ಕೊಹ್ಲಿಯ ಫೆವರಿಟ್ ಕಾರ್ ಆಡಿಆರ್8 ಈಗ ಹೇಗಿದೆ ಗೊತ್ತಾ?

By Suvarna NewsFirst Published Mar 15, 2021, 3:04 PM IST
Highlights

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಆಡಿ ಕಾರುಗಳನ್ನು ಹೆಚ್ಚಾಗಿ ಬಳಸುತ್ತಾರೆ. ಆಡಿ ಆರ್8 ಕಾರ್ ಕೊಹ್ಲಿ ಅವರ ಮೆಚ್ಚಿನ ಕಾರ್ ಆಗಿತ್ತು. ಈ ಕಾರನ್ನು ಕೊಹ್ಲಿ ಅವರು ಐದಾರು ವರ್ಷಗಳ ಹಿಂದೆಯೇ ಬ್ರೋಕರ್‌ ಒಬ್ಬರಿಗೆ ಮಾರಾಟ ಮಾಡಿದ್ದರು. ಈ ಕಾರು ಮುಂಬೈ ಪೊಲೀಸ್ ಗ್ರೌಂಡ್‌ನಲ್ಲಿ ಅನಾಥವಾಗಿ ಬಿದ್ದಿದೆ!

ಕ್ರಿಕೆಟ್ ಆಟ ಕೊಡುವ ಪ್ರಸಿದ್ಧಿ ಮತ್ತು ಹಣವನ್ನು ಊಹಿಸುವುದು ಅಸಾಧ್ಯ. ನಿಮ್ಮಲ್ಲಿ ಪ್ರತಿಭಾ ಪ್ರದರ್ಶನಕ್ಕೆ ಅಂತಾರಾಷ್ಟ್ರೀಯವಾಗಿ ವೇದಿಕೆ ಸಿಕ್ಕು ಯಶಸ್ವಿಯಾದರೆ ಹಣ ಮತ್ತು ಪ್ರಸಿದ್ಧಿಗಳೆರಡೂ ಕ್ರಿಕೆಟರ್‌ಗಳ ಹಿಂದೆ ಬರುತ್ತದೆ. ಹಾಗಾಗಿ, ಭಾರತೀಯ ಕ್ರಿಕೆಟರ್‌ಗಳು ಬಹಳಷ್ಟು ಐಷಾರಾಮಿ ಜೀವನ ನಡೆಸುತ್ತಾರೆ ಮತ್ತು ಐಷಾರಾಮಿ ಕಾರುಗಳನ್ನು ಹೊಂದಿರುತ್ತಾರೆ.

ಆದರೂ, ಭಾರತೀಯ ಕ್ರಿಕೆಟರ್‌ಗಳ ಮೊದಲ ಕಾರು ಯಾವುದು ಎಂಬುದು ಬಹುತೇಕರಿಗೆ ಕುತೂಹಲಿಕಾರಿಯಾಗಿರುತ್ತದೆ. ಕ್ರಿಕೆಟ್ ದೇವರು ಎಂದು ಕರೆಯಿಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಅವರ ಮೊದಲ ಕಾರು ಮಾರುತಿ 800 ಆಗಿತ್ತು. ಈ ವಿಷಯವನ್ನು ಅನೇಕ ಬಾರಿ ಹೇಳಿಕೊಂಡಿದ್ದಾರೆ ಕೂಡ. ಅದೇ ರೀತಿ ಹಲವು ಕ್ರಿಕೆಟರ್‌ಗಳು ತಮ್ಮ ಮೊದಲ ಕಾರ್‌ಗಳನ್ನು ಈಗಲೂ ಇಟ್ಟುಕೊಂಡಿದ್ದಾರೆ.

ಟಾಟಾ ಟಿಯಾಗೋ ಈಗ ಅರಿಝೋನಾ ಬ್ಲೂ ಬಣ್ಣದಲ್ಲಿ ಲಭ್ಯ!

ಹೊಸ ತಲೆಮಾರಿನ ಚಾಂಪಿಯನ್ ಕ್ರಿಕೆಟರ್ ಆದ ವಿರಾಟ್ ಕೊಹ್ಲಿ ಕೂಡ ಹಲವು ಕಾರುಗಳನ್ನು ಹೊಂದಿದ್ದಾರೆ. ಆ ಪೈಕಿ ವಿರಾಟ್ ಕೊಹ್ಲಿ ಅವರಿಗೆ ಹಿಂದೊಮ್ಮೆ ಆಡಿ ಆರ್ 8 ಕಾರ್ ಫೆವರಿಟ್ ಕಾರುಗಳಲ್ಲಿ ಒಂದಾಗಿತ್ತು.

ಆ ಕಾರು ಈಗ ಹೇಗಿದೆ ಗೊತ್ತಾ? ಆ ಕಾರಿನ ಸ್ಥಿತಿ ನೋಡಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಮುಂಬೈನ ಪೊಲೀಸ್ ಮೈದಾನದಲ್ಲಿ ಗುಜರಿ ಸ್ಥಿತಿಯಲ್ಲಿದ್ದು, ಜನರು ಅದರ ಫೋಟೋಗಳನ್ನು ಷೇರ್ ಮಾಡುತ್ತಿದ್ದಾರೆಂದು ಸ್ಕೂಪ್‌ವೂಪ್  ಜಾಲತಾಣ ವರದಿ ಮಾಡಿದೆ.

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಲವು ಬಾರಿ ಈ ಆಡಿ ಆರ್ 8 ಕಾರ್ ಚಾಲನೆ ಮಾಡುವಾಗ ಕ್ಯಾಮೆರಾ ಕಣ್ಣುಗಳಿಗೆ ಕಂಡಿದ್ದರು. ಹಾಗೆಯೇ, ಯುನಿವರ್ಸಲ್ ಬಾಸ್ ಎಂದೇ ಖ್ಯಾತರಾಗಿರುವ ವೆಸ್ಟ್ ವಿಂಡೀಸ್‌ನ ದೈತ್ಯ ಬಾಟ್ಸಮನ್ ಕ್ರಿಸ್ ಗೇಲ್ ಭಾರತಕ್ಕೆ ಭೇಟಿ ನೀಡಿದಾಗ, ವಿರಾಟ್ ಕೊಹ್ಲಿಯಿಂದ ಆಡಿ ಕಾರು ಪಡೆದು ಸವಾರಿ ಮಾಡುತ್ತಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಒಂದು ಕಾಲದಲ್ಲಿ ವಿರಾಟ್ ಕೊಹ್ಲಿಯ ಅಚ್ಚು ಮೆಚ್ಚಿನ ಕಾರು ಈಗಿನ ಸ್ಥಿತಿ ನೋಡುವಂತಿಲ್ಲ. ಅದು ಗುಜರಿ ಸ್ಥಿತಿಯಲ್ಲಿರುವುದನ್ನು ಕಾಣಬಹುದು.

ಮೇ ತಿಂಗಳಲ್ಲಿ ಮಾರುತಿಯ ಹೊಸ ಸೆಲೆರಿಯೋ ಕಾರು ಮಾರುಕಟ್ಟೆಗೆ?

2012ರ ಮಾಡೆಲ್‌ನ ಬಿಳಿ ಬಣ್ಣದ ಆರ್‌8 ವಿ10 ಕಾರನ್ನು 2016ರಲ್ಲಿ ವಿರಾಟ್ ಕೊಹ್ಲಿ ಅವರು ಬ್ರೋಕರ್‌ರೊಬ್ಬರಿಗೆ ಮಾರಾಟ ಮಾಡಿದ್ದರು. ವಿರಾಟ್ ಕೊಹ್ಲಿಯಿಂದ ಕಾರು ಖರೀದಿಸಿದ ಬ್ರೋಕರ್‌ನ ಹೆಸರು ಸಾಗರ್ ಥಕ್ಕರ್ ಅಲಿಯಾಸ್  ಶಾಗ್ಗೀ. ಈ ಸಾಗರ್ ಥಕ್ಕರ್ ಕಾರನ್ನು ತನ್ನ ಗರ್ಲ್ ಫ್ರೆಂಡ್‌ಗೆ ಖರೀದಿ ಮಾಡಿದ್ದ ಎನ್ನಲಾಗಿದೆ. ಆದರೆ, ಖರೀದಿ ಮಾಡಿದ ಕೆಲವೇ ದಿನಗಳಲ್ಲಿ ಆತ ಕಾಲ್ ಸೆಂಟರ್ ಹಗರಣವೊಂದರಲ್ಲಿ ಸಿಕ್ಕಿಹಾಕಿಕೊಂಡ. ಹಾಗಾಗಿ, ಮುಂಬೈ ಪೊಲೀಸರು ಆಡಿ ಆರ್ 8 ಕಾರು ಸೇರಿದಂತೆ ಆತನ ಎಲ್ಲ ಆಸ್ತಿಯನ್ನು ಸೀಜ್ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಆಡಿ ಆರ್ 8 ಕಾರು ಇದೀಗ ಮುಂಬೈ ಪೊಲೀಸ್ ಗ್ರೌಂಡ್‌ನಲ್ಲಿ ಗುಜರಿ ಸ್ಥಿತಿಯಲ್ಲಿದೆ. ಉಸಾಬರಿ ಕೊರತೆಯಿಂದಾಗಿ ಆಡಿ ಕಾರ್ ಕೆಟ್ಟ ಸ್ಥಿತಿಯಲ್ಲಿದೆ. ಈ ಮೊದಲು ವರದಿಯಾದ ಪ್ರಕಾರ, ಮುಂಬೈನಲ್ಲಿ ಉಂಟಾದ ಪ್ರವಾಹದಲ್ಲಿ ಈ ಕಾರು ಪೂರ್ತಿಯಾಗಿ ನೀರಿನಲ್ಲಿ ಮುಳುಗಿತ್ತು. ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ತೇಲಿಕೊಂಡು ಹೋಗಿತ್ತಂತೆ.

ಸಾಗರ್ ಥಕ್ಕರ್ ಈ ಕಾರನ್ನು 60 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದ. ಈ ಆಡಿ ಆರ್ 8 ಕಾರಿನ ಮೂಲ ಬೆಲೆ 2.50 ಕೋಟಿ ರೂಪಾಯಿಯಾಗಿದೆ.

ಆಡಿ ಆರ್ 8 ಕಾರ್ ಶಕ್ತಿಶಾಲಿ ಕಾರ್ ಆಗಿದೆ. ಈ ಕಾರು 4163 ಸಿಸಿ ಎಂಜಿನ್ ಒಳಗೊಂಡಿದ್ದು,  ಪ್ರತಿ ಲೀಟರ್‌ಗೆ 7ರಿಂದ 8.5 ಕಿ.ಮೀ. ಮೈಲೇಜ್ ನೀಡುತ್ತದೆ. ಈ ಕಾರು ಆಟೋಮೆಟಿಕ್ ನಾಲ್ಕು ವೆರಿಯಂಟ್‌ಗಳಲ್ಲಿ ಮಾರಾಟಕ್ಕೆ ದೊರೆಯುತ್ತಿತ್ತು. ಜರ್ಮನ್ ಮೂಲದ ಆಡಿ ಕಂಪನಿ ಇದೀಗ ಆಡಿ ಆರ್ 8 ವಿ10 ಕಾರ್ ಉತ್ಪಾದನೆಯನ್ನ ಸ್ಥಗಿತಗೊಳಿಸಿದೆ. ಇದೊಂದು ಅತ್ಯುದ್ಭತ ಕಾರ್ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ.

ಹುಂಡೈ ಭರ್ಜರಿ ಆಫರ್: ಆಯ್ದ ಕಾರುಗಳ ಮೇಲೆ 1.5 ಲಕ್ಷ ರೂ.ವರೆಗೂ ಡಿಸ್ಕೌಂಟ್

click me!