SUV ಡೀಸೆಲ್ ವಾಹನಕ್ಕೇ ಹೆಚ್ಚು ಡಿಮ್ಯಾಂಡ್, ಪೆಟ್ರೋಲ್ ಸ್ಮಾಲ್ ಕಾರಿನ ಕ್ರೇಜ್ ಮಾತ್ರ ಹೋಗಿಲ್ಲ!

By Suvarna News  |  First Published Nov 2, 2022, 5:08 PM IST

ಕಳೆದ ಕೆಲ ವರ್ಷಗಳಲ್ಲಿ ಜನರು ಡೀಸೆಲ್‌ ವಾಹನಗಳನ್ನು ಬಿಟ್ಟು ಪೆಟ್ರೋಲ್‌ ವಾಹನಗಳ ಮೊರೆ ಹೋಗುತ್ತಿರುವುದು ಕಂಡುಬಂದಿತ್ತು. ಆದರೆ, ಈಗ ಮತ್ತೊಮ್ಮೆ ಡೀಸೆಲ್‌ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ವಿಶೇಷವಾಗಿ ಎಸ್‌ಯುವಿ ವಲಯದಲ್ಲಿ.


ಪರಿಸರ ಮಾಲಿನ್ಯ, ಕಾರ್ಯಕ್ಷಮತೆ ಹಾಗೂ ಸರ್ಕಾರದ ಗುಜುರಿ ನೀತಿ (scrap policy), ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ದೇಶದ ಜನರು ಕಳೆದ ಕೆಲ ವರ್ಷಗಳಲ್ಲಿ ಜನರು ಡೀಸೆಲ್‌ ವಾಹನಗಳನ್ನುಬಿಟ್ಟು ಪೆಟ್ರೋಲ್‌ ವಾಹನಗಳ ಮೊರೆ ಹೋಗುತ್ತಿರುವುದು ಕಂಡುಬಂದಿತ್ತು. ಆದರೆ, ಈಗ ಮತ್ತೊಮ್ಮೆ ಡೀಸೆಲ್‌ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ವಿಶೇಷವಾಗಿ ಎಸ್‌ಯುವಿ (SUV) ವಲಯದಲ್ಲಿ. ಕಾರು ತಯಾರಕರು ಅಕ್ಟೋಬರ್‌ ತಿಂಗಳ ಮಾರಾಟದ ಅಂಕಿಅಂಶಗಳನ್ನು ಪ್ರಕಟಿಸಿದ್ದು, ಹಬ್ಬದ ಋತುವಿನಲ್ಲಿ ಹೆಚ್ಚಿನ ಕಾರುಗಳು ಮಾರಾಟವಾಗಿವೆ. ಇದರಲ್ಲಿ ಕಾರು ಖರೀದಿದಾರರು ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳನ್ನು ಖರೀದಿಸುವ ನಡುವಿನ ವ್ಯತ್ಯಾಸವು ಸ್ಪಷ್ಟವಾಗಿದೆ.

ಒಂದು ಮಾರಾಟದ ವಿಶ್ಲೇಷಣೆಯ ಪ್ರಕಾರ ಜನರು ಪೆಟ್ರೋಲ್ ಚಾಲಿತ ಕಾರುಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಆದರೆ, ಕೆಲವು ವಿಭಾಗಗಳು ಇನ್ನೂ ಡೀಸೆಲ್ ಚಾಲಿತ ವಾಹನಗಳ ಹೆಚ್ಚಿನ ಮಾರಾಟ ಗಳಿಸುತ್ತಿವೆ. ಜನರು ಹ್ಯಾಚ್‌ಬ್ಯಾಕ್  (hatchback) ಮತ್ತು ಸೆಡಾನ್‌ಗಳ (sedan) ಪೆಟ್ರೋಲ್-ಚಾಲಿತ ವೇರಿಯಂಟ್‌ಗಳನ್ನು ಹೆಚ್ಚು ಖರೀದಿಸುತ್ತಿದ್ದಾರೆ. ಆದರೆ ಎಸ್‌ಯುವಿಗಳು ಮತ್ತು ಎಂಯುವಿಗಳ ವರ್ಗದಲ್ಲಿ ಡೀಸೆಲ್-ಚಾಲಿತ ವೇರಿಯಂಟ್‌ಗಳಿಗೆ ಇನ್ನೂ ಹೆಚ್ಚಿನ ಬೇಡಿಕೆಯಿದೆ.

ಫೋಕ್ಸ್‌ವ್ಯಾಗನ್‌ ವರ್ಟಸ್‌ ಎಂಬ ಸೆಡಾನ್‌ ವರ್ಚಸ್ಸು

Tap to resize

Latest Videos

undefined

ಲ್ಯಾಡರ್-ಆನ್-ಫ್ರೇಮ್ ರಗ್ಡ್ ಎಸ್‌ಯುವಿಗಳು ಮತ್ತು ಎಂಯುವಿಗಳಿಂದ ಮಹೀಂದ್ರಾ ಬೊಲೆರೊ (Mahindra bolero), ಮಹೀಂದ್ರಾ ಅಲ್ಟುರಾಸ್ ಜಿ4 (Mahindra Altroz G4) ಮತ್ತು ಎಂಜಿ ಗ್ಲೋಸ್ಟರ್‌ಗಳಂತಹ(M G Gloster) ಮಾದರಿಗಳು ಈಗ ಶೇ.100ರಷ್ಟು ಡೀಸೆಲ್‌ ವೇರಿಯಂಟ್‌ಗಳನ್ನು ಬಿಡುಗಡೆಗೊಳಿಸುತ್ತಿವೆ. ಇವು ಕೇವಲ ಡೀಸೆಲ್ (diesel only) ಮಾದರಿಗಳಾಗಿವೆ. ಆದರೆ, ಇತರ ಲ್ಯಾಡರ್-ಆನ್-ಫ್ರೇಮ್ ವಾಹನಗಳಾದ ಟೊಯೋಟಾ ಫಾರ್ಚುನರ್‌ ( Toyota Fortuner), ಟೊಯೋಟಾ ಇನ್ನೋವಾ (Toyota Innova) ಮತ್ತು ಮಹೀಂದ್ರಾ ಸ್ಕಾರ್ಪಿಯೋ –ಎನ್‌ ( Mahindra Scorpio-N) ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಆದರೆ, ಅವುಗಳ ಮಾರಾಟದ ಶೇ. 95 ರಷ್ಟು ಭಾಗ ಡೀಸೆಲ್‌ ವಾಹನಗಳದ್ದಾಗಿದೆ.

ಮೊನೊಕಾಕ್ ಫ್ರೇಮ್-ಆಧಾರಿತ ಮಧ್ಯಮ ಗಾತ್ರದ ಎಸ್‌ಯುವಿ(SUV)ಗಳಾದ  ಟಾಟಾ ಹ್ಯಾರಿಯರ್, ಟಾಟಾ ಸಫಾರಿ, ಜೀಪ್ ಮೆರಿಡಿಯನ್ ಮತ್ತು ಸಿಟ್ರೊಯೆನ್ C5 ಏರ್‌ಕಾರ್ಸ್‌ನಂತಹ ಡೀಸೆಲ್-ಮಾತ್ರ (Diesel only) ಮಾದರಿಗಳು ಈಗ ಬೇಡಿಕೆಯಲ್ಲಿವೆ. ಇತರ ಎಸ್‌ಯುವಿಗಳಾದ ಹುಂಡೈ ಟಕ್ಸನ್ (72%), ಹುಂಡೈ ಅಲ್ಕಾಜರ್ (73%), ಮಹೀಂದ್ರ XUV700 (66%) ಮತ್ತು ಜೀಪ್ ಕಂಪಾಸ್ (57%). MG ಹೆಕ್ಟರ್ (36%) ಗಳು ಕೂಡ ಡೀಸೆಲ್‌ ವೇರಿಯಂಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿವೆ.ಆದರೆ,  ಈ ವಿಭಾಗದಲ್ಲಿ ಡೀಸೆಲ್-ಸ್ವಯಂಚಾಲಿತ ಆಯ್ಕೆಗಳು ಲಭ್ಯವಿಲ್ಲ. ಡೀಸೆಲ್-ಮಾತ್ರ ಮಾದರಿಗಳಾದ ಕಿಯಾ ಕಾರ್ನಿವಲ್ ಮತ್ತು ಮಹೀಂದ್ರ ಮರಾಜೋ ಮುಂತಾದ ಮೊನೊಕೊಕ್ ಎಸ್‌ಯುವಿಗಳು ಕೂಡ ಮಾರುಕಟ್ಟೆಯಲ್ಲಿ ಹಿಂದೆ ಬಿದ್ದಿಲ್ಲ.

ಆದರೆ, ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿರುವ ಸಣ್ಣ ಮಧ್ಯಮ ಗಾತ್ರದ ಮತ್ತು ಕಾಂಪ್ಯಾಕ್ಟ್ SUV ವಲಯದಲ್ಲಿ ಮಾತ್ರ ಡೀಸೆಲ್  ವೇರಿಯಂಟ್‌ಗಳಿಗೆ ಬೇಡಿಕೆ ಕಡಿಮೆಯಾಗಿದೆ. ಉದಾಹರಣೆಗೆ ಕಿಯಾ ಸೆಲ್ಟೋಸ್ (43%), ಕಿಯಾ ಸೋನೆಟ್ (45%), ಹುಂಡೈ ವೆನ್ಯೂ (22%), ಟಾಟಾ ನೆಕ್ಸಾನ್ (16%) ಮತ್ತು ಹೋಂಡಾ WR-V (11%). ಇದರಲ್ಲಿ,  ಹುಂಡೈ ಕ್ರೇಟಾ (55%) ಮತ್ತು ಮಹೀಂದ್ರಾ XUV300 (51 %) ಡೀಸೆಲ್‌ ವಾಹನಗಳನ್ನು ಮಾರಾಟ ಮಾಡಿದೆ.

ಒಂದೇ ದಿನ 150 ವರ್ಟಸ್‌ ಸೆಡಾನ್‌ ವಿತರಿಸಿ ದಾಖಲೆ ನಿರ್ಮಿಸಿದ ವೋಕ್ಸ್‌ವ್ಯಾಗನ್

ಸೆಡಾನ್‌ಗಳಲ್ಲಿ, ಹೋಂಡಾ ಸಿಟಿ ಮತ್ತು ಹೋಂಡಾ ಅಮೇಜ್ (Honda Amaze) ತಮ್ಮ ಮಾರಾಟದ ಶೇ.6 ರಷ್ಟನ್ನು ಡೀಸೆಲ್ ವೇರಿಯಂಟ್‌ಗಳಿಂದ ಗಳಿಸಿದರೆ, ಹುಂಡೈ ವರ್ನಾ ಶೇ. 41 ರಷ್ಟು ಮಾರಾಟ ದಾಖಲಿಸಿದೆ. ಡೀಸೆಲ್-ಚಾಲಿತ ವೇರಿಯಂಟ್‌ಗಳು ಲಭ್ಯವಿರುವ ಎರಡು ಹ್ಯಾಚ್‌ಬ್ಯಾಕ್‌ಗಳಾದ ಹ್ಯುಂಡೈ i20 ಮತ್ತು ಟಾಟಾ ಆಲ್ಟ್ರೊಜ್‌ಗಳಿಗೆ ಸಹ, ಡೀಸೆಲ್ ವೇರಿಯಂಟ್‌ಗಳಿಂದ ಶೇ.11ರಷ್ಟು ಮಾರುಕಟ್ಟೆ ಪಾಲು ಗಳಿಸಿದೆ.

click me!