Car sales ಹ್ಯುಂಡೈ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ಟಾಟಾ ಮೋಟಾರ್ಸ್, ಕಳೆದ 10 ವರ್ಷಗಳಲ್ಲಿ ಗರಿಷ್ಠ ದಾಖಲೆ!

Published : Jan 01, 2022, 05:59 PM IST
Car sales ಹ್ಯುಂಡೈ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ಟಾಟಾ ಮೋಟಾರ್ಸ್, ಕಳೆದ 10 ವರ್ಷಗಳಲ್ಲಿ ಗರಿಷ್ಠ ದಾಖಲೆ!

ಸಾರಾಂಶ

ಭಾರತದ ನಂಬಿಕಸ್ಥ ಬ್ರ್ಯಾಂಡ್ ಆಗಿ ಹೊರಹೊಮ್ಮಿದ ಟಾಟಾ ಮೋಟಾರ್ಸ್ ಭಾರತದಲ್ಲಿ ಕಳೆದ 10 ವರ್ಷಗಳಲ್ಲಿ ಅತ್ಯುತ್ತಮ ಮಾರಾಟ ಸಾಧನೆ ಮಾಡಿದ ಟಾಟಾ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಹ್ಯುಂಡೈ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಟಾಟಾ  

ನವದೆಹಲಿ(ಜ.01):  ಹೊಸ ವರ್ಷದಲ್ಲಿ(New Year 2022) ಹೊಸ ಹೊಸ ಕಾರುಗಳನ್ನು ಬಿಡುಗಡೆ ಮಾಡಿ ಭಾರತದ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಎಲ್ಲಾ ಆಟೋಮೊಬೈಲ್ ಕಂಪನಿಗಳು ಸಜ್ಜಾಗಿದೆ.  ಕಚ್ಚಾವಸ್ತುಗಳು ಬೆಲೆ ಏರಿಕೆ, ಆಮದು ಸುಂಕ ಸೇರಿದಂತೆ ಹಲವು ಕಾರಣಗಳಿಂದ ಕಾರುಗಳ ಬೆಲೆ ಏರಿಕೆಯಾಗಿದೆ. ಇದರ ನಡುವೆ 2021ರಲ್ಲಿ ಟಾಟಾ ಮೋಟಾರ್ಸ್(Tata motors) ಅತ್ಯುತ್ತಮ ಸಾಧನೆ ಮಾಡಿದೆ. ಭಾರತೀಯರ ನಂಬಕಸ್ಥ ಕಾರಾಗಿ ಹೊರಹೊಮ್ಮಿದೆ. ಡಿಸೆಂಬರ್ ತಿಂಗಳು ಮಾತ್ರವಲ್ಲ 2021ರಲ್ಲಿನ ಟಾಟಾ ಮಾರಾಟ(Tata Sales) ಸಾಧನೆ, ಕಳೆದ 10 ವರ್ಷಗಳಲ್ಲೇ ಅತ್ಯುತ್ತಮ ಸಾಧನೆಯಾಗಿದೆ.

ಡಿಸೆಂಬರ್(December) ತಿಂಗಳ ಕಾರು ಮಾರಾಟದಲ್ಲಿ ಟಾಟಾ ಮೋಟಾರ್ಸ್ ಭಾರತದ 2ನೇ ಸ್ಥಾನ ಸಂಪಾದಿಸಿದೆ. ಈ ಮೂಲಕ 2ನೇ ಸ್ಥಾನದಲ್ಲಿದ್ದ ಹ್ಯುಂಡೈ(hyundai) ಆಟೋ ಕಾರುಗಳನ್ನು ಹಿಂದಿಕ್ಕಿದೆ. ಡಿಸೆಂಬರ್ ತಿಂಗಳಲ್ಲಿ 35,299 ಟಾಟಾ ಕಾರುಗಳು ಮಾರಾಟವಾಗಿದೆ. ಈ ಮೂಲಕ ಗರಿಷ್ಠ ಮಾರಾಟವಾದ ಹಾಗೂ ಅತೀ ಹೆಚ್ಚು ಜನರು ಇಷ್ಟಪಡುವ ಕಾರುಗಳ ಪಟ್ಟಿಯಲ್ಲಿ ಟಾಟಾ 2ನೇ ಸ್ಥಾನಕ್ಕೇರಿದ. 2ನೇ ಸ್ಥಾನದಲ್ಲಿದ್ದ ಹ್ಯುಂಡೈ 3ನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಮೊದಲ ಸ್ಥಾನದಲ್ಲಿ ಮಾರುತಿ ಸುಜುಕಿ ಮುಂದುವರಿದಿದೆ.

Upcoming Car ಹೊಸ ವರ್ಷದಲ್ಲಿ ಟಾಟಾದಿಂದ ಮತ್ತೊಂದು ಕೊಡುಗೆ, ಅಲ್ಟ್ರೋಜ್ ಆಟೋಮ್ಯಾಟಿಕ್ ಕಾರು ಲಾಂಚ್!

ಕಳೆದ 10 ವರ್ಷಗಳಿಗೆ ಹೋಲಿಸಿದರೆ ಡಿಸೆಂಬರ್ ತಿಂಗಳಲ್ಲಿ ಟಾಟಾ ಮೋಟಾರ್ಸ್ ಗರಿಷ್ಠ ಸಾಧನೆ ಮಾಡಿದೆ. ಗಣನೀಯ ಏರಿಕೆ ಕಂಡಿದೆ. 2020ರ ಡಿಸೆಂಬರ್ ತಿಂಗಳಲ್ಲಿ ಟಾಟಾ ಮೋಟಾರ್ಸ್ 23,546 ಕಾರುಗಳು ಮಾರಾಟಗೊಂಡಿತ್ತು. ಇನ್ನು 2019ರ ಡಿಸೆಂಬರ್ ತಿಂಗಳಲ್ಲಿ 11,753 ಟಾಟಾ ಕಾರುಗಳು ಮಾರಾಟಗೊಂಡಿತ್ತು. ಈ ಅಂಕಿಅಂಶಗಳೇ ಟಾಟಾದ ಮಾರಾಟ ಏರಿಕೆಯನ್ನು ಸಾಬೀತುಪಡಿಸುತ್ತಿದೆ.

2021ರಲ್ಲಿ ಭಾರತದಲ್ಲಿ 3,31,178 ಟಾಟಾ ಕಾರುಗಳು ಮಾರಾಟವಾಗಿದೆ.  ಶೇಕಡಾ 43 ರಷ್ಟು ಏರಿಕೆ ಕಂಡಿದೆ. ಇನ್ನು 418 ಎಲೆಕ್ಟ್ರಿಕ್ ಕಾರು ಮಾರಾಟವಾಗಿದ್ದ ಟಾಟಾ ಮೋಟಾರ್ಸ್ ಕಳೆದ ವರ್ಷ 2,225 ಕಾರುಗಳನ್ನು ಮಾರಾಟ ಮಾಡಿದೆ. 

Upcoming Cars 2022 ದುಬಾರಿ ಇಂಧನಕ್ಕೆ ಪರ್ಯಾಯವಾಗಿ ಶೀಘ್ರದಲ್ಲೇ ಟಾಟಾ ಟಿಗೋರ್, ಟಿಯಾಗೋ CNG ಕಾರು ಬಿಡುಗಡೆ!

ಟಾಟಾ ಮೋಟಾರ್ಸ್ ಭಾರತದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಪ್ಯಾಸೆಂಜರ್ ವಾಹನದಿಂದ ದೂರ ಉಳಿದಿದ್ದ ಟಾಟಾ ಅದ್ಧೂರಿಯಾಗಿ ಎಂಟ್ರಿಕೊಟ್ಟು ಇದೀಗ ಭಾರತದ ಕಾರು ಮಾರುಕಟ್ಟೆಯನ್ನೇ ಆಕ್ರಮಿಸಿಕೊಳ್ಳುತ್ತಿದೆ. ಅತ್ಯುತ್ತಮ ಡಿಸೈನ್ ಮೂಲಕ ಟಾಟಾ ಮೋಟಾರ್ಸ್ ಭಾರತದಲ್ಲಿ ಮೋಡಿ ಮಾಡುತ್ತಿದೆ. ಟಾಟಾ ಹ್ಯಾರಿಯರ್,  ಟಾಟಾ ಪಂಚ್, ಟಾಟಾ ಸಫಾರಿ, ಟಾಟಾ ನೆಕ್ಸಾನ್, ಟಾಟಾ ಟಿಯಾಗೋ, ಟಾಟಾ ಟಿಗೋರ್, ಟಾಟಾ ಹೆಕ್ಸಾ ಕಾರುಗಳು ಭಾರತದಲ್ಲಿ ಸದ್ಯ ಮಾರುಕಟ್ಟೆಯಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

ಟಾಟಾ ಸುರಕ್ಷಿತ ಕಾರು
ಟಾಟಾ ಮೋಟಾರ್ಸ್ ಭಾರತದಲ್ಲಿ ಕೈಗೆಟುಕುವ ದರದಲ್ಲಿ ಅತ್ಯುತ್ತಮ ಹಾಗೂ ಗರಿಷ್ಠ ಸುರಕ್ಷತೆ ಕಾರುಗಳನ್ನು ನೀಡುತ್ತಿದೆ. ಟಾಟಾದ ಬಹುತೇಕ ಎಲ್ಲಾ ಕಾರುಗಳು 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ. ಇತ್ತೀಚೆಗೆ ಬಿಡುಗಡೆಯಾದ ಟಾಟಾ ಪಂಚ್ ಗರಿಷ್ಠ ಮಕ್ಕಳ ಹಾಗೂ  ಪ್ರಯಾಣಿಕರ ಸೇಫ್ಟಿಯಲ್ಲಿ 5 ಸ್ಟಾರ್ ಪಡೆದುಕೊಂಡಿದೆ.  

Electric Cars ಹೊಸ ವರ್ಷಕ್ಕೆ ಟಾಟಾದಿಂದ ಗೂಡ್ ನ್ಯೂಸ್, 400+ ಮೈಲೇಜ್ ಟಾಟಾ ನೆಕ್ಸಾನ್ EV ಬಿಡುಗಡೆ ರೆಡಿ!

ಟಾಟಾ ಕಾರುಗಳ ಪೈಕಿ ನೆಕ್ಸಾನ್ ಕಾರು ಭಾರತದಲ್ಲಿ ಅತೀ ಹೆಚ್ಚು ಮಾರಾಟ ಕಾರಣುತ್ತಿರುವ ಕಾರುಗಳಲ್ಲಿ ಮುಂಚೂಣಿಯಲ್ಲಿದೆ. ನೆಕ್ಸಾನ್ ಸಬ್ ಕಾಂಪಾಕ್ಟ್ SUV ಕಾರಾಗಿದೆ. ಮಾರುತಿ ಬ್ರೆಜಾ, ಹ್ಯುಂಡೈ ವೆನ್ಯೂ, ಮಹೀಂದ್ರ XUV300 ಸೇರಿದಂತೆ ಸಬ್ ಕಾಂಪಾಕ್ಟ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಟಾಟಾ ಈಗಾಗಲೇ ಎರಡು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಿ ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಅಗ್ರಜನಲಾಗಿ ಗುರುತಿಸಿಕೊಂಡಿದೆ. ಟಾಟಾ ನೆಕ್ಸಾನ್ ಇವಿ ಹಾಗೂ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರುಗಳಿಗೂ ಭಾರಿ ಬೇಡಿಕೆ ಇದೆ.ಕಡಿಮೆ ಬೆಲೆಗೆ ಲಭ್ಯವಿರುವ ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಕೆಗೂ ಟಾಟಾ ಪಾತ್ರವಾಗಿದೆ,

PREV
Read more Articles on
click me!

Recommended Stories

Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ
ಭಾರತದ ಮೊದಲ 7 ಸೀಟರ್ ಎಲೆಕ್ಟ್ರಿಕ್ SUV ಕಾರು XEV 9S ಪರಿಚಯಿಸಿದ ಮಹೀಂದ್ರ,ಟಾಟಾಗೆ ಠಕ್ಕರ್