ಮಾರ್ಚ್ ಮೊದಲ ವಾರದಲ್ಲಿ ರಸ್ತೆಗಿಳಿಯಲು ಸಜ್ಜಾಗಿರುವ ರೆನೋ ಕೈಗರ್ ಸಬ್ ಕಾಂಪಾಕ್ಟ್ ಎಸ್‌ಯುವಿ ತನ್ನ ತಾಂತ್ರಿಕ ವಿಶೇಷತೆಗಳಿಂದ ಗಮನ ಸೆಳೆಯುತ್ತಿದೆ. ನಿಸ್ಸಾನ್ ಮ್ಯಾಗ್ನೈಟ್, ಫೋರ್ಟ್ ಇಕೋಸ್ಪೋರ್ಟ್, ಕಿಯಾ ಸೋನೆಟ್‌ಗಳಿಗೆ ತೀವ್ರ ಸ್ಪರ್ಧೆಯೊಡ್ಡಲಿರುವ ಕೈಗರ್ ಹಲವು ಅತ್ಯಾಧುನಿಕ ವಿಶೇಷತೆಗಳನ್ನು ಒಳಗೊಂಡಿದೆ.
ಎಂಟ್ರಿ ಲೆವಲ್ ಕಾರು ಕ್ವಿಡ್ ಮತ್ತು ಎಸ್‌ಯುವಿ ಡಸ್ಟರ್ ಮೂಲಕ ಭಾರತೀಯ ವಾಹನೋದ್ಯಮದಲ್ಲಿ ಧೂಳೆಬ್ಬಿಸಿದ ರೆನೋ ಇದೀಗ ಮಜಬೂತ್ತಾದ ಸಬ್ ಕಾಂಪಾಕ್ಟ್ ಎಸ್‌ಯುವಿ ಮೂಲಕ ಲಗ್ಗೆ ಇಡುತ್ತಿದೆ.
ಬಹು ನಿರೀಕ್ಷೆಯ ರೆನೋ ಕೈಗರ್ ಮಾರ್ಚ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿದ್ದು, ತನ್ನದೇ ಆದ ವಿಶೇಷತೆಗಳ ಮೂಲಕ ಆಸಕ್ತರನ್ನು ಕುತೂಹಲದಿಂದ ಕಾಯುವಂತೆ ಮಾಡುತ್ತಿದೆ. ರೆನೋ ತನ್ನ ಈ ಕೈಗರ್ ಮೂಲಕ ಮಾರುಕಟ್ಟೆಯಲ್ಲಿ ನಿಸ್ಸಾನ್ ಮ್ಯಾಗ್ನೈಟ್, ಕಿಯಾ ಸೋನೆಟ್, ಹುಂಡೈ ವೆನ್ಯು ಮತ್ತು ಫೋರ್ಡ್‌ನ ಇಕೋ ಸ್ಪೋರ್ಟ್‌ಗೆ ಠಕ್ಕರ್ ನೀಡಲು ಸಜ್ಜಾಗಿದೆ.
undefined
ಮಹೀಂದ್ರಾ XUV300 ಸೇಫ್ಟಿ ರೇಟಿಂಗ್: 5 ಸ್ಟಾರ್ ಪಡೆದ ದಕ್ಷಿಣ ಆಫ್ರಿಕಾದ ಮೊದಲ ಕಾರು
ಮಾರ್ಚ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿರುವ ರೆನೋ ಕೈಗರ್ ಬೆಲೆ ಎಷ್ಟಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಕೈಗರ್‌ನ ಬೇಸ್ ಮಾಡೆಲ್ ಬೆಲೆ ಅಂದಾಜು 5.5 ಲಕ್ಷ ರೂಪಾಯಿ ಇರಬಹುದು ಮತ್ತು ಟಾಪ್ ಆರ್‌ಎಕ್ಸ್‌ಜೆಡ್ ಮಾಡೆಲ್ 10 ಲಕ್ಷ ರೂಪಾಯಿವರೆಗೂ ಇರಬಹುದು ಎಂದು ಅಂದಾಜಿಸಲಾಗುತ್ತಿದೆ. ಇಲ್ಲಿ ಹೇಳಿರುವ ಎಲ್ಲ ಬೆಲೆ ಎಕ್ಸ್ ಶೋರೂಮ್ ಬೆಲೆಯಾಗಿದೆ ಎಂಬುದನ್ನು ಗಮನಿಸಬೇಕು.
ಕೈಗರ್‌ನ ವಿಶೇಷತೆಗಳು ಹೀಗಿವೆ...
- ಒಟ್ಟಾರೆಯಾಗಿ ಡುಯಲ್ ಟೋನ್ ಥೀಮ್ಸ್ ಕಾರಿಗೆ ಸ್ಪೋರ್ಟಿ ಲುಕ್ ನೀಡಲು ಯಶಸ್ವಿಯಾಗಿದೆ.
- 16 ಇಂಚ್ ಅಲಾಯ್ ವ್ಹೀಲ್‌ಗಳಿದ್ದು, ಗ್ರೌಂಡ್ ಕ್ಲಿಯರನ್ಸ್ ಕೂಡ ಚೆನ್ನಾಗಿದೆ.
- ರೂಫ್ ರೈಲ್ಸ್ ನೋಡಲು ನಿಮಗೆ ನಿಸ್ಸಾನ್ ಮ್ಯಾಗ್ನೇಟ್ ರೀತಿ ಅನ್ನಿಸಬಹುದು.
- ಬ್ಯಾಕ್ ಪ್ರೊಫೈಲ್ ಕೂಡ ಅತ್ಯಾಕರ್ಷವಾಗಿದೆ. ಸ್ಪ್ಲಿಟ್ ಇಂಡಿಕೇಟರ್‌ಗಳನ್ನು ಕಾಣಬಹುದು.
- ಕೈಗರ್ ಹೊರಮೈ ವಿನ್ಯಾಸವೂ ಹೆಚ್ಚು ಕಡಿಮೆ ರೆನೋ ಕ್ವಿಡ್ ರೀತಿಯಲ್ಲೇ ಇದೆ. ಫಸ್ಟ್ ಟೈಮ್ ನೀವು ಏನಾದರೂ ನೋಡಿದರೆ ಕ್ವಿಡ್ ಅಲ್ವಾ ಎನ್ನಬಹುದು. ಅಷ್ಟೊಂದು ಸಾಮ್ಯತೆ ಇದೆ.
- ಮುಂಭಾಗದಲ್ಲಿ ಥ್ರೀ-ಎಲ್ಇಡಿ ಹೆಡ್‌ಲೈಟ್ಸ್ ಮತ್ತು ಎಲ್‌ಇಡಿ ಡಿಎಲ್‌ಎಲ್ ಲೈಟ್‌ಗಳು ಕಾರಿನ ಅಂದವನ್ನು ಹೆಚ್ಚಿಸಿವೆ.
- ಬೃಹತ್ತಾದ ಗ್ರಿಲ್ ನೋಡಲು ಅತ್ಯಾಕರ್ಷವಾಗಿದ್ದು, ಮಧ್ಯೆದಲ್ಲಿ ರೆನೋ ಬ್ಯಾಡ್ಜ್ ಸೌಂದರ್ಯವನ್ನು ಹೆಚ್ಚಿಸಿದೆ.
- ಕೈಗರ್ ಕಾರಿನ ಒಳಾಂಗಣವು ಅತ್ಯಾಕರ್ಷವಾಗಿದೆ. ಕಾರಿನ ಡ್ಯಾಶ್‌ಬೋರ್ಡ್ ನೋಡಲು ಸ್ಮಾರ್ಟ್ ಮತ್ತು ಸಾಕಷ್ಟು ಸ್ಟೋರೇಜ್ ಸ್ಪೇಷ್ ಒದಗಿಸುತ್ತದೆ.
- ಅವಳಿ ಗ್ಲೋವ್ ಬಾಕ್ಸ್‌ಗಳಿದ್ದು, ಕಿಟ್‌ಗಳನ್ನು ಇಡಲು ಸಾಕಷ್ಟು ಜಾಗ ಸಿಗುತ್ತದೆ.
ಇಂಡಿಯಾ ಟು ಸಿಂಗಾಪುರ ಬಸ್, ವಯಾ ಮ್ಯಾನ್ಮಾರ್, ಥಾಯ್ಲೆಂಡ್, ಮಲೇಷ್ಯಾ!
- ಡ್ಯಾಶ್‌ಬೋರ್ಡ್‌ನ ಸೆಂಟರ್‌ನಲ್ಲಿ ಕಾನ್ಸೋಲ್ ಇದ್ದು, 20.32 ಸಿಎಂ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇದೆ. ಇದು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗೆ ಸಪೋರ್ಟ್ ಮಾಡುತ್ತದೆ.
-ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಮೂಲಕ ಧ್ವನಿ ಗುರುತು ಸೇವೆಯನ್ನು ಒದಗಿಸುವುದಿಲ್ಲ. ಆದರೆ, ಬ್ಲೂಟೂಥ್ ಕನೆಕ್ಟಿವಿಟಿ ಸೌಲಭ್ಯವಿದ್ದು ಐದು ಸಾಧನಗಳಿಗೆ ಕನೆಕ್ಟ್ ಮಾಡಬಹುದು.
- ಫಾಸ್ಟರ್ ಚಾರ್ಜ್‌ಗಾಗಿ ಯುಎಸ್‌ಬಿ ಸಾಕೆಟ್, ಅಂತರ್ಗತವಾಗಿಯೇ ಎಂಪಿ4 ಮೀಡಿಯಾ ಪ್ಲೇಯರ್ ಇರಲಿದೆ.
- ಅತ್ಯಾಧುನಿಕ 3 ಡಿ ಸೌಂಡ್ ಸಿಸ್ಟಮ್ ಇದ್ದು, ಒಟ್ಟು ಎಂಟು ಆನ್‌ಬೋರ್ಡ್ ಸ್ಪೀಕರ್‌ಗಳಿಗೆ ಕನೆಕ್ಟ್ ಮಾಡಲಾಗಿದೆ.
- ಇನ್ಸುಟ್ರಮೆಂಟಲ್ ಪ್ಯಾನೆಲ್ ಕೂಡ ವಿಶಿಷ್ಟವಾಗಿದ್ದು, ಡ್ರೈವಿಂಗ್ ಮೋಡ್ ಆಯ್ಕೆಗೆ ಅನುಗುಣವಾಗಿ ಡಿಜಿಟಲ್ ಯೂನಿಟ್ ಮತ್ತು ಡಿಸ್‌ಪ್ಲೇಗಳನ್ನು ಹಾಕಲಾಗಿದೆ.
- ಈ ಸೆಗ್ಮೆಂಟ್‌ನಲ್ಲಿ ಪ್ರಥಮ ಬಾರಿಗೆ ಕೈಗರ್‌ನಲ್ಲಿ ಪಿಎಂ 2.5 ಕ್ಲೀನ್ ಏರ್ ಫಿಲ್ಟರ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
- ಕೈಗರ್ ಕ್ಯಾಬಿನ್ ಸ್ಪೇಷ್ ಕೂಡಾ ಸಾಕಷ್ಟಿದ್ದು, ಐದು ಜನರು ಆರಾಮವಾಗಿ ಕುಳಿತುಕೊಂಡು ಪ್ರಯಾಣ ಮಾಡಬಹುದು.
- 405 ಲೀಟರ್ ಬೂಟ್ ಸ್ಪೇಷ್ ಅನ್ನು ಕೈಗರ್ ಒದಗಿಸುತ್ತದೆ.
ಎಂಜಿನ್ ಹೇಗಿದೆ?
ಕೈಗರ್ ಎರಡು ಮಾದರಿಯ ಎಂಜಿನ್‌ಗಳಲ್ಲಿ ಬರಲಿದೆ. ಡಿಸೇಲ್ ಎಂಜಿನ್ ಉತ್ಪಾದನೆ ಯೋಜನೆ ಸದ್ಯಕ್ಕಿಲ್ಲ ಕಂಪನಿಗೆ. 3 ಸಿಲೆಂಡರ್ ಟರ್ಬೋ ಜಾರ್ಜ್ಡ್ 1.0 ಲೀಟರ್ ಎಂಜಿನ್ ಇರಲಿದ್ದು, 160 ಎನ್ಎಂ ಟಾರ್ಕ್ ಹಾಗೂ 100 ಬಿಎಚ್‌ಪಿ ಪವರ್ ಉತ್ಪಾದಿಸಲಿದೆ. ಈ ಟರ್ಬೋ ಚಾರ್ಜ್ಡ್ ಎಂಜಿನ್‌ನಲ್ಲಿ 5 ಸ್ಪೀಡ್ ಗಿಯರ್‌ಬಾಕ್ಸ್ ಇರಲಿದೆ. ಬಿಡುಗಡೆಯಾದ ಬಳಿಕ ಈ ಮಾಡೆಲ್‌ನಲ್ಲಿ ಎಕ್ಸ್-ಟ್ರಾನಿಕ್ ಆಟೋಮೆಟಿಕ್ ಟ್ರಾನ್ಷಿಮಿಷನ್ ಎಂಜಿನ್ ಲಭ್ಯವಾಗಲಿದೆ.
8 ವರ್ಷಕ್ಕಿಂತ ಹಳೆಯ ವಾಹನಗಳ ಮೇಲೆ ಗ್ರೀನ್ ಟ್ಯಾಕ್ಸ್
ಇನ್ನು ಎರಡನೇ ಆಯ್ಕೆ ಎಂದರೆ, ರೆನೋ ಟ್ರೈಬರ್‌ನಲ್ಲಿ ಅಳವಡಿಸಲಾಗಿರುವ 1.0 ನ್ಯಾಚುರಲ್ ಎಂಜಿನ್‌ನೊಂದಿಗೆ ಬರಲಿದೆ. ಈ ಎಂಜಿನ್ 96 ಎನ್ಎಂ ಮತ್ತು 72 ಬಿಎಚ್‌ಪಿ ಪವರ್ ಉತ್ಪಾದಿಸಲಿದೆ. ಈ ವೆರಿಯೆಂಟ್‌ನಲ್ಲಿ ಕೈಗರ್ 5 ಸ್ಪೀಡ್ ಗಿಯರ್ ಬಾಕ್ಸ್ ಅಥವಾ ಈಸೀ ಆರ್ ಫೈವ್ ಸ್ಪೀಡ್ ರೊಬೊಟೈಸ್ಡ್ ಗಿಯರ್ ಬಾಕ್ಸ್‌ನೊಂದಿಗೆ ಬರಲಿದೆ.