ನವದೆಹಲಿ(ಏ.04): ವೋಕ್ಸ್‌ವ್ಯಾಗನ್ ಹೊಚ್ಚ ಹೊಸ ಪೊಲೋ ಲೆಜೆಂಡ್ ಎಡಿಶನ್ ಕಾರು ಬಿಡುಗಡೆ ಮಾಡಿದೆ. ಇದು ಲಿಮಿಟೆಡ್ ಎಡಿಶನ್ ಕಾರಾಗಿದೆ. 2010ರಲ್ಲಿ ಮೊದಲ ಬಾರಿಗೆ ಪೊಲೋ ಕಾರು ಭಾರತದಲ್ಲಿ ರಸ್ತೆಯಲ್ಲಿ ಓಡಾಟ ಆರಂಭಿಸಿತ್ತು. ಇದೀಗ 12 ವರ್ಷಗಳ ಸಂಭ್ರಮದಲ್ಲಿರುವ ಪೋಲೋ ಲೆಜೆಂಡ್ ಎಡಿಶನ್ ಕಾರು ಬಿಡುಗಡೆ ಮಾಡಿದೆ.
ಈ ವರ್ಷದ ಆರಂಭದಲ್ಲಿ ವೋಕ್ಸ್‌ವ್ಯಾಗನ್ ಭಾರತದಲ್ಲಿ ಪೋಲೋ ಹಾಗೂ ವೆಂಟೋ ಕಾರುಗಳ ಉತ್ಪಾದನೆ ಸ್ಥಗಿತಗೊಳಿಸುವುದಾಗಿ ಸೂಚನೆ ನೀಡಿತ್ತು. ವೆಂಟೋ ಬದಲು ವರ್ಚಸ್ ಕಾರನ್ನು ಬಿಡುಗಡೆ ಮಾಡುತ್ತಿದೆ. ಇನ್ನು ಪೊಲೋ ಕಾರಿನ ಬದಲು ಯಾವುದೇ ಕಾರು ಘೋಷಣ ಮಾಡಿಲ್ಲ. ಇದರ ನಡುವೆ ಪೊಲೋ ಲೆಜೆಂಡ್ ಎಡಿಶನ್ ಮೂಲಕ ಇದೀಗ ವೋಕ್ಸ್‌ವ್ಯಾಗನ್ ಭಾರತದ ಗ್ರಾಹಕರಿಗೆ ಕೊನೆಯ ಪೊಲೋ ಕಾರು ನೀಡಲು ಮುಂದಾಗಿದೆ.
undefined
Volkswagen Cars ಭಾರತದ 12 ವರ್ಷಗಳ ಪಯಣಕ್ಕೆ ಫುಲ್‌ಸ್ಟಾಪ್, ಉತ್ಪಾದನೆ ನಿಲ್ಲಿಸುತ್ತಿದೆ VW ಪೋಲೋ ಹಾಗೂ ವೆಂಟೋ!
ಪೊಲೋ ಲೆಜೆಂಡ್ ಎಡಿಶನ್ ಕಾರಿನ ಬೆಲೆ:
ನೂತನ ಪೊಲೋ ಲೆಜೆಂಡ್ ಎಡಿಶನ್ ಕಾರು ಟಾಪ್ ಎಂಡ್ ಮಾಡೆಲ್ GT TSI ವೇರಿಯೆಂಟ್‌ನ ಎಲ್ಲಾ ಫೀಚರ್ಸ್ ಹೊಂದಿದೆ. ಲಿಮಿಟೆಡ್ ಎಡಿಶನ್ ಪೋಲೋ ಕಾರಿನ ಬೆಲೆ 10.25 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಪೊಲೋ ಲೆಜೆಂಡ್ ಎಡಿಶನ್ ಕಾರು ಕೇವಲ 700 ಯುನಿಟ್ ಮಾತ್ರ ಲಭ್ಯವಿದೆ. ಹೀಗಾಗಿ ಮೊದಲು ಬುಕ್ ಮಾಡಿದವರಿಗೆ ಕಾರು ಸಿಗಲಿದೆ. 700 ಕಾರುಗಳ ಉತ್ಪಾದನೆ ಬಳಿಕ ಅಂದರೆ ಜೂನ್ ತಿಂಗಳಲ್ಲಿ ಪೊಲೋ ಕಾರಿನ ಉತ್ಪಾದನೆ ಸ್ಥಗಿತಗೊಳ್ಳಲಿದೆ.
ಕಳೆದ 12 ವರ್ಷಗಳಲ್ಲಿ 3 ಲಕ್ಷ ಪೊಲೋ ಕಾರುಗಳನ್ನು ವೋಕ್ಸ್‌ವ್ಯಾಗನ್ ಭಾರತದಲ್ಲಿ ಮಾರಾಟ ಮಾಡಿದೆ. ವೋಕ್ಸ್‌ವ್ಯಾಗನ್ ಪೊಲೋ ಭಾರತದಲ್ಲಿ ನಿರ್ಮಾಣಗೊಂಡಿರುವ ಕಾರು. ಪುಣೆಯಲ್ಲಿರುವ ಚಕನ್ ಉತ್ಪಾದನಾ ಘಟದಲ್ಲಿ ಕಾರು ನಿರ್ಮಾಣವಾಗಿತ್ತು. ಸ್ಥಳೀಯವಾಗಿ ಉತ್ಪಾದಿಸಲಾದ ಪೊಲೋ ಅತ್ಯಧಿಕ ಮಾರಾಟ ದಾಖಲೆ ಹೊಂದಿರುವ ವೋಕ್ಸ್‌ವ್ಯಾಗನ್ ಕಾರಾಗಿದೆ.ಭಾರತದಲ್ಲಿ ಡ್ಯುಯೆಲ್ ಏರ್‌ಬ್ಯಾಗ್ ನೀಡಿದ ಮೊದಲ ಕಾರು ಪೊಲೋ. 2014ರಲ್ಲೇ ಗ್ಲೋಬಲ್ NCAPನಿಂದ 4 ಸ್ಟಾರ್ ಸೇಫ್ಟಿಂಗ್ ರೇಟಿಂಗ್ ಪಡೆದುಕೊಂಡಿದೆ.
ಲೆಜೆಂಡ್ ಎಡಿಶನ್ ಎಂಜಿನ್
ಹೊಚ್ಚ ಹೊಸ ವೋಕ್ಸ್‌ವ್ಯಾಗನ್ ಪೊಲೋ ಲೆಜೆಂಡ್ ಕಾರು ಅತ್ಯುತ್ತಮ ಪರ್ಫಾಮೆನ್ಸ್ ಹೊಂದಿದೆ. 1.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದೆ 108 bhp ಪವರ್ ಹಾಗೂ 175 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಟ್ರಾನ್ಸ್‌ಮಿಶನ್ ಹೊಂದಿದೆ. ಪೊಲೋ ಲೆಜೆಂಡ್ ಎಡಿಶನ್ ಕಾರು ಭಾರತದ 151 ಡೀಲರ್‌ಶಿಪ್‌ಗಳಲ್ಲಿ ಲಭ್ಯವಿದೆ.
ವೋಕ್ಸ್‌ವ್ಯಾಗನ್ ಪೇರೆಂಟ್ ಕಂಪನಿಯಿಂದ 5 ಕಾರು
ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ನೂತನ ಐದು ಮಾದರಿಯ ಕಾರುಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ದೆಹಲಿಯ ಖಾಸಗಿ ಹೋಟೆಲ್‌ನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ‘ಸ್ಕೋಡಾ ವಿಷನ್ ಇನ್’ ಮತ್ತು ‘ವೋಕ್ಸ್‌ವ್ಯಾಗನ್ ಕಾಂಪ್ಯಾಕ್ಟ್ (ಟೈಗುನ್) ಎಸ್‌ಯುವಿ’ ಐಷಾರಾಮಿ ಕಾರುಗಳೊಂದಿಗೆ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ‘ಆಡಿ ಎ8ಎಲ…’, ‘ಲ್ಯಾಂಬೊರ್ಗಿನಿ ಹುರಾಕೆನ್’ ಹಾಗೂ ‘ಪೋರ್ಷೆ 911 ಕ್ಯಾಬ್ರಿಯೊಲೆಟ್’ ಕಾರುಗಳನ್ನು ಬಿಡುಗಡೆ ಮಾಡಲಾಯಿತು. ಇದರಲ್ಲಿ ಆಡಿ ಎ8ಎಲ… ಕಾರಿನ ಬೆಲೆ 1.56 ಕೋಟಿ (ಎP್ಸ… ಷೋರೂಂ) ರು. ನಿಗದಿಪಡಿಸಲಾಗಿದೆ. ಉಳಿದ ಮಾದರಿಯ ಕಾರುಗಳ ಬೆಲೆಯನ್ನು ಕಂಪನಿ ಇನ್ನಷ್ಟೇ ಘೋಷಿಸಬೇಕಿದೆ.