ಟೊಯೋಟಾ ರೊಮಿಯಾನ್ ಲಿಮಿಡೆಟ್ ಎಡಿಶನ್ ಕಾರು ಬಿಡುಗಡೆಯಾಗಿದೆ. ದೀಪಾವಳಿ ಹಬ್ಬದ ವಿಶೇಶ ಕಾರು ಇದಾಗಿದ್ದು, ಕೆಲ ಆಫರ್ ಕೂಡ ನೀಡಲಾಗಿದೆ. 26.11 ಕಿ.ಮಿ ಮೈಲೇಜ್ ನೀಡಬಲ್ಲ ಈ ಕಾರಿನ ಬುಕಿಂಗ್ ಆರಂಭಗೊಂಡಿದೆ.
ನವದೆಹಲಿ(ಅ.21) ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಟೊಯೋಟಾ ಇದೀಗ ರೊಮಿಯಾನ್ ಲಿಮಿಟೆಡ್ ಎಡಿಶನ್ ಕಾರು ಲಾಂಚ್ ಮಾಡಿದೆ. ಹಬ್ಬದ ಕೊಡುಗೆಯಾಗಿ ಬರೋಬ್ಬರಿ 20,608 ರೂಪಾಯಿ ಮೌಲ್ಯದ ಟಿಜಿಎ ಪ್ಯಾಕೇಜ್ ಉಚಿತವಾಗಿ ನೀಡಲಾಗುತ್ತಿದೆ. ಹೀಗಾಗಿ ಕಡಿಮೆ ಬೆಲೆಗೆ ರೊಮಿಯಾನ್ ಕಾರು ಖರೀದಿಸಲು ಸಾಧ್ಯವಿದೆ. ಸೀಮಿತ ಅವಧಿಗೆ ಮಾತ್ರ ಲಭ್ಯವಿರುವ ಈ ಕಾರಿನ ಬುಕಿಂಗ್ ಆರಂಭಗೊಂಡಿದೆ. ಆನ್‌ಲೈನ್ ಹಾಗೂ ಡೀಲರ್‌ಶಿಪ್ ಮೂಲಕ ಬುಕಿಂಗ್ ಮಾಡಿಕೊಳ್ಳಬಹುದು.
ರೊಮಿಯಾನ್ ಲಿಮಿಟೆಡ್ ಎಡಿಶನ್ ಯಾವುದೇ ಮಾಡೆಲ್ ಕಾರು ಖರೀದಿಸಿದರೂ ನಿಮಗೆ 20,608 ರೂಪಾಯಿ ಮೌಲ್ಯದ ಡೀಲರ್ ಟಿಜಿಎ ಪ್ಯಾಕೇಜ್ ಸಿಗಲಿದೆ. ಈ ಆ್ಯಕ್ಸಸರಿ ಪ್ಯಾಕೇಜ್ ಕಾರಿನ ಸೌಂದರ್ಯ ಮತ್ತಷ್ಟು ಹೆಚ್ಚಿಸಲಿದೆ. ಜೊತೆಗೆ ಆರಾಮದಾಯಕ ಹಾಗೂ ನೆಚ್ಚಿನ ಆ್ಯಕ್ಸಸರಿಗಳು ಉಚಿತವಾಗಿ ಸಿಗಲಿದೆ.
ಫೆಸ್ಟಿವಲ್ ಲಿಮಿಟೆಡ್ ಎಡಿಶನ್ ಟೊಯೋಟಾ ಗ್ಲಾಂಜಾ ಕಾರು ಲಾಂಚ್, 20,000 ರೂ ಆಫರ್!
ರೊಮಿಯಾನ್ ಕಾರು 1.5 ಪೆಟ್ರೋಲ್ ಎಂಜಿನ್ ಹಾಗೂ ಸಿಎನ್‌ಜಿ ವೇರಿಯೆಂಟ್‌ನಲ್ಲಿ ಲಭ್ಯವಿದೆ. ಪೆಟ್ರೋಲ್ ಕಾರು ಪ್ರತಿ ಲೀಟರ್‌ಗೆ 20.51 ಕಿ.ಮೀ ಮೈಲೇಜ್ ನೀಡಿದರೆ, ಸಿಎನ್‌ಜಿ ಕಾರು ಪ್ರತಿ ಕೆಜಿಗೆ 26.11 ಕಿ.ಮಿ ಮೈಲೇಜ್ ನೀಡಲಿದೆ. ಪರಿಸರ ಸ್ನೇಹಿ ಕಾರಾಗಿ ಗುರುತಿಸಿಕೊಂಡಿದೆ. ರೊಮಿಯಾನ್ ಎಂಪಿವಿ ಕಾರಾಗಿದ್ದು, ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ಹಾಗೂ ವಿಶಾಲದ ಇಂಟಿರಿಯರ್ ನೀಡಲಿದೆ. ಹೀಗಾಗಿ ದೂರ ಪ್ರಯಾಣವನ್ನು ಯಾವುದೇ ಆಯಾಸವಿಲ್ಲದೆ ಸಾಗಬಹುದು. ಟೊಯೋಟಾದ ಸ್ಟಾಂಡರ್ಡ್ ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲೂ ಲಭ್ಯವಿದೆ.
undefined
5 ಸ್ಪೀಡ್ ಮಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿದೆ. ಎಂಪಿವಿ ನಿಯೋ ಡ್ರೈವ್ (ಐ ಎಸ್ ಜಿ) ತಂತ್ರಜ್ಞಾನ ಮತ್ತು ಇ-ಸಿಎನ್‌ಜಿ ತಂತ್ರಜ್ಞಾನ ಹೊಂದಿರುವ ಕೆ ಸೀರೀಸ್ ಸರಣಿಯ 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ನೂತನ ರೊಮಿಯಾನ್ ಕಾರು ಉತ್ತಮ ಪರ್ಫಾಮೆನ್ಸ್ ನೀಡಲಿದೆ.
ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ನ ಟಿಜಿಎ ಪ್ಯಾಕೇಜ್ ವೈಶಿಷ್ಟ್ಯಗಳು:
ಬ್ಯಾಕ್ ಡೋರ್ ಗಾರ್ನಿಶ್
ಮಡ್ ಫ್ಲಾಪ್ಸ್
ರೇರ್ ಬಂಪರ್ ಗಾರ್ನಿಶ್
ಡಿಲಕ್ಸ್ ಕಾರ್ಪೆಟ್ ಮ್ಯಾಟ್ (ಆರ್ ಎಚ್ ಡಿ)
ಹೆಡ್ ಲ್ಯಾಂಪ್ ಗಾರ್ನಿಶ್
ನಂಬರ್ ಪ್ಲೇಟ್ ಗಾರ್ನಿಶ್
ಡೋರ್ ವೈಸರ್ - ಕ್ರೋಮ್
ರೂಫ್ ಎಡ್ಜ್ ಸ್ಪಾಯ್ಲರ್
ಬಾಡಿ ಸೈಡ್ ಮೋಲ್ಡಿಂಗ್ ಗಾರ್ನಿಶ್ ಫಿನಿಶ್
ಕುಟುಂಬ ಸಮೇತ ಪ್ರಯಾಣಿಸಲು ಲಭ್ಯವಿರುವ ಟಾಪ್ 5 ಕಡಿಮೆ ಬೆಲೆಯ 7 ಸೀಟರ್ ಕಾರು!
ಆರಾಮದಾಯಕ ಮತ್ತು ಉತ್ತಮ ಡ್ರೈವಿಂಗ್ ಅನುಭವವನ್ನು ಈ ಕಾರು ಒದಗಿಸುತ್ತದೆ. ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆಯೇ ನಮ್ಮ ಗ್ರಾಹಕರಿಗೆ ವಿಶೇಷ ಸಂತೋಷಕರ ಅನುಭವ ಒದಗಿಸುವ ನಮ್ಮ ಉದ್ದೇಶಕ್ಕೆ ಫೆಸ್ಟಿವಲ್ ಎಡಿಶನ್ ಕಾರು ಬಿಡುಗಡೆ ಮಾಡಿದ್ದೇವೆ ಎಂದು ಟೊಯಟಾ ಮೋಟಾರ್ ಸೇಲ್ಸ್‌ನ ಶಬರಿ ಮನೋಹರ್ ಹೇಳಿದ್ದಾರೆ.