ಮಾರುತಿ ಸುಜುಕಿ ದೇಶದ ಅಗ್ರಗಣ್ಯ ಕಾರು ಉತ್ಪಾದನಾ ಕಂಪನಿಯಾಗಿದೆ. ಹಲವು ವರ್ಷಗಳಿಂದಲೂ ಅಗ್ರಗಣ್ಯ ಸ್ಥಾನವನ್ನು ಕಾಯ್ದುಕೊಂಡು ಬಂದಿದೆ. 2021ರ ಜುಲೈ ತಿಂಗಳಲ್ಲೂ ಗರಿಷ್ಠ ಕಾರುಗಳನ್ನು ಮಾರಾಟ ಮಾಡುವ ಮೂಲಕ ಅದ್ಭುತ ಪ್ರದರ್ಶನವನ್ನು ತೋರಿದೆ. ಇದು ಆರ್ಥಿಕ ಬೆಳವಣಿಗೆಯಲ್ಲಿ ಸಕಾರಾತ್ಮಕ ಸಂಗತಿಯಾಗಿದೆ.
ದೇಶದ ಪ್ರಮುಖ ಮತ್ತು ಜನಪ್ರಿಯ ವಾಹನ ತಯಾರಿಕಾ ಕಂಪನಿ ಎನಿಸಿಕೊಂಡಿರುವ ಮಾರುತಿ ಸುಜುಕಿ, ಜುಲೈ ತಿಂಗಳಲ್ಲೂ ಅದ್ಭುತ ಪ್ರದರ್ಶನ ತೋರಿದೆ. ಕಾರುಗಳ ಮಾರಾಟದಲ್ಲಿ ತನ್ನ ಅಗ್ರಗಣ್ಯವನ್ನು ಪಟ್ಟವನ್ನು ಕಾಯ್ದುಕೊಂಡಿದೆ.
ಜುಲೈ ತಿಂಗಳಲ್ಲಿನ ಮಾರಾಟದ ಬಗ್ಗೆ ಮಾರುತಿ ಸುಜುಕಿ ಹೇಳಿಕೊಂಡಿರುವ ಪ್ರಕಾರ, ಕಂಪನಿಯು 1.36 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ. ಇದೇ ವೇಳೆ ಇದೇ ಅವಧಿಯಲ್ಲಿ 21,224 ವಾಹನಗಳನ್ನು ರಫ್ತು ಕೂಡ ಮಾಡಿದೆ. ದೇಶದಲ್ಲಿ ಉಳಿದಯ ಯಾವುದೇ ಕಂಪನಿಗಳು ಮಾರುತಿ ಸುಜುಕಿಯನ್ನು ಸಮಗೊಳಿಸಲು ಸಾಧ್ಯವಾಗಿಲ್ಲ.
undefined
ಎಥೆನಾಲ್, ಎಲೆಕ್ಟ್ರಿಕ್ ವಾಹನ ಆಯ್ತು, ಈಗ ಗ್ರೀನ್ ಹೈಡ್ರೋಜನ್ ಇಂಧನ
ದೇಶಿಯ ಮಾರುಕಟ್ಟೆಯಲ್ಲಿ 1.33 ಲಕ್ಷ ಪ್ರಯಾಣಿಕ ವಾಹನಗಳನ್ನು ಕಳೆದ ತಿಂಗಳಲ್ಲಿ ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು 97,7868 ವಾಹನಗಳನ್ನು ಮಾರಾಟ ಮಾಡಿತ್ತು. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ಮಾರಾಟದ ಪ್ರಮಾಣವೂ ಹೆಚ್ಚಳವಾಗಿದೆ. ವಿಶೇಷ ಎಂದರೆ, ಕಳೆದ ವರ್ಷ ಮತ್ತು ಈ ವರ್ಷವೂ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯ ಮಧ್ಯೆಯೇ ಕಂಪನಿ ಇಂಥದೊಂದು ಅದ್ಭುತ ಪ್ರದರ್ಶನ ತೋರಲು ಸಾಧ್ಯವಾಗಿದೆ. ಸಣ್ಣ ಕಾರುಗಳ ವಿಭಾಗದಲ್ಲಿ ಹೆಚ್ಚಿನ ಕಾರುಗಳನ್ನು ಮಾರಾಟ ಮಾಡುವ ಮೂಲಕವೇ ಮಾರುತಿ ಸುಜುಕಿ ಈ ಪ್ರದರ್ಶನ ತೋರಲು ಸಾಧ್ಯವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಬ್ ಕಾಂಪಾಕ್ಟ್ ವಾಹನಗಳು ಎನಿಸಿಕೊಡಿರುವ ವಾಗನ್ ಆರ್, ಸ್ವಿಫ್ಟ್, ಸೆಲೆರಿಯೋ, ಇಗ್ನಿಸ್, ಬಲೆನೋ ಮತ್ತು ಡಿಸೈರ್ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ. ಸುಮಾರು 70,268 ಈ ವಾಹನಗಳನ್ನು ಮಾರಾಟ ಮಾಡುವಲ್ಲಿ ಕಂಪನಿ ಯಶಸ್ವಿಯಾಗಿದೆ. ಇವುಗಳ ಬಳಿಕ ಅಲ್ಟೋ ಮತ್ತು ಎಸ್ ಪ್ರೆಸ್ಸೋ ಕಾರುಗಳು ಕೂಡ ಚೆನ್ನಾಗಿಯೇ ಮಾರಾಟ ಕಂಡಿವೆ. ಜುಲೈ ತಿಂಗಳಲ್ಲಿ ಈ ಎರಡೂ ಕಾರುಗಳ ಮಾರಾಟವಾದ ಸಂಖ್ಯೆ 19,685.
ಹೆಚ್ಚಿನ ಕಾರುಗಳ ಮಾರಾಟಕ್ಕೆಕಾರಣವಾಗಿರುವ ಮತ್ತೊಂದು ವಿಭಾಗ ಎಂದರೆ ಅದು ಯುಟಿಲಿಟಿ ವೆಹಿಕಲ್ ಸಬ್ ಸೆಗ್ಮೆಂಟ್. ಈ ವಿಭಾಗದಲ್ಲಿ ಮಾರುತಿ ಸುಜುಕಿ ಎರ್ಟಿಗಾ, ಎಕ್ಸ್ಎಲ್6, ವಿಟಾರಾ ಬ್ರೆಜಾ ಪ್ರಮುಖ ವಾಹನಗಳಾಗಿವೆ. ಕಂಪನಿ ಈ ವಿಭಾಗದಲ್ಲಿ 32,272 ವಾಹನಗಳನ್ನು ಮಾರಾಟ ಮಾಡಿದೆ.
ಬೆನೆಲಿ 502c ಬೈಕ್ ಬಿಡುಗಡೆ, ಬೆಲೆ ಎಷ್ಟು, ಏನೆಲ್ಲ ವಿಶೇಷತೆಗಳಿವೆ?
ಇದೇ ವೇಳೆ, ಕಂಪನಿಯು ರಫ್ತು ವಿಭಾಗದಲ್ಲೂ ಚೆನ್ನಾಗಿಯೇ ಪ್ರದರ್ಶನ ತೋರಿದೆ. ಈ ಸೆಗ್ಮೆಂಟ್‌ನಲ್ಲಿ ಕಂಪನಿಯ 2020 ಜುಲೈನಲ್ಲಿ 6,757 ವಾಹನಗಳನ್ನು ಮಾರಾಟ ಮಾಡಿತ್ತು. ಆ ಪ್ರಮಾಣವೀಗ 21,224ಕ್ಕೇರಿಕೆಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಅಗ್ರಗಣ್ಯವಾಗಿರುವ ಮಾರುತಿ ಕಾರುಗಳು ಹೆಚ್ಚು ಜನಪ್ರಿಯವಾಗಿವೆ. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ವಾಹನಗಳನ್ನು ಮಾರಾಟ ಮಾಡುವುದು ಹೆಚ್ಚು ಸಕ್ಸೆಸ್ ನೀಡಿದೆ.
ವಾಸ್ತವದಲ್ಲಿ 2019ರಲ್ಲಿ ಭಾರತೀಯ ವಾಹನೋದ್ಯಮ ಭಾರೀ ಹೊಡೆತವನ್ನು ಎದುರಿಸಿತ್ತು. ಬಳಿಕ ಕೋರೋನಾ ಸಾಂಕ್ರಾಮಿಕದಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು. ಆದರೆ, ಕಳೆದ ತಿಂಗಳ ಮಾರಾಟದ ಲೆಕ್ಕಾಚಾರವನ್ನು ಗಮನಿಸಿದರೆ, ಭಾರತೀಯ ವಾಹನೋದ್ಯಮ ಮತ್ತೆ ಮೇಲ್ಮುಖವಾಗಿ ಚಲಿಸುತ್ತಿರುವುದು ಆರ್ಥಿಕ ಬೆಳವಣಿಗೆ ಹಿನ್ನೆಲೆಯಲ್ಲಿ ಸಕಾರಾತ್ಮಕಸಂಗತಿಯಾಗಿದೆ.
ಭಾರತದ ಆಟೋಮೊಬೈಲ್ ಉದ್ಯಮವು 2018-19ರ ಹಿಂದಿನ ಗರಿಷ್ಠ ಮಟ್ಟಗಳು ದೂರದಲ್ಲಿರುವಂತೆ ಕಂಡರೂ, ಈಗ ಸಹಜತೆಯ ಸ್ವಲ್ಪ ಮಟ್ಟಿಗೆ ಹಿಂದಿರಗಲು ನೋಡುತ್ತಿದೆ. ಉತ್ತಮ ಮುಂಗಾರು,ಹಬ್ಬದ ತಿಂಗಳುಗಳು ಎದುರಾಗುತ್ತಿವೆ. ಜನರು ಈಗ ವೈಯಕ್ತಿಕ ಸಾರಿಗೆ ಆದ್ಯತೆ ನೀಡುವುದರಿಂದ ಉದ್ಯಮವು ಮೂರನೇ ಕೋವಿಡ್ ಅಲೆಯ ಬೆದರಿಕೆಯ ಮಧ್ಯೆಯೇ ಆಟೊಮೊಬೈಲ್ ಉದ್ಯಮ ಹೆಚ್ಚು ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸುವ ಅಂದಾಜಿದೆ.
250 ಕೆಜಿ ಭಾರ ಹೊತ್ತೊಯ್ಯಬಲ್ಲ ಜಿಪ್ ಕಾರ್ಗೊ ಎಲೆಕ್ಟ್ರಿಕ್ ಸ್ಕೂಟರ್!
ಮಾರುತಿ ಸುಜುಕಿಯಂತೆ ಇತರ ಕಂಪನಿಗಳು ಕೂಡ ಜುಲೈ ತಿಂಗಳಲ್ಲಿ ಅದ್ಭುತ ಪ್ರದರ್ಶನವನ್ನು ತೋರಿವೆ. ಅವು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಬ್ರ್ಯಾಂಡ್ ಕಾರುಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿವೆ. ಇನ್ನು ಮುಂಬರುವ ತಿಂಗಳುಗಳು ಹಬ್ಬದ ತಿಂಗಳುಗಳಾಗಿರುವುದರಿಂದ ಇನ್ನೂ ಹೆಚ್ಚಿನ ಮಾರಾಟವನ್ನು ನಿರೀಕ್ಷಿಸಬಹುದಾಗಿದೆ.