ನವದೆಹಲಿ(ಏ.04): ಎಂಜಿ ಮೋಟಾರ್ಸ್ ಈಗಾಗಲೇ ZS ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಇದೀಗ ಎಂಜಿ ಸೈಬರ್‌ಸ್ಟೈರ್ ಎಲೆಕ್ಟ್ರಿಕ್ ಸೂಪರ್ ಕಾರು ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳುತ್ತಿದೆ. ಶೀಘ್ರದಲ್ಲೇ ಸೈಬರ್‌ಸ್ಟೈರ್ ಸೂಪರ್ ಎಲೆಕ್ಟ್ರಿಕ್ ಕಾರು ಜಾಗತಿಕ ಮಟ್ಟದಲ್ಲಿ ಅನಾವರಣಗೊಳ್ಳಲಿದೆ. ಈ ಕಾರಿನ ವಿಶೇಷತೆ ಎಂದರೆ ಒಂದು ಸಂಪೂರ್ಣ ಚಾರ್ಜ್‌ಗೆ 800 ಕಿ.ಮೀ ಮೈಲೇಜ್ ನೀಡಲಿದೆ.
ಅತ್ಯಂತ ಆಕರ್ಷಕ ವಿನ್ಯಾಸದ ಸೂಪರ್ ಕಾರು ಇದಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿದೆ.ಚೈನಾ ಮಾಲೀಕತ್ವದ ಬ್ರಿಟೀಷ್ ಕಾರು ಎಂಜಿ ಮೋಟಾರ್ಸ್ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗಿದೆ. ಸೈಬರ್‌ಸ್ಟರ್ ಕಾರನ್ನು ಹ್ಯಾಲೋ ಕಾರು ಎಂದು ಬಿಡುಗಡೆ ಮಾಡಲು ಎಂಜಿ ತಯಾರಿ ನಡೆಸಿದೆ.
undefined
ಎಂಜಿ ಮೋಟಾರ್ ಇಂಡಿಯಾ 2022 ಝೆಡ್ ಎಸ್ ಇವಿ ಬಿಡುಗಡೆ: ದರ 21.99 ಲಕ್ಷ ರೂ
2024ರ ವೇಳೆಗೆ ನೂತನ ಸೈಬರ್‌ಸ್ಟರ್ ಕಾರು ಬಿಡುಗಡೆಯಾಗಲಿದೆ. ಒಟ್ಟು ಮೂರು ಕಾರುಗಳು 2024ರ ಒಳಗಡೆ ಮಾರುಕಟ್ಟೆ ಪ್ರವೇಶಿಸಲಿದೆ. ಸೈಬರ್‌ಸ್ಟರ್ ಕಾನ್ಸೆಪ್ಟ್ ಕಾರನ್ನು ಕಳೆದ ವರ್ಷ ಶಾಂಘೈ ಮೋಟಾರು ಎಕ್ಸ್‌ಪೋದಲ್ಲಿ ಅನಾವರಣ ಮಾಡಲಾಗಿತ್ತು.
ಎಂಜಿ ZS ಎಲೆಕ್ಟ್ರಿಕ್ ಕಾರು 400 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ಆದರೆ ಸೈಬರ್‌ಸ್ಟೈರ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 800 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ಪ್ರಾಯೋಗಿಕವಾಗಿ 600 ರಿಂದ 650 ಕಿ.ಮೀ ಮೈಲೇಜ್ ಸಿಗಲಿದೆ ಅನ್ನೋದು ಆಟೋ ತಜ್ಞರ ಅಭಿಪ್ರಾಯ.ಸೂಪರ್ ಕಾರಾಗಿರುವುದರಿಂದ ಅತೀ ಹೆಚ್ಚಿನ ಪವರ್ ಇರಲಿದೆ 0-100 ಕಿ.ಮೀ ವೇಗವನ್ನ ಕೇವಲ 3 ಸೆಕೆಂಡ್‌ಗಳಲ್ಲಿ ಪಡೆದುಕೊಳ್ಳಲಿದೆ.
ಸೈಬರ್‌ಸ್ಟೈರ್ ಜಾಗತಿಕ ಮಟ್ಟದಲ್ಲಿ ಅನಾವಗೊಳ್ಳಲಿದೆ. ಹೀಗಾಗಿ ಭಾರತದಲ್ಲೂ ಕಾರು ಲಭ್ಯವಾಗಲಿದೆ. ಸದ್ಯ ಭಾರತದಲ್ಲಿ ಎಂಜಿ ಮೋಟಾರ್ಸ್ ZS ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ಇತ್ತೀಚೆಗೆ ಅಪ್‌ಗ್ರೇಡೆಡ್ ವರ್ಶನ್ ಕೂಡ ಲಾಂಚ್ ಮಾಡಿದೆ.
Digital Car Finance ಒಂದೇ ಕ್ಲಿಕ್‌ನಲ್ಲಿ ಕಾರು ಸಾಲ, ಎಂಜಿ ಮೋಟಾರ್ಸ್‌ನಿಂದ ePay ಸೌಲಭ್ಯ!
ಭಾರತದಲ್ಲಿ ಎಂಜಿ ಮೋಟಾರ್ಸ್ ಹೆಕ್ಟರ್ ಕಾರು ಬಿಡುಗಡೆ ಮಾಡಿ ಭಾರಿ ಜನಪ್ರಿಯತೆ ಗಳಿಸಿದೆ. ಬಳಿಕ ಹೆಕ್ಟರ್ ಪ್ಲಸ್, ಗ್ಲೋಸ್ಟರ್ ಕಾರುಗಳು ಭಾರತದಲ್ಲಿ ಬಿಡುಗಡೆಯಾಗಿದೆ.
ಎಂಜಿ ಗ್ಲೊಸ್ಟರ್ ಸ್ಯಾವಿ 7 ಸೀಟರ್ ಕಾರು
ಎಂಜಿ ಮೋಟಾರ್ ಇಂಡಿಯಾ 7 ಸೀಟುಗಳ ಗ್ಲೋಸ್ಟರ್ ಸ್ಯಾವಿ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಹಿಂದೆ ಬಿಡುಗಡೆಯಾದ ಗ್ಲೋಸ್ಟರ್ 6 ಸೀಟ್ ಹೊಂದಿತ್ತು. ಒಳಭಾಗ ವಿಶಾಲವಾಗಿದ್ದು, ಆರಾಮವಾಗಿ ಪ್ರಯಾಣಿಸಲು ಅನುಕೂಲಕರ. ಇದು 2.0 ಟ್ವಿನ್ ಟರ್ಬೊ ಡೀಸೆಲ್ ಎಂಜಿನ್ ಇರುವ ಎಸ್‌ಯುವಿ. 200 ಪಿಎಸ್ ಪವರ್ ಮತ್ತು 480 ಎನ್‌ಎಂ ಟಾರ್ಕ್ ಹೊಂದಿದೆ. ಡ್ರೈವರ್ ಸೀಟ್ ಮಸಾಜರ್, 64 ಬಣ್ಣಗಳ ಆ್ಯಂಬಿಯೆಂಟ್ ಲೈಟಿಂಗ್, ಆಟೋಮ್ಯಾಟಿಕ್ ಎಸಿ ನಿಯಂತ್ರಣ ಇತ್ಯಾದಿ ಫೀಚರ್‌ಗಳಿವೆ.
ಎಂಜಿ ಹೆಕ್ಟರ್ ಪ್ಲಸ್ ಬಂತು
ಎಂಜಿ ಮೋಟಾರ್ ಇಂಡಿಯಾದ ಆರು ಸೀಟಿನ ಎಸ್‌ಯುವಿ ಎಂಜಿ ಹೆಕ್ಟರ್ ಪ್ಲಸಸ್ ಮಾರುಕಟ್ಟೆಗೆ ಬಂದಿದೆ. ಎಂಜಿ ಹೆಕ್ಟರ್ ಹಾಗೂ ಎಂಜಿ ಝಡ್‌ಎಸ್ ಇವಿ ಬಳಿಕ ಇದು ಕಂಪೆನಿಯ ಮೂರನೇ ಕಾರು. ಅಗಲವಾದ ಪಾನೋರಮಿಕ್ ಸನ್‌ರೂಫ್ ಇದರ ವೈಶಿಷ್ಠ್ಯ. ಈಗಲೇ 50000ರು. ಕೊಟ್ಟು ಎಂಜಿ ಮೊಬೈಲ್ ಅಪ್ಲಿಕೇಷನ್ ಬಳಸಿ ಬುಕಿಂಗ್ ಮಾಡಿದರೆ ರಿಯಾಯಿತಿ ಸಿಗಲಿದೆ. ಮುಂದಿನ ದಿನಗಳಲ್ಲಿ ಈ ಕಾರ್ ದರ 50000 ರು. ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 1.2 ಲೀಟರ್ ಪೆಟ್ರೋಲ್ ಹಾಗೂ 2.0 ಲೀಟರ್ ಡಿಸೆಲ್ ಇಂಜಿನ್‌ನಲ್ಲಿ ಈ ಕಾರು ಲಭ್ಯವಿದೆ.