ಪ್ರತಿ 3 ನಿಮಿಷಕ್ಕೊಂದು ಮಾರುತಿ ಸುಜುಕಿ ಬಲೆನೋ ಹ್ಯಾಚ್‌ಬ್ಯಾಕ್ ಕಾರು ಮಾರಾಟ!

By Suvarna NewsFirst Published Oct 31, 2020, 1:53 PM IST
Highlights

ಸೆಡಾನ್ ಬಲೆನೋ ಅಷ್ಟೇನೂ ಗ್ರಾಹಕರನ್ನು ಸೆಳೆಯದಿದ್ದ ಅದೇ ಬಲೆನೋ ಪ್ರಿಮೀಯಮ್ ಹ್ಯಾಚ್‌ಬ್ಯಾಕ್ ಕಾರ್ ಆಗಿ ಇದೀಗ ಹೊಸ ವಿಕ್ರಮ ಸಾಧಿಸಿದೆ. ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

2015ರಲ್ಲಿ ಬಲೆನೋ ಹ್ಯಾಚ್‌ಬ್ಯಾಕ್ ಪ್ರೀಮಿಯಮ್ ಕಾರು ಮಾರಾಟ ಮಾಡಲು ಆರಂಭಿಸಿದ ಮಾರುತಿ ಈ ಐದು ವರ್ಷದಲ್ಲಿ 8 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ. ಅಂದರೆ, ಕಾರು ಮಾರುಕಟ್ಟೆ ಪ್ರವೇಶಿಸಿದಾಗಿನಿಂದಲೂ ಈ ವರೆಗೂ ಪ್ರತಿ ಗಂಟೆಗೆ 30 ಕಾರುಗಳು ಮಾರಾಟವಾಗಿವೆಯಂತೆ!

ಮುಂದಿನ ವರ್ಷ ಭಾರತಕ್ಕೆ ಎಂಟ್ರಿ ಕೊಡುತ್ತೆ ಸೆಲ್ಫ್‌ ಡ್ರೈವ್ ಟೆಸ್ಲಾ ಕಾರ್

ಭಾರತದ ಬಹುದೊಡ್ಡ ಕಾರು ಉತ್ಪಾದಕ ಕಂಪನಿಯಾದ ಮಾರುತಿ ಸುಜುಕಿ ಈ ವಿಷಯವನ್ನು ತಿಳಿಸಿದ್ದು, ಹ್ಯಾಚ್‌ಬ್ಯಾಕ್  ಬಲೆನೋ ಕಾರು ಭಾರತೀಯ ಮಾರುಕಟ್ಟೆ ಪ್ರವೇಶಿಸಿ ಐದು ವರ್ಷವಾಗಿದ್ದು, 2015ರಲ್ಲಿ ಈ ಕಾರು ಲಾಂಚ್ ಆಗಿತ್ತು. ಅಲ್ಲಿಂದ ಇಲ್ಲಿಯವರೆಗೂ ತನ್ನ ಜನಪ್ರಿಯತೆಯನ್ನು ಕಾಯ್ದುಕೊಂಡು ಬಂದಿರುವ ಬಲೆನೋ, ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳ ಸೆಗ್ಮೆಂಟ್‌ನಲ್ಲಿ ತನ್ನ ಪ್ರಾಬಲ್ಯವನ್ನು ಕಾಯಿದುಕೊಂಡು ಬಂದಿದೆ. ಈವರೆಗೆ ಬರೋಬ್ಬರಿ 8 ಲಕ್ಷ ಬಲೆನೋ ಕಾರುಗಳನ್ನು ಕಂಪನಿ ಮಾರಾಟ ಮಾಡುವ ಮೂಲಕ ವಿಕ್ರಮ ಸಾಧಿಸಿದೆ. ಐದು ವರ್ಷಗಳ ಬಳಿಕೂ ಈ ಕಾರು ತನ್ನ ಪ್ರಾಬಲ್ಯವನ್ನು ಕಾಯ್ದುಕೊಂಡು ಬಂದಿದೆ ಎಂದರೆ ಅದು ಗ್ರಾಹಕರ ವಿಶ್ವಾಸ ಗಳಿಸಿದೆ ಎಂದರ್ಥ.

ಮಾರುತಿ ಕಂಪನಿಯ ಈ ಬಲೆನೋ ಪ್ರೀಮಿಯಮ್ ಹ್ಯಾಚ್‌ಬ್ಯಾಕ್ ಕಾರನ್ನು ನೆಕ್ಸಾ ರಿಟೇಲ್ ‌ಚಾನೆಲ್ ಮೂಲಕ ಮಾರಾಟ ಮಾಡುತ್ತ ಬಂದಿದೆ. ಅನುಕೂಲಕರವಾಗಿರುವ ಕ್ಯಾಬಿನ್ ಹಾಗೂ ವಿಶ್ವಾಸಭರಿತ ಚಾಲನೆಯ ಅನುಭವವನ್ನು ನೀಡುವುದರಿಂದಲೇ ಬಲೆನೋ ನಗರ ಪ್ರಯಾಣಿಕರ ಅಚ್ಚುಮೆಚ್ಚಿನ ಕಾರಾಗಿ ಮಾರ್ಪಟ್ಟಿದೆ. ನಗರಗಳ ಟ್ರಾಫಿಕ್ ಸಂಚಾರ ಮಾತ್ರವಲ್ಲದೇ ಹೈವೇಗಳಲ್ಲೂ ಈ ಕಾರಿನ ಪ್ರದರ್ಶನ ಅದ್ಭುತವಾಗಿರುವುದರಿಂದ ಹೆಚ್ಚಿನ ಗ್ರಾಹಕರು ಈ ಕಾರಿನ ಮೋಡಿಗೆ ಒಳಗಾಗುತ್ತಿದ್ದಾರೆ. ವಿಶೇಷ ಎಂದರೆ, 2016ರ ಹೊತ್ತಿಗೆ ಒಂದು ಲಕ್ಷ ಬಲೆನೋ ಕಾರು ಮಾರಾಟ ಮಾಡಿದ್ದ ಕಂಪನಿ ಇದೀಗ 2018ರ ಹೊತ್ತಿಗೆ ಈ ಪ್ರಮಾಣವನ್ನು 5 ಲಕ್ಷಕ್ಕೆ ಕೊಂಡೊಯ್ಯದಿತ್ತು ಮತ್ತು ಅದೀಗ 2020ರ ಹೊತ್ತಿಗೆ 8 ಲಕ್ಷಕ್ಕೆ ಏರಿಕೆಯಾಗಿದೆ. 

ಬಿಎಸ್ 6 ಅನ್ವಯ ಅಳವಡಿಸಲಾಗಿರುವ 1.2 ಎಲ್ ಡ್ಯುಯಲ್ ಜೆಟ್ ಡ್ಯುಯಲ್ ವಿವಿಟಿ ಎಂಜಿನ್ ಮತ್ತು ಕಂಪನಿಯ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನದ ಸೇರ್ಪಡೆಯಿಂದಾಗಿ ಬಲೆನೋ ಕಾರಿನ ಶಕ್ತಿ ಇನ್ನಷ್ಟು ಹೆಚ್ಚಳವಾಗಿದೆ ಎನ್ನುತ್ತಾರೆ ವಾಹನ ತಜ್ಞರು. 

Suzuki Celerio: ಸೂಪರ್ ಲೇಔಟ್ ಇರೋ ಕಾರು ಮಾರುಕಟ್ಟೆಗೆ ಯಾವಾಗ..? ಇಲ್ಲಿದೆ ಡೀಟೆಲ್ಸ್

ಬಲೆನೋ ಹ್ಯಾಚ್‌ಬ್ಯಾಕ್ ಕಾರಿಗೆ 2017ರಲ್ಲಿ ಸಿವಿಟಿ ಟ್ರಾನ್ಸಿಮಿಷನ್ ಅನ್ನು ಪರಿಚಯಿಸಲಾಯಿತು. ಇದರ ಜೊತೆಗೆ, ಕನೆಕ್ಟಿವಿಟಿ ಹೆಚ್ಚಿಸುವ 7 ಇಂಚಿನ ಇನ್ಪೋಟೈನ್ಮೆಂಟ್ ಸ್ಕ್ರೀನ್, ಆಂಡ್ರಾಯ್ಡ್ ಬೆಂಬಲಿಸುವ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸೇರಿದಂತೆ ಇನ್ನಿತರ ಫೀಚರ್‌ಗಳನ್ನು ಈ ಕಾರಿಗೆ ಸೇರಿಸಲಾಗಿದ್ದು ಅದು ಬಳಕೆದಾರರ ಗಮನ ಸೆಳೆಯಲು ಯಶಸ್ವಿಯಾಗಿದೆ. ಇದರಿಂದಾಗಿಯೇ, ಈ ಸೆಗ್ಮೆಂಟ್‌ನ ಇತರೆ ಯಾವುದೇ ಕಂಪನಿ ಕಾರುಗಳಿಗಿಂತ ಭಿನ್ನವಾಗಿ ನಿಲ್ಲುವ ಈ ಕಾರನ್ನು ಹೆಚ್ಚಿನವರು ಖರೀದಿಸಲು ಕಾರಣವಾಯಿತು. ಈ ಕಾರಿನ ಪ್ರೀಮಿಯಂ ಲುಕ್ ಕೂಡ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಿದೆ ಎಂಬುದು ಮಾರುತಿ ಸುಜುಕಿ ಕಂಪನಿಯ ಅಭಿಪ್ರಾಯವಾಗಿದೆ.

ಮಾರುತಿ ಸುಜುಕಿಯೆ ಟ್ರಂಪ್ ಕಾರ್ಡ್ ಆಗಿರುವ ಈ ಬಲೆನೋ ಹ್ಯಾಚ್‌ಬ್ಯಾಕ್, ಟಾಟಾ ಕಂಪನಿಯ ಅಲ್ಟ್ರೋಸ್, ಹುಂಡೈ ಎಲೈಟ್ ಐ20, ಹೊಂಡಾ ಜಾಝ್, ಟೊಯೋಟಾ ಕಂಪನಿ ಗ್ಲಾಂಜಾ ಕಾರುಗಳಿಗೆ ತೀವ್ರ ಸ್ಫರ್ಧೆಯೊಡ್ಡಿದೆ.

ದೇಶದಲ್ಲಿ 200 ನಗರಗಳಲ್ಲಿ 377 ನೆಕ್ಸಾ ಶೋರೂಮ್‌ಗಳಿದ್ದು, ಎಲ್ಲಿಯಬೇಕಾದರೂ ಈ ಬಲೆನೋ ಖರೀದಿಸಬಹುದು. ಮತ್ತೊಂದು ವಿಶೇಷ ಎಂದರೆ, ಈ ಕಾರನ್ನು ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಲಾಗುತ್ತದೆ ಮತ್ತು ಆಸ್ಟ್ರೇಲಿಯಾ, ಯುರೋಪ್, ಲ್ಯಾಟಿನ್ ಅಮೆರಿಕಾ, ಮಧ್ಯ ಪ್ರಾಚ್ಯ, ಸೌಥ್ ಈಸ್ಟ್ ಏಷ್ಯಾ ರಾಷ್ಟ್ರಗಳಿಗೆ ಕಂಪನಿ ರಫ್ತು ಮಾಡುತ್ತದೆ. 

ಮೈಲುಗಲ್ಲು ಸ್ಥಾಪಿಸಿದ ವಿಟಾರಾ ಬ್ರೆಜಾ

 

click me!