ಡಸ್ಟರ್, ಕ್ರೆಟಾ ಸೇರಿ SUV ಕಾರುಗಳಿಗೆ ನಡುಕ, ಹೊಸ ನಿಸಾನ್ ಟೆಕ್ಟಾನ್ ಖರೀದಿಗೆ ಇದೆ ಮೂರು ಕಾರಣ

Published : Jul 10, 2026, 05:20 PM IST
Nissan Tecton SUV Hits the Market

ಸಾರಾಂಶ

ನಿಸಾನ್ ಹೊಚ್ಚ ಹೊಸ ಟೆಕ್ಟಾನ್ ಕಾರು ಬಿಡುಗಡೆ ಮಾಡಿದೆ. ಹ್ಯುಂಡೈ ಕ್ರೆಟಾ, ರೆನಾಲ್ಟ್ ಡಸ್ಟರ್ ಸೇರಿದಂತೆ ಹಲವು ಎಸ್‌ಯುವಿ ಕಾರುಗಳಿಗೆ ಠಕ್ಕರ್ ನೀಡಿ ನಿಸಾನ್ ಟೆಕ್ಟಾನ್ ಕಾರು ಬಿಡುಗಡೆಯಾಗಿದೆ. ಅಗ್ಗದ ಬೆಲೆ, ಜೊತೆಗೆ ಹಲವು ವಿಶೇಷಗಳಿಂದ ಇದೀಗ ಈ ಕಾರಿನ ಬುಕಿಂಗ್ ದಾಖಲೆ ಬರೆಯುವ ಸಾಧ್ಯತೆ ಇದೆ.

ಬೆಂಗಳೂರು (ಜು.10) ನಿಸಾನ್ ಹೊಚ್ಚ ಹೊಸ ಟೆಕ್ಟಾನ್ ಎಸ್‌ಯುವಿ ಕಾರು ಬಿಡುಗಡೆ ಮಾಡಿದೆ. ಭಾರತದ ಮಾರುಕಟ್ಟೆಯಲ್ಲಿ ಎಸ್‌ಯುವಿ ಕಾರುಗಳ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಇದೀಗ ನಿಸಾನ್ ಟೆಕ್ಟಾನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೊಸ ಟೆಕ್ಟಾನ್ ಕಾರಿನ ಬೆಲೆ 10.40 ಲಕ್ಷ ರೂಪಾಯಿಯಿಂದ ಆರಂಭಗೊಳ್ಳಲಿದ್ದು, ಗರಿಷ್ಠ 14.99 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಭಾರತದಲ್ಲೇ ಉತ್ಪಾದನೆಗೊಂಡಿರುವ ನಿಸಾನ್ ಟೆಕ್ಟಾನ್ ಇದೀಗ ದಾಖಲೆ ಬರೆಯಲು ಸಜ್ಜಾಗಿದೆ.

ಟೆಕ್ಟಾನ್ ಕಾರಿನ ವಿಶೇಷತೆ

ಈ ಕಾರಿನ ಎಲ್ಲ ವೆರಿಯೆಂಟ್‌ಗಳಲ್ಲಿ ಟರ್ಬೊ ಎಂಜಿನ್‌ ಲಭ್ಯವಿದೆ. ಅಲ್ಲದೆ 280 ಎನ್‌ಎಂ ಟರ್ಬೊ ಸಾಮರ್ಥ್ಯ, ಗೂಗಲ್‌ನ ಬಿಲ್ಟ್‌-ಇನ್‌ ಸಂಪರ್ಕ, 700 ಲೀಟರ್‌ ಬೂಟ್‌ ಸಾಮರ್ಥ್ಯ ಹೊಂದಿದೆ. ವಿಶೇಷ ಅಂದರೆ ಟೆಕ್ಟಾನ್‌ ಕಾರನ್ನು ಭಾರತದಲ್ಲಿ ಉತ್ಪಾದನೆ ಮಾಡಲಾಗಿದ್ದು ಜಗತ್ತಿನ ಹಲವು ದೇಶಗಳಿಗೆ ಭಾರತದಿಂದಲೇ ರಫ್ತಾಗಲಿದೆ. ವಾಹನದ ಗ್ರೌಂಡ್‌ ಕ್ಲಿಯರೆನ್ಸ್ 212 ಎಂ.ಎಂ.ನಷ್ಟು ಇದೆ. ನಗರಗಳಲ್ಲಿ, ಹೆದ್ದಾರಿಗಳಲ್ಲಿ ಹಾಗೂ ಸವಾಲಿನ ರಸ್ತೆಗಳಲ್ಲಿ ವಿಶ್ವಾಸದಿಂದ ಚಾಲನೆ ಮಾಡಲು ಅನುಕೂಲವಾಗುವಂತ ಇದರ ವಿನ್ಯಾಸವನ್ನು ರೂಪಿಸಲಾಗಿದೆ. ಈ ವಾಹನವು ಈ ವರ್ಗದಲ್ಲೇ ಅತ್ಯಧಿಕ ಎನ್ನುವ 700 ಲೀಟರ್‌ ಬೂಟ್‌ ಸ್ಪೇಸ್‌ ಹೊಂದಿದೆ. ಗ್ರಾಹಕರು ಟರ್ಬೊ ಟಿ160 ಅಥವಾ ಟಿ280 ಎಂಜಿನ್‌ ಆಯ್ಕೆ ಪಡೆದುಕೊಳ್ಳಬಹುದು. ಟಿ280 ಎಂಜಿನ್‌ನಲ್ಲಿ 163 ಪಿಎಸ್‌ ಶಕ್ತಿ ಹಾಗೂ 280 ಎನ್‌ಎಂ ಟಾರ್ಕ್‌ ಸಿಗುತ್ತದೆ.

ಟೆಕ್ಟಾನ್ ಕಾರಿನ ಮೈಲೇಜ್

ಟಿ160 ಎಂಜಿನ್‌ ನಿತ್ಯದ ಬಳಕೆಗಳಿಗೆ ಉಪಯುಕ್ತ ಆಗಿರುವಂತೆ ರೂಪಿಸಲಾಗಿದೆ. ಈ ಕಾರು ಪ್ರತಿ ಲೀಟರಿಗೆ 19.4 ಕಿ.ಮೀ ಮೈಲೇಜ್ ನೀಡಲಿದೆ. ಟಿ280 ಎಂಜಿನ್‌ ಲೀಟರಿಗೆ 18.5 ಕಿ.ಮೀ ಮೈಲೇಜ್ ನೀಡಲಿದೆ. ಕಾರಿನ ಎರಡು ಡಿಜಿಟಲ್‌ ಸ್ಕ್ರೀನ್‌ ನೀಡಲಾಗಿದೆ. ಟೆಕ್‌-ಲಿಂಕ್‌ ಎಚ್‌ಡಿ ಇನ್ಫೋಟೇನ್ಮೆಂಟ್‌ ವ್ಯವಸ್ಥೆ ಇದೆ. ಮಾಹಿತಿ, ಮನರಂಜನೆ ಹಾಗೂ ವಾಹನ ಕುರಿತಾದ ಮಾಹಿತಿಗಳು ಒಂದೆಡೆ ಲಭಿಸುತ್ತವೆ. ಗೂಗಲ್‌ ಮ್ಯಾಪ್‌, ಗೂಗಲ್‌ ಅಸಿಸ್ಟೆಂಟ್‌ ಮತ್ತು ಗೂಗಲ್‌ ಪ್ಲೇ ಲಭ್ಯವಿದೆ. ನ್ಯಾವಿಗೇಷನ್‌, ಸಂಗೀತ, ಮನರಂಜನೆ ಸೇರಿದಂತೆ 200ಕ್ಕೂ ಹೆಚ್ಚು ಕನೆಕ್ಟೆಡ್ ಫೀಚರ್ಸ್ ಪಡೆಯಬಹುದು.ಕಾರಿನಲ್ಲಿ 360 ಡಿಗ್ರಿ ಪಾರ್ಕಿಂಗ್‌ ಕ್ಯಾಮೆರಾ ಸೌಲಭ್ಯವಿದೆ.

ಸುರಕ್ಷತೆ ಹಾಗೂ ಲಗೇಜ್ ಸ್ಪೇಸ್

ಪನೊರಾಮಿಕ್‌ ಸನ್‌ರೂಫ್‌, ಕ್ಲೈಮೇಟ್‌ ಕಂಟ್ರೋಲ್‌ ಮತ್ತು ಡ್ಯುಯಲ್‌-ಜೋನ್‌ ಹವಾನಿಯಂತ್ರಣ ವ್ಯವಸ್ಥೆ ಇದರಲ್ಲಿದೆ. ಕಾರಿನ ಹಿಂಬದಿಯಲ್ಲಿನ ಲಗೇಜ್‌ ಇಡುವ ಸ್ಥಳವು ಕಡಿಮೆ ಎತ್ತರದಲ್ಲಿದ್ದು, ವಸ್ತುಗಳನ್ನು ಇರಿಸಲು ಹಾಗೂ ಅಲ್ಲಿಂದ ತೆಗೆಯಲು ಸುಲಭವಾಗುವಂತಿದೆ. ಎಲ್ಲಾ ವೇರಿಯೆಂಟ್‌ಗಳಲ್ಲಿ ಆರು ಏರ್‌ಬ್ಯಾಗ್‌ಗಳು ಇರಲಿವೆ. ಅಲ್ಲದೆ ನಲವತ್ತಕ್ಕೂ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳು ಇರಲಿವೆ. ಕಾರಿನ ಬುಕಿಂಗ್‌ ಆರಂಭಗೊಂಡಿದೆ.

ಈ ವಾಹನದ ಒಳಾಂಗಣ ವಿನ್ಯಾಸವು ಮೂರು ಬಣ್ಣ ಹೊಂದಿದೆ. ವೆಂಟಿಲೇಟೆಡ್‌ ಸೀಟ್‌ಗಳನ್ನು ನೀಡಲಾಗಿದೆ. ಪ್ರತಿ ಬಾರಿ ಪ್ರಯಾಣ ಹೆಚ್ಚಿನ ಆರಾಮದಾಯಕವಾಗಿರುತ್ತದೆ. ವಾಹನದ ಒಳಾಂಗಣವನ್ನು ಗ್ರಾಹಕರ ಮಹತ್ವಾಕಾಂಕ್ಷೆಗಳಿಗೆ ಸರಿಹೊಂದುವಂತೆ ಪ್ರೀಮಿಯಂ ಆಗಿ ರೂಪಿಸಲಾಗಿದೆ.

ಹೊಸ ಟೆಕ್ಟಾನ್‌ ಕಾರು ಕೇವಲ ಒಂದು ಕಾಂಪ್ಯಾಕ್ಟ್‌ ಎಸ್‌ಯುವಿ ಮಾತ್ರವೇ ಅಲ್ಲ. ಇದು ಕಂಪನಿಯ ಬ್ರ್ಯಾಂಡ್‌ ಹೆಸರನ್ನು ಬಲಪಡಿಸುವ ಕಾರಾಗಿದೆ ಎಂದು ನಿಸನ್ ಪ್ರಸಿಡೆಂಟ್ ಮಸ್ಸಿಮಿಲಿಯಾನೊ ಮೆಸ್ಸಿನಾ ಹೇಳಿದ್ದಾರೆ. ಗ್ರಾಹಕರಿಗೆ ಹೆಚ್ಚಿನ ವೈಶಿಷ್ಟ್ಯಗಳು ಇರುವ, ಪ್ರೀಮಿಯಂ ಗುಣಮಟ್ಟದ ಹಾಗೂ ತಂತ್ರಜ್ಞಾನ ಆಧಾರಿತವಾದ ವಾಹನವನ್ನು ಒದಗಿಸುವ ಉದ್ದೇಶದಿಂದ ಇದನ್ನು ತಯಾರು ಮಾಡಲಾಗಿದೆ. ಟೆಕ್ಟಾನ್‌ ವಾಹನವು ಬಹಳ ಬೋಲ್ಡ್‌ ಆಗಿರುವ ವಿನ್ಯಾಸವನ್ನು, ಪ್ರೀಮಿಯಂ ವೈಶಿಷ್ಟ್ಯಗಳನ್ನು, ಅತ್ಯಾಧುನಿಕವಾದ ತಂತ್ರಜ್ಞಾನವನ್ನು ಮತ್ತು ಎಸ್‌ಯುವಿ ಗುಣವನ್ನು ಹೊಂದಿದೆ ಎಂದಿದ್ದಾರೆ.

 

PREV
Read more Articles on
click me!

Recommended Stories

ಟೆಕ್ಟಾನ್ ಬಿಡುಗಡೆ ಬೆನ್ನಲ್ಲೇ ಮಾರುತಿ ಗ್ರ್ಯಾಂಡ್ ವಿಟಾರ ಕಾರಿಗೆ 95,000 ರೂ ಡಿಸ್ಕೌಂಟ್, ಬುಕಿಂಗ್ ಏರಿಕೆ
ಟ್ರಾಫಿಕ್‌ನಲ್ಲಿ ಪದೇ ಪದೇ ಗೇರ್‌ ಬದಲಾಯಿಸುವ ಚಿಂತೆಯಿಲ್ಲ, 7 ಲಕ್ಷದ ಬಜೆಟ್‌ನಲ್ಲಿ ಸಿಗುವ ಸೂಪರ್ ಆಟೋಮ್ಯಾಟಿಕ್ ಕಾರುಗಳು