ನವದೆಹಲಿ(ಜ.01): ಹೊಸ ವರ್ಷ(New Year 2022) ಬಂದಾಗಿದೆ. ಹೊಸತನ, ಹೊಸ ಹುರುಪ ಚಿಮ್ಮುತ್ತಿದೆ. ಇದರ ನಡುವೆ ಆಟೋ ಕಂಪನಿಗಳು ಬೆಲೆ(Price Hike) ಹೆಚ್ಚಳದ ಶಾಕ್ ನೀಡಿದೆ. ಜನವರಿಯಿಂದ ಹಲವು ಕಾರು ಕಂಪನಿಗಳು ತಮ್ಮ ಆಯ್ದೆ ಕಾರುಗಳ ಮೇಲೆ ಬೆಲೆ ಹೆಚ್ಚಳ ಮಾಡುತ್ತಿದೆ. ಇದರಿಂದ ಜನವರಿ 1, 2022ರಿಂದ ಕಾರು ಖರೀದಿ ಮತ್ತಷ್ಟು ದುಬಾರಿಯಾಗಿದೆ. ಕೇವಲ ಕಾರು ಮಾತ್ರವಲ್ಲ ದ್ವಿಚಕ್ರ ವಾಹನಗಳ ಬೆಲೆಯೂ ಹೆಚ್ಚಾಗಿದೆ.
ಆಯಾ ಕಂಪನಿಗಳು ತಮ್ಮ ಕಾರುಗಳ ಮೇಲೆ ಶೇಕಡಾ 2 ರಿಂದ ಶೇಕಡಾ 3.5 ರಷ್ಟು ಬೆಲೆ ಹೆಚ್ಚಳ ಮಾಡಿದೆ. ಕಳೆದ ತಿಂಗಳೇ ಕೆಲ ಕಂಪನಿಗಳು ಬೆಲೆ ಹೆಚ್ಚಳ ಕುರಿತು ಘೋಷಣೆ ಮಾಡಿತ್ತು. ಈ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣ ಕಚ್ಚಾವಸ್ತುಗಳ ಬೆಲೆ ಏರಿಕೆ, ಆಮದು ಸುಂಕ ಸೇರಿದಂತೆ ಕಾರು ಉತ್ಪಾದನೆಯಲ್ಲಾದ ವೆಚ್ಚವೇ ಕಾರಣವಾಗಿದೆ.
undefined
Car Sales ಮಾರಾಟದಲ್ಲಿ ಶೇ.4 ರಷ್ಟು ಕುಸಿತ ಕಂಡ ಮಾರುತಿ ಸುಜುಕಿ!
ಮಾರುತಿ ಸುಜುಕಿ:
ಭಾರತದಲ್ಲಿ ಅತೀ ಕಡಿಮೆ ಬೆಲೆಗೆ ಕಾರು ಒದಗಿಸುವ ಮಾರುತಿ ಸುಜಕಿ(Maruti Suzuki) ಅನಿವಾರ್ಯವಾಗಿ ಕಾರುಗಳ ಬೆಲೆ ಹೆಚ್ಚಿಸಿದೆ. ಮಾರುತಿ ತನ್ನ ಎಲ್ಲಾ ಕಾರುಗಳ ಮೇಲೆ ಬೆಲೆ ಹೆಚ್ಚಳ ಮಾಡುತ್ತಿದೆ. ಆದರೆ ಪ್ರತಿ ಮಾಡೆಲ್, ವೇರಿಯೆಂಟ್ ಮೇಲೆ ಬೆಲೆ ಹೆಚ್ಚಳ ಪ್ರಮಾಣ ಬೇರೆಯಾಗಿದೆ. ಈ ಮೂಲಕ ಕೈಗೆಟುಕುವ ದರದಲ್ಲಿ ಕಾರು ನೀಡುತ್ತಿದ್ದ ಮಾರುತಿ ಕೂಡ ಇದೀಗ ದುಬಾರಿಯಾಗುತ್ತಿದೆ.
ಟೋಯೋಟಾ:
ಟೋಯೋಟಾ ಕಿರ್ಲೋಸ್ಕರ್ ಮೋಟಾರ್(Toyota) ಕಳೆದ ತಿಂಗಳು ಬೆಲೆ ಹೆಚ್ಚಳ ಕುರಿತು ಘೋಷಣೆ ಮಾಡಿದೆ. ಉತ್ಪಾದನಾ ವೆಚ್ಟ ಹೆಚ್ಚಳಾಗಿದೆ. ಹೀಗಾಗಿ ಟೋಯೋಟಾ ತನ್ನ ಎಲ್ಲಾ ಕಾರುಗಳ ಮೇಲೆ ಬೆಲೆ ಹೆಚ್ಚಿಸುತ್ತಿದೆ ಎಂದು ಈಗಾಗಲೇ ಪ್ರಕಣೆಯಲ್ಲಿ ಹೇಳಿದೆ. ಜನವರಿ 1, 2022ರಿಂದ ಟೋಯೋಟಾ ಕಾರುಗಳ ಬೆಲೆ ಹೆಚ್ಚಳವಾಗಿದೆ.
Car sales ಹ್ಯುಂಡೈ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ಟಾಟಾ ಮೋಟಾರ್ಸ್, ಕಳೆದ 10 ವರ್ಷಗಳಲ್ಲಿ ಗರಿಷ್ಠ ದಾಖಲೆ!
ಮರ್ಸಿಡೀಸ್ ಬೆಂಜ್:
ಜರ್ಮನ್ ಲಕ್ಸುರಿ ಕಾರು ಮೇಕರ್ ಮರ್ಸಿಡಿಸ್ ಬೆಂಜ್(Mercedes-Benz) ಮತ್ತಷ್ಟು ದುಬಾರಿಯಾಗಿದೆ. ವಿಶ್ವದ ದುಬಾರಿ ಕಾರುಗಳಲ್ಲೊಂದಾಗಿರುವ ಬೆಂಜ್ ಜನವರಿ 1 ರಿಂದ ಬೆಲೆ ಹೆಚ್ಚಳ ಮಾಡಿದೆ. ತನ್ನ ಕಾರುಗಳ ಮೇಲೆ ಶೇಕಡಾ 3 ರಷ್ಚು ಬೆಲೆ ಹೆಚ್ಚಿಸಿದೆ.
ಆಡಿ:
ಆಡಿ ಕಾರು ಮತ್ತಷ್ಟು ದುಬಾರಿಯಾಗಿದೆ. ಜನವರಿ1, 2022 ರಿಂದ ಆಡಿ(Audi) ತನ್ನ ಎಲ್ಲಾ ಕಾರುಗಳ ಮೇಲೆ ಶೇಕಡಾ 3 ರಷ್ಟು ಬೆಲೆ ಹೆಚ್ಚಿಸಿದೆ. ಉತ್ಪಾದನಾ ವೆಚ್ಚ, ಎಂಜಿನ್ ಆಮದು ಸುಂಕ, ಜೋಡಣೆ ಸೇರಿದಂತೆ ಎಲ್ಲವೂ ದುಬಾರಿಯಾಗಿದೆ. ಹೀಗಾಗಿ ಅನಿವಾರ್ಯವಾಗಿ ಬೆಲೆ ಹೆಚ್ಚಿಸಬೇಕಾಗಿದೆ ಎಂದು ಆಡಿ ಸ್ಪಷ್ಟಪಡಿಸಿದೆ.
Upcoming Electric Cars ಹೊಸ ವರ್ಷದಲ್ಲಿ ಭಾರತದ ಮಾರುಕಟ್ಟೆ ಬರಲಿರುವ ಟಾಪ್ 10 ಎಲೆಕ್ಟ್ರಿಕ್ ಕಾರು!
ಟಾಟಾ ಮೋಟಾರ್ಸ್:
ದೇಶದಲ್ಲಿ ಅತ್ಯಂತ ಸುರಕ್ಷತೆ ವಾಹನಗಳನ್ನು ನೀಡುತ್ತಿರುವ ಟಾಟಾ ಮೋಟಾರ್ಸ್(Tata Motors) ಹೊಸ ವರ್ಷದಿಂದ ವಾಹನಗಳ ಬೆಲೆ ಹೆಚ್ಚಿಸಿದೆ. ಟಾಟಾ ಮೋಟಾರ್ಸ್ ಜನವರಿ 1, 2022ರಿಂದ ಕಮರ್ಷಿಯಲ್ ವಾಹನದ ಬೆಲೆ ಹೆಚ್ಚಿಸಿದೆ. ವಾಹನ ಬೆಲೆ ಶೇಕಡಾ 2.5 ರಷ್ಟು ಬೆಲೆ ಹೆಚ್ಚಿಸಿದೆ.
ಸಿಟ್ರೋನ್:
ಸಿಟ್ರೋನ್(Citroen) ಈಗಷ್ಟೇ ಭಾರತದಲ್ಲಿ ತನ್ನ ಜಾಲವಿಸ್ತರಿಸುತ್ತಿದೆ. ಇದರ ನಡುವೆ ಸಿಟ್ರೋನ್ ಕಾರುಗಳ ಉತ್ಪಾದನಾ ವೆಚ್ಚ ಹೆಚ್ಚಳವಾದ ಕಾರಣ ಜನವರಿ 1, 2022ರಿಂದ ಕಾರಿನ ಬೆಲೆ ಹೆಚ್ಚಿಸಿದೆ.
ಸ್ಕೋಡಾ:
ಹೊಸ ಹೊಸ ಕಾರುಗಳ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಛಾಪು ಮೂಡಿಸುತ್ತಿರುವ ಸ್ಕೋಡಾ ಇಂಡಿಯಾ(Skoda India) ಇದೀಗ ಬೆಲೆ ಹೆಚ್ಚಳದ ಶಾಕ್ ನೀಡಿದೆ. ಜನವರಿ 1, 2022ರಿಂದ ಸ್ಕೋಡ್ ಭಾರತದಲ್ಲಿ ತನ್ನ ಕಾರುಗಳ ಬೆಲೆ ಹೆಚ್ಚಿಸಿದೆ.
ಇದರ ಜೊತೆಗೆ ಹಲವು ಬೈಕ್ ಹಾಗೂ ಸ್ಕೂಟರ್ ಬೆಲೆಯೂ ಹೆಚ್ಚಳವಾಗಿದೆ.