Vehicle finance: ಸುಲಭ ಕಾರು ಸಾಲ, ಕಡಿಮೆ ಕಂತು ಸೌಲಭ್ಯಕ್ಕಾಗಿ ಟೋಯೋಟಾ, ಕರ್ನಾಟಕ ಬ್ಯಾಂಕ್ ಒಪ್ಪಂದ!

Published : Dec 06, 2021, 07:48 PM IST
Vehicle finance: ಸುಲಭ ಕಾರು ಸಾಲ, ಕಡಿಮೆ ಕಂತು ಸೌಲಭ್ಯಕ್ಕಾಗಿ ಟೋಯೋಟಾ, ಕರ್ನಾಟಕ ಬ್ಯಾಂಕ್ ಒಪ್ಪಂದ!

ಸಾರಾಂಶ

ಗ್ರಾಹಕರಿಗೆ ಸುಲಭ ಸಾಲ, ಕಡಿಮೆ ಕಂತು ಹಾಗೂ ಬಡ್ಡಿದರ ಸೌಲಭ್ಯ ಗ್ರಾಹಕರ ಟೊಯೋಟಾ ಕಾರು ಖರೀದಿ ಕನಸಿಗೆ ಮತ್ತಷ್ಟು ಪುಷ್ಠಿ ಟಯೋಟಾ ಕಿರ್ಲೋಸ್ಕರ್, ಕರ್ನಾಟಕ ಬ್ಯಾಂಕ್ ಒಪ್ಪಂದ

ಬೆಂಗಳೂರು(ಡಿ.06): ಗ್ರಾಹಕರಿಗೆ ತಮ್ಮ ಕನಸಿನ ಕಾರು(Car) ಖರೀದಿಗೆ ಟೋಯೋಟಾ ಕಿರ್ಲೋಸ್ಕರ್ ನೆರವಾಗುತ್ತಿದೆ. ಸುಲಭ ಸಾಲ, ಕಡಿಮೆ ಕಂತು, ಕಡಿಮೆ ಬಡ್ಡಿದರ ಸೇರಿದಂತೆ ಹಣಕಾಸು ಯೋಜನೆಗಳ(Finance Service) ಸೌಲಭ್ಯಕ್ಕಾಗಿ ಟೋಯೋಟಾ ಕಿರ್ಲೋಸ್ಕರ್(toyota Kirloskar motor) ಕರ್ನಾಟಕ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಭಾರತದ ಅಪಾರ ಸಂಖ್ಯೆಯ ನಗರಗಳು ಮತ್ತು ಪಟ್ಟಣಗಳ ಗ್ರಾಹಕರಿಗೆ ಸುಲಭ ಹಣಕಾಸು ಆಯ್ಕೆ ಲಭ್ಯವಾಗಲಿದೆ.  

ಕರ್ನಾಟಕ ಬ್ಯಾಂಕ್(Karnataka Bank) ನೊಂದಿಗೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದೆ. ನೂತನ ಸಹಭಾಗಿತ್ವದ ನಂತರದ ಕರ್ನಾಟಕ ಬ್ಯಾಂಕ್ ಟಿಕೆಎಂ ಮಾರಾಟ ಮಾಡುವ ಸಂಪೂರ್ಣ ಶ್ರೇಣಿಯ ವಾಹನಗಳಿಗೆ ಆದ್ಯತೆಯ ಫೈನಾನ್ಶಿಯರ್ ಒಂದಾಗಿದೆ. ಖಸಾಗಿ ಮತ್ತು ವಾಣಿಜ್ಯ ಬಳಕೆಗಾಗಿ ಟೊಯೋಟಾ ವಾಹನಗಳನ್ನು ಖರೀದಿಸಲು ಆದ್ಯತೆ ವಲಯದ ಯೋಜನೆಗಳು ಸೇರಿದಂತೆ ಸ್ಪರ್ಧಾತ್ಮಕ ಬಡ್ಡಿದರಗಳಲ್ಲಿ ಹಣಕಾಸು ಆಯ್ಕೆಗಳು ಗ್ರಾಹಕರಿಗೆ ದೊರೆಯಲಿದೆ.

Toyota Offers: ಸುಲಭ ಸಾಲ, ಕಡಿಮೆ ಕಂತು ಹಾಗೂ ಬಡ್ಡಿ, ಭರ್ಜರಿ ಆಫರ್ ಘೋಷಿಸಿದ ಟೊಯೋಟಾ!

ಇದು ನಮ್ಮ ಗ್ರಾಹಕರಿಗೆ ಅತ್ಯುತ್ತಮ ದರ್ಜೆಯ ಸೇವೆಯನ್ನು ಒದಗಿಸಲು ಕರ್ನಾಟಕ ಬ್ಯಾಂಕ್ ಮತ್ತು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಎಂಬ ಎರಡು ಮಹಾನ್ ಬ್ರಾಂಡ್ ಗಳ ಸಹಯೋಗದ ಪ್ರಯತ್ನವಾಗಿದೆ. ಟಿಕೆಎಂ ನೊಂದಿಗೆ ಸಹಕರಿಸಲು ನಮಗೆ ಸಂತೋಷವಾಗಿದೆ. ಈ ಪಾಲುದಾರಿಕೆಯು ನಮ್ಮ ಡಿಜಿಟಲ್ ಕಾರು ಸಾಲ(Digital Car laon) ಉತ್ಪನ್ನದ ತ್ವರಿತ ಮತ್ತು ತಡೆರಹಿತ ಅನುಭವವನ್ನು ಗ್ರಾಹಕರಿಗೆ ನೀಡುತ್ತದೆ. ಗ್ರಾಹಕರು ಟೆಕೆಎಂನಿಂದ ವಿಶ್ವದರ್ಜೆ ಉತ್ಪನ್ನಗಳನ್ನು ಹೊಂದಲು ಅಪೇಕ್ಷಿಸುತ್ತಿದ್ದಾರೆ.  ಕರ್ನಾಟಕ ಬ್ಯಾಂಕ್ ವ್ಯಾಪಕ್ ಬ್ರಾಂಚ್ ನೆಟ್‌ವರ್ಕ್ ಮೂಲಕ ಕಾರು ಸಾಲಗಳನ್ನು ಒದಗಿಸುತ್ತದೆ. ಅಸ್ತಿತ್ವದಲ್ಲಿರುವ ಮತ್ತು ಹೊಸ ಗ್ರಾಹಕರಿಗೆ ಎಂಡ್ ಟು ಎಂಡ್ ಡಿಜಿಟಲ್ ಪ್ಲಾರ್ಮ್(Digital platforms) ದೇಶಿಯವಾಗಿ ಅಭಿವೃದ್ಧಿಪಡಿಸಿದ, ಸರಳೀಕೃತ ಮತ್ತು ವೇಗದ ಸಂಸ್ಕರಣಾ ಸಾಮರ್ಥ್ಯಗಳೊಂದಿಗೆ ಸಕ್ರೀಯಗೊಳಿಸಲಾಗಿದೆ. ಈ ಪಾಲುದಾರಿಕೆಯು ನಮ್ಮ ಗ್ರಾಹಕರಿಗೆ ಮತ್ತು ಟೊಯೋಟಾ ಕಿರ್ಲೋಸ್ಕರ್ ಮೋಟಾರು ವಾಹನಗಳ ಸಂಭಾವ್ಯ ಖರೀದಿದಾರರಿಗೆ ಅತ್ಯುತ್ತಮ ದರ್ಜೆಯ ಸೇವೆಗಳನ್ನು ಒದಗಿಸಲಿದೆ ಎಂದು ಕರ್ನಾಟಕ ಬ್ಯಾಂಕ್ ವ್ಯವಸ್ಥಾಪನ ನಿರ್ದೇಶಕ ಮಹಾಲೇಶ್ವರ ಹೇಳಿದರು

ಕಾರು ಈಗ ಖರೀದಿಸಿ, ಫೆಬ್ರವರಿ 2022ರಲ್ಲಿ ಪಾವತಿಸಿ; ಭರ್ಜರಿ ಆಫರ್ ಘೋಷಿಸಿದ ಟೊಯೋಟಾ!

ಸುಲಭ ಹಣಕಾಸು ಆಯ್ಕೆಗಳಿಗಾಗಿ ಸಮಯೋಚಿತ ಮತ್ತು ಸಂಬಂಧಿತ ಯೋಜನೆಗಳನ್ನು ಪರಿಚಯಿಸುವ ಮೂಲಕ ಗ್ರಾಹಕರ ಅನುಕೂಲವನ್ನು ಹೆಚ್ಚಿಸಲು ಮತ್ತು ಸಹಾಯ ಮಾಡಲು ಟಿಕೆಎಂ ಯಾವಾಗಲೂ ಶ್ರಮಿಸುತ್ತದೆ. ಈ ಒಪ್ಪಂದವು ಅಂತಹ ಒಂದು ಪ್ರಯತ್ನವಾಗಿದೆ, ಇದು ನಮ್ಮ ಗ್ರಾಹಕರಿಗೆ ತೊಂದರೆಯಿಲ್ಲದ ಮತ್ತು ತಡೆರಹಿತ ಖರೀದಿ ಅನುಭವಕ್ಕಾಗಿ ಹೊಸ ಯುಗದ ಬ್ಯಾಂಕಿಂಗ್ ಮತ್ತು ಹಣಕಾಸು ಪರಿಹಾರಗಳನ್ನು ಸ್ಥಾಪಿಸಲು ಅನುವು ಮಾಡಿಕೊಟ್ಟಿದೆ. ಗ್ಲಾಂಜಾ ಮತ್ತು ಅರ್ಬನ್ ಕ್ರೂಸರ್ ಉತ್ಪನ್ನಗಳೊಂದಿಗೆ ಬಿ ಸೆಗ್ಮೆಂಟ್ ವಾಹನಕ್ಕೂ ಯಶಸ್ವಿಯಾಗಿ ಪ್ರವೇಶಿಸಿದ್ದೇವೆ. ಹೆಚ್ಚುತ್ತಿರುವ ಬೇಡಿಕೆ ಪೂರೈಸಲು ಮತ್ತು ಮೆಟ್ರೋ, ಸಣ್ಣ ಮಾರುಕಟ್ಟೆಗಳಳಲ್ಲಿ ನಮ್ಮ ಗ್ರಾಹಕರ ಮಾರಾಟ ಅನುಭವ ಸುಧಾರಿಸಲು ಗ್ರಾಮೀಣ ಮಾರುಕಟ್ಟೆಗಳ ತೀಕ್ಷ್ಣ ಗಮನದೊಂದಿದೆಗೆ ದೇಶಾದ್ಯಂತ ಟೊಯೋಟಾ ಉತ್ಪನ್ನ ವಿಸ್ತರಿಸುತ್ತಿದ್ದೇವೆ. ಈ ಸಹಯೋಗದೊಂದಿಗೆ, ನಾವು ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ನವೀನ ಯೋಜನೆಗಳನ್ನು ವಿನ್ಯಾಸಗೊಳಿಸುವತ್ತ ಗಮನ ಹರಿಸಿದ್ದೇವೆ, ಹಣಕಾಸು ಸೌಲಭ್ಯವನ್ನು ಒದಗಿಸಿದ್ದೇವೆ. ನಮ್ಮ ಪಾಲುದಾರ ಕರ್ನಾಟಕ ಬ್ಯಾಂಕ್ ನೊಂದಿಗೆ, ನಮ್ಮ ಗ್ರಾಹಕರಿಗೆ ಅತ್ಯುತ್ತಮ ಪರಿಹಾರಗಳನ್ನು ರಚಿಸಲು ನಮ್ಮ ಸಾಮರ್ಥ್ಯಗಳನ್ನು ನಿರ್ಮಿಸಲು ನಾವು ಆಶಿಸುತ್ತೇವೆ  ಎಂದು  ಟಿಕೆಎಂನ ವ್ಯವಹಾರ ಘಟಕದ ಉಪಾಧ್ಯಕ್ಷ   ಆರ್ ವೆಂಕಟಕೃಷ್ಣನ್ ಹೇಳಿದರು.

ನಿರಂತರವಾಗಿ ಸಂಪನ್ಮೂಲ ಹಣಕಾಸು ಯೋಜನೆಗಳು ಮತ್ತು ಪ್ಯಾಕೇಜ್ ಗಳೊಂದಿಗೆ ಆಗಮಿಸ ಮೂಲಕ ಹಲವು ವರ್ಷಗಳಿಂದ ಟಿಕೆಎಂ ತನ್ನ ಗ್ರಾಹಕ-ಮೊದಲ ನೀತಿಗೆ ಬದ್ಧವಾಗಿಯೇ ಮುಂದುವರೆದಿದೆ, ಕರ್ನಾಟಕ ಬ್ಯಾಂಕಿನೊಂದಿಗಿನ ಪಾಲುದಾರಿಕೆಯು ಟೊಯೋಟಾ ಗ್ರಾಹಕರಿಗೆ ಲಭ್ಯವಿರುವ ಯೋಜನೆಗಳ ಈ ಪಟ್ಟಿಯಲ್ಲಿ ಮತ್ತಷ್ಟು ಸೌಲಭ್ಯಗಳು ಹೆಚ್ಚಾಗಿವೆ

PREV
Read more Articles on
click me!

Recommended Stories

Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ
ಭಾರತದ ಮೊದಲ 7 ಸೀಟರ್ ಎಲೆಕ್ಟ್ರಿಕ್ SUV ಕಾರು XEV 9S ಪರಿಚಯಿಸಿದ ಮಹೀಂದ್ರ,ಟಾಟಾಗೆ ಠಕ್ಕರ್