0 to 60 ಕಿ.ಮೀ ವೇಗ ಕೇವಲ 2 ಸೆಕೆಂಡ್‌ನಲ್ಲಿ; ಇದು ಟೆಸ್ಲಾ ಕಾರಿನ ಚಮತ್ಕಾರ!

By Suvarna News  |  First Published Jan 29, 2021, 3:09 PM IST

ಭಾರತದಲ್ಲಿ ಅಮೆರಿಕ ಟೆಸ್ಲಾ ಕಾರು ಬಿಡುಗಡೆಗೆ ಸಜ್ಜಾಗಿದೆ. ಹೀಗಾಗಿ ಟೆಸ್ಲಾ ಕಾರುಗಳು ಭಾರತದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದೀಗ ಎಲನ್ ಮಸ್ಕ್ ಟ್ವೀಟ್ ಮೂಲಕ ಕಾರಿನ ವೇಗದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಟ್ವೀಟ್ ಇದೀಗ ಆಟೋಮೊಬೈಲ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.


ಕ್ಯಾಲಿಫೋರ್ನಿಯಾ(ಜ.29): ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ತಯಾರಿಕ ಕಂಪನಿ ಟೆಸ್ಲಾ ವಿಶ್ವದರ್ಜೆಯ ಹಾಗೂ ಗರಿಷ್ಠ ಮೈಲೇಜ್ ನೀಡಬಲ್ಲ ಕಾರುಗಳನ್ನು ತಯಾರಿಸುತ್ತಿದೆ. ವಿಶ್ವದ ಮೂಲೆ ಮೂಲೆಗಳಲ್ಲಿ ಟೆಸ್ಲಾ ಕಾರುಗಳಿಗೆ ಬಾರಿ ಬೇಡಿಕೆ ಇದೆ. ಇದೀಗ ಟೆಸ್ಲಾ ಸಿಇಓ ಎಲನ್ ಮಸ್ಕ್ ಟ್ವೀಟೊಂದು ಮಾಡಿದ್ದು,ಭಾರಿ ಸಂಚಲನ ಸೃಷ್ಟಿಸಿದೆ.

ಟೆಸ್ಲಾಗೆ ಪೈಪೋಟಿ ಶುರು, 1,000 ಕಿ.ಮಿ ಮೈಲೇಜ್ ನಿಯೋ ET7 ಎಲೆಕ್ಟ್ರಿಕ್ ಕಾರು ಬಿಡುಗಡೆ!.

Latest Videos

undefined

ಟೆಸ್ಲಾ ಕಾರುಗಳ ಪೈಕಿ ಮಾಡೆಲ್ S ಹಾಗೂ X ಕಾರುಗಳಿಗೆ ಭಾರಿ ಬೇಡಿಕೆ ಇದೆ.  ಇಷ್ಟೇ ಅಲ್ಲ ಅತ್ಯುತ್ತಮ ಕಾರು ಕೂಡ ಹೌದು. ಇದೀಗ ಟೆಸ್ಲಾದ ಎಲ್ಲಾ ಕಾರುಗಳನ್ನು ಅಪ್‌ಗ್ರೇಡ್ ಮಾಡಾಲಾಗಿದೆ. ಇದರ ಬೆನ್ನಲ್ಲೇ ಮಸ್ಕ, ಕಾರಿನ ವೇಗವನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

 

First production car ever to achieve 0 to 60 mph in less than 2 seconds

— Elon Musk (@elonmusk)

ಬೆಂಗಳೂರಿನ ಪ್ರವೈಗ್ ನೋಡಿ ಬೆಚ್ಚಿದ ಟೆಸ್ಲಾ, ಭಾರತದಲ್ಲಿ ಮಾಡೆಲ್ 3 ಬಿಡುಗಡೆ ದಿನಾಂಕ ಫಿಕ್ಸ್!.

ಟೆಸ್ಲಾ ಮಾಡೆಲ್ ಎಸ್ ಕಾರು 0 ಯಿಂದ 60 ಕಿ.ಮೀ ವೇಗವನ್ನು ಕೇವಲ 2 ಸೆಕೆಂಡ್‌ನಲ್ಲಿ ಪಡೆಯುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದರಲ್ಲೇನು ವಿಶೇಷ ಅಂತೀರಾ, ಇಂಧನ ವಾಹನ, ಸೂಪರ್ ಕಾರುಗಳಲ್ಲಿ ಈ ಸಂಖ್ಯೆ ಸಾಮಾನ್ಯ. ಆದರೆ ಎಲೆಕ್ಟ್ರಿಕ್ ಕಾರು ಈ ವೇಗವನ್ನು ಪಡೆದುಕೊಳ್ಳುತ್ತಿರುವುದು ವಿಶೇಷ.

 

Plaid Model S ships next month pic.twitter.com/HFUPTnQiPB

— Elon Musk (@elonmusk)

ಕಾರಿನ ಗರಿಷ್ಠ ವೇಗ 321 ಕಿ.ಮೀ ಪ್ರತಿ ಗಂಟೆಗೆ. ಇನ್ನು ಸಂಪೂರ್ಣ ಚಾರ್ಜ್‌ಗೆ ಬರೋಬ್ಬರಿ 627 ಕಿ.ಮೀ ಮೈಲೇಜ್ ನೀಡಲಿದೆ. 

click me!