ಮಾರುತಿ ಸುಜುಕಿ ಅತ್ಯಂತ ಜನಪ್ರಿಯ ಹಾಗೂ ಗರಿಷ್ಠ ಮಾರಾಟ ದಾಖಲೆ ಹೊಂದಿರುವ ಮಾರುತಿ ಅಲ್ಟೋ ಕೆ10 ಕಾರನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡುತ್ತಿದೆ. ಈಗಾಗಲೇ ಬುಕಿಂಗ್ ಆರಂಭಿಸಿದೆ.
ನವದೆಹಲಿ(ಆ.13): ಮಾರುತಿ ಸುಜುಕಿ ಇತರ ಆಟೋ ಕಂಪನಿಗಳಿಂದ ತೀವ್ರ ಸ್ಪರ್ಧೆ ಎದುರಿಸುತ್ತಿದೆ. ವಿಶೇಷವಾಗಿ ಟಾಟಾ ಮೋಟಾರ್ಸ್ ಹಾಗೂ ಮಹೀಂದ್ರ ಎರಡೂ ಕಂಪನಿಗಳು ಹೊಸ ದಾಖಲೆಯತ್ತ ಮುನ್ನುಗ್ಗುತ್ತಿದೆ. ಇದರಿಂದ ಮಾರುತಿ ಇದೀಗ ತನ್ನು ಕಾರುಗಳನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡುವ ಮೂಲಕ ಹೊಸ ಸಂಚಲನ ಸೃಷ್ಟಿಸಲು ರೆಡಿಯಾಗಿದೆ. ಇದೀಗ ಮಾರುತಿ ಸುಜುಕಿ ಅಲ್ಟೋ ಕೆ10 ಕಾರು ಹೊಸ ರೂಪದಲ್ಲಿ ಬಿಡುಗಡೆಯಾಗುತ್ತಿದೆ. ಆಗಸ್ಟ್ 18ಕ್ಕೆ ನೂತನ ಕಾರು ಭಾರತೀಯ ಮಾರುಕಟ್ಟೆ ಪ್ರವೇಶಿಸಲಿದೆ. ಆದರೆ ಬುಕಿಂಗ್ ಇಂದಿನಿಂದ ಆರಂಭಗೊಂಡಿದೆ. 11,000 ರೂಪಾಯಿಗೆ ನೂತನ ಮಾರುತಿ ಅಲ್ಟೋ ಕೆ10 ಕಾರು ಬುಕಿಂಗ್ ಮಾಡಿಕೊಳ್ಳಬಹುದು. ನೂತನ ಕಾರು 7 ವೇರಿಯೆಂಟ್‌ಗಳಲ್ಲಿ ಬಿಡುಗಡೆಯಾಗಲಿದೆ. ಹೊಸ ಕಾರಿನ ಬೆಲೆ ಇನ್ನೂ ಬಹಿರಂಗಗೊಂಡಿಲ್ಲ. ಸದ್ಯ ಮಾರುಕಟ್ಟೆಯಲ್ಲಿರುವ ಮಾರಿತಿ ಅಲ್ಟೋ ಕೆ10 ಕಾರಿನ ಬೆಲೆ 350 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ಯಿಂದ ಆರಂಭಗೊಳ್ಳುತ್ತಿದ್ದು, ಟಾಪ್ ಮಾಡೆಲ್ ಬೆಲೆ 5.50 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ).
ನೂತನ ಮಾರುತಿ ಸುಜುಕಿ ಅಲ್ಟೋ ಕೆ10 ಕಾರಿನಲ್ಲಿ ಹಲವು ಹೊಸತನಗಳಿವೆ. ಮುಂಭಾಗದ ಗ್ರಿಲ್ ಸಂಪೂರ್ಣವಾಗಿ ಬದಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಸೆಲೆರಿಯೋ ಕಾರಿನ ಬಹುತೇಕ ಫೀಚರ್ಸ್ ನೂತನ ಕೆ10 ಕಾರಿನಲ್ಲಿದೆ. ಓವಲ್ ಶೇಪ್ ಹ್ಯಾಲೋಜೆನ್ ಹೆಡ್‌ಲ್ಯಾಂಪ್ಸ್, ಸ್ಕ್ವಾರ್ ಟೈಲ್ ಲ್ಯಾಂಪ್ಸ್, ಸ್ಟೀಲ್ ವೀಲ್ಸ್, ಫೆಂಡರ್ ಮೌಂಟೆಡ್ ಟರ್ನ್ ಇಂಡಿಕೇಟರ್ ಹೊಂದಿದೆ. ಕಾರಿನ ಒಳಗಿನ ಕ್ಯಾಬಿನ್ ಬ್ಲಾಕ್ ಥೀಮ್‌ನಲ್ಲಿ ನಿರ್ಮಿಸಲಾಗಿದೆ. ಫ್ಲೋಟಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್ಮೆಟ್ ಸಿಸ್ಟಮ್, ಸೆಮಿ ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್, ಮಾನ್ಯುಯೆಲ್ ಏರ್ ಕಂಡೀಷನರ್ ಸೇರಿದಂತೆ ಹಲವು ಹೊಸತನಗಳು ಈ ಕಾರಿನಲ್ಲಿದೆ.
31 ಕಿ.ಮೀ ಮೈಲೇಜ್, ಕೈಗೆಟುಕುವದ ದರದ ಮಾರುತಿ ಸುಜುಕಿ ಸ್ವಿಫ್ಟ್ CNG ಕಾರು ಬಿಡುಗಡೆ!
ನೂತನ ಅಲ್ಟೋ ಕೆ10 ಕಾರು 1.0 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದೇ ಎಂಜಿನ್ ಸೆಲೆರಿಯೋ ಹಾಗೂ ಎಸ್ ಪ್ರೆಸ್ಸೋ ಕಾರಿನಲ್ಲೂ ಬಳಸಲಾಗಿದೆ. 66bhp ಪವರ್ ಹಾಗೂ 89Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿದೆ. ನೂತನ ಕೆ10 ಕಾರು ರೆನಾಲ್ಡ್ ಕ್ವಿಡ್ ಕಾರಿನ ಪ್ರತಿಸ್ಪರ್ಧಿಯಾಗಿದೆ
ಕಳೆದ 22 ವರ್ಷದಿಂದ ಭಾರತದಲ್ಲಿ ಮಾರುತಿ ಅಲ್ಟೋ ಕಾರು ಅತ್ಯಂತ ಜನಪ್ರಿಯವಾಗಿದೆ. ಸಣ್ಣ, ಕುಟುಂಬ ಹಾಗೂ ಕೈಗೆಟುಕುವ ದರದ ಕಾರು ಎಂದೇ ಹೆಸರುವಾಸಿಯಾಗಿರುವ ಅಲ್ಟೋ ಈಗಲೂ ಅದೇ ಬೇಡಿಕೆ ಉಳಿಸಿಕೊಂಡಿದೆ.
ಗರಿಷ್ಠ ಮಾರಾಟವಾದ ಟಾಪ್ 10 ಕಾರು, ಅಗ್ರಸ್ಥಾನದಲ್ಲಿ ವ್ಯಾಗನರ್, ನೆಕ್ಸಾನ್!
ಮಾರುತಿ ಜಿಮ್ನಿಯನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲು ಪ್ಲಾನ್!
ಭಾರತ ಖ್ಯಾತ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ, ತನ್ನ ಜಿಮ್ನಿ ಎಸ್‌ಯುವಿಯನ್ನು ಜನರ ಅಭಿಪ್ರಾಯ ಆಧರಿಸಿ ಭಾರತದ ಮಾರುಕಟ್ಟೆಗೆ ಪರಿಚಯಿಸಲು ನಿರ್ಧರಿಸಿದೆ. ಈ ಮೂಲಕ ದೇಶದಲ್ಲಿ ತನ್ನ ಎಸ್‌ಯುವಿ ಕ್ಷೇತ್ರವನ್ನು ಬಲಪಡಿಸಿಕೊಳ್ಳಲು ಯೋಜನೆ ರೂಪಿಸಿದೆ. ಕಳೆದ 50 ವರ್ಷಗಳಿಂದಲೂ ಮಾರುತಿ ಜಿಮ್ನಿ ಜಾಗತಿಕ ಮಾರುಕಟ್ಟೆಯಲ್ಲಿದೆ. ಗುರುಗ್ರಾಮದಲ್ಲಿರುವ ತನ್ನ ಕಾರ್ಖಾನೆಯಲ್ಲಿ ಈ ಕಾರನ್ನು ತಯಾರಿಸಿ ಮಧ್ಯ ಏಷ್ಯಾ ಮತ್ತು ಆಫ್ರಿಕಾ ರಾಷ್ಟ್ರಗಳಿಗೆ ರಫ್ತು ಮಾಡುತ್ತದೆ. ಇದು ಎಸ್‌ಯುವಿಗಳಲ್ಲೇ ಚಿಕ್ಕದಾಗಿದ್ದರೂ ತನ್ನ ಆಫ್‌ರೋಡ್ ಕ್ಷಮತೆಯಿಂದ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. 2020ರ ಆಟೋ ಎಕ್ಸೊ$್ಪೕದಲ್ಲಿ ಪ್ರದರ್ಶನಗೊಂಡ ನಂತರ ಜನರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹಾಗಾಗಿ ಭಾರತದಲ್ಲೂ ಈ ಕಾರನ್ನು ಬಿಡುಗಡೆ ಮಾಡುವ ಯೋಚನೆ ಮಾಡಲಾಗಿದೆ ಎಂದು ಕಂಪನಿಯ ಹಿರಿಯ ಕಾರ್ಯನಿರ್ವಾಹಕ ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ.