಿಯರ್ ಥೀಮ್, ಕ್ಲಾಸಿಕ್ ವುಡ್ ಪ್ಯಾಟರ್ನ್ ಕನ್ಸೋಲ್ ಮತ್ತು ಅಮೂಲ್ಯವಾದ ಕ್ವಿಲ್ಟೆಡ್ ಸಜ್ಜಿಕೆಗಳೊಂದಿಗೆ ಮುಂದಿನ ಮಟ್ಟಕ್ಕೆ ಒಯ್ಯುತ್ತದೆ. ಫೋನ್ ಕನ್ನಡಿಯೊಂದಿಗೆ 22.86 ಸೆಂಟಿಮೀಟರ್ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ವ್ಯವಸ್ಥೆಯನ್ನೂ ಮತ್ತು ಇತರ ಸೌಲಭ್ಯಗಳೂ ಈ ವಾಹನದಲ್ಲಿವೆ.

ಈ ವಾಹನದ ಎರಡು ವಿಧ ಲಭ್ಯವಿದೆ- ಕ್ಲಾಸಿಕ್ ಎಸ್ ಮತ್ತು ಕ್ಲಾಸಿಕ್ ಎಸ್ 11 - ಈ ವರ್ಷ ಜೂನ್‌ನಲ್ಲಿ ಬಿಡುಗಡೆ ಮಾಡಲಾದ ಸರ್ವ-ನೂತನ ಸ್ಕಾರ್ಪಿಯೋ ಎನ್ ಜೊತೆ ಸ್ಕಾರ್ಪಿಯೋ ಕ್ಲಾಸಿಕ್‌ಅನ್ನು ಮಾರಾಟ ಮಾಡಲಾಗುತ್ತದೆ. ಸ್ಕಾರ್ಪಿಯೋ ಕ್ಲಾಸಿಕ್ ಐದು ಬಣ್ಣಗಳಲ್ಲಿ ಲಭ್ಯವಿರುತ್ತದೆ - ರೆಡ್ ರೇಜ್, ನಪೋಲಿ ಬ್ಯಾಕ್, ಡಿಸ್ಯಾಟ್ ಸಿಲ್ವರ್, ಪರ್ಲ್ ವೈಟ್ ಮತ್ತು ಹೊಸದಾಗಿ ಪರಿಚಯಿಸಲಾಗಿರುವ ಗ್ಯಾಲಕ್ಸಿ ಗ್ರೇ. ಗ್ರಾಹಕರು ವಾಹನ ಪರಿಶೀಲಿಸಲು ಹಾಗೂ ಟೆಸ್ಟ್ ಡ್ರೈವ್ ಮಾಡಲು ವಾಹನವು ಮಹೀಂದ್ರಾ ಡೀಲರ್‌ಶಿಪ್‌ಗಳಲ್ಲಿ ಸಿಗುತ್ತವೆ. ಸ್ಕಾರ್ಪಿಯೋ ಕ್ಲಾಸಿಕ್‌ನ ಬೆಲೆಗಳನ್ನು 2022 ಆಗಸ್ಟ್ ೨೦ರಂದು ಪ್ರಕಟಿಸಲಾಗುತ್ತದೆ.
 

click me!