NFT ಪ್ರವೇಶಿಸಿ ಮಹೀಂದ್ರಾ ಥಾರ್‌: ಒಂದು ವಾರದಲ್ಲಿ 11 ಲಕ್ಷ ರೂ. ಬಿಡ್ಡಿಂಗ್!

By Suvarna News  |  First Published Apr 4, 2022, 5:09 PM IST

Mahindra Thar NFT: ಥಾರ್‌ ಆಧರಿಸಿದ ಫಂಗಬಲ್ ಅಲ್ಲದ ಟೋಕನ್‌ಗಳ ಸೆಟ್‌ನೊಂದಿಗೆ ಈ ಎಂಟ್ರಿ ಕೊಟ್ಟಿದ್ದು,  ಕೆಲವೇ ದಿನಗಳಲ್ಲಿ ಇದರ ಒಂದು ಡಿಜಿಟಲ್‌ ತುಣುಕು 11 ಲಕ್ಷ ರೂ.ಗಳಿಗೆ ಮಾರಾಟವಾಗಿದ್ದು, ಹೊಸ ದಾಖಲೆ ನಿರ್ಮಿಸಿದೆ.


ಮಹೀಂದ್ರಾ ಸಮೂಹ (Mahindra group) ತನ್ನ ಫ್ಲ್ಯಾಗ್‌ಶಿಪ್ ವಾಹನ ‘ಥಾರ್’ (Mahindra Thar) ಮೂಲಕ ಈಗ ಎನ್ಎಫ್‌ಟಿಯ (NFT) (ಆನ್‌ಲೈನ್‌ ಮಾರಾಟ ವೇದಿಕೆ) ಜಗತ್ತು ಪ್ರವೇಶಿಸಿದೆ. ಥಾರ್‌ ಆಧರಿಸಿದ ಫಂಗಬಲ್ ಅಲ್ಲದ ಟೋಕನ್ಗಳ ಸೆಟ್‌ನೊಂದಿಗೆ ಈ ಎಂಟ್ರಿ ಕೊಟ್ಟಿದ್ದು,  ಕೆಲವೇ ದಿನಗಳಲ್ಲಿ ಇದರ ಒಂದು ಡಿಜಿಟಲ್‌ ತುಣುಕು 11 ಲಕ್ಷ ರೂ.ಗಳಿಗೆ ಮಾರಾಟವಾಗಿದ್ದು, ಹೊಸ ದಾಖಲೆ ನಿರ್ಮಿಸಿದೆ.

ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಥಾರ್ ಎನ್‌ಎಫ್‌ಟಿಗೆ ದೊರೆತ "ಅಗಾಧ" ಪ್ರತಿಕ್ರಿಯೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಈ  ಹರಾಜಿನಿಂದ ಬರುವ ಎಲ್ಲಾ ಆದಾಯವು ‘ಪ್ರಾಜೆಕ್ಟ್ ನನ್ಹಿ ಕಲಿ’-(Project Nanhi-kali) ಭಾರತದಲ್ಲಿನ ಹಿಂದುಳಿದ ಹೆಣ್ಣುಮಕ್ಕಳ ಶಿಕ್ಷಣವನ್ನು ಬೆಂಬಲಿಸುವ ಯೋಜನೆಗೆ ಹೋಗುತ್ತದೆ ಎಂದಿದ್ದಾರೆ. 

Tap to resize

Latest Videos

undefined

“ಹರಾಜಿಗೆ ಅಗಾಧ ಪ್ರತಿಕ್ರಿಯೆ ಗಮನಿಸಿದರೆ ಅದು ನಿಜವಾದ ಥಾರ್ ಅನ್ನು ಖರೀದಿಸುವಷ್ಟು ದುಬಾರಿಯಾಗಿದೆ ಎಂದರ್ಥ. ಆದರೆ ಈ ಪ್ರತಿಕ್ರಿಯೆ ಅರ್ಥಪೂರ್ಣವಾಗಿದೆ, ಏಕೆಂದರೆ ಎನ್‌ಎಫ್‌ಟಿ ನಿಜವಾಗಿಯೂ  ವಿಶೇಷವಾಗಿದೆ”ಎಂದು ಮಹೀಂದ್ರಾ ಟ್ವಿಟರ್‌ನಲ್ಲಿ ಹೇಳಿದ್ದಾರೆ.

ಟ್ವೀಟ್ ನಲ್ಲಿ ಥಾರ್‌ ಚಿತ್ರವನ್ನು ಲಗತ್ತಿಸಿರುವ ಅವರು, “ಎನ್‌ಎಫ್‌ಟಿ ಬ್ರಹ್ಮಾಂಡದಲ್ಲಿ ಮಾಸ್ಟರ್ 11 ಲಕ್ಷ ರೂ. ಸೂಪರ್ ಬಿಡ್‌ನಲ್ಲಿ ಎತ್ತರಕ್ಕೆ ನಿಂತಿದೆ” ಎಂದಿದ್ದಾರೆ.
ಇಲ್ಲಿಯವರೆಗೆ ಮಹೀಂದ್ರಾ, ಮೊದಲ ಬ್ಯಾಚ್ ಎನ್‌ಎಫ್‌ಟಿಗಳ ಮಾರಾಟದಿಂದ ಒಟ್ಟು 26 ಲಕ್ಷ ರೂ. ಗಳಿಸಿದೆ. ಮಹೀಂದ್ರಾ ಗ್ರೂಪ್ನ ಐಟಿ ಅಂಗವಾದ ಟೆಕ್ ಮಹೀಂದ್ರಾ ಸಹಯೋಗದೊಂದಿಗೆ ಈ ಎನ್‌ಎಫ್‌ಟಿಗಳನ್ನು ಬಿಡುಗಡೆ ಮಾಡಲಾಯಿತು. ಮಾರ್ಚ್ 29 ರಿಂದ ಪ್ರಾರಂಭವಾಗಿರುವ ಟೆಕ್ ಮಹೀಂದ್ರಾದ ಎನ್‌ಎಫ್‌ಟಿ ಮಾರುಕಟ್ಟೆ ಸ್ಥಳ “ಮಹೀಂದ್ರ ಗ್ಯಾಲರಿ” ಯಲ್ಲಿ ಬಿಡ್ಡಿಂಗ್‌ಗೆ ಲಭ್ಯವಿತ್ತು.

ಇದನ್ನೂ ಓದಿ: VW Polo Legend ವೋಕ್ಸ್‌ವ್ಯಾಗನ್ ಪೊಲೋ ಲೆಜೆಂಡ್ ಎಡಿಶನ್ ಕಾರು ಬಿಡುಗಡೆ, ಇದು ಕೊನೆಯ ಪೊಲೋ ಕಾರು!

“ಥಾರ್ ಎನ್‌ಎಫ್‌ಟಿಗಳ ಮೊದಲ ಸರಣಿಯ ಆಕ್ಷನ್-ಪ್ಯಾಕ್ಡ್ ಹರಾಜು 26 ಲಕ್ಷ ರೂ. ಗಳಿಗೂ ಹೆಚ್ಚಿನ ಬಿಡ್‌ಗಳನ್ನು ಗಳಿಸಿದೆ. ಹರಾಜಿನಿಂದ ಬರುವ ಹಣವನ್ನು ಹಿಂದುಳಿದ ಹೆಣ್ಣು ಮಕ್ಕಳ ಶಾಲಾ ಶಿಕ್ಷಣವನ್ನು ಸಶಕ್ತಗೊಳಿಸುವ ‘ನನ್ಹಿ –ಕಲಿ’ ದಾನ ಮಾಡಲಾಗುವುದು ಎಂದು ಆನಂದ್‌ ಮಹೀಂದ್ರಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಬಿಡ್ಡಿಂಗ್‌ ಕುರಿತು ಅಪ್‌ಡೇಟ್‌  ಮಾಹಿತಿ ನೀಡಿರುವ ಮಹೀಂದ್ರಾ, ಮೊದಲ ಹಂತದ ಥಾರ್ ಎನ್‌ಎಫ್‌ಟಿಗಳ ಹರಾಜು ಮುಕ್ತಾಯಗೊಂಡಿದೆ. ವಿಜೇತರಿಗೆ ಅಭಿನಂದನೆಗಳು. ಭಾಗವಹಿಸುವವರಿಗೆ ಧನ್ಯವಾದಗಳು. ರು ಅನುಸರಿಸಬೇಕಾದ ಮುಂದಿನ ಹಂತಗಳ ಕುರಿತು ಅವರಿಂದ ಇಮೇಲ್‌ಗಾಗಿ ಕಾಯಿರಿ” ಎಂದು ಟ್ವೀಟ್‌ನಲ್ಲಿ ತಿಳಿಸಿದೆ.

ಮಹೀಂದ್ರಾ ನಾಲ್ಕು NFT ಗಳ ಸೆಟ್ ಅನ್ನು ಪರಿಚಯಿಸಿದೆ - ಸ್ಟ್ಯಾಂಡಿಂಗ್ ಟಾಲ್, ಬಾರ್ನ್ ಆಫ್ ದಿ ಅರ್ಥ್, ಟೇಕಿಂಗ್ ಫ್ಲೈಟ್ ಮತ್ತು ಎಕ್ಸ್ಪ್ಲೋರ್ ದಿ ಇಂಪಾಸಿಬಲ್. ಸ್ಟ್ಯಾಂಡಿಂಗ್ ಟಾಲ್ ಗೆ ಅತಿ ಹೆಚ್ಚು  ಅಂದರೆ 11 ಲಕ್ಷ ರೂ. ಬಿಡ್ ಮಾಡಲಾಗಿದೆ. ನದಿಗಳು, ಇಳಿಜಾರುಗಳು ಮತ್ತು ದಿಬ್ಬಗಳಂತಹ ಅತ್ಯಂತ ಒರಟು ಭೂಪ್ರದೇಶಗಳಲ್ಲಿ ಚಲಿಸುವ ಥಾರ್ ಸಾಮರ್ಥ್ಯವನ್ನು ಎನ್‌ಎಫ್ಟಿಯಲ್ಲಿ ಹೈಲೈಟ್‌ ಮಾಡಲಾಗಿದೆ. ಜೊತೆಗೆ, ಥಾರ್ನ ಉನ್ನತ-ಆಸನದ ಸ್ಥಾನವನ್ನು ಸಹ ಇದರಲ್ಲಿ ಉಲ್ಲೇಖಿಸಲಾಗಿದೆ.
ಬಿಡ್ ವಿಜೇತರು ಮಹೀಂದ್ರಾದ ರೋಮಾಂಚಕ ಆಫ್-ರೋಡಿಂಗ್ ಟ್ರ್ಯಾಕ್‌ಗಳಲ್ಲಿ ಥಾರ್ ಚಾಲನೆಯ ಅನುಭವ ಪಡೆಯಲಿದ್ದಾರೆ.

ಇದನ್ನೂ ಓದಿ: Honda Offers ಆಯ್ದ ಕಾರುಗಳ ಮೇಲೆ ಡಿಸ್ಕೌಂಟ್ ಘೋಷಿಸಿದ ಹೋಂಡಾ!

ಭಾರತದಲ್ಲಿ ಅತ್ಯಂತ ಜನಪ್ರಿಯ ಲೈಫ್‌ಸ್ಟೈಲ್‌ ವಾಹನಗಳಲ್ಲಿ ಒಂದಾಗಿರುವ ಮಹೀಂದ್ರ ಥಾರ್ ಆಫ್-ರೋಡ್ ಉತ್ಸಾಹಿಗಳಲ್ಲಿ ಕೂಡ ಅತ್ಯಂತ ಜನಪ್ರಿಯವಾಗಿದೆ . ಆದರೆ, ಈಗ ಇದನ್ನು ಕೌಟುಂಬಿಕ ಕಾರನ್ನಾಗಿ ಕೂಡ ಪರಿಚಯಿಸಲು ಮಹೀಂದ್ರಾ ಮುಂದಾಗಿದ್ದು, ಇದಕ್ಕಾಗಿ ಥಾರ್ನ 5-ಬಾಗಿಲಿನ ಆವೃತ್ತಿಯನ್ನು ಅಭಿವೃದ್ಧಿಪಡಿಸುತ್ತಿದೆ. 
ಇದರ ವಿನ್ಯಾಸವು ಪ್ರಸ್ತುತ 3-ಬಾಗಿಲಿನ ಮಾದರಿಗೆ ಹೋಲುತ್ತದೆ, ಆದರೆ ಇದು ದೊಡ್ಡದಾದ ವೀಲ್‌ಬೇಸ್ ಹೊಂದಿರಲಿದ್ದು,  ಪ್ರಸ್ತುತ ಥಾರ್‌ಗಿಂತ ಭಿನ್ನವಾಗಿ, ಮುಂಬರುವ 5-ಬಾಗಿಲಿನ ಆವೃತ್ತಿಯು ಕನ್ವರ್ಟಿಬಲ್ ರೂಫ್ ಆಯ್ಕೆಯನ್ನು ಪಡೆಯುವ ನಿರೀಕ್ಷೆಯಿಲ್ಲ.

click me!