ಮೊದಲ ನೋಟದಲ್ಲೇ ಲವ್ ಖಚಿತ, ಅದ್ಭುತ ಎರಡು ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಅನಾವರಣ ಮಾಡಿದ ಎಂಜಿ

Published : Jul 10, 2026, 07:16 PM IST
MG Unveils Two Stunning Electric Concept Cars

ಸಾರಾಂಶ

ಎಂಜಿ ಮೋಟಾರ್ ಮಹತ್ತರ ಮೈಲಿಗಲ್ಲು ನಿರ್ಮಿಸಿದೆ. ರೇಸಿಂಗ್ ಇತಿಹಾಸ ಹಾಗೂ ಮುಂಬರುವ ಅತ್ಯಾಧುನಿಕ ಇವಿ ಮಿಶ್ರಣದ ಎರಡು ಕಾನ್ಸೆಪ್ಟ್ ಇವಿ ಕಾರು ಅನಾವಗಣಗೊಳಿಸಿದೆ. ಮೊದಲ ನೋಟದಲ್ಲೇ ಲವ್ ಖಚಿತ

ನವದೆಹಲಿ (ಜು.10) ಎಂಜಿ ಮೋಟಾರ್ಸ್ ಭಾರತದಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡುತ್ತಲೇ ಇದೆ. ಹೆಕ್ಟರ್ ಮೂಲಕ ಭಾರತಕ್ಕೆ ಕಾಲಿಟ್ಟ ಎಂಜಿ ಮೋಟಾರ್ಸ್ ಇದೀಗ ಗಟ್ಟಿಯಾಗಿ ನೆಲೆಯೂರಿದೆ. ಬ್ರಿಟಿಷ್ ಆಟೋಮೊಬೈಲ್ ಕಂಪನಿ ಎಂಜಿ ಇದೀಗ ಅತ್ಯಾಧುನಿಕ, ಹಾಗೂ ಅತ್ಯಂತ ಆಕರ್ಷಕ ಎರಡು ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಅನಾವರಣ ಮಾಡಿದೆ. ರೇಸಿಂಗ್ ಇತಿಹಾಸ ಹಾಗೂ ಅತ್ಯಾಧುನಿಕ ಇವಿ ಮಿಶ್ರಣದ ಕಾರು ಇದಾಗಿದೆ. ಎಂಜಿ ಗೋ ಹಾಗೂ ಎಂದಿ ಸೈಬರ್ ಕಾನ್ಸೆಪ್ಟ್ ಎಂಬ ಎರಡು ಕಾರುಗಳನ್ನು ಅನಾವರಣ ಮಾಡಲಾಗಿದೆ.

ಎಂಜಿ ಗೋ ಹಾಗೂ ಎಂದಿ ಸೈಬರ್ ಕಾನ್ಸೆಪ್ಟ್

ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಹೊಸ ಅಲೆ ಸೃಷ್ಟಿಯಾಗಿದೆ. ಎಂಜಿ ಗೋ ಕಾರು ಬಿ ಸೆಗ್ಮೆಂಟ್ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಕಾರು. ದು 20ನೇ ಶತಮಾನದ ಮಧ್ಯಭಾಗದಲ್ಲಿ ಜಗತ್ತಿನ ಗಮನ ಸೆಳೆದಿದ್ದ ಎಂಜಿ ಸಂಸ್ಥೆಯ ಅತ್ಯಂತ ಸುಂದರ ಹಾಗೂ ಐಕಾನಿಕ್ ಕಾರು ಮಾದರಿಯಾದ 'ಎಂಜಿಬಿ ಜಿಟಿ' (MGB GT) ಇಂದ ಸ್ಫೂರ್ತಿ ಪಡೆದ ರೆಟ್ರೋ-ಫ್ಯೂಚರಿಸ್ಟಿಕ್ ವಿನ್ಯಾಸವನ್ನು ಹೊಂದಿದೆ. ಇನ್ನು ಎಂಜಿಯ ಕ್ರೀಡಾ ಪರಂಪರೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು 'ಎಂಜಿ ಸೈಬರ್ ಕಾನ್ಸೆಪ್ಟ್' (MG Cyber Concept) ಎಂಬ ಬೃಹತ್ ಹಾಗೂ ಹೈ-ಪರ್ಫಾಮೆನ್ಸ್ ಎಲೆಕ್ಟ್ರಿಕ್ ಎಸ್‌ಯುವಿ (SUV) ಮಾದರಿಯನ್ನು ಅನಾವರಣಗೊಳಿಸಲಾಗಿದೆ.

ಕಾಂಪ್ಯಾಕ್ಟ್ ಇವಿ ಹ್ಯಾಚ್‌ಬ್ಯಾಕ್

ಕಾಂಪ್ಯಾಕ್ಟ್ ಬಿ-ಸೆಗ್ಮೆಂಟ್ ಬ್ಯಾಟರಿ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಮಾದರಿ ಎಂಜಿ ಗೋ ಕಾರು ಲಂಡನ್‌ನ ಎಂಜಿ ಡಿಸೈನ್ ಸೆಂಟರ್‌ನಲ್ಲಿ ವಿನ್ಯಾಸ ಮಾಡಲಾಗಿದೆ. ಇಂದಿನ ತೀವ್ರ ಪೈಪೋಟಿಯ ಮಾರುಕಟ್ಟೆಯಲ್ಲಿ ಎದ್ದು ಕಾಣುವಂತಹ ಅತ್ಯಾಧುನಿಕ ಹಾಗೂ ಭಾವನಾತ್ಮಕವಾಗಿ ಗ್ರಾಹಕರನ್ನು ಸೆಳೆಯುವ ಆಕರ್ಷಕ ಶೈಲಿಯನ್ನು ಇದಕ್ಕೆ ನೀಡಲಾಗಿದೆ.ಎಂಜಿ ಗೋ ಕಾನ್ಸೆಪ್ಟ್ ಕಾರು ಕೇವಲ ಹಳೆಯ ಶೈಲಿಯ ನಕಲಲ್ಲ, ಬದಲಿಗೆ ಇಂದಿನ ಆಧುನಿಕ ವಾಹನ ಲೋಕಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುವ ವಿಶಿಷ್ಟ ಗುರುತನ್ನು ಹೊಂದಿದೆ.

ಎಂಜಿ ಸೈಬರ್ ಕಾನ್ಸೆಪ್ಟ್

ಎಂಜಿ ಸಂಸ್ಥೆಯ ಫ್ಲ್ಯಾಗ್‌ಶಿಪ್ ಆವೃತ್ತಿಯಾಗಿ ಮೂಡಿಬಂದಿರುವ 'ಎಂಜಿ ಸೈಬರ್ ಕಾನ್ಸೆಪ್ಟ್', ಭವಿಷ್ಯದ ಡಿ-ಸೆಗ್ಮೆಂಟ್ (D-Segment) ಮಾದರಿಯ ಬೃಹತ್ ಎಲೆಕ್ಟ್ರಿಕ್ ಎಸ್‌ಯುವಿ ಕಾರಾಗಿದೆ. ಭೂಮಿಯ ಮೇಲೆ ಅತಿ ವೇಗದ ಮಿತಿಯನ್ನೇ ಧೂಳೀಪಟ ಮಾಡಿದ್ದ ಎಂಜಿಯ ಪೌರಾಣಿಕ ಲ್ಯಾಂಡ್ ಸ್ಪೀಡ್ ರೆಕಾರ್ಡ್ ಕಾರ್ 'EX181' ಮತ್ತು ಇಂದಿನ ಆಧುನಿಕ ಸುರಕ್ಷತಾ ತಂತ್ರಜ್ಞಾನ ಹಾಗೂ ಹೊಸ ಆವಿಷ್ಕಾರಗಳಿಂದ ಸ್ಫೂರ್ತಿ ಪಡೆದು ಇದನ್ನು ಸಿದ್ಧಪಡಿಸಲಾಗಿದೆ. ಇದು ಆಧುನಿಕ ಗ್ರಾಹಕರು ಬಯಸುವ ವಿಶಾಲವಾದ ಜಾಗ ಮತ್ತು ಪ್ರಾಯೋಗಿಕತೆಯೊಂದಿಗೆ ಸ್ಪೋರ್ಟ್ಸ್ ಕಾರುಗಳಲ್ಲಿ ಮಾತ್ರ ಸಿಗುವ ಅದ್ಭುತ ಡ್ರೈವಿಂಗ್ ಅನುಭವ ನೀಡಲಿದೆ.

ಭರ್ಜರಿ ಪರ್ಫಾಮೆನ್ಸ್ ನೀಡುವುದು ಈ ಸೈಬರ್ ಕಾನ್ಸೆಪ್ಟ್ ಕಾರಿನ ಮುಖ್ಯ ಉದ್ದೇಶವಾಗಿದೆ. ನಗರದ ಸಂಚಾರ, ಸುದೀರ್ಘ ಹೈವೇ ಪ್ರಯಾಣ ಸೇರಿದಂತೆ ಯಾವುದೇ ರಸ್ತೆಗೂ ಇದು ಸೈ ಎನಿಸಿಕೊಳ್ಳಲಿದೆ. ಇನ್ನು ಹೆಚ್ಚು ಸ್ಟೈಲೀಶ್ ಜೊತೆಗೆ ಐಷಾರಾಮಿತನ ನೀಡಲಿದೆ.

PREV
Read more Articles on
click me!

Recommended Stories

ಕುಟುಂಬದ ಜೊತೆ ನಾಯಿಯ ಆರಾಮದಾಯಕ ಪ್ರಯಾಣಕ್ಕಾಗಿ ಹೊಸ ಕಾರು ಅನಾವರಣ, ಇದು ಡಾಗ್ ಎಡಿಶನ್
ಡಸ್ಟರ್, ಕ್ರೆಟಾ ಸೇರಿ SUV ಕಾರುಗಳಿಗೆ ನಡುಕ, ಹೊಸ ನಿಸಾನ್ ಟೆಕ್ಟಾನ್ ಖರೀದಿಗೆ ಇದೆ ಮೂರು ಕಾರಣ