ಫೆಸ್ಟಿವಲ್ ಲಿಮಿಟೆಡ್ ಎಡಿಶನ್ ಟೊಯೋಟಾ ಗ್ಲಾಂಜಾ ಕಾರು ಲಾಂಚ್, 20,000 ರೂ ಆಫರ್!

By Chethan Kumar  |  First Published Oct 18, 2024, 7:28 PM IST

ದೀಪಾವಳಿ ಹಬ್ಬಕ್ಕೂ ಮೊದಲು ಟೋಯೋಟಾ ಫೆಸ್ಟಿವಲ್ ಎಡಿಶನ್ ಟೊಯೋಟಾ ಗ್ಲಾಂಜಾ ಕಾರು ಬಿಡುಗಡೆ ಮಾಡಿದೆ. ವಿಶೇಷ ಅಂದರೆ 20,000 ರೂಪಾಯಿ ಆಫರ್ ಕೂಡ ಘೋಷಿಸಿದೆ.


ನವದೆಹಲಿ(ಅ.18) ಭಾರತದಲ್ಲಿ ಟೊಯೋಟಾ ಕಾರುಗಳು ಹೆಚ್ಚು ಜನಪ್ರಿಯವಾಗಿದೆ. ಈ ಪೈಕಿ ಕ್ರಾಸ್ ಬ್ಯಾಡ್ಜ್ ಮೂಲಕ ಬಿಡುದಡೆಯಾಗಿರುವ ಟೊಯೋಟಾ ಗ್ಲಾಂಜಾ ಪ್ರಿಮಿಯಂ ಹ್ಯಾಚ್‌ಬ್ಯಾಕ್ ಕಾರು ಇದೀಗ ಹೊಸ ತಂತ್ರಜ್ಞಾನ, ಹೆಚ್ಚುವರಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಇದೀಗ ಟೊಯೋಟಾ ಫೆಸ್ಟಿವಲ್ ಎಡಿಶನ್ ಗ್ಲಾಂಜಾ ಕಾರು ಬಿಡುಗಡೆ ಮಾಡಿದೆ. ಇದು ಲಿಮಿಟೆಡ್ ಎಡಿಶನ್ ಕಾರಾಗಿದೆ. ಹೊಸ ಕಾರಿಗೆ 20,567 ರೂಪಾಯಿ ಆಫರ್ ಕೂಡ ಘೋಷಿಸಿದೆ.

ಹೊಸ ಗ್ಲಾಂಜಾ ಪ್ರಿಮಿಯಂ ಕಾರನ್ನು ಕೇವಲ 11,000 ರೂಪಾಯಿಗೆ ಬುಕ್ ಮಾಡಿಕೊಳ್ಳಲು ಸಾಧ್ಯವಿದೆ. ಈಗಾಗಲೇ ಆನ್‌ಲೈನ್ ಹಾಗೂ ಡೀಲರ್‌ಶಿಪ್ ಬುಕಿಂಗ್ ಆರಂಭಗೊಂಡಿದೆ. ಹಬ್ಬದ ಆಫರ್ ಮೂಲಕ ಬುಕಿಂಗ್ ಮಾಡುವ ಗ್ರಾಹಕರಿಗೆ 20,567 ರೂಪಾಯಿ ಆ್ಯಕ್ಸಸರಿ ಹಾಗೂ ಇತರ ಕೊಡುಗೆ ಉಚಿತವಾಗಿ ಸಿಗಲಿದೆ. 

Latest Videos

undefined

ಟೊಯೋಟಾ ಇನ್ನೋವಾ ಕ್ರಿಸ್ಟಾ GX+ ಕಾರು ಲಾಂಚ್, ಖರೀದಿಸುವ ಗ್ರಾಹಕರಿಕೆ ಆಫರ್!

ಹೊಸ ಗ್ಲಾಂಜಾ ಲಿಮಿಟೆಡ್ ಎಡಿಶನ್ ಕಾರಿನ ಬೆಲೆ 6.86 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ. ನೂತನ ಗ್ಲಾಂಜಾ ಕಾರು, ಪ್ರಿಮಿಯಂ ಕ್ರೋಮ್ ಫಿನೀಶಿಂಗ್ ಮೂಲಕ ಅತ್ಯಾಕರ್ಷಕವಾಗಿದೆ. ಬ್ಲ್ಯಾಕ್ ಬಾಡಿ ಸೈಡ್ ಮೋಲ್ಡಿಂಗ್ ಕೂಡ ನೀಡಲಾಗಿದೆ. ಇದರಿಂದ ಕಾರಿನ ಅಂದ ಮತ್ತಷ್ಟು ಹೆಚ್ಚಾಗಿದೆ. 3ಡಿ ಫ್ಲೋರ್ ಮ್ಯಾಟ್, ಡೋರ್ ವೈಸರ್ ಪ್ರಿಮಿಯಂ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ.  ರೇರ್ ಬಂಪರ್, ಫೆಂಡರ್ ಮತ್ತು ರೇರ್ ರಿಫ್ಲೆಕ್ಟರ್ ಹಾಗೂ ವೆಲ್ಕಮ್ ಡೋರ್ ಲ್ಯಾಂಪ್‌‌ನಿಂದ ಆಕರ್ಷಕ ಲುಕ್ ನೀಡಿದೆ. 

ಹಬ್ಬದ ಆಫರ್ ಭಾಗವಾಗಿ ಟೊಯೋಟಾ ಗ್ಲಾಂಜಾ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಕಾರು ಖರೀದಿಸುವ ಗ್ರಾಹಕರು 2024ರ ಅಕ್ಟೋಬರ್ 31ರವರೆಗೆ ಟಿಜಿಎ ಪ್ಯಾಕೇಜ್‌ ಗಳನ್ನು ಉಚಿತವಾಗಿ ಪಡೆಯುತ್ತಾರೆ. ಜೊತೆಗೆ ಪ್ರತೀ ಆ್ಯಕ್ಸಸರಿಯ್ನು ಡೀಲರ್‌ ಶಿಪ್‌ ಗಳಲ್ಲಿರುವ ಪ್ರಮಾಣೀಕೃತ ಟೊಯೋಟಾ ತಂತ್ರಜ್ಞರು ಸೂಕ್ತ ರೀತಿಯಲ್ಲಿ ಅಳವಡಿಸುತ್ತಾರೆ. ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಜನಪ್ರಿಯ ಟೊಯೋಟಾ ಮಾಡೆಲ್ ಗೆ ಹಬ್ಬದ ಸಂಭ್ರಮದ ಸ್ಪರ್ಶ ನೀಡಿದೆ. ಜೊತೆಗೆ ವಾಹನಕ್ಕೆ ವಿಸ್ತೃತ ವಾರಂಟಿಗಳು, ನಿಜವಾದ ಟೊಯೋಟಾ ಬಿಡಿಭಾಗಗಳು ಮತ್ತು ಟೊಯೋಟಾದ ಜನಪ್ರಿಯ ಮಾರಾಟ ನಂತರ ಸರ್ವೀಸ್ ನಂತಹ ಅತ್ಯುತ್ತಮ ಪ್ರಯೋಜನಗಳನ್ನು ಒದಗಿಸಲಾಗುತ್ತದೆ. ಇವೆಲ್ಲವನ್ನು ಗ್ರಾಹಕರ ವಿವಿಧ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ.  

ಕೇವಲ 11,000 ರೂಗೆ ಬುಕ್ ಮಾಡಿ ಟೊಯೋಟಾ ರುಮಿಯಾನ್ G-AT ಕಾರು!

ಗ್ಲಾಂಜಾ ಮೊದಲಿನಿಂದಲೂ ತನ್ನ ಆಕರ್ಷಕ ಸ್ಪೋರ್ಟಿ ವಿನ್ಯಾಸ, ಅತ್ಯಾಧುನಿಕ ಫೀಚರ್ ಗಳು ಮತ್ತು ಉತ್ತಮ ಕಾರ್ಯಕ್ಷಮತೆಯಿಂದ ಮೆಚ್ಚುಗೆ ಪಡೆದುಕೊಂಡಿದೆ. ಈ ಲಿಮಿಟೆಡ್ ಎಡಿಷನ್ ಮೂಲಕ ನಾವು ಮತ್ತಷ್ಟು ಜನಪ್ರೀತಿ ಗಳಿಸುವ ನಿರೀಕ್ಷೆಯಲ್ಲಿದ್ದೇವೆ ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟಾರ್  ಸೇಲ್ಸ್ ಸರ್ವೀಸ್‌ನ ಶಬರಿ ಮನೋಹರ್ ಹೇಳಿದ್ದಾರೆ.
 

click me!