
ಯಾವ ಬಣ್ಣದ ಕಾರುಗಳು ರಸ್ತೆಗಳಲ್ಲಿ ಹೆಚ್ಚು ಅಪಘಾತಕ್ಕೀಡಾಗುತ್ತವೆ ಎಂಬ ಚರ್ಚೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಈಗ ಇಂತಹದೇ ಒಂದು ಚರ್ಚೆ ಎದುರಾಗಿದ್ದು, ಕಪ್ಪು ಬಣ್ಣದ ಕಾರುಗಳಿಂದ ಹೆಚ್ಚು ಅಪಘಾತ ಸಂಭವಿಸುತ್ತವೆ ಎಂಬ ಮಾತು ಕೇಳಿ ಬಂದಿವೆ. ಇತ್ತೀಚೆಗೆ 'ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್' (world of statistics) ಎಂಬ ಟ್ವಿಟ್ಟರ್ (twitter) ಪುಟದಲ್ಲಿ ಅವರು ಕಪ್ಪು ಬಣ್ಣದ ಕಾರುಗಳು ರಸ್ತೆ ಅಪಘಾತಗಳಿಗೆ ಹೆಚ್ಚು ಒಳಗಾಗುತ್ತವೆ ಎಂದು ಉಲ್ಲೇಖಿಸಲಾಗಿದೆ.
ಇದಕ್ಕೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಯಿಸಿರುವ ಕೈಗಾರಿಕೋದ್ಯಮಿ ಹಾಗೂ ಮಹೀಂದ್ರಾ ಮಹೀಂದ್ರಾ (Mahindra Mahindra) ಕಂಪನಿಯ ಅಧ್ಯಕ್ಷ ಆನಂದ್ ಮಹೀಂದ್ರಾ, “ಕುಚ್ ಭೀ” ಎಂದು ಲೇವಡಿ ಮಾಡಿದ್ದಾರೆ.
ಆನಂದ್ ಮಹೀಂದ್ರಾ ಅವರು ಹಾಸ್ಯಮಯ ಹಾಗೂ ಚಿಂತನಶೀಲ ಪೋಸ್ಟ್ಗಳನ್ನು ಹಂಚಿಕೊಳ್ಳಲು ಪ್ರಸಿದ್ಧರಾಗಿದ್ದಾರೆ. ಇವರು ನಿಯಮಿತವಾಗಿ ತನ್ನ 9.8 ಮಿಲಿಯನ್ ಟ್ವಿಟರ್ ಅಭಿಮಾನಿಗಳೊಂದಿಗೆ ಫೋಟೋ ಪೋಸ್ಟ್ಗಳು ಅಥವಾ ವೀಡಿಯೊ ಪೋಸ್ಟ್ಗಳ ರೂಪದಲ್ಲಿ ವಿವಿಧ ರೀತಿಯ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ಈಗ ಅವರು ಈ ವಿಲಕ್ಷಣ ಡೇಟಾದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ಪೋಸ್ಟಿನ ಪ್ರಕಾರ, ಕಪ್ಪು ಬಣ್ಣದ ಕಾರುಗಳು ರಸ್ತೆಯಲ್ಲಿ ಹೆಚ್ಚು ಅಪಘಾತ ಉಂಟು ಮಾಡುತ್ತವೆ. ಇದಷ್ಟೇ ಅಲ್ಲ, ಬೂದು, ಬೆಳ್ಳಿ, ನೀಲಿ ಹಾಗೂ ಕೆಂಪು ಬಣ್ಣದ ಕಾರುಗಳಿಂದಲೂ ಹೆಚ್ಚಿನ ಅಪಘಾತಗಳು ಸಂಭವಿಸುತ್ತವೆ ಎಂದು ಅದು ತಿಳಿಸಿದೆ.
ಈ ಟ್ವೀಟ್ ಪ್ರಕಾರ, ಕಪ್ಪು ಬಣ್ಣದ ಕಾರುಗಳು ಶೇ.47ರಷ್ಟು ಅಪಘಾತದ ಅಪಾಯವನ್ನು ಹೊಂದಿವೆ, ನಂತರ ಬೂದು ಬಣ್ಣದ ಕಾರುಗಳು ಶೇ.11, ಬೆಳ್ಳಿಯ ಬಣ್ಣದ ಕಾರುಗಳು ಶೇ.10 ಮತ್ತು ನೀಲಿ ಮತ್ತು ಕೆಂಪು ಬಣ್ಣದ ಕಾರುಗಳು ತಲಾ ಶೇ.7ರಷ್ಟು ಅಪಘಾತದ ಅಪಾಯ ಹೊಂದಿವೆ. ಇದಲ್ಲದೆ, ಬಿಳಿ, ಹಳದಿ, ಕಿತ್ತಳೆ ಮತ್ತು ಚಿನ್ನದ ಬಣ್ಣದ ಕಾರುಗಳು ಕ್ರ್ಯಾಶ್ ಆಗುವ ಸಾಧ್ಯತೆ ಕಡಿಮೆ ಎಂದು ಡೇಟಾ ತಿಳಿಸಿದೆ. ಆದರೆ, ಅಂಕಿಅಂಶಗಳು ಯಾವುದೇ ಮೌಲ್ಯೀಕರಣವನ್ನು ಹೊಂದಿಲ್ಲ. ಮತ್ತು ಇವು ಒಂದು ಅಂದಾಜಿನ ಮೇಲೆ ಲೆಕ್ಕ ಹಾಕಲಾಗಿರುವ ಸಂಖ್ಯೆಗಳಾಗಿವೆ. ಇದಕ್ಕೆ ಆನಂದ್ ಮಹೀಂದ್ರಾ ಮಾರ್ಕ್ ಟ್ವೈನ್-ಅಮೆರಿಕನ್ ಬರಹಗಾರರ ಪದಗುಚ್ಛವನ್ನು ಬಳಸಿಕೊಂಡು ಟ್ವೀಟ್ ಮಾಡಿದ್ದಾರೆ. ಅಂಕಿಅಂಶಗಳು ಅಸ್ಪಷ್ಟವಾಗಿವೆ ಹಾಗೂ ಸುಳ್ಳು ಎಂದು ಗೋಚರಿಸುತ್ತಿದೆ ಎಂದಿರುವ ಅವರು, ಹಿಂದಿಯಲ್ಲಿ "ಕುಚ್ ಭಿ" ಎಂದು ಟ್ವೀಟ್ ಮಾಡಿದ್ದಾರೆ.
ತನ್ನ ಪ್ರಶ್ನೆಗೆ ಸರಿ ಉತ್ತರ ನೀಡಿದ ಇಬ್ಬರಿಗೆ ಆನಂದ್ ಮಹೀಂದ್ರಾ ಸ್ಪೆಷಲ್ ಗಿಫ್ಟ್!
ನೆಟ್ಟಿಗರು ಮಹೀಂದ್ರಾ ಅವರ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದು, ಕೆಲವರು ಇವರ ಮಾತಿಗೆ ಸಮ್ಮತಿ ಸೂಚಿಸಿದ್ದಾರೆ ಮತ್ತು ಇತರರು ಅಂಕಿಅಂಶಗಳ ಹಿಂದೆ ಕಾರಣ ಸರಿ ಇರಬಹುದು ಎಂದು ಸಮರ್ಥಿಸಿಕೊಂಡಿದ್ದಾರೆ. ಆನಂದ್ ಮಹೀಂದ್ರಾ ತಮ್ಮ ಟ್ವೀಟ್ಗಳಿಗೆ ಆಸಕ್ತಿಕರ ಪ್ರತಿಕ್ರಿಯೆ ನೀಡುವುದರಲ್ಲಿ ಜನಪ್ರಿಯರು. ಇತ್ತೀಚೆಗೆ ಬಾಲಿವುಡ್ನಟಿ ರವೀನಾ ಟಂಡನ್, “ಸರ್, ನಾನು ಹೊಸ ಮಹೀಂದ್ರಾ ಥಾರ್ ಕೊಳ್ಳಲು ಯೋಚಿಸುತ್ತಿದ್ದೇನೆ. ನಾನು ಕಾಲೇಜು ದಿನಗಳಲ್ಲಿ ಮಹೀಂದ್ರಾ ಜೀಪ್ನಲ್ಲಿ ಚಾಲನೆ ಕಲಿತಿದ್ದು” ಎಂದು ಸ್ಮರಿಸಿದ್ದರು.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ಆನಂದ್, “ಇದು ಉತ್ತಮ ಬೆಳವಣಿಗೆ. ಇದರಿಂದ ಮಹೀಂದ್ರಾಗೆ ಕೂಡ ಲಾಭವಾಗಲಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಆನಂದ್ ಮಹೀಂದ್ರಾ ಅವರ ನೇತೃತ್ವದ ಮಹೀಂದ್ರಾ ಮಹೀಂದ್ರಾ ಇತ್ತೀಚೆಗಷ್ಟೇ ಸ್ಕಾರ್ಪಿಯೋ –ಎನ್ ಅನ್ನು ಬಿಡುಗಡೆಗೊಳಿಸಿದ್ದು, ಭಾರಿ ಬೇಡಿಕೆ ಪಡೆದುಕೊಂಡಿದೆ. ಬೇಡಿಕೆ ಹೆಚ್ಚಳ ಹಾಗೂ ಚಿಪ್ ಕೊರತೆಯ ಹಿನ್ನೆಲೆಯಲ್ಲಿ ಸ್ಕಾರ್ಪಿಯೋ –ಎನ್ ಹಾಗೂ ಕಳೆದ ವರ್ಷದ ಜನಪ್ರಿಯ ಎಸ್ಯುವಿ ಎಕ್ಸ್ಯುವಿ 700 (XUV700) ಒಂದು ವರ್ಷಕ್ಕೂ ಹೆಚ್ಚಿನ ವೇಯ್ಟಿಂಗ್ ಪಿರಿಯಡ್ ಅನ್ನು ಹೊಂದಿವೆ.
ಮಹೀಂದ್ರ ಚೇರ್ಮೆನ್ ಆನಂದ್ ಮಹೀಂದ್ರಾಗೆ ಹೊಚ್ಚ ಹೊಸ ಸ್ಕಾರ್ಪಿಯೋN ಡೆಲಿವರಿ!