ನಿಸಾನ್ ಮ್ಯಾಗ್ನೈಟ್ ಕಾರು ನಿರ್ವಹಣಾ ವೆಚ್ಚ ಕೇವಲ 39 ಪೈಸೆ, ಅಧಿಕೃತ ಘೋಷಣೆ!

Published : Oct 24, 2024, 03:35 PM IST
ನಿಸಾನ್ ಮ್ಯಾಗ್ನೈಟ್ ಕಾರು ನಿರ್ವಹಣಾ ವೆಚ್ಚ ಕೇವಲ 39 ಪೈಸೆ, ಅಧಿಕೃತ ಘೋಷಣೆ!

ಸಾರಾಂಶ

ನಿಸಾನ್ ಮ್ಯಾಗ್ನೈಟ್ ಭಾರತದಲ್ಲಿ ಲಭ್ಯವಿರುವ ಅತೀ ಕಡಿಮೆ ದರದ ಎಸ್‌ಯುವಿ ಕಾರು. ಇದೀಗ ಈ ಕಾರಿನ ನಿರ್ವಹಣಾ ವೆಚ್ಚ ಕೂಡ ಅತ್ಯಂತ ಕಡಿಮೆ. ಪ್ರತಿ ಕಿಲೋಮೀಟರ್‌ಗೆ ಕೇವಲ 39 ಪೈಸೆ ಮಾತ್ರ. ಜೊತೆಗೆ 3 ವರ್ಷದ ಸ್ಟಾಂಡರ್ಡ್ ವಾರಂಟಿ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆಯಬಹುದು. 

ನವದೆಹಲಿ(ಅ.24) ಭಾರತದಲ್ಲಿ ಎಸ್‌ಯುವಿ ಕಾರುಗಳಿಗೆ ಭಾರಿ ಬೇಡಿಕೆ ಇದೆ. ಇದರ ನಡುವೆ ಅತೀ ಕಡಿಮೆ ದರದಲ್ಲಿ ನಿಸಾನ್ ಮ್ಯಾಗ್ನೈಟ್ ಕಾರು ಬಿಡುಗಡೆ ಮಾಡಿದೆ. 5.99 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ನಿಸಾನ್ ಮ್ಯಾಗ್ನೈಟ್ ಕಾರು ಲಭ್ಯವಿದೆ. ಇದೀಗ ನಿಸಾನ್ ಇಂಡಿಯಾ ಮ್ಯಾಗ್ನೈಟ್ ಕಾರಿನ ನಿರ್ವಹಣಾ ವೆಚ್ಚ  ಸೇರಿ ಕೆಲ ಸೌಲಭ್ಯಗಳನ್ನು ಘೋಷಿಸಿದೆ. ವಿಶೇಷ ಅಂದರೆ ಪ್ರತಿ ಕಿಲೋಮೀಟರ್‌ಗೆ ನಿರ್ವಹಣಾ ವೆಚ್ಚ ಕೇವಲ 39 ಪೈಸೆ(50,000 ಕಿ.ಮೀವರೆಗೆ) ಮಾತ್ರ. ದೇಶದ ಎಲ್ಲಾ ನಿಸಾನ್ ಅಧಿಕೃತ ಡೀಲರ್ಸ್ ಬಳಿ ಇದೇ ವೆಚ್ಚ ಇರಲಿದೆ.

ಇದರ ಜೊತೆಗೆ ನಿಸಾನ್ ಮ್ಯಾಗ್ನೈಟ್ ಕೇರ್ ಪ್ರಿ ಪ್ರೇಯ್ಡ್ ಪ್ಲಾನ್ ಆಯ್ಕೆ ಮಾಡಿಕೊಂಡರೆ ಶೇಕಡಾ 21ರಷ್ಟು ಉಳಿತಾಯ ಮಾಡಲು ಸಾಧ್ಯವಿದೆ ಎಂದು ನಿಸಾನ್ ಹೇಳಿದೆ. ಪರಿಣಿತರಿಂದ ಸರ್ವೀಸ್, ಕ್ಯಾಶ್‌ಲೆಸ್ ರಿಪೇರಿ ಸೇರಿದಂತೆ ಹಲವು ಸೌಲಭ್ಯಗಳು ಸಿಗಲಿದೆ. ಇದರಿಂದ ಕಾರುಗಳ ಸರ್ವೀಸ್‌ಗೆ ದುಬಾರಿ ವೆಚ್ಚ ಮಾಡುವ ಬದಲು ನಿಸಾನ್ ಮ್ಯಾಗ್ನೈಟ್ ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ವಹಣೆ ಮಾಡಲು ಸಾಧ್ಯವಿದೆ.

ಅಗ್ಗದ ಬೆಲೆಯ ಎಸ್‌ಯುವಿ ಕಾರು, 5.99 ಲಕ್ಷ ರೂಗೆ ನಿಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಲಾಂಚ್!

ನಿಸಾನ್ ಮ್ಯಾಗ್ನೈಟ್ ಕೇರ್ ಪ್ಲಾನ್‌ನಲ್ಲಿ ಗೋಲ್ಡ್ ಹಾಗೂ ಸಿಲ್ವರ್ ಎರಡು ಆಯ್ಕೆಗಳು ಲಭ್ಯವಿದೆ. ಸಮಗ್ರ ನಿರ್ವಹಣೆ ಗೋಲ್ಡ್ ಹಾಗೂ ಬೇಸಿಕ್ ನಿರ್ವಹಣೆಗೆ ಸಿಲ್ವರ್ ಆಯ್ಕೆ ಮಾಡಿಕೊಳ್ಳಬಹುದು. ವಿಶೇಷ ಅಂದರೆ ಇದರ ನಡುವೆ ಕಾರು ಮಾರಾಟ ಮಾಡಿದರೂ ಈ ಪ್ಲಾನ್ ಕೂಡ ವರ್ಗಾಯಿಸಬಹುದು. ಹೊಸ ಮ್ಯಾಗ್ನೈಟ್ 3-ವರ್ಷ/100000 ಕಿಮೀ ವಾರಂಟಿ ಜೊತೆಗೆ ಲಭ್ಯವಿದೆ. ಗ್ರಾಹಕರ ಅನುಕೂಲಕ್ಕೆ 'ಪಿಕ್-ಅಪ್ ಮತ್ತು ಡ್ರಾಪ್-ಆಫ್' ಸರ್ವೀಸ್ ಲಭ್ಯವಿದ್ದು, ಮೇಂಟೆನೆನ್ಸ್ ಕೆಲಸ ಮುಗಿದ ಬಳಿಕ 90 ನಿಮಿಷದಲ್ಲಿ ವಾಹನ ಡೆಲಿವರಿ ಮಾಡಲಾಗುತ್ತದೆ. ಗ್ರಾಹಕರು 'ನಿಸ್ಸಾನ್ ಡೋರ್‌ಸ್ಟೆಪ್ ಸರ್ವೀಸ್' ಆಯ್ಕೆಯನ್ನು ಕೂಡ ಆರಿಸಿಕೊಳ್ಳಬಹುದಾಗಿದ್ದು, ಇದರಲ್ಲಿ ನಿಸ್ಸಾನ್ ಸಿಬ್ಬಂದಿ ಮನೆಗೇ ಬಂದು ಮೇಂಟೆನೆನ್ಸ್ ಮಾಡುತ್ತಾರೆ. ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಲಭ್ಯವಿರುತ್ತದೆ.

ಭಾರತದಲ್ಲಿ ನಿಸಾನ್ ಮ್ಯಾಗ್ನೈಟ್ ಕಾರು 2020ರಲ್ಲಿ ಬಿಡುಗಡೆಯಾಗಿದೆ. ಬಳಿಕ ಹೊಸ ಕ್ರಾಂತಿ ಮಾಡಿದೆ. ಕಾರಣ ಅತೀ ಕಡಿಮೆ ದರದಲ್ಲಿ ಲಭ್ಯವಿರುವ ಎಸ್‌ಯುವಿ ಕಾರಾಗಿದೆ. ಜಾಗತಿಕ ಮಾರುಕಟ್ಟೆಯಲ್ಲೂ ಈ ಕಾರು ಲಭ್ಯವಿದೆ. ಕ್ರಾಶ್ ರೇಟಿಂಗ್‌ನಲ್ಲಿ 4 ಸ್ಟಾರ್ ಪಡೆದಿರುವ ಕಾರಣ ಸುರಕ್ಷತೆಯಲ್ಲೂ ಉತ್ತಮವಾಗಿದೆ. ಸದ್ಯ 1.5 ಲಕ್ಷ ನಿಸಾನ್ ಮ್ಯಾಗ್ನೈಟ್ ಕಾರು ಮಾರಾಟವಾಗಿದೆ.  

ನಿಸಾನ್ ಮ್ಯಾಗ್ನೈಟ್ ಕಾರು ಅತ್ಯಂತ ಆಕರ್ಷಕ ವಿನ್ಯಾಸ ಹೊಂದಿದೆ. ಫ್ರಂಟ್ ಗ್ರಿಲ್, ಹಿಂಭಾಗದಲ್ಲಿ ಟೈಲ್ ಲೈಟ್, ಬಂಪರ್ ಸೇರಿದಂತೆ ಕಾರಿನ ಅಂದ ಮತ್ತಷ್ಟು ಹೆಚ್ಚಿದೆ. ಇಂಟಿಯರ್ ಕೂಡ ಆಕರ್ಷಕವಾಗಿದೆ. 6 ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ಹೈಡ್ರಾಲಿಕ್ ಬ್ರೇಕ್ ಅಸಿಸ್ಟ್, ಎಬಿಸಿ, ಇಬಿಡಿ ಸೇರಿದಂತೆ 55ಕ್ಕೂ ಹೆಚ್ಚು ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿದೆ.  

ಹಬ್ಬದ ಆಫರ್, ನೆಕ್ಸಾನ್ ಸೇರಿ 13 ಎಸ್‌ಯುವಿ ಕಾರಿನ ಮೇಲೆ ಗರಿಷ್ಠ 1.5 ಲಕ್ಷ ರೂ ಡಿಸ್ಕೌಂಟ್!
 

PREV
Read more Articles on
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ