ಆಗಸ್ಟ್ 15ಕ್ಕೆ ಓಲಾ ಎಲೆಕ್ಟ್ರಿಕ್ ಕಾರು ಬಿಡುಗಡೆ? ವಿಡಿಯೋ ಪೋಸ್ಟ್ ಮಾಡಿದ ಸಿಇಒ!

By Suvarna News  |  First Published Aug 12, 2022, 7:34 PM IST

ಸ್ವಾತಂತ್ರ್ಯ ದಿನಾಚರಣೆಗೆ ಭಾರತದ ಸಂಭ್ರಮ ಇಮ್ಮಡಿಗೊಳಿಸಲು ಓಲಾ ಎಲೆಕ್ಟ್ರಿಕ್ ಸಜ್ಜಾಗಿದೆ. ಓಲಾ ಎಲೆಕ್ಟ್ರಿಕ್ ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಲು ರೆಡಿಯಾಗಿದೆ.  ಈ ಕುರಿತು ಓಲಾ ಸಿಇಒ ಭವಿಷ್ ಅಗರ್ವಾಲ್ ಸೂಚನೆ ನೀಡಿದ್ದಾರೆ.


ಬೆಂಗಳೂರು(ಆ.11): ಸ್ವಾತಂತ್ರ್ಯ ದಿನಾಚರಣೆಯಂದೇ ಓಲಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುತ್ತಾ? ಹೌದು ಎನ್ನುತ್ತಿದೆ ಮೂಲಗಳು. ಭಾರತೀಯ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಯಾಗಲಿದೆ. ಕಾರಣ ಅತೀ ಕಡಿಮೆ ಬೆಲೆಗೆ, ಗರಿಷ್ಠ ಮೈಲೇಜ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಓಲಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ. ಸದ್ಯ ಭಾರತದಲ್ಲಿರುವ ಎಲೆಕ್ಟ್ರಿಕ್ ಕಾರುಗಳು 13 ಲಕ್ಷ ರೂಪಾಯಿಗಿಂತ ಮೇಲ್ಪಟ್ಟ ಕಾರುಗಳಾಗಿವೆ. ಆದರೆ ಓಲಾ 10 ಲಕ್ಷ ರೂಪಾಯಿ ಒಳಗಿರಲಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಇದೇ ಸ್ವಾತಂತ್ಯ ದಿನಾಚರಣೆಗೆ ಓಲಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗು ಸೂಚನೆಯನ್ನು ಓಲಾ ಸಿಇಒ ಭವಿಷ್ ಅಗರ್ವಾಲ್ ನೀಡಿದ್ದಾರೆ. ಎಲೆಕ್ಟ್ರಿಕ್ ಕಾರಿನ ವಿಡಿಯೋವನ್ನು ಟ್ವೀಟ್ ಮಾಡಿರುವ ಭವಿಷ್ ಅಗರ್ವಾಲ್, ಪಿಕ್ಟರ್ ಅಭಿ ಭಿ ಬಾಕಿ ಹೇ ಮೇರಾ ದೋಸ್ತ್. ಆಗಸ್ಟ್ 15ರ 2 ಗಂಟೆಗೆ ಸಿಗೋಣ ಎಂದು ಟ್ವೀಟ್ ಮಾಡಿದ್ದಾರೆ. ಇದು ಓಲಾ ಎಲೆಕ್ಟ್ರಿಕ್ ಕಾರು ಬಿಡುಗಡೆ ಸೂಚನೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗಷ್ಟೋ ಭವಿಷ್ ಅಗರ್ವಾಲ್ ಭಾರತದಲ್ಲಿ ಓಲಾ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಬಿಡುಗಡೆ ಮಾಡುತ್ತಿದೆ. ಇದಕ್ಕಾಗಿ ಹೆಚ್ಚು ಸಮಯ ಕಾಯಬೇಕಿಲ್ಲ ಎಂದು ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಸ್ವಾತಂತ್ರ್ಯ ಸಂಭ್ರಮ ಡಬಲ್ ಮಾಡಲು ಅದೇ ದಿನ ಓಲಾ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಮುಂದಾಗಿರುವ ಸಾಧ್ಯತೆ ಇದೆ. ಓಲಾ ಎಲೆಕ್ಟ್ರಿಕ್ ಕಾರು ಅತ್ಯಾಕರ್ಷ ವಿನ್ಯಾಸ ಹೊಂದಿದೆ.  ಗರಿಷ್ಠ ಮೈಲೇಜ್ ಪವರ್ ಬ್ಯಾಟರಿ ಪ್ಯಾಕ್, ಉತ್ತಮ ಸ್ಛಳವಕಾಶ ಹೊಂದಿರುವ ಸಣ್ಣ ಕಾರು ಬಿಡುಗಡೆ ಮಾಡಲು ಓಲಾ ಮುಂದಾಗಿದೆ.

Tap to resize

Latest Videos

 

Picture abhi baaki hai mere dost😎

See you on 15th August 2pm! pic.twitter.com/fZ66CC46mf

— Bhavish Aggarwal (@bhash)

 

ಭಾರತದಲ್ಲೇ ತಯಾರಾಗಲಿದೆ ಓಲಾ ಎಲೆಕ್ಟ್ರಿಕ್ ಕಾರು, ಟೀಸರ್ ಬಿಡುಗಡೆ ಮಾಡಿದ ಸಿಇಓ!

ಗ್ರೇನೆಸ್ಟ್ ವಾಹನ ಮೂಲಕ ಸೂಚನೆ ನೀಡಿದ್ದ ಅಗರ್ವಾಲ್
ಆಗಸ್ಟ್ 15ರಂದು ಓಲಾ ಎಲೆಕ್ಟ್ರಿಕ್‌ ವತಿಯಿಂದ ಗ್ರೀನೆಸ್ಟ್‌ ಎಲೆಕ್ಟ್ರಾನಿಕ್‌ ವಾಹನ ಬಿಡುಗಡೆ ಮಾಡಲಾಗುವುದು ಎಂದು ಓಲಾ ಎಲೆಕ್ಟ್ರಿಕ್ಸ್‌ನ ಸಿಇಒ ಭವೀಶ್‌ ಅಗರವಾಲ್‌ ಟ್ವೀಟ್‌ ಮಾಡಿದ್ದರು. . ಇದು ಆಟೋಮೊಬೈಲ್‌ ಕ್ಷೇತ್ರದಲ್ಲಿ ಭಾರಿ ಕುತೂಹಲವನ್ನುಂಟು ಮಾಡಿತ್ತು. ‘ಆ.15ರಂದು ನಾವು ತಯಾರಿಸಿರುವ ಗ್ರೀನೆಸ್ಟ್‌ ಎಲೆಕ್ಟ್ರಿಕ್‌ ವಾಹನವನ್ನು ಬಿಡುಗಡೆ ಮಾಡಲಿದ್ದೇವೆ. ಯಾರಾದರೂ ಏನೆಂದು ಊಹಿಸಬಲ್ಲಿರಾ? ಎಂದು ಭವೀಶ್‌ ಅಗರವಾಲ್‌ ಟ್ವೀಟ್‌ ಮಾಡಿದ್ದರು.. ಇದು ಗ್ರಾಹಕರಲ್ಲಿ ಸಾಕಷ್ಟುಕುತೂಹಲ ಮೂಡಿಸಿದೆ. ಒಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಬಿಡುಗಡೆಯಾಗಿ ಒಂದು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಒಲಾ ಎಸ್‌-1 ಪ್ರೋ ಸ್ಕೂಟರ್‌ ಬಿಡುಗಡೆ ಮಾಡಬಹುದು ಎಂದು ಹೇಳಲಾಗಿತ್ತು. ಆದರೆ ಇಂದು ಭವಿಷ್ ಅಗರ್ವಾಲ್ ಇದು ಕಾರು ಅನ್ನೋ ಸೂಚನಯನ್ನು ನೀಡಿದ್ದಾರೆ. 

ಪಶ್ಚಿಮಕ್ಕೆ ಟೆಸ್ಲಾ: ಇತರ ಭಾಗಕ್ಕೆ ಓಲಾ- ಸಿಇಓ ಭವೀಶ್ ಅಗರ್ವಾಲ್

ಹೀರೋ ಹಿಂದಿಕ್ಕಿದ ಓಲಾ ನಂ.1 ಎಲೆಕ್ಟ್ರಿಕ್‌ ಸ್ಕೂಟರ್‌
ಹೀರೋ ಎಲೆಕ್ಟ್ರಿಕ್‌ ಕಂಪನಿಯನ್ನು ಹಿಂದಿಕ್ಕಿದ ಓಲಾ ಎಲೆಕ್ಟ್ರಿಕ್‌ ಭಾರತದಲ್ಲಿ ಮಾರಾಟದ ಸ್ಥಾನದಲ್ಲಿ ಮೊದಲ ಸ್ಥಾನ ಗಳಿಸಿಕೊಂಡಿದೆ. ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ಮಾರಾಟ ಮಾಡಲು ಆರಂಭಿಸಿದ ಕೇವಲ 5 ತಿಂಗಳಲ್ಲಿ ಓಲಾ ಎಲೆಕ್ಟ್ರಿಕ್‌ ಮೊದಲ ಸ್ಥಾನ ಗಳಿಸಿಕೊಂಡಿದೆ ಎಂದು ಫೆಡರೇಶನ್‌ ಆಫ್‌ ಆಟೋಮೊಬೈಲ್‌ ಡೀಲ​ರ್‍ಸ್ ಅಸೋಸಿಯೇಶನ್‌ ಹೇಳಿದೆ. ಓಲಾ ಮಾಚ್‌ರ್‍ನಲ್ಲಿ 9127 ಸ್ಕೂಟರ್‌ ಮಾರಿದ್ದರೆ, ಏಪ್ರಿಲ್‌ನಲ್ಲಿ ಅದು 12683ಕ್ಕೆ ತಲುಪಿದೆ. ಮತ್ತೊಂದೆಡೆ ಹೀರೋ ಮಾಚ್‌ರ್‍ನಲ್ಲಿ 13023 ಸ್ಕೂಟರ್‌ ಮಾರಿದ್ದರೆ, ಏಪ್ರಿಲ್‌ನಲ್ಲಿ ಕೇವಲ 6570 ಸ್ಕೂಟರ್‌ ಮಾರಿದೆ.

click me!