ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಪ್ರತಿ ದಿನ ಹೊಸ ಹೊಸ ತಂತ್ರಜ್ಞಾನಗಳು ಆವಿಷ್ಕಾರವಾಗುತ್ತಿದೆ. ಇದೀಗ ಟೆಸ್ಲಾ ಕಾರುಗಳಿಗೆ ಪೈಪೋಟಿ ನೀಡಬಲ್ಲ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಿದೆ. ಈ ಕಾರಿನ ಮೈಲೇಜ್ 1,000 ಕಿಲೋಮೀಟರ್. ಈ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
ಬೀಜಿಂಗ್(ಜ.23): ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಟೆಸ್ಲಾ ತಯಾರಿ ಮಾಡಿಕೊಳ್ಳುತ್ತಿದೆ. ವಿಶ್ವದೆಲ್ಲೆಡೆ ವ್ಯಾಪಿಸುತ್ತಿರುವ ಟೆಸ್ಲಾ ಕಾರಿಗೆ ಇದೀಗ ಚೀನಾದ ನಿಯೋ ಪೈಪೋಟಿ ನೀಡುತ್ತಿದೆ. ಕಾರಣ ನಿಯೋ ET7 ಸೆಡಾನ್ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಬರೋಬ್ಬರಿ 1,000 ಕಿ.ಮೀ ನೀಡಲಿದೆ.
5 ನಿಮಿಷ ಚಾರ್ಜಿಂಗ್, 100 KM ಮೈಲೇಜ್; ಬಿಡುಗಡೆಯಾಗುತ್ತಿದೆ ಹ್ಯುಂಡೈ IONIQ 5 ಕಾರು
undefined
ನಿಯೋ ಮೂರು ವೇರಿಯೆಂಟ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ಸ್ಟಾಂಡರ್ಡ್, ಪ್ರಿಮಿಯಂ ಹಾಗೂ ಎಕ್ಸ್‌ಟೆಂಡ್ ಎಡಿಶನ್ ಕಾರು ಬಿಡುಗಡೆ ಮಾಡಿದೆ. ಇಷ್ಟೇ ಅಲ್ಲ ಬುಕಿಂಗ್ ಕೂಡ ಆರಂಭಗೊಂಡಿದೆ. ಇದರ ಬೆಲೆ 448 000 ಚೀನಾ ಯುವನ್. ಅಂದರೆ ಭಾರತೀಯ ರೂಪಾಯಿಗಳಲ್ಲಿ 50.45 ಲಕ್ಷ ರೂಪಾಯಿ. ಸದ್ಯ ಇದು ಚೀನಾದಲ್ಲಿ ಬಿಡುಗಡೆಯಾಗಿದೆ. ಆದರೆ ಭಾರತ ಪ್ರವೇಶ ಇನ್ನೂ ಖಚಿತಗೊಂಡಿಲ್ಲ.
ಅಗ್ಗದ ದರದ ಎಲೆಕ್ಟ್ರಿಕ್ ಕಾರು, 200 KM ಮೈಲೇಜ್; ಟಾಟಾದಿಂದ ಮತ್ತೊಂದು ಕೂಡುಗೆ!.
ಸ್ಟಾಂಡರ್ಡ್ ಎಡಿಶನ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 500 ಕಿ.ಮೀ ಮೈಲೇಜ್ ನೀಡಲಿದೆ. ಇನ್ನು ಪ್ರಿಮಿಯಂ ಎಡಿಶನ್ ಕಾರು 700 ಹಾಗೂ ಎಕ್ಸ್‌ಟೆಂಡ್ ಎಡಿಶನ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 1,000 ಕಿ.ಮೀ ಮೈಲೇಜ್ ನೀಡಲಿದೆ. ಈ ಕಾರು 100 ಕಿ.ಮೀ ವೇಗವನ್ನು ಕೇವಲ 3.9 ಸೆಕೆಂಡ್‌ಗಳಲ್ಲಿ ತಲುಪಲಿದೆ. ಸದ್ಯ ಚೀನಾದಲ್ಲಿ ಈ ಕಾರು ಬಿಡುಗಡೆಯಾಗಿದೆ. ಬುಕಿಂಗ್ ಕೂಡ ಆರಂಭಗೊಂಡಿದೆ. ಭಾರತ ಸೇರಿದಂತೆ ಇತರ ದೇಶಗಳಲ್ಲಿ ಬಿಡುಗಡೆ ಕುರಿತು ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಚೀನಾದ ಗೀಲೆ ಕಾರು ಕಂಪನಿ ಭಾರತ ಪ್ರವೇಶಕ್ಕೆ ಕಳೆದ ಬಾರಿಯ ಲಡಾಖ್ ಘರ್ಷಣೆ ಅಡ್ಡಿಯಾಗಿತ್ತು.