ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ ಬಳಿ ಇದೆ ಟಾಟಾ ಒಡೆತನದ ಕಾರು!

By Suvarna News  |  First Published Oct 27, 2022, 4:18 PM IST

ಬ್ರಿಟನ್‌ನಲ್ಲಿ ಹೊಸ ಇತಿಹಾಸ ರಚಿಸಿದ ನೂತನ ಪ್ರಧಾನಿ ಭಾರತೀಯ ಮೂಲದ ರಿಷಿ ಸುನಕ್ ಬಳಿ ಎಷ್ಟು ಕಾರುಗಳಿವೆ. ಯಾವ ಕಂಪನಿ ಕಾರುಗಳನ್ನು ರಿಷಿ ಬಳಸುತ್ತಿದ್ದಾರೆ. ಇಲ್ಲಿವೆ ರಿಷಿ ಸುನಕ್ ಬಳಿ ಇರುವ ಕಾರುಗಳ ಸಂಪೂರ್ಣ ವಿವರ.


ಲಂಡನ್(ಅ.27): ರಿಷಿ ಸುನಕ್ ಬ್ರಿಟನ್‌ನ 57ನೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಬ್ರಿಟನ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಮೂಲದ ವ್ಯಕ್ತಿ ಪ್ರಧಾನಿ ಹುದ್ದೆಗೇರಿದ ಸಾಧನೆ ಮಾಡಿದ್ದಾರೆ. ಇಷ್ಟೇ ಅಲ್ಲ ಬ್ರಿಟನ್‌ನ ಮೊದಲ ಹಿಂದೂ ಪ್ರಧಾನಿ ಅನ್ನೋ ಕೀರ್ತಿಗೂ ಪಾತ್ರಾಗಿದ್ದಾರೆ. ಬ್ರಿಟನ್ ಶ್ರೀಮಂತರ ಪಟ್ಟಿಯಲ್ಲಿ ರಿಷಿ ಸುನಕ್‌ಗೆ 222ನೇ ಸ್ಥಾನ. ಸುನಕ್ ಕಾರುಗಳ ಬಗ್ಗೆ ಹೆಚ್ಚಿನ ಆಸಕ್ತಿ ಹಾಗೂ ಒಲವು ಹೊಂದಿಲ್ಲ. ಆದರೆ ಅಗತ್ಯ ಹಾಗೂ ಅವಶ್ಯಕತೆ ತಕ್ಕಂತೆ ಕೆಲ ಕಾರುಗಳನ್ನು ಖರೀದಿಸಿದ್ದಾರೆ. 

ವೋಕ್ಸ್‌ವ್ಯಾಗನ್ ಗಾಲ್ಫ್ 
ರಿಷಿ ಸುನಕ್ ಖರೀದಿಸಿದ ಮೊದಲ ಕಾರು ವೋಕ್ಸ್‌ವ್ಯಾಗನ್ ಗಾಲ್ಫ್. ಈಗಲೂ ರಿಷಿ ಈ ಕಾರು ಇಟ್ಟುಕೊಂಡಿದ್ದಾರೆ. ಯುಕೆಯಲ್ಲಿ ಲಭ್ಯವಿರುವ ಕೈಗೆಟುಕುವ ದರದ ಕಾರು ಈ ವೋಕ್ಸ್‌ವ್ಯಾಗನ್ ಗಾಲ್ಫ್. ಈ ಕಾರನ್ನು ಲಂಡನ್‌ನಲ್ಲಿ ಓಡಾಡಲು ಬಳಕೆ ಮಾಡುತ್ತಿದ್ದಾರೆ.

Latest Videos

undefined

ಕರ್ನಾಟಕದ ಅಳಿಯ, ಯುಕೆ ಪ್ರಧಾನಿ ಕೈಲಿ ಕೆಂಪು ರಕ್ಷಾ ಸೂತ್ರ; ಏನಿದರ ಮಹತ್ವ?

ಜಾಗ್ವಾರ್ XJ L
ರಿಷಿ ಸುನಕ್ ಐಷಾರಾಮಿ ಸೆಡಾನ್ ಕಾರಾದ ಜಾಗ್ವಾರ್ XJ L ಹೊಂದಿದ್ದಾರೆ. ಗರಿಷ್ಠ ಸುರಕ್ಷತೆ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ. ಈ ಕಾರಿನಲ್ಲಿ ಪ್ರಯಾಣಿಸುವವರಿಗೆ ಗರಿಷ್ಠ ಮಟ್ಟದ ಸುರಕ್ಷತೆ ಸಿಗಲಿದೆ. ಪೋರ್ಟೇಬಲ್ ಆಕ್ಸಿಜನ್ ಟ್ಯಾಂಕ್ಸ್, 13mm ಸ್ಟೀಲ್ ಪ್ಲೇಟ್, ಕಾರಿನೊಳಗೆ ವೆಂಟಿಲೇಶನ್ ಸಿಸ್ಟಮ್ ಸೇರಿದಂತೆ ಹಲವು ಸೌಲಭ್ಯಗಳು ಇವೆ.  3.0 ಲೀಟರ್ ಟರ್ಬೋಚಾರ್ಜ್ v6 ಪೆಟ್ರೋಲ್ ಎಂಜಿನ್ ಹೊಂದಿದೆ.

ಲ್ಯಾಂಡ್ ರೋವರ್ ಡಿಸ್ಕವರಿ
ಭಾರತೀಯ ಮೂಲದ ರಿಷಿ ಸುನಕ್ ಭಾರತದ ಟಾಟಾ ಮೋಟಾರ್ಸ್ ಒಡೆತನದಲ್ಲಿರುವ ಲ್ಯಾಂಡ್ ರೋವರ್ ಡಿಸ್ಕರಿ SUV ಕಾರು ಹೊಂದಿದ್ದಾರೆ. 3.0 ಲೀಟರ್ V6 ಪೆಟ್ರೋಲ್ ಎಂಜಿನ್ ಹೊಂದಿದ್ದು, 335 bhp ಪವರ್ ಹಾಗೂ 450 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 

ಬಿಜೆಪಿ, ಕಾಂಗ್ರೆಸ್‌ ನಡುವೆ 'ಅಲ್ಪಸಂಖ್ಯಾತ ಉನ್ನತ ಹುದ್ದೆ' ವಾರ್‌

ಲ್ಯಾಂಡ್ ರೋವರ್ ರೇಂಜ್ ರೋವರ್ ಸೆಂಟಿನೆಲ್
ಲ್ಯಾಂಡ್ ರೋವರ್ ರೇಂಜ್ ರೋವರ್ ಸೆಂಟಿನೆಲ್ ಕಾರು ಕೂಡ ಟಾಟಾ ಮೋಟಾರ್ಸ್ ಒಡೆತನದ ಕಾರು. ಆದರೆ ಇದು ರಿಷಿ ಸುನಕ್ ಖರೀದಿಸಿದ ಕಾರಲ್ಲ. ಇದು ಬ್ರಿಟನ್ ಪ್ರಧಾನಿ ಬಳಸುವ ಅಧಿಕೃತ ಕಾರಾಗಿದೆ. ಈ ಹಿಂದೆ ಬೊರಿಸ್ ಜಾನ್ಸನ್ ಅವಧಿಯಲ್ಲಿ ಲ್ಯಾಂಡ್ ರೋವರ್ ರೇಂಜ್ ರೋವರ್ ಸೆಂಟಿನೆಲ್ ಕಾರನ್ನು ಬ್ರಿಟನ್ ಪ್ರಧಾನಿಯ ಅಧಿಕೃತ ಕಾರಾಗಿ ಸೇರಿಸಿಕೊಳ್ಳಲಾಗಿದೆ. 

ಬ್ರಿಟನ್ ಆರ್ಥಿಕತೆ ಮೇಲಕ್ಕೆತ್ತಲು ಎಲ್ಲಾ ಪ್ರಯತ್ನ
ಹಣಕಾಸು ಸಚಿವರಾಗಿ ಅತ್ಯುತ್ತಮ ಕಾರ್ಯನಿರ್ವಹಿಸಿರುವ ರಿಷಿ ಸುನಕ್ ಇದೀಗ ಬ್ರಿಟನ್ ಆರ್ಥಿಕತೆ ಸುಧಾರಿಸಲು ಎಲ್ಲಾ ಪ್ರಯತ್ನ ಮಾಡುವುದಾಗಿ ಬ್ರಿಟನ್ ಪ್ರಧಾನಿ ತಮ್ಮ ಮೊದಲ ಭಾಷಣದಲ್ಲಿ ಹೇಳಿದ್ದಾರೆ. ಬ್ರಿಟನ್‌ನ ನಿರ್ಗಮಿತ ಪ್ರಧಾನಿ ಲಿಸ್‌ ಟ್ರಸ್‌ ಅವರು ಮಾಡಿರುವ ತಪ್ಪುಗಳನ್ನು ಸರಿಪಡಿಸಲು ನನ್ನನ್ನು ಕನ್ಸರ್ವೇಟಿವ್‌ ಪಕ್ಷದ ನಾಯಕನಾಗಿ ಹಾಗೂ ದೇಶದ ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ. ಆ ಕೆಲಸವನ್ನು ತಕ್ಷಣದಿಂದಲೇ ಆರಂಭಿಸುತ್ತೇನೆ. ಆರ್ಥಿಕ ಸ್ಥಿರತೆ ಹಾಗೂ ವಿಶ್ವಾಸವನ್ನು ಬ್ರಿಟನ್‌ ಸರ್ಕಾರದ ಜೀವಾಳವನ್ನಾಗಿಸುತ್ತೇನೆ ಎಂದು ನೂತನ ಪ್ರಧಾನಿ ರಿಷಿ ಸುನಕ್‌ ಘೋಷಣೆ ಮಾಡಿದ್ದರು. 

click me!