ಓಲಾ ಎಲೆಕ್ಟ್ರಿಕ್, ತನ್ನ ಮೊದಲ ಎಲೆಕ್ಟ್ರಿಕ್ ಕಾರಿನ ಹೊಸ ವಿಡಿಯೋ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಈ ಮೊದಲು ಕಾರಿನ ಹೊರಭಾಗದ ವಿವರಗಳನ್ನಷ್ಟೇ ನೀಡಿದ್ದ ಕಂಪನಿ, 19 ಸೆಕೆಂಡುಗಳ ಟೀಸರ್ನಲ್ಲಿ, ಎಲೆಕ್ಟ್ರಿಕ್ ಕಾರಿನ ಒಳಭಾಗವನ್ನು ತೋರಿಸಿದೆ.
ಭಾರಿ ನಿರೀಕ್ಷೆ ಹುಟ್ಟಿಸಿರುವ ಓಲಾ ಎಲೆಕ್ಟ್ರಿಕ್ (Ola Electric), ತನ್ನ ಮೊದಲ ಎಲೆಕ್ಟ್ರಿಕ್ ಕಾರಿನ ಹೊಸ ವಿಡಿಯೋ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಈ ಮೊದಲು ಕಾರಿನ ಹೊರಭಾಗದ ವಿವರಗಳನ್ನಷ್ಟೇ ನೀಡಿದ್ದ ಕಂಪನಿ, 19 ಸೆಕೆಂಡುಗಳ ಟೀಸರ್ನಲ್ಲಿ, ಎಲೆಕ್ಟ್ರಿಕ್ ಕಾರಿನ ಒಳಭಾಗವನ್ನು ತೋರಿಸಿದೆ.
ಟೀಸರ್ ಕಾರಿನ ಎರಡು ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ತೋರಿಸುತ್ತದೆ. ಇದರಲ್ಲಿ ಓಲಾದ ಲೋಗೋ ಕಾಣಿಸುತ್ತದೆ. ಬ್ಯಾಕ್ಲಿಟ್ ಟಚ್ ಕಂಟ್ರೋಲ್ಗಳು ಮತ್ತು ಟಾಗಲ್ ಸ್ವಿಚ್ಗಳು ಸಹ ಸ್ಟೀರಿಂಗ್ನಲ್ಲಿ ಗೋಚರಿಸುತ್ತವೆ. ಸ್ಟೀರಿಂಗ್ನ ಹಿಂದೆ ಫ್ರೀ-ಸ್ಟ್ಯಾಂಡಿಂಗ್ ಇನ್ಸ್ಟ್ರೂಮೆಂಟ್ ಕನ್ಸೋಲ್ ಅನ್ನು ಸಹ ಒದಗಿಸಲಾಗಿದ್ದು, ಇದು ಡಿಜಿಟಲ್ ಸ್ಪೀಡೋಮೀಟರ್ ಹೊಂದಿದೆ. ಮುಂದಿನ ವರ್ಷ ಆಟೋ ಎಕ್ಸ್ಪೋ 2023 ರಲ್ಲಿ ಕಂಪನಿಯು ಈ ಕಾರನ್ನು ಪ್ರದರ್ಶಿಸಬಹುದು ಎಂದು ಹೇಳಲಾಗುತ್ತಿದೆ.
undefined
ತೇಲುವ ಭೂದೃಶ್ಯ-ಆಧಾರಿತ ಟಚ್ಸ್ಕ್ರೀನ್ ನಿಯಂತ್ರಣವು ಕಾರಿನಲ್ಲಿ ಗೋಚರಿಸುತ್ತದೆ. ಡ್ಯಾಶ್ಬೋರ್ಡ್ನಲ್ಲಿ ಸ್ವಿಚ್ಗಿಯರ್ ಇಲ್ಲ ಬದಲಿಗೆ, ಟಚ್ಸ್ಕ್ರೀನ್ ಬಳಸಿ ಎಲ್ಲಾ ನಿಯಂತ್ರಣಗಳನ್ನು ನಿರ್ವಹಿಸಲಾಗುತ್ತದೆ ಎಂಬುದು ವಿಡಿಯೋದಲ್ಲಿ ಕಾಣಿಸಲಾಗುತ್ತದೆ. ಆದರೆ, ಈ ಟಚ್ಸ್ಕ್ರೀನ್ ಪರದೆಯ ಗಾತ್ರದ ಬಗ್ಗೆ ಯಾವುದೇ ವಿವರಗಳಿಲ್ಲ. ಆದರೆ, ಇದು 10 ಇಂಚಿನ ಸ್ಕ್ರೀನ್ ಇರಬಹುದು ಎಂದು ಅಂದಾಜಿಸಲಾಗುತ್ತಿದೆ. ಇದು ಓಲಾ ಎಲೆಕ್ಟ್ರಿಕ್ ಸ್ಕೂಟರ್ನಂತಹ ಸಾಫ್ಟ್ವೇರ್ ಅನ್ನು ಪಡೆಯುತ್ತದೆ, ಇದರಲ್ಲಿ ಕಂಪನಿಯು ಅದನ್ನು ನಿರಂತರವಾಗಿ ನವೀಕರಿಸುತ್ತಲೇ ಇರಬಹುದಾಗಿದೆ.
ಓಆರ್ವಿಎಂ (ORVM) ಬದಲಿಗೆ ಕ್ಯಾಮೆರಾ:
ಈ ಟೀಸರ್ನಲ್ಲಿ ಕಂಪನಿಯು ಹೊರಭಾಗವನ್ನೂ ತೋರಿಸಿದೆ. ಓಲಾ ಇವಿ (Ola EV) ವಿಂಡ್ಸ್ಕ್ರೀನ್ನೊಂದಿಗೆ ಬರಲಿದೆ. ಇದರಲ್ಲಿ ಒಆರ್ವಿಎಂ ಬದಲಿಗೆ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಂಪನಿಯು ಈ ಇವಿಯನ್ನು ಕ್ರಾಸ್ಒವರ್ ಮತ್ತು ಸೆಡಾನ್ನಂತಹ ಮಾದರಿಗಳಲ್ಲಿ ಎಲೆಕ್ಟ್ರಿಕ್ ವಾಹನವನ್ನು ನೀಡಬಹುದು. ಓಲಾ ಎಲೆಕ್ಟ್ರಿಕ್ ಕಾರಿನಲ್ಲಿ 70-80kWh ಬ್ಯಾಟರಿ ಪ್ಯಾಕ್ ಇರಲಿದ್ದು, ಒಂದೇ ಚಾರ್ಜ್ನಲ್ಲಿ 500Km ಗಿಂತ ಹೆಚ್ಚಿನ ಶ್ರೇಣಿ ನೀಡಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ: ದೀಪಾವಳಿಯಂದು ಒಂದೇ ದಿನ 250 ವಾಹನ ವಿತರಿಸಿದ ಏಥರ್ ಎನರ್ಜಿ
ಕೇವಲ 4 ಸೆಕೆಂಡುಗಳಲ್ಲಿ 100 ಕಿಮೀ:
ಓಲಾ ಎಲೆಕ್ಟ್ರಿಕ್ನ ಸಿಇಒ ಭವಿಶ್ ಅಗರ್ವಾಲ್ ಈ ಎಲೆಕ್ಟ್ರಿಕ್ ಕಾರಿನ ಬಗ್ಗೆ ಮೊದಲ ಬಾರಿಗೆ ಘೋಷಿಸಿದಾಗ, ನಾವು ಹೊಸ ಭಾರತವನ್ನು ವ್ಯಾಖ್ಯಾನಿಸುವ ಕಾರನ್ನು ತರುತ್ತಿದ್ದೇವೆ ಎಂದು ಹೇಳಿದ್ದರು. ಭಾರತವು ನಿರ್ಭೀತ ಮತ್ತು ತನ್ನದೇ ಆದ ಹಣೆಬರಹವನ್ನು ಬರೆಯುವುದನ್ನು ನಂಬುತ್ತದೆ. ನಮ್ಮ ಕಾರು ಭಾರತದ ಅತ್ಯಂತ ವೇಗದ ಕಾರುಗಳಲ್ಲಿ ಒಂದಾಗಲಿದೆ ಎಂದಿದ್ದಾರೆ.
ಇದು 4 ಸೆಕೆಂಡುಗಳಲ್ಲಿ 0 ರಿಂದ 100 ವರೆಗೆ ತಲುಪಬಹುದು, ಅದರ ವ್ಯಾಪ್ತಿಯು ಪೂರ್ಣ ಚಾರ್ಜ್ನಲ್ಲಿ 500 ಕಿಮೀ ಆಗಿರುತ್ತದೆ. ಇದು ಸಂಪೂರ್ಣ ಗ್ಲಾಸ್ ರೂಫ್, ಮೂವ್ ಓಎಸ್ ಮತ್ತು ಅಸಿಸ್ಟೆಡ್ ಡ್ರೈವಿಂಗ್ ವೈಶಿಷ್ಟ್ಯಗಳೊಂದಿಗೆ ಭಾರತದಲ್ಲಿ ಇದುವರೆಗೆ ತಯಾರಿಸಿದ ಅತ್ಯಂತ ಸ್ಪೋರ್ಟಿಯ ಕಾರು ಆಗಿರುತ್ತದೆ.
ಇದನ್ನೂ ಓದಿ: ಬಿಡುಗಡೆಯಾಗಲಿವೆ ಈ ಕಾರುಗಳು: ಎಲೆಕ್ಟ್ರಿಕ್, CNG ಮಾದರಿಗೆ ಬೇಡಿಕೆ
ಓಲಾ ಎಲೆಕ್ಟ್ರಿಕ್, ಎಲೆಕ್ಟ್ರಿಕ್ ವಾಹನ ವಲಯಕ್ಕೆ ಪ್ರವೇಶಿಸಿದ ನಂತರ ಮೊದಲಿಗೆ ಬಿಡುಗಡೆಗೊಳಿಸಿದ್ದ ಓಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನ. ಇದರ ಎಸ್1 ಹಾಗೂ ಎಸ್1 ಪ್ರೋ ಸ್ಕೂಟರ್ಗಳು ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡಿದ್ದವು. ಕಡಿಮೆ ಬೆಲೆಯಲ್ಲಿ ಉತ್ತಮ ಶ್ರೇಣಿ ನೀಡುವ ಭರವಸೆ ನೀಡಿದ್ದ ಇದನ್ನು ಸಾಕಷ್ಟು ಜನರು ಬುಕ್ ಮಾಡಿದ್ದರು. ಆದರೆ, ನಂತರ ಇದರ ಡೆಲಿವರಿ ವಿಳಂಬವಾಗುತ್ತಿದೆ ಮತ್ತು ಭಋೌಸೆ ನೀಡಿದ ವೈಶಿಷ್ಟ್ಯಗಳನ್ನು ನೀಡಿಲ್ಲ ಎಂಬ ದೂರುಗಳು ಕೇಳಿಬಂದಿದ್ದವು. ಆದರೆ, ಈಗ ಎಲೆಕ್ಟ್ರಿಕ್ ಕಾರು ಮಾರುಕಟ್ಟೆ ಬರಲು ಸಿದ್ಧವಾಗುತ್ತಿದ್ದು, ಅದು ಬಗ್ಗೆ ಕೂಡ ಜನರಲ್ಲಿ ಸಾಕಷ್ಟು ನಿರೀಕ್ಷೆಗಳಿವೆ.