1,81,754 ಸಿಯಾಜ್, ಎರ್ಟಿಗಾ, ವಿಟಾರಾ ಬ್ರೆಜಾ, ಎಸ್ ಕ್ರಾಸ್, ಎಕ್ಸ್ಎಲ್6 ಕಾರ್ ರಿಕಾಲ್ ಮಾಡಿದ ಮಾರುತಿ ಸುಜುಕಿ!

By Suvarna NewsFirst Published Sep 7, 2021, 6:57 PM IST
Highlights

ದೋಷಗಳನ್ನು ಸರಿಪಡಿಸುವ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಕಂಪನಿಯ ಸುಮಾರು 1.8 ಲಕ್ಷಕ್ಕೂ ಅಧಿಕ ಸಿಯಾಜ್, ಎರ್ಟಿಗಾ, ವಿಟಾರಾ ಬ್ರೆಜ್, ಎಸ್ ಕ್ರಾಸ್, ಎಕ್ಸ್ ಎಲ್ 6 ಕಾರ್‌ಗಳನ್ನು ರಿಕಾಲ್  ಮಾಡಲಿದೆ.  ಇದರ ಮಧ್ಯೆಯೇ ಕಂಪನಿಯು ತನ್ನ ಕಾರಿನ  ಬೆಲೆಯಲ್ಲಿ ಹೆಚ್ಚಳ ಕೂಡ ಮಾಡಿದೆ.

ಡೌಟೇ ಇಲ್ಲ. ಮಾರುತಿ ಸುಜುಕಿ  ಭಾರತದ ಜನಪ್ರಿಯ ಕಾರ್ ಬ್ರ್ಯಾಂಡ್.  ಕೈಗೆಟುಕುವ ದರದಲ್ಲಿ ಕಾರ್‌ಗಳನ್ನು ಮಾರಾಟ ಮಾಡುವ ಮಾರುತಿ ದೇಶದ ಬಹುದೊಡ್ಡ ಕಾರ್ ತಯಾರಿಕಾ ಕಂಪನಿಯೂ ಹೌದು. ಹಾಗಾಗಿ, ಇಂದು ಭಾರತದ ಬಹುತೇಕ ಮನೆಗಳಲ್ಲಿ ಅದರಲ್ಲೂ ವಿಶೇಷವಾಗಿ ಮಧ್ಯಮ ವರ್ಗದ ಮನೆಗಳಲ್ಲಿ ನೀವು ಮಾರುತಿ ಕಂಪನಿಯ ಯಾವುದಾದರೂ ಒಂದು ಕಾರನ್ನು ಕಂಡೇ ಕಾಣುತ್ತೀರಿ. ಅಷ್ಟರ ಮಟ್ಟಿಗೆ ಮಾರುತಿ ಕಾರ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿವೆ.

ಇಷ್ಟೊಂದು ಜನಪ್ರಿಯ ಕಂಪನಿಯಾಗಿರುವ ಮಾರುತಿ ಸುಜುಕಿ, ತನ್ನ ಕೆಲವು ಪೆಟ್ರೋಲ್ ಆಧರಿತ ಕಾರ್‌ಗಳನ್ನು ರಿಕಾಲ್ ಮಾಡುತ್ತಿದೆ. ತಾಂತ್ರಿಕ ತೊಂದರೆ ಹಿನ್ನೆಲೆಯಲ್ಲಿ ಕಂಪನಿಯು ಪೆಟ್ರೋಲ್ ವೆರಿಯೆಂಟ್‌ಗಳಾದ ಸೆಡಾನ್ ಸಿಯಾಜ್, ಹ್ಯಾಚ್‌ಬ್ಯಾಕ್‌ಗಳಾದ ಎರ್ಟಿಗಾ, ವಿಟಾ ರಾ ಬ್ರೆಜಾ, ಎಸ್ ಕ್ರಾಸ್ ಮತ್ತು ಎಕ್ಸ್‌ಎಲ್ 6 ವಾಹನಗಳನ್ನು ರಿಕಾಲ್ ಮಾಡುತ್ತಿದೆ. 

2018 ಮೇ 4ರಿಂದ 2020 ಅಕ್ಟೋಬರ್ 7ರ ನಡುವಿನ ಅವಧಿಯಲ್ಲಿ ಮಾರಾಟ ಮಾಡಲಾಗಿರುವ ಈ ಬ್ರ್ಯಾಂಡುಗಳು ಅಂದರೆ ಸುಮಾರು 181,754 ಕಾರ್‌ಗಳನ್ನು ರಿಕಾಲ್ ಮಾಡಿ, ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಲಿದೆ ಮಾರುತು ಸುಜುಕಿ ಕಂಪನಿಯು.  ಸುರಕ್ಷತೆಗೆ ಸಂಬಂಧಿಸಿದಂತೆ ಸಂಭಾವ್ಯ ದೋಷಗಳನ್ನು ಸರಿಪಡಿಸುವುದಕ್ಕಾಗಿ ಕಂಪನಿಯು  ಜಗತ್ತಿನಾದ್ಯಂತ ಈ ಕಾರ್‌ಗಳನ್ನು ರಿಕಾಲ್ ಮಾಡುವ ಕೆಲಸವನ್ನು ಆರಂಭಿಸಿದೆ.

ರಾಯಲ್ ಎನ್‌ಫೀಲ್ಡ್ ಹೊಸ ಕ್ಲಾಸಿಕ್ 350 ಬುಲೆಟ್ ಲಾಂಚ್

ಗ್ರಾಹಕರ ಹಿತಾಸಕ್ತಿಯನ್ನ ಗಮನದಲ್ಲಿಟ್ಟುಕೊಂಡು ಸ್ವಯಂ ಆಗಿ ಬಾಧಿತ ಕಾರ್‌ಗಳನ್ನು ರಿಕಾಲ್ ಮಾಡಿ, ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಯನ್ನು ಪರೀಕ್ಷಿಸಿ ಇಲ್ಲವೇ ಉಚಿತವಾಗಿ ಮೋಟಾರ ಜನರೇಟರ್‌ ಯುನಿಟ್ ಅನ್ನ ಬದಲಿಸುವ ಕೆಲಸವನ್ನು ಮಾರುತಿ ಸುಜುಕಿ ಮಾಡಲಿದೆ.

ಬಾಧಿತ ವೆಹಿಕಲ್‌ಗಳ ಮಾಲೀಕರಿಗೆ ಮಾರುತಿ ಸುಜುಕಿ ಕಂಪನಿಯು ಈ ಸಂಬಂಧ ಮಾಹಿತಿಯನ್ನು ನೀಡಲಿದೆ. 2021 ನವೆಂಬರ್ ಮೊದಲ ವಾರದಿಂದ ದೋಷಪೂರಿತ ಕಾರಿನ  ಬಿಡಿಭಾಗವನ್ನು ಬದಲಿಸುವ ಕಾರ್ಯ ನಡೆಯಲಿದೆ. ಅಲ್ಲಿಯವರೆಗೂ ಗ್ರಾಹಕರು ನೀರಿನಿಂದ ತುಂಬಿದ ಪ್ರದೇಶಗಳಲ್ಲಿ ಚಾಲನೆ ಮಾಡುವುದನ್ನು ತಪ್ಪಿಸಬೇಕು ಮತ್ತು ವಾಹನಗಳ ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ ಭಾಗಗಳ ಮೇಲೆ ನೇರ ನೀರಿನ ಸಿಂಪಡಣೆಯನ್ನು ಮಾಡಲು ಹೋಗಬಾರದು ಎಂದು ಕಂಪನಿ ಕೇಳಿಕೊಂಡಿದೆ. 

ತುಟ್ಟಿಯಾದ ಮಾರುತಿ ಕಾರ್‌ಗಳು
ಕೆಲವು ಹೆಚ್ಚುವರಿ ವೆಚ್ಚಗಳಿಂದಾಗಿ ಸೋಮವಾರದಿಂದ ಮಾರುತಿ ಕಾರ್‌ಗಳು ಸ್ವಲ್ಪ ತುಟ್ಟಿಯಾಗಲಿವೆ. ಈ ಬಗ್ಗೆ ಕಂಪನಿಯು ಮಾಹಿತಿಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಕಂಪನಿಯ ಕೆಲವು ಆಯ್ದ ಮಾಡೆಲ್‌ಗಳ ಖರೀದಿಯು ತುಟ್ಟಿಯಾಗಲಿದೆ.

ರೆನೋಗೆ 10 ವರ್ಷ: ಹೊಸ 2021 ಕ್ವಿಡ್ ಲಾಂಚ್, ವಿಶೇಷ ಆಫರ್ಸ್!

ಕಾರ್ ಬೆಲೆ ಹೆಚ್ಚಳವು ಶೇ.2ರಷ್ಟು ಹೆಚ್ಚಳವಾಗಿದೆ. ಇದು ದೇಶದ ಎಲ್ಲ ಪ್ರದೇಶಕ್ಕೂ ಅನ್ವಯವಾಗಲಿದೆ. ದಿಲ್ಲಿಯಲ್ಲಿ ಮಾರುತಿ ಕಾರ್‌ಗಳ ಶೋರೂಮ್ ಬೆಲೆ ಸರಾಸರಿ ಶೇ.1.9ರಷ್ಟಿದೆ. ಹಾಗೆಯೇ ದೇಶದ ಇತರ ನಗಳಲ್ಲೂ ಹೆಚ್ಚು ಕಡಿಮೆ ಇದೇ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎನ್ನಲಾಗುತ್ತಿದೆ.

ಮಾರುತಿ ಕಂಪನಿಯು ಈ ವರ್ಷದ ಜನವರಿ ಮತ್ತು ಏಪ್ರಿಲ್‌ನಲ್ಲೂ ಕೂಡ ತನ್ನ ಕಾರುಗಳ ಬೆಲೆಯನ್ನು ಹೆಚ್ಚುಕಡಿಮೆ ಶೇ.3.5ರಷ್ಟು ಹೆಚ್ಚಳ ಮಾಡಿದ್ದನ್ನು ಗಮನಿಸಬಹುದು. ಕಂಪನಿಯು ಭಾರತದಲ್ಲಿ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಅಲ್ಟೋದಿಂದ ಎಸ್‌-ಕ್ರಾಸ್ ಕಾರುಗಳನ್ನು 2.99 ರೂಪಾಯಿಯಿಂದ 12.39 ಲಕ್ಷ ರೂ.ವರೆಗೂ ಮಾರಾಟ ಮಾಡುತ್ತಿದೆ. ಇದೆಲ್ಲವೂ ದೆಹಲಿ ಶೋರೂಂ ಬೆಲೆಯಾಗಿದೆ.



ಕಾರು ನಿರ್ಮಾಣಕ್ಕೆ ಬೇಕಾಗುವ ಎಲ್ಲ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಿರುವುದರಿಂದ ಅನಿವಾರ್ಯವಾಗಿ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡಲೇಬೇಕಾದ ಪರಿಸ್ಥಿತಿಯ ಉಂಟಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. 

ಹುಂಡೈ ಕ್ಯಾಸ್ಪರ್ ಮೈಕ್ರೋ ಎಸ್‌ಯುವಿ ಅನಾವರಣ; ಟಾಟಾಗೆ ‘ಪಂಚ್’ ಕೊಡುತ್ತಾ?

ಏತನ್ಮಧ್ಯೆ, ಹೊಸ ತಲೆಮಾರಿನ ಮಾರುತಿ ಸೆಲೆರಿಯೋ ಕಾರನ್ನು ಲಾಂಚ್ ಕೂಡ ಮಾಡಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಈ ಕಾರು ಅನೇಕ ಬಾರಿ ರೋಡ್‌ಗಳಲ್ಲಿ ಕಾಣಿಸಿಕೊಂಡಿರುವುದು ವರದಿಯಾಗಿದೆ. ಹಬ್ಬದ ಹೊತ್ತಿಗೆ ಈ ಕಾರ್  ಲಾಂಚ್ ಆಗಲಿದೆ ಎಂದು ಹೇಳಲಾಗುತ್ತಿದೆಯಾದರೂ ಈ ಬಗ್ಗೆ ಯಾವುದೇ ಖಚಿತ ಮಾಹಿತಿಗಳಿಲ್ಲ.

click me!