ಮಾರುತಿ ಸುಜುಕಿ ಇಂಡಿಯಾದ ಜನಪ್ರಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಸ್ವಿಫ್ಟ್ ಮತ್ತೊಂದು ಮೈಲುಗಲ್ಲು ನೆಟ್ಟಿದೆ. ಕಳೆದ ವರ್ಷ ಒಟ್ಟು 1.60 ಲಕ್ಷ ಸ್ವಿಫ್ಟ್ ಕಾರುಗಳು ಮಾರಾಟವಾಗಿವೆ. 2005ರಲ್ಲಿ ಬಿಡುಗಡೆಯಾದ ಈ ಕಾರು ಭಾರತೀಯರ ಮೆಚ್ಚಿನ ಕಾರ್ ಆಗಿದ್ದು, ಮೂರು ಬಾರಿ ಇಂಡಿಯನ್ ಕಾರ್ ಆಫ್ ಇಯರ್ ಪ್ರಶಸ್ತಿ ಗೆದ್ದುಕೊಂಡಿದೆ.
ಸ್ವಿಫ್ಟ್ ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಅತ್ಯಂತ ಜನಪ್ರಿಯ ಕಾರು. ಭಾರತದ ರಸ್ತೆಗಳಲ್ಲಿ ಎಲ್ಲಿ ಬೇಕಾದರೂ ನೀವು ಸ್ವಿಫ್ಟ್ ಕಾರುಗಳನ್ನು ಕಾಣಬಹುದು. ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಬ್ರಾಂಡ್ ಕಾರು ಇದು. ಕಳೆದ ವರ್ಷ ಅಂದರೆ 2020ರಲ್ಲಿ ಮಾರುತಿ ಸುಜುಕಿ ಇಂಡಿಯಾ ಸ್ವಿಫ್ಟ್ ಮಾರಾಟ ಮಾಡಿದ ಕಾರುಗಳ ಸಂಖ್ಯೆ ಎಷ್ಟು ಗೊತ್ತಾ? ಬರೋಬ್ಬರಿ 1.6 ಲಕ್ಷ ಕಾರುಗಳು! ಈ ಸಂಖ್ಯೆಯೇ ಸ್ವಿಫ್ಟ್ ಕಾರಿನ ಜನಪ್ರಿಯತೆಯನ್ನು ಸೂಚಿಸುತ್ತದೆ.
ಮಹೀಂದ್ರಾ ವಾಹನ ಖರೀದಿಸಲಿದ್ದೀರಾ? ಈಗಲೇ ಖರೀದಿಸಿ, ಬಂಪರ್ ಆಫರ್‌ಗಳಿವೆ!
undefined
ಕಾಂಪಾಕ್ಟ್ ಎಸ್‌ಯುವಿ ಫೀಲ್ ನೀಡುವ ಕಾರು ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮಾರುತಿ ಸುಜುಕಿ ಇಂಡಿಯಾ 2005ರಲ್ಲಿ ಸ್ವಿಫ್ಟ್ ಮಾಡೆಲ್ ಕಾರು ಮಾರಾಟ ಆರಂಭಿಸಿತು. ಅಲ್ಲಿಂದ ಇಲ್ಲಿಯವರೆಗೆ ಅಂದರೆ 2020ರವರೆಗೆ ಒಟ್ಟು 23 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ. ಇದರೊಂದಿಗೆ ಭಾರತೀಯ ರಸ್ತೆಗಳಲ್ಲಿ ಮಾರುತಿ ಈಗಲೂ ಕಿಂಗ್ ಎಂಬುದನ್ನು ಸಾಬೀತು ಪಡಿಸಿದೆ.
ಮಾರುತಿ ಸುಜುಕಿ ಇಂಡಿಯಾ ತನ್ನ ಕಾರುಗಳಲ್ಲಿ ಪ್ರಯಾಣಿಕರ ಸೇಫ್ಟಿ ಫೀಚರ್‌ಗಳ ಬಗ್ಗೆ ಅತಿ ಹೆಚ್ಚು ಆದ್ಯತೆ ನೀಡುವುದಿಲ್ಲ. ಅದರ ಬಿಲ್ಡ್ ಕ್ವಾಲಿಟಿ ಚೆನ್ನಾಗಿಲ್ಲ ಎಂಬ ಆರೋಪಗಳ ಮಧ್ಯೆಯೂ ಸ್ವಿಫ್ಟ್ ಕಾರು ಮಾರಾಟದ ಪರಿಯನ್ನು ಗಮನಿಸಿದರೆ ಬಳಕೆದಾರರು ಈ ಯಾವ ಅಂಶಗಳು ತಲೆಗೆ ಹಚ್ಚಿಕೊಂಡಂತೆ ಕಾಣುತ್ತಿಲ್ಲ. ಏನೇ ಇರಲಿ. ಮಾರುತಿ ಕಂಪನಿಯ ಕಾರುಗಳು ಎಂದಿಗೂ ಭಾರತೀಯ ಬಳಕೆದಾರರ ಮೆಚ್ಚಿನ ಕಾರುಗಳು ಎಂಬುದು ಮತ್ತೆ ಸಾಬೀತಾಗಿದೆ.
ಇಲ್ಲಿ ಇನ್ನೂ ಒಂದು ಗಮನಿಸಬೇಕಾದ ಅಂಶವಿದೆ. ಶೇ.53ರಷ್ಟು ಸ್ವಿಫ್ಟ್ ಕಾರಿನ ಗ್ರಾಹಕರು 35 ಮತ್ತು ಅದಕ್ಕಿಂತ ಕಡಿಮೆ ವಯೋಮಾನದವರು ಎಂದು ಮಾರುತಿ ಸುಜುಕಿ ಇಂಡಿಯಾ ಹೇಳಿಕೊಂಡಿದೆ. ಅಂದರೆ, ಮಾರುತಿ ಸುಜುಕಿ ಸ್ವಿಫ್ಟ್ ಯುವಕರ ನೆಚ್ಚಿನ ಬ್ರಾಂಡ್ ಆಗಿದೆ ಎಂದು ಹೇಳಬಹುದು.
15 ವರ್ಷಗಳ ಹಳೆಯ ವಾಹನಗಳು ಗುಜರಿಗೆ ಪಕ್ಕಾ?
ಜನಪ್ರಿಯ ಹ್ಯಾಚ್‌ಬ್ಯಾಕ್ ಸ್ವಿಫ್ಟ್, ಮೂರು ಬಾರಿ ಇಂಡಿಯನ್ ಕಾರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಪ್ರತಿ ಜನರೇಷನ್‌ನ ಮನಸ್ಸನ್ನು ಗೆಲ್ಲುವಲ್ಲಿ ಈ ಕಾರು ಸಕ್ಸೆಸ್ ಆಗಿದೆ. ಈಗ ಚಾಲ್ತಿಯಲ್ಲಿರುವ ಮೂರನೇ ತಲೆಮಾರಿನ ಸಿಫ್ಟ್ ಕಾರನ್ನು ಕಂಪನಿ 2018ರಲ್ಲಿ ಬಿಡುಗಡೆ ಮಾಡಿದ್ದು, ಈ ಕಾರು ಕೂಡ ಗ್ರಾಹಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಕಳೆದ 15 ವರ್ಷಗಳಿಂದ ದೇಶದಲ್ಲಿ ಅತ್ಯುತ್ತಮ ಮಾರಾಟವಾಗುತ್ತಿರುವ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಆಗಿದ್ದು, ಈವರೆಗೆ 2.3 ದಶಲಕ್ಷ ಕಾರುಗಳನ್ನು ಮಾರಾಟ ಮಾಡಲಾಗಿದೆ. ಕೋವಿಡ್ 17ನ ಬಿಕ್ಕಟ್ಟಿನ ಹೊರತಾಗಿಯೂ 2020ರ ವರ್ಷದಲ್ಲಿ 160700 ಯುನಿಟ್‌ಗಳನ್ನು ಮಾರಾಟ ಮಾಡಲು ಸಾಧ್ಯವಾಗಿದೆ. ಆ ಮೂಲಕ ವರ್ಷದಲ್ಲೇ ಅತಿ ಹೆಚ್ಚು ಮಾರಾಟ ಕಂಡ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸ್ವಿಫ್ಟ್ ಮೇಲೆ ನಂಬಿಕೆ ಇಟ್ಟು ನಮ್ಮನ್ನು ಬೆಂಬಲಿಸುತ್ತಿರುವ ಗ್ರಾಹಕರಿಗೆ ಅಭಾರಿಯಾಗಿದ್ದೇವೆ. ಗ್ರಾಹಕರ ಈ ನಿರಂತರ ಬೆಂಬಲದಿಂದಾಗಿ ಸ್ವಿಫ್ಟ್ ಇನ್ನೂ ಅನೇಕ ಮೈಲುಗಲ್ಲುಗಳನ್ನು ಸ್ಥಾಪಿಸಲಿದೆ ಎಂಬ ವಿಶ್ವಾಸವಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಮಾರ್ಕೆಟಿಂಗ್ ಮತ್ತು ಸೇಲ್ಸ್ ಎಕ್ಸಿಕ್ಯೂಟಿವ್ ನಿರ್ದೇಶಕ ಶಶಾಂಕ್ ಶ್ರೀವಾತ್ಸವ್ ತಿಳಿಸಿದ್ದಾರೆ.
ಮಾರುತಿ ಸುಜುಕಿ ಸ್ವಿಫ್ಟ್ ನಾಲ್ಕು ಮಾದರಿಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. LXI, VXI, ZXI ಮತ್ತು ZXI+ ನಾಲ್ಕೂ ಮಾಡೆಲ್‌ಗಳು ಜನಪ್ರಿಯವಾಗಿವೆ. ಸ್ವಿಫ್ಟ್ ಕಾರಿನ ಬೆಲೆ 5.49 ಲಕ್ಷ ರೂ.ನಿಂದ ಆರಂಭವಾಗಿ 8.02 ಲಕ್ಷ ರೂ.ವರೆಗೂ(ಎಕ್ಸ್ ಶೋರೂಮ್) ಇದೆ. ಮಾರುತಿ ಬ್ರಾಂಡ್ ದೇಶದಲ್ಲಿ ಮನೆಮಾತಾಗಿರುವ ಬ್ರಾಂಡ್ ಆಗಿದೆ. ಭಾರತೀಯ ಗ್ರಾಹಕರು ಈ ಕಂಪನಿಯ ಕಾರುಗಳ ಮೇಲೆ ವಿಶೇಷವಾದ ಪ್ರೀತಿಯನ್ನು ಹೊಂದಿರುವುದು ಕಂಪನಿಯ ಕಾರುಗಳ ಮಾರಾಟ ಅಂಕಿ ಸಂಖ್ಯೆಗಳು ಸಾಬೀತುಪಡಿಸುತ್ತಿವೆ.
5.2 ಸೆಕೆಂಡಲ್ಲಿ 0 ನಿಂದ 100 ಕಿ.ಮೀ. ವೇಗ; ಐಒನಿಕ್ ಕಾರಿನ 5 ಚಿತ್ರಗಳು ಬಿಡುಗಡೆ!