ದೇಶದ ಅತ್ಯಂತ ಪುರಾತನ ಕಾರು ತಯಾರಕ ಕಂಪನಿಗಳಲ್ಲಿ ಒಂದಾದ ಮಾರುತಿ ಸುಜುಕಿ ದೇಶದಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿದ ನಂತರ ಇಲ್ಲಿಯವರೆಗೆ ತಯಾರಿಸಿರುವ ಕಾರುಗಳ ಸಂಖ್ಯೆಯೆಷ್ಟು ಗೊತ್ತೆ? 2.5 ಕೋಟಿಗೂ ಹೆಚ್ಚು
ದೇಶದ ಅತ್ಯಂತ ಪುರಾತನ ಕಾರು ತಯಾರಕ ಕಂಪನಿಗಳಲ್ಲಿ ಒಂದಾದ ಮಾರುತಿ ಸುಜುಕಿ (Maruti Suzuki) ದೇಶದಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿದ ನಂತರ ಇಲ್ಲಿಯವರೆಗೆ ತಯಾರಿಸಿರುವ ಕಾರುಗಳ ಸಂಖ್ಯೆಯೆಷ್ಟು ಗೊತ್ತೆ? 2.5 ಕೋಟಿಗೂ ಹೆಚ್ಚು. ಮಾರುತಿ ಸುಜುಕಿ ಈ ಅಂಕಿಅಂಶಗಳನ್ನು ಇಂದು ಘೋಷಿಸಿದೆ. 1983ರಲ್ಲಿ ದೇಶದಲ್ಲಿ ಕಾರ್ಯಾಚರಣೆ ಆರಂಭಿಸಿದ ನಂತರ ಈ ಮೈಲಿಗಲ್ಲು ಸಾಧಿಸಿದ ಮೊದಲ ಭಾರತೀಯ ಕಂಪನಿಯಾಗಿ ಮಾರುತಿ ಸುಜುಕಿ ಹೊರಹೊಮ್ಮಿದೆ. ಮಾರುತಿ ಹರಿಯಾಣ ಗುರ್‌ಗಾವ್‌ನಲ್ಲಿ ತನ್ನ ಮೊದಲ ಉತ್ಪಾದನೆಯನ್ನು ಆರಂಭಿಸಿತು. ಅಂದಿನಿಂದ ತನ್ನ ವ್ಯಾಪ್ತಿಯನ್ನು ವಿಸ್ತರಿಸಿರುವ ಕಂಪನಿ ಈಗ ದೇಶದಲ್ಲಿ 16ಕ್ಕೂ ಹೆಚ್ಚು ಮಾದರಿ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಮಾದರಿಗಳು ಗುರುಗ್ರಾಮ ಮತ್ತು ಮಾಣೇಸರ್ ಉತ್ಪಾದನಾ ಘಟಕಗಳಲ್ಲಿ ತಯಾರಾಗಿವೆ. ಈ ಎರಡೂ ಘಟಕಗಳು ವರ್ಷಕ್ಕೆ 15 ಲಕ್ಷ ವಾಹನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿವೆ.
ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಮಾರುತಿ ಸುಜುಕಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ (CEO) ಹಿಸಾಶಿ ತಕೌಚಿ, “2022ಕ್ಕೆ ಸುಜುಕಿಯೊಂದಿಗೆ ಮಾರುತಿಯ ಪಾಲುದಾರಿಕೆಗೆ 40 ವರ್ಷ ಪೂರ್ಣಗೊಳ್ಳುತ್ತದೆ. 25 ಮಿಲಿಯನ್ ವಾಹನಗಳ ಉತ್ಪಾದನೆಯ ಮೈಲಿಗಲ್ಲು ಸಾಧಿಸಿರುವುದು ಭಾರತೀಯ ಜನರಿಗೆ ಕಂಪನಿ ಹೊಂದಿರುವ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು. 'ಆರಂಭದಲ್ಲಿ ಭಾರತೀಯ ಕಾರು ವಲಯದಲ್ಲಿ ಮಾರುತಿ ಸ್ಪರ್ಧಿಯೇ ಇಲ್ಲದ ಲೀಡರ್ ಆಗಿತ್ತು. ಆದರೆ, ಈಗ ಹಲವು ಪ್ರತಿಸ್ಪರ್ಧಿ ಕಂಪನಿಗಳು ಹುಟ್ಟು ಕೊಂಡಿದ್ದು, ಕೆಲವು ಕಂಪನಿಗಳು, ಕೆಲ ವಿಭಾಗಗಳಲ್ಲಿ ಮಾರುತಿಯನ್ನು ಹಿಂದಿಕ್ಕಿ ಮುಂದೆ ಸಾಗಿವೆ. ಹ್ಯುಂಡೈ (Hyundai) ಹಾಗೂ ಟಾಟಾ ಮೋಟಾರ್ಸ್ ಸದ್ಯ ಎರಡು ಹಾಗೂ ಮೂರನೇ ಸ್ಥಾನಕ್ಕೇರಿದ್ದರೆ, ಮಹೀಂದ್ರಾ (Mahindra), ಕಿಯಾ (Kia) ಮತ್ತು ಟೊಯೋಟೋ (Toyoto) ಕೂಡ ಇದೇ ಹಾದಿಯಲ್ಲಿ ಸಾಗಿವೆ. ಮಾರುತಿ ಕೂಡ ತನ್ನ ಶೈಲಿಯಲ್ಲಿ ಸಾಕಷ್ಟು ಸುಧಾರಣೆಗಳನ್ನು ಮಾಡಿಕೊಂಡಿದೆ.
ಮಾರುತಿ ಬ್ರೀಜಾ, ವಿಟಾರಾ ಕಾರುಗಳಿಗೆ ಭಾರಿ ಬೇಡಿಕೆ: 2 ಲಕ್ಷಕ್ಕೂ ಮೀರಿದ ಬುಕಿಂಗ್
ಸಣ್ಣ ಕಾರುಗಳು ಹಾಗೂ ಹ್ಯಾಚ್‌ಬ್ಯಾಕ್‌ಗಳು ಕಂಪನಿಯ ಮಾರುಕಟ್ಟೆ ಪಾಲನ್ನು ಹೆಚ್ಚು ಎತ್ತರಕ್ಕೆ ಕೊಂಡೊಯ್ದಿದೆ. ಈಗ ಗ್ರಾಹಕರ ಬೇಡಿಕೆಯನ್ನು ಅರಿತ ಮಾರುತಿ ಸುಜುಕಿ, ನಿಧಾನವಾಗಿ ದೊಡ್ಡ ಕಾರುಗಳತ್ತ ಗಮನ ಹರಿಸುತ್ತಿದೆ. ಪ್ರಮುಖವಾಗಿ ಎಸ್ಯುವಿಗಳು. ಸಬ್-ಕಾಂಪಾಕ್ಟ್ ಎಸ್ಯುವಿ ವಲಯದಲ್ಲಿ ಮಾರುತಿಯ ಬ್ರೀಜಾ ಮುಂಚೂಣಿಯಲ್ಲಿದೆ. ಇತ್ತೀಚೆಗೆ ಕಂಪನಿ ಗ್ರಾಂಡ್ ವಿಟಾರಾ ಮಿಡ್-ಸೈಜ್ ಎಸ್ಯುವಿ (SUV)ಯನ್ನು ಬಿಡುಗಡೆಗೊಳಿಸಿದ್ದು, ಉತ್ತಮ ಜನಪ್ರಿಯತೆ ಗಳಿಸಿದೆ. ಈ ವರ್ಷ ಮಾರುತಿ ಸುಜುಕಿ ಎಕ್ಸ್ಎಲ್6 (XL6), ಎರ್ಟಿಗಾ (Ertiga), ಬಲೆನೋ (Baleno), ಆಲ್ಟೋ (Alto) ಮತ್ತು ಬ್ರೀಜಾ (Breeza) ಕಾರುಗಳ ಫೇಸ್ಲಿಫ್ಟ್ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಜ್ಜಾಗಿದೆ.
ಮಾರುತಿ ಸುಜುಕಿ ಬಲೆನೊ ಈಗ ಎಸ್-ಸಿಎನ್ಜಿ (S-CNG) ಆಯ್ಕೆಗಳಲ್ಲಿ ಲಭ್ಯವಿದೆ. ಹೊಸದಾಗಿ ಬಿಡುಗಡೆಯಾದ ಬಲೆನೋ ಎಸ್-ಸಿಎನ್ಜಿ (Baleno S-CNG) ಡೆಲ್ಟಾ ಮತ್ತು ಝೀಟಾ ಎಂಬ ಎರಡು ವೇರಿಯಂಟ್‌ನ ಆಯ್ಕೆಗಳಲ್ಲಿ ಲಭ್ಯವಿದೆ. ಇದರ ಆರಂಭಿಕ ಬೆಲೆ ರೂ 8.28 ಲಕ್ಷ (ಎಕ್ಸ್ ಶೋ ರೂಂ). ಮಾರುತಿ ಸುಜುಕಿ ಬಲೆನೊ ಎಸ್-ಸಿಎನ್ಜಿ 1.2-ಲೀಟರ್ ಎಂಜಿನ್ ಹೊಂದಿದ್ದು, 6,000ಆರ್ಪಿಎಂನಲ್ಲಿ 76ಬಿಎಚ್ಪಿ ಮತ್ತು 4,300ಆರ್ಪಿಎಂನಲ್ಲಿ 98.5ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ ಮಾರುತಿ ಸುಜುಕಿ ಬಲೆನೊ ಅಂತರ್ನಿರ್ಮಿತ ಸುಜುಕಿ ಕನೆಕ್ಟ್, ಆನ್ಬೋರ್ಡ್ ಧ್ವನಿ ಸಹಾಯದೊಂದಿಗೆ ಏಳು-ಇಂಚಿನ ಸ್ಮಾರ್ಟ್ಪ್ಲೇ ಸ್ಟುಡಿಯೋ ಇನ್ಫೋಟೈನ್ಮೆಂಟ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಸಂಪರ್ಕ, ಮತ್ತು ಸಿಎನ್ಜಿ-ನಿರ್ದಿಷ್ಟ ಪರದೆಗಳೊಂದಿಗೆ ಎಂಐಡಿ ಡಿಸ್ಪ್ಲೇ ಸೇರಿ 40 ಕ್ಕೂ ಹೆಚ್ಚು ಸಂಪರ್ಕಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಸುರಕ್ಷತಾ ಕಾರಣ: 3 ಹ್ಯಾಚ್‌ಬ್ಯಾಕ್ ಹಿಂಪಡೆಯುತ್ತೆ ಮಾರುತಿ!