Maruti Suzuki: ದೇಶದಲ್ಲಿ ಮಾರಾಟವಾದ ಮೊಟ್ಟ ಮೊದಲ ಕಾರಿನ ಸಂರಕ್ಷಣೆ

By Suvarna News  |  First Published Oct 20, 2022, 4:34 PM IST

ದೇಶದಲ್ಲಿ ಮೊಟ್ಟ ಮೊದಲ ಮಾರುತಿ -800  ಕಾರನ್ನು ನವೀಕರಿಸಲು, ಅಪ್‌ಗ್ರೇಡ್‌ ಮಾಡಲು ಹಾಗೂ ತನ್ನ ಪ್ರಧಾನ ಕಚೇರಿಯಲ್ಲಿ ಪ್ರದರ್ಶನಕ್ಕೆ ಇರಿಸಲು ಕಂಪನಿ ನಿರ್ಧರಿಸಿದೆ.


ಮಾರುತಿ-ಸುಜುಕಿ (Maruti Suzuki) ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಇತ್ತೀಚಿನ ತಿಂಗಳುಗಳಲ್ಲಿ, ಹೊಸ ಬ್ರೀಜಾದಿಂದ (Breexa) ಗ್ರ್ಯಾಂಡ್ ವಿಟಾರಾವರೆಗೆ (Grand Vitara) ಸಾಕಷ್ಟು ಹೊಸ ಕಾರುಗಳು ಮಾರುಕಟ್ಟೆಗೆ ಬಂದಿವೆ. ಕಂಪನಿಯು ಸದ್ಯ ಎಸ್‌ಯುವಿ (SUV) ವಿಭಾಗದಲ್ಲಿ ಬಲವಾದ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ. ಇದು ದೇಶದಲ್ಲಿ ಲಕ್ಷಾಂತರ ಗ್ರಾಹಕರನ್ನು ಹೊಂದಿದೆ. ಆದರೆ ದೇಶದಲ್ಲಿ ಮಾರುತಿ ಕಂಪನಿಯ ಮೊದಲ ಕಾರಿನ ಮೊದಲ ಗ್ರಾಹಕ ಯಾರು ಗೊತ್ತಾ?

ದೇಶದಲ್ಲಿ ಮೊಟ್ಟ ಮೊದಲ ಮಾರುತಿ -800 ಕಾರು ಖರೀದಿಸಿದ ವ್ಯಕ್ತಿಯೋರ್ವರು ಇನ್ನೂ ಈ ಕಾರನ್ನು ಸಂರಕ್ಷಿಸಿದ್ದಾರೆ. ಆದರೆ, ಈಗ ಅದು ಚಾಲನೆಯ ಸ್ಥಿತಿಯಲ್ಲಿ ಇಲ್ಲ. ಈ ಕಂಪನಿ ಅದನ್ನು ನವೀಕರಿಸಲು, ಅಪ್‌ಗ್ರೇಡ್‌ ಮಾಡಲು ಹಾಗೂ ತನ್ನ ಪ್ರಧಾನ ಕಚೇರಿಯಲ್ಲಿ ಪ್ರದರ್ಶನಕ್ಕೆ ಇರಿಸಲು ನಿರ್ಧರಿಸಿದೆ. 
ಮಾರುತಿಯ ಮೊದಲ ಕಾರು ಮಾರುತಿ -800 ಅನ್ನು 1983 ರಲ್ಲಿ ಬಿಡುಗಡೆ ಮಾಡಲಾಯಿತು. ಇದರ ಬೆಲೆ 47,500 ರೂ.ಗಳಷ್ಟಿತ್ತ. (ಮಾರುತಿ-800 ಬೆಲೆ) ಬೆಲೆಗೆ ಬಿಡುಗಡೆ ಮಾಡಲಾಯಿತು. ಇದರ ಮೊದಲ ವಾಹನವನ್ನು ಹರಿಯಾಣದಲ್ಲಿ ಮಾರುತಿ ಉದ್ಯೋಗ್ ಲಿಮಿಟೆಡ್‌ನಲ್ಲಿ ತಯಾರಿಸಲಾಯಿತು. 

ಮಾರುತಿ ಎಸ್-ಪ್ರೆಸ್ಸೋ PNZ ಆವೃತ್ತಿ ಬಿಡುಗಡೆ

ಕಾರಿನ ಮೊದಲ ಗ್ರಾಹಕ ಯಾರು?
ಮಾರುತಿ ಸುಜುಕಿಯ ಹರ್ಯಾಣ ಘಟಕದಿಂದ ಹೊರಬಂದ ಮೊದಲ 800 ಕಾರಿನ ಖರೀದಿದಾರರು, ನವದೆಹಲಿಯ ನಿವಾಸಿ ಹರ್ಪಾಲ್ ಸಿಂಗ್. ಅಂದಿನ ದೇಶದ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರು ತಮ್ಮ ಕೈಯಿಂದಲೇ ಕಾರಿನ ಕೀಲಿಕೈಯನ್ನು ಅವರಿಗೆ ಹಸ್ತಾಂತರಿಸಿದ್ದರು. ಮಾರುತಿಯ ಮೊದಲ ಕಾರು 800 2010 ರಲ್ಲಿ ಹರ್ಪಾಲ್ ಸಿಂಗ್ ಸಾಯುವವರೆಗೂ ಅವರ ಬಳಿ ಇರಿಸಿಕೊಂಡಿದ್ದರು.. ಈ ಕಾರಿನ ನೋಂದಣಿ ಸಂಖ್ಯೆ DIA 6479 ಆಗಿತ್ತು. ಈಗ ಮಾರುತಿಯ ಈ ಮೊದಲ ವಾಹನನ್ನು ಕಂಪನಿಯ ಪ್ರಧಾನ ಕಛೇರಿಯಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.

ಕಾರು ಚಾಲನೆಯಲ್ಲಿ ಇರಲಿಲ್ಲ
ಮೃತ ಹರ್ಪಾಲ್ ಸಿಂಗ್ ಅವರ ಮಾರುತಿ-800 ಕಾರು ಸಂಪೂರ್ಣ ಹಾಳಾದ ಸ್ಥಿತಿಯಲ್ಲಿತ್ತು. ಈ ಕಾರಿನ ಕೆಲವು ಚಿತ್ರಗಳನ್ನು ಅಂತರ್ಜಾಲದಲ್ಲಿ ಅಪ್‌ಲೋಡ್‌ ಮಾಡಲಾಗಿದೆ.. ಇದರ ನಂತರ ಕಂಪನಿಯು ಆ ಕಾರನ್ನು ಪುನಃಸ್ಥಾಪಿಸಲು ನಿರ್ಧರಿಸಿತು. ಕಂಪನಿಯು ಕಾರಿನಲ್ಲಿರುವ ಎಲ್ಲಾ ಮೂಲ ಬಿಡಿ ಭಾಗಗಳು ಮತ್ತು ಸಲಕರಣೆಗಳನ್ನು ಮರುಜೋಡಣೆ ಮಾಡಿತು. ಆದರೂ, ಈ ಕಾರು ಇನ್ನು ಮುಂದೆ ದೆಹಲಿಯ ರಸ್ತೆಗಳಲ್ಲಿ ಸಂಚರಿಸಲು ಯೋಗ್ಯವಾಗುವಂತೆ ಸಿದ್ಧಪಡಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಕಂಪನಿಯು ಭಾರತದಲ್ಲಿ ತನ್ನ ಮೊದಲ ಯಶಸ್ಸಿನ ಕಥೆಯಾಗಿ ತನ್ನ ಪ್ರಧಾನ ಕಛೇರಿಯಲ್ಲಿ ಕಾರನ್ನು ಪ್ರದರ್ಶಿಸಲು ನಿರ್ಧರಿಸಿದೆ.

5 ಸ್ಟಾರ್ ರೇಟಿಂಗ್ ಇದ್ರೂ ಶೂನ್ಯ ಮಾರಾಟ: ಎಸ್-ಕ್ರಾಸ್ ವಿವರ ತೆಗೆದು ಹಾಕಿದ ಮಾರುತಿ

ಮಾರುತಿ 800 ಎಂಜಿನ್ ಹೇಗಿತ್ತು?
ಹ್ಯಾಚ್‌ಬ್ಯಾಕ್ ಮಾರುತಿ-800 ನ ಮೂಲ ವಿನ್ಯಾಸವು ಸುಜುಕಿ ಫ್ರಂಟ್ ಎಸ್‌ಎಸ್ 80 (SS80) ಅನ್ನು ಆಧರಿಸಿದೆ. ಇದರ ಮೊದಲ ಬ್ಯಾಚ್ ಅನ್ನು ಸಂಪೂರ್ಣವಾಗಿ ನಾಕ್ ಡೌನ್ (CKD) ಕಿಟ್ ಆಗಿ ಆಮದು ಮಾಡಿಕೊಳ್ಳಲಾಯಿತು. ಈ ಮಾದರಿಯು 796 ಸಿಸಿ (cc), ಮೂರು-ಸಿಲಿಂಡರ್ ಎಫ್‌8ಡಿ (F8D) ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು ಅದು 35 ಬಿಎಚ್‌ಪಿ (BHP) ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ. ಪ್ರಸ್ತುತ, ಈ ಎಂಜಿನ್ ಅನ್ನು ಆಲ್ಟೊ ಮತ್ತು ಓಮ್ನಿಯಂತಹ ಕಾರುಗಳಲ್ಲಿ ಕಾಣಬಹುದು. ಆದಾಗ್ಯೂ, ಕಂಪನಿಯು ಅದನ್ನು ನವೀಕರಿಸಿದೆ.

ಹರ್ಪಾಲ್ ಅವರು ಮಾರುತಿ 800 ಖರೀದಿಸಿದಾಗ ತಮ್ಮ ಫಿಯೆಟ್ (Fiat) ಕಾರನ್ನು ಮಾರಿದ್ದರು ಮತ್ತು ತಮ್ಮ ಜೀವನದುದ್ದಕ್ಕೂ ಅದನ್ನು ಚಲಾಯಿಸಿದರು. ಮಾರುತಿ ಝೆನ್ ಬಿಡುಗಡೆಯಾದಾಗ, ಕುಟುಂಬವು ಝೆನ್ಗೆ ಅಪ್ಗ್ರೇಡ್ ಮಾಡಲು ಸಲಹೆ ನೀಡಿತ್ತು. ಆದರೆ ಅವರು ಜೀವಂತವಾಗಿರುವವರೆಗೆ ಈ ಕಾರನ್ನು ಬಿಡುವುದಿಲ್ಲ ಎಂದು ಅವರು ಹಠ ಹಿಡಿದಿದ್ದರು.

Tap to resize

Latest Videos

click me!