Car Sales ಮಾರಾಟದಲ್ಲಿ ಶೇ.4 ರಷ್ಟು ಕುಸಿತ ಕಂಡ ಮಾರುತಿ ಸುಜುಕಿ!

By Suvarna News  |  First Published Jan 1, 2022, 7:57 PM IST
  • ಭಾರತದ ಅತೀ ದೊಡ್ಡ ಆಟೋಮೇಕರ್ ಮಾರುತಿ ಸುಜುಕಿಗೆ ಹಿನ್ನಡೆ
  • ಡಿಸೆಂಬರ್ ತಿಂಗಳ ಕಾರು ಮಾರಾಟ ಅಂಕಿ ಅಂಶ ಬಿಡುಗಡೆ
  • ಶೇಕಡಾ 4 ರಷ್ಟು ಕುಸಿತ ಕಂಡ ಮಾರುತಿ ಸುಜುಕಿ

ನವದೆಹಲಿ(ಜ.01):  ಹೊಸ ವರ್ಷವನ್ನು(New year 2022) ಭಾರತೀಯ ಆಟೋಮೊಬೈಲ್(Automobile) ಕಂಪನಿಗಳು ಆತ್ಮೀಯವಾಗಿ ಬರಮಾಡಿಕೊಂಡಿದ್ದೇವೆ. ಕಳೆದ ವರ್ಷ ಹಲವು ಏಳುಬೀಳುಗಳನ್ನು ಕಂಡಿದ್ದರೂ, ಸವಾಲುಗಳನ್ನು ಮೆಟ್ಟಿನಿಂತಿದೆ. ಇದೀಗ 2021ರ ಡಿಸೆಂಬರ್ ತಿಂಗಳ ಕಾರು ಮಾರಾಟ ಅಂಕಿ ಅಂಶ ಬಹಿರಂಗವಾಗಿದೆ. ಸತತ ಏರಿಕೆ ಕಾಣುತ್ತಾ ಮುನ್ನುಗ್ಗುತ್ತಿದ್ದ ಮಾರುತಿ ಸುಜುಕಿ(Maruti Suzuki) ಈ ಬಾರಿ ಕುಸಿತ ಕಂಡಿದೆ. ಇದಕ್ಕೆ ಕೆಲ ಕಾರಣಗಳೂ ಇವೆ.

ಡಿಸೆಂಬರ್ 2021ರ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಶೇಕಡಾ 4 ರಷ್ಟು ಕುಸಿತ ತಂಡಿದೆ. ಡಿಸೆಂಬರ್ 2021ರಲ್ಲಿ 1,53,149 ಮಾರುತಿ ಸುಜುಕಿ ಕಾರುಗಳು ಮಾರಾಟಗೊಂಡಿದೆ(Car Sales). ಡಿಸೆಂಬರ್ ತಿಂಗಳ ಮಾರಾಟದಲ್ಲಿ ಮಾರುತಿ ಸುಜುಕಿ ಕುಸಿತ ಕಂಡಿದ್ದರೂ ಒಟ್ಟಾರೆ ಮಾರಾಟದಲ್ಲಿ ಮಾರುತಿ ಸುಜುಕಿ ಮೊದಲ ಸ್ಥಾನದಲ್ಲಿದೆ. ಇನ್ನು ಎರಡನೇ ಸ್ಥಾನಕ್ಕೆ ಇದೀಗ ಟಾಟಾ ಮೋಟಾರ್ಸ್(Tata Motors) ಲಗ್ಗೆ ಇಟ್ಟಿದೆ. ಇನ್ನು ಎರಡನೇ ಸ್ಥಾನದಲ್ಲಿದ್ದ ಹ್ಯುಂಡೈ ಇಂಡಿಯಾ ಇದೀಗ 3ನೇ ಸ್ಥಾನಕ್ಕೆ ಕುಸಿದಿದೆ.

Latest Videos

undefined

Maruti Baleno Car ಹೊಸ ರೂಪ, ಹೊಸ ಎಂಜಿನ್, ಶೀಘ್ರದಲ್ಲೇ ಮಾರುತಿ ಸುಜುಕಿ ಬಲೆನೋ ಫೇಸ್‌ಲಿಫ್ಟ್ ಕಾರು ಬಿಡುಗಡೆ!

ಮಾರುತಿ ಸುಜುಕಿ 2020ರ ಡಿಸೆಂಬರ್ ತಿಂಗಳಲ್ಲಿ 1,60,226 ಮಾರುತಿ ಕಾರುಗಳು ಭಾರತದಲ್ಲಿ ಮಾರಾಟವಾಗಿದೆ. ಇನ್ನು 2021ರ ನವೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ 1,39,184 ಕಾರುಗಳು ಮಾರಾಟಗೊಂಡಿದೆ. ನವೆಂಬರ್ ತಿಂಗಳಕ್ಕೆ ಹೋಲಿಸಿದರೆ ಡಿಸೆಂಬರ್ ತಿಂಗಳಲ್ಲಿ ಶೇಕಡಾ 10 ರಷ್ಟು ಮಾರಾಟದಲ್ಲಿ ಏರಿಕೆ ಕಂಡಿದೆ. 

ಸೆಮಿಕಂಡಕ್ಟರ್ ಚಿಪ್ ಕೊರತೆ:
ಮಾರುತಿ ಸುಜುಕಿ ಮಾರಾಟ ದಾಖಲೆಯಲ್ಲಿ ಕುಸಿತ ಕಾಣಲು ಪ್ರಮುಖ ಕಾರಣ ಸೆಮಿಕಂಡಕ್ಟರ್ ಚಿಪ್ ಕೊರತೆ. ಇದರಿಂದ ಮಾರುತಿ ಸುಜುಕಿ ಕಾರುಗಳ ಉತ್ಪಾದನೆ ಕುಂಠಿತವಾಗಿದೆ. ಬುಕಿಂಗ್ ಮಾಡಿದ ಹಲವು ಗ್ರಾಹಕರಿಗೆ ಮಾರುತಿ ಸುಜುಕಿ ಕಾರು ಉತ್ಪಾದನೆಯಾಗದ ಕಾರಣ ಡೆಲಿವರಿ ಮಾಡಲು ಸಾಧ್ಯವಾಗಿಲ್ಲ.

ಪ್ರಾದೇಶಿಕ ಮಾರಾಟದಲ್ಲೂ ಮಾರುತಿ ಸುಜುಕಿ ಕುಸಿತ ಕಂಡಿದೆ. ಡೋಮೆಸ್ಟಿಕ್ ಸೇಲ್ಸ್ ಡಿಸೆಂಬರ್ 2021ರ ತಿಂಗಳಲ್ಲಿ 1,30,869. ಇದೇ ಡಿಸೆಂಬರ್ 2020ರಲ್ಲಿ ಈ ಸಂಖ್ಯೆ 1,50,288 ಆಗಿತ್ತು. ಹೀಗಾಗಿ ಶೇಕಡಾ 12ರಷ್ಟು ಡೋಮೆಸ್ಟಿಕ್ ಸೇಲ್ಸ್ ಕುಸಿತ ಕಂಡಿದೆ. ಆದರೆ ನವೆಂಬರ್ 2021ಕ್ಕೆ ಹೋಲಿಸಿದರೆ ಶೇಕಡಾ 11 ರಷ್ಟು ಏರಿಕೆ ಕಂಡಿದೆ. ನವೆಂಬರ್ 2021ರಲ್ಲಿ ಮಾರುತಿ ಸುಜುಕಿ 1,17,791 ಕಾರುಗಳು ಮಾರಾಟವಾಗಿದೆ.

New generation Alto ಹೊಸ ವರ್ಷದಲ್ಲಿ ಹೊಸ ರೂಪದಲ್ಲಿ ನ್ಯೂ ಜನರೇಶನ್ ಮಾರುತಿ ಸುಜುಕಿ ಅಲ್ಟೋ ಬಿಡುಗಡೆ!

ಭಾರತದಲ್ಲಿ ಉತ್ಪಾದನೆಯಾದ ಮಾರುತಿ ಸುಜುಕಿ ಕಾರುಗಳ ಪೈಕಿ ಡಿಸೆಂಬರ್ 2021ರಲ್ಲಿ 22,280 ಕಾರುಗಳನ್ನು ವಿದೇಶಕ್ಕೆ ರಫ್ತು ಮಾಡಲಾಗಿದೆ. 2020ರ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ  ಏರಿಕೆ ಕಂಡಿಡೆ. 2020ರ ಡಿಸೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ 9,938 ಕಾರುಗಳನ್ನು ವಿದೇಶಕ್ಕೆ ರಫ್ತು ಮಾಡಿತ್ತು. ಅಲ್ಟೋ, ಎಸ್‌ಪ್ರೆಸ್ಸೋ, ವ್ಯಾಗನ್ಆರ್, ಸ್ಪಿಫ್ಟ್, ಸೆಲೆರಿಯೋ, ಇಗ್ನಿಸ್ , ಬಲೆನೋ, ಹಾಗೂ ಡಿಸೈರ್ ಕಾರುಗಳ ಮಾರಾಟದಲ್ಲಿ ಕುಸಿತ ಕಂಡಿದೆ. ಡಿಸೆಂಬರ್ ತಿಂಗಳಲಿ ಈ ಕಾರುಗಳ ಮಾರಾಟದ ಒಟ್ಟು ಸಂಖ್ಯೆ  85,665. ಆದರೆ 2020ರ ಡಿಸೆಂಬರ್ ತಿಂಗಳಲ್ಲಿ ಇದೇ ಕಾರುಗಳ ಮಾರಾಟ ಸಂಖ್ಯೆ 1,02,568. 

ದೇಶದ ಅತೀ ದೊಡ್ಡ ಕಾರು ಉತ್ಪಾದನಾ ಕಂಪನಿ ಮಾರುತಿ ಸುಜುಕಿ ಭಾರತದಲ್ಲಿ ಅಗ್ರಸ್ಥಾನವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪ್ರಬಲ ಪೈಪೋಟಿ ನಡುವೆ ಮಾರುತಿ ಸುಜುಕಿ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ. ಮಾರುತಿ ಸುಜುಕಿ ಕಾರುಗಳು ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕಾರುಗಳಾಗಿದೆ. ಇನ್ನು ಗರಿಷ್ಠ ಮೈಲೇಜ್ ಹಾಗೂ ಕಡಿಮೆ ವೆಚ್ಚದ ನಿರ್ವಹಣೆಗೂ ಮಾರುತಿ ಸುಜುಕಿ ಹೆಸರುವಾಸಿಯಾಗಿದೆ. ಜೊತೆಗೆ ಭಾರತದ ರಸ್ತೆಗಳಿಗೆ ಬೇಕಾದ ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಕೂಡ ನೀಡಲಾಗಿದೆ. ಹಲವು ಕಾರಣಗಳಿಂದ ಭಾರತೀಯರು ಮಾರುತಿ ಸುಜುಕಿ ಕಾರುಗಳ ಮೊರೆ ಹೋಗುತ್ತಿದ್ದಾರೆ.

click me!