ಜಾಗ್ವಾರ್ F ಟೈಪ್R ಡೈನಮಿಕ್ ಬ್ಲ್ಯಾಕ್ ಕಾರು ಬುಕಿಂಗ್ ಆರಂಭ!

By Suvarna News  |  First Published Aug 2, 2021, 9:18 PM IST
  • ಹೊಚ್ಚ ಹೊಸ ಜಾಗ್ವಾರ್ F ಟೈಪ್R ಡೈನಮಿಕ್ ಬ್ಲ್ಯಾಕ್ ಕಾರು ಬುಕಿಂಗ್
  • ನೂತನ ಕಾರಿನಲ್ಲಿದೆ ಹತ್ತು ಹಲವು ವಿಶೇಷತಗಳು

ಬೆಂಗಳೂರು(ಆ.02): ಜಾಗ್ವಾರ್ ಲ್ಯಾಂಡ್‍ರೋವರ್ ಇಂಡಿಯಾ  ಭಾರತದಲ್ಲಿ ಹೊಸ ಜಾಗ್ವಾರ್ F ಟೈಪ್R ಡೈನಮಿಕ್ ಬ್ಲ್ಯಾಕ್ ಕಾರಿನ ಬುಕಿಂಗ್ ಆರಂಭಿಸಿದೆ.  ಜಾಗ್ವಾರ್ ಆರ್-ಡೈನಮಿಕ್ ಬ್ಲ್ಯಾಕ್ 331 KW ಶಕ್ತಿ ಮತ್ತು 580 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.  5.0 ಲೀ 331 KW ಸೂಪರ್ ಚಾರ್ಜ್ ಹಾಗೂ V8 ಇಂಜಿನ್ ಹೊಂದಿದೆ. ಶೀಘ್ರದಲ್ಲೇ ಬೆಲೆ ಬಹಿರಂಗವಾಗಲಿದೆ.

ಭಾರತದಲ್ಲಿ ಹೊಚ್ಚ ಹೊಸ ಜಾಗ್ವಾರ್ F-PACE ಬಿಡುಗಡೆ!

ಹೊಸ ಆರ್-ಡೈನಮಿಕ್ ಬ್ಲ್ಯಾಕ್‍ದಲ್ಲಿ, ಎಫ್-ಟೈಪ್‍ನ ಪರಿಶುದ್ಧವಾದ, ಕೆತ್ತನೆಯ ಸ್ವರೂಪವು, ಬ್ಲ್ಯಾಕ್ ಪ್ಯಾಕ್ ಮತ್ತು 50.8 ಸೆಂ.ಮೀ(20) ಹೊಳೆಯುವ ಬ್ಲ್ಯಾಕ್ ಫಿನಿಶ್‍ನೊಂದಿಗೆ ಐದು ಸ್ಪ್ಲಿಟ್-ಸ್ಪೋಕ್ ಚಕ್ರಗಳಿಂದ ವರ್ಧಿತಗೊಂಡಿದೆ. ಇವುಗಳಿಗೆ ನಿಖರವಾಗಿ ಪೂರಕವಾಗಿರುವಂತೆ ಮೂರು ಮೆಟಾಲಿಕ್ ಪೈಂಟ್‍ಗಳ ಆಯ್ಕೆಯಿದೆ: ಸಂಟೋರಿನಿ ಬ್ಲ್ಯಾಕ್, ಈಗರ್ ಗ್ರೇ ಅಥವಾ ಫ್ರೆನ್ಜೀಡ್‍ರೆಡ್
 
ಐಶಾರಾಮೀ ವಸ್ತುಗಳಿಂದ ಸುತ್ತುವರಿಯುತ್ತದೆ. ತೆಳುವಾದ ಕಾರ್ಯಕ್ಷಮತೆಯುಳ್ಳ ಆಸನಗಳು 12-ಮಾರ್ಗ ಸರಿಪಡಿಸುವಿಕೆಗಳನ್ನು ಹೊಂದಿದ್ದು, ಲೈಟ್ ಓಯೆಸ್ಟರ್ ಕಾಂಟ್ರಾಸ್ಟ್ ಹೊಲಿಗೆ ಇರುವ ಎಬೋನಿ ಅಥವಾ ಇನ್ನೂ ಹೆಚ್ಚಿನ ಸ್ಪೋರ್ಟ್ಸ್ ಥೀಮ್‍ಗಾಗಿ ಅಗ್ನಿಕೆಂಪು ಹೊಲಿಗೆಯಿರುವ ಮಾರ್ಸ್‍ನ ಆಯ್ಕೆಯಿರುವ ವಿಂಡ್ಸರ್ ಲೆದರ್ ನಲ್ಲಿ ಟ್ರಿಮ್ ಗೊಳಿಸಲ್ಪಟ್ಟಿವೆ. ಡೋರ್ ಟ್ರಿಮ್‍ನಲ್ಲಿ ಪುನರಾವರ್ತಿಸಲಾಗಿರುವ ಸುಂದರ ವಿನ್ಯಾಸದ ಮಾನೋಗ್ರಾಮ್ ಹೊಲಿಗೆಯಂತಹ ವಿವರಗಳಿರುವ ಸೂಕ್ಷ್ಮ ಪರಿಷ್ಕರಣೆಗಳು ಎಫ್-ಟೈಪ್‍ ಆರ್-ಡೈನಮಿಕ್ ಬ್ಲ್ಯಾಕ್‍ಅನ್ನು ವಿಶೇಷಗೊಳಿಸಿವೆ.

Tap to resize

Latest Videos

undefined

ಎಫ್-ಟೈಪ್ ಆರ್-ಡೈನಮಿಕ್ ಬ್ಲ್ಯಾಕ್‍ನ ಪರಿಚಯದೊಂದಿಗೆ ನಿಖರವಾಗಿ ವಿಭಾಗಿಸಲ್ಪಟ್ಟ ಮತ್ತು ಅದ್ವಿತೀಯ ಸೌಂದರ್ಯ ಹೊಂದಿರುವ ಎಫ್-ಟೈಪ್ ಈಗ ಹಿಂದೆಂದಿಗಿಂತಲೂ ಹೆಚ್ಚು ವಿಶಿಷ್ಟವಾಗಿದ್ದು ನಿಜವಾದ ಸ್ಪೋರ್ಟ್ಸ್‍ಕಾರ್ ಪ್ರಿಯರು ತೊಡಗಿಕೊಳ್ಳುವುದಕ್ಕೆ ಮತ್ತು ಆನಂದಿಸುವುದಕ್ಕೆ ಹೆಚ್ಚಿನ ಕಾರಣಗಳನ್ನು ನೀಡುತ್ತದೆ. ಎಂದು ಜಾಗ್ವಾರ್ ಲ್ಯಾಂಡ್‍ರೋವರ್ ಇಂಡಿಯಾದ ಅಧ್ಯಕ್ಷ ಹಾಗು ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಸೂರಿ ಹೇಳಿದರು.

ಭಾರತದಲ್ಲಿ ಜಾಗ್ವಾರ್ ಉತ್ಪನ್ನ ಪೋರ್ಟ್‍ಪೋಲಿಯೋ
ಭಾರತದಲ್ಲಿ ಜಾಗ್ವಾರ್ ಶ್ರೇಣಿಯು XE (ಆರಂಭಿಕ ಬೆಲೆ₹ 46.64ಲಕ್ಷ), XF (ಆರಂಭಿಕ ಬೆಲೆ ₹ 55.67ಲಕ್ಷ), F-PACE (ಆರಂಭಿಕ ಬೆಲೆ ₹ 69.99ಲಕ್ಷ), I-PACE (ಆರಂಭಿಕ ಬೆಲೆ ₹ 105.9ಲಕ್ಷ) ಹಾಗು F-TYPE (ಆರಂಭಿಕ ಬೆಲೆ ₹ 97.97ಲಕ್ಷ). ಸೂಚಿಸಲಾಗಿರುವ ಎಲ್ಲಾ ಬೆಲೆಗಳೂ ಭಾರತದಲ್ಲಿ ಶೋರೂಮ್ ಆಚೆಗಿನ ಬೆಲೆಗಳಾಗಿರುತ್ತವೆ.

click me!