Electric Car ಏಪ್ರಿಲ್ 6ಕ್ಕೆ ಟಾಟಾದಿಂದ ಮತ್ತೊಂದು ಎಲೆಕ್ಟ್ರಿಕ್ SUV ಕಾರು ಅನಾವರಣ!

By Suvarna News  |  First Published Apr 2, 2022, 7:55 PM IST
  • ಟಾಟಾ ಮೋಟಾರ್ಸ್‌ನಿಂದ ಮತ್ತೊಂದು ಹೊಚ್ಚ ಹೊಸ ಕಾರು
  • ಏಪ್ರಿಲ್ 6ಕ್ಕೆ ಹೊಸ ಇವಿ ಕಾನ್ಸೆಪ್ಟ್ ಕಾರು ಅನಾವರಣ
  • ನೂತನ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ, ಭಾರಿ ಸಂಚಲನ
     

ಮುಂಬೈ(ಏ.02); ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ನಂಬರ್ 1 ಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಇದೀಗ ಮತ್ತೊಂದು ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರು ಅನಾವರಣಕ್ಕೆ ಸಜ್ಜಾಗಿದೆ. ಹೊಚ್ಚ ಹೊಸ ಎಲೆಕ್ಟ್ರಿಕ್ SUV ಕಾರಿನ ಟೀಸರ್ ಬಿಡುಗಡೆಯಾಗಿದೆ. ಏಪ್ರಿಲ್ 6ಕ್ಕೆ ಹೊಚ್ಚ ಹೊಸ ಇವಿ ಕಾನ್ಸೆಪ್ಟ್ ಕಾರು ಅನಾವರಣಗೊಳ್ಳಲಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ.

ಏಪ್ರಿಲ್ 6ನೇ ತಾರೀಖು ಟಾಟಾ ಮೋಟಾರ್ಸ್ ಹೊಸ ಕಾರು ಬಿಡುಗಡೆ ಮಾಡುವುದಾಗಿ ಹೇಳಿತ್ತು. ಬಹುತೇಕರು 400 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಟಾಟಾ ನೆಕ್ಸಾನ್ ಕಾರು ಎಂದೇ ಭಾವಿಸಿದ್ದರು. ಆದರೆ ಗ್ರಾಹಕರಿಗೆ ಮತ್ತೊಂದು ಎಲೆಕ್ಟ್ರಿಕ್ ಕಾರಿನ ಆಯ್ಕೆ ನೀಡುತ್ತಿರುವ ಟಾಟಾ ಮೋಟಾರ್ಸ್ ಹೊಸ ಇವಿ ಅನಾವರಣ ಮಾಡುತ್ತಿದೆ.

Latest Videos

EV sales ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಶೇ.352 ರಷ್ಟು ಏರಿಕೆ, ಹೊಸ ದಾಖಲೆ ಬರೆದ ಟಾಟಾ!

ಟೀಸರ್‌ಲ್ಲಿ ಟಾಟಾ ಇದು ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರು ಎಂದಿದೆ. ಏಪ್ರಿಲ್ 6ಕ್ಕೆ ಹೊಸ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರು ಜಾಗತಿಕವಾಗಿ ಅನಾವರಣಗೊಳ್ಳಲಿದೆ ಎಂದಿದೆ. ಟೀಸರ್‌ನಲ್ಲಿ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. ಕಾರಿನ ಎಲ್ಇಡಿ ಡಿಆರ್‌ಎಲ್, ಬೊನೆಟ್ ಸೇರಿದಂತೆ ಕೆಲ ಮಾಹಿತಿಗಳ ಮಾತ್ರ ಬಹಿರಂಗ ಮಾಡಲಾಗಿದೆ. ಇನ್ನುಳಿದಂತೆ ಕುತೂಹಲ ಹಾಗೇ ಹಿಡಿದಿಟ್ಟುಕೊಳ್ಳಲಾಗಿದೆ.

 

Embrace what lies beyond the unknown and

Watch Our Brand-New Electric SUV Concept on 06.04.2022 at 12PM IST

Know more: https://t.co/9509vNm7Q9 pic.twitter.com/vTVWpXUM9E

— Tata Passenger Electric Mobility Limited (@Tatamotorsev)

 

ನೂತನ ಕಾನ್ಸೆಪ್ಟ್ ಕಾರು ಟಾಟಾದ ಐಕಾನಿಕ್ ಟ್ರೇಡ್ ಇವಿ ಕಲರ್ ನೀಲಿ ಬಣ್ಣದಲ್ಲಿದೆ. ಆಟೋ ಪರಿಣಿತರು ಆಟೋ ಎಕ್ಸ್‌ಪೋದಲ್ಲಿ ಅನಾವರಣ ಮಾಡಿರುವ ಟಾಟಾ ಸಿಯೇರಾ ಎಲೆಕ್ಟ್ರಿಕ್ ಕಾರು ಎಂದು ಹೇಳಿದ್ದಾರೆ. ಅತೀ ಆಕರ್ಷಕ ವಿನ್ಯಾಸದಲ್ಲಿ ಸಿಯೇರಾ ಇವಿ ಕಾರನ್ನು ಅನಾವರಣ ಮಾಡಲಾಗಿತ್ತು. 

ಅತ್ಯುತ್ತಮ ಪರ್ಫಾಮೆನ್ಸ್, ಕೈಗೆಟುಕುವ ದರ, ಟಾಟಾ ಟಿಗೋರ್ ಇವಿ ಟೆಸ್ಟ್ ಡ್ರೈವ್ Review

ಹೊಚ್ಚ ಹೊಸ ಟಾಟಾ ಎಲೆಕ್ಟ್ರಿಕ್ ಕಾರಿನ ಕುರಿತು ಕುತೂಹಲ ಹೆಚ್ಚಾಗುತ್ತಿದೆ. ಇದರ ಬೆಲೆ, ಮೈಲೇಜ್ ರೇಂಜ್, ಫೀಚರ್ಸ್, ಚಾರ್ಜಿಂಗ್ ಸಮಯದ ಕುರಿತು ಚರ್ಚೆಗಳು ನಡೆಯುತ್ತಿದೆ.ಟಾಟಾ ಮೋಟಾರ್ಸ್ ಮುಂದಿನ 5 ವರ್ಷಗಳಲ್ಲಿ 10 ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಟಾಟಾದ ಕಾಜಿರಂಗ ಎಡಿಶನ್‌ ಎಸ್‌ಯುವಿ
ವನ್ಯಜೀವಿ ವೈವಿಧ್ಯತೆಗೆ ಹೆಸರಾದ ಕಾಜಿರಂಗದ ಹೆಸರಿನಲ್ಲಿ ತನ್ನ ಎಸ್‌ಯುವಿಗಳನ್ನು ಟಾಟಾ ಹೊರತರುತ್ತಿದೆ. ಭಾರತದ ವನ್ಯಜೀವಿ ಜಗತ್ತಿಂದ ಪ್ರೇರಣೆ ಪಡೆದು ಈ ಕಾರಿನ ಹೊರ ಮೈ ವಿನ್ಯಾಸ ಮಾಡಿರುವುದಾಗಿ ಕಂಪನಿ ತಿಳಿಸಿದೆ. ಹುಲ್ಲುಗಾವಲಿನ ವಿಶಿಷ್ಟಬಣ್ಣದಲ್ಲಿ ಈ ಕಾರುಗಳ ಹೊರಮೈ ವಿನ್ಯಾಸವಿದೆ.

ಟಾಟಾದ ಮೂರು ಟ್ರಕ್‌ಗಳು
ಹೇಳಿಕೇಳಿ ಟಾಟಾ ಕಂಪನಿ ಟ್ರಕ್‌ಗಳಿಗೆ ಭಾರಿ ಜನಪ್ರೀತಿ ಗಳಿಸಿದ ಕಂಪನಿ. ಇದೀಗ ಟಾಟಾ ಕಾರುಗಳೆಲ್ಲಾ ಭಾರಿ ಜನಪ್ರಿಯತೆ ಗಳಿಸುತ್ತಿರುವ ಹಿನ್ನೆಲೆಯಲ್ಲಿ ಟಾಟಾ ಕಂಪನಿ ಟಿ ಸರಣಿಯ ಮೂರು ಟ್ರಕ್‌ಗಳನ್ನು ಬಿಡುಗಡೆ ಮಾಡಿದೆ. ಈ ಟ್ರಕ್‌ಗಳ ಹೆಸರು ಕ್ರಮವಾಗಿ ಟಿ-6, ಟಿ-7 ಮತ್ತು ಟಿ-9. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಹೆಚ್ಚು ಕ್ಯಾಬಿನ್‌ ಜಾಗ ಈ ಟ್ರಕ್‌ಗಳ ಹೆಗ್ಗಳಿಕೆ. ಈ ಟ್ರಕ್‌ಗಳನ್ನು ವಾಣಿಜ್ಯ ವಾಹನ ವಿಭಾಗದ ಅಧ್ಯಕ್ಷ ಗಿರೀಶ್‌ ವಾಘ್‌ ಬಿಡುಗಡೆ ಮಾಡಿದರು.

ಟಾಟಾ ಟೆಲಿ ಬಿಸಿನೆಸ್‌ನ ಸ್ಮಾರ್ಟ್‌ ಇಂಟರ್‌ನೆಟ್‌
ಟಾಟಾ ಟೆಲಿ ಬಿಸಿನೆಸ್‌ ಸವೀರ್‍ಸಸ್‌(ಟಿಟಿಬಿಎಸ್‌) ಇದೀಗ ಸ್ಮಾರ್ಟ್‌ ಲೀಸ್ಡ್‌ ಸಿಂಗಲ್‌ ಸೂಟ್‌ ಸ್ಮಾರ್ಟ್‌ ಇಂಟರ್‌ನೆಟ್‌ ವ್ಯವಹಾರ ಆರಂಭಿಸಿದೆ. ಇದು ಸ್ಥಿರ ಹಾಗೂ ವೇಗದ ಇಂಟರ್‌ನೆಟ್‌ ಸೇವೆ ಒದಗಿಸುತ್ತದೆ. ಡಿಜಿಟಲ್‌ ಮೂಲಕ ಕಾರ್ಯಾಚರಿಸುವ ಉದ್ಯಮಗಳಿಗೆ ಇದು ಹೆಚ್ಚು ಸಹಕಾರಿ ಎಂದು ಕಂಪನಿ ತಿಳಿಸಿದೆ. ಉತ್ತಮ ಕನೆಕ್ಟಿವಿಟಿ ಇದರ ಮತ್ತೊಂದು ಪ್ಲಸ್‌ ಪಾಯಿಂಟ್‌. ಮಾಲ್‌ವೇರ್‌, ಬಾಟ್‌ನೆಟ್‌, ಫಿಷಿಂಗ್‌ ವಿರುದ್ಧ ರಕ್ಷಣೆ ನೀಡುತ್ತದೆ, ಹೆಚ್ಚು ಸುರಕ್ಷಿತವಾಗಿರುತ್ತದೆ ಎಂದೂ ಕಂಪನಿ ತಿಳಿಸಿದೆ.

click me!