ಮಹೀಂದ್ರದಿಂದ ಗುಡ್ ನ್ಯೂಸ್, 5 ಡೋರ್ ಥಾರ್ ಕಾರು ಆಗಸ್ಟ್ 6ಕ್ಕೆ ಅನಾವರಣ!

Published : Jun 26, 2023, 04:55 PM IST
ಮಹೀಂದ್ರದಿಂದ ಗುಡ್ ನ್ಯೂಸ್, 5 ಡೋರ್ ಥಾರ್ ಕಾರು ಆಗಸ್ಟ್ 6ಕ್ಕೆ ಅನಾವರಣ!

ಸಾರಾಂಶ

ಮಹೀಂದ್ರ ಇದೀಗ ಹೊಚ್ಚ ಹೊಸ ಥಾರ್ ಅನಾವರಣ ಮಾಡಲು ಸಜ್ಜಾಗಿದೆ. 5 ಡೋರ್ ಮಹೀಂದ್ರ ಥಾರ್ ಆಗಸ್ಟ್ 6 ರಂದು ಜಾಗತಿಕವಾಗಿ ಅನಾವರಣಗೊಳ್ಳಲಿದೆ. ಈ ಕಾರ್ಯಕ್ರಮದಲ್ಲೂ ಕೆಲ ವಿಶೇಷತೆಗಳಿವೆ.

ನವದಹೆಲಿ(ಜೂ.26) ಮಹೀಂದ್ರ ಥಾರ್ ಭಾರತದಲ್ಲಿ ಭಾರಿ ಸಂಚಲನ ಸೃಷ್ಟಿಸಿದ ವಾಹನ. ಯುವಕರಿಂದ ಎಲ್ಲ ವಯೋಮಾನದವರೂ ಹೆಚ್ಚು ಇಷ್ಟಪಟ್ಟ ವಾಹನವಾಗಿದೆ. ಇದೀಗ ಮಹೀಂದ್ರ ಥಾರ್ ಅಪ್‌ಗ್ರೇಡ್ ವರ್ಶನ್ ಬಿಡುಗಡೆಯಾಗುತ್ತಿದೆ. ಆಗಸ್ಟ್ 15 ರಂದು ಹೊಚ್ಚ ಹೊಸ 5 ಡೋರಿನ ಮಹೀಂದ್ರ ಥಾರ್ ಜಾಗತಿಕವಾಗಿ ಅನಾವರಣಗೊಳ್ಳುತ್ತಿದೆ. ವಿಶೇಷ ಅಂದರೆ ಈ ಕಾರ್ಯಕ್ರಮ ಸೌತ್ ಆಫ್ರಿಕಾದಲ್ಲಿ ಆಯೋಜಿಸಲಾಗಿದೆ. ಮಹೀಂದ್ರ ವಾಹನಗಳಿಗ ಸೌತ್ ಆಫ್ರಿಕಾದಲ್ಲಿ ಭಾರಿ ಬೇಡಿಕೆ ಇದೆ. ಭಾರತದ ಬಳಿಕ ಅತೀ ಹೆಚ್ಚು ಬೇಡಿಕೆ ರಾಷ್ಟ್ರಗಳ ಪೈಕಿ ಸೌತ್ ಆಫ್ರಿಕಾ ಮುಂಚೂಣಿಯಲ್ಲಿದೆ. ಹೀಗಾಗಿ ಸೌತ್ ಆಫ್ರಿಕಾದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ಮಹೀಂದ್ರ ಥಾರ್ 3 ಡೋರ್ (Mahindra Thar) ವಾಹನವಾಗಿದೆ. ಇದೀಗ 5 ಡೋರ್ ಥಾರ್ ಅನಾವರಣಗೊಳ್ಳುತ್ತಿದೆ. ವಾಹನದ ಗಾತ್ರ ಬದಲಾಗಲಿದೆ. ಸ್ಥಳವಕಾಶ ಹೆಚ್ಚಾಗಲಿದೆ. ಆದರೆ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. ಸದ್ಯ ಥಾರ್ ವಾಹನದಲ್ಲಿ ಬಳಸತ್ತಿರುವ 2.2 ಲೀಟರ್ ಡೀಸೆಲ್ ಹಾಗೂ 2.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದೆ.ನೂತನ 5 ಡೋರ್ ಥಾರ್ ಕಾರಿನ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. ಸದ್ಯ ಮಾರುಕಟ್ಟೆಯಲ್ಲಿರುವ 3 ಡೋರ್ ಥಾರ್ ಕಾರಿನಂತೆ ಇರಲಿದೆ. ಆದರೆ ಗಾತ್ರ ದೊಡ್ಡದು. 

ಮಹೀಂದ್ರ ಥಾರ್ ಗಾಡಿಯಷ್ಟೇ ಕ್ಲಾಸಿ ಸ್ಟೈಲಿಶ್ ಅದರ ಡಿಸೈನರ್‌..!

ಆಗಸ್ಟ್ 15 ರಂದು ನೂತನ ಥಾರ್ ಅನಾವರಣಗೊಳ್ಳಲಿದೆ. ಮುಂದಿನ ವರ್ಷದಿಂದ ಮಾರಾಟ (Sales) ಆರಂಭಗೊಳ್ಳಲಿದೆ. ಆಗಸ್ಟ್ 15 ರಂದು ಮಹೀಂದ್ರ ಈಗಾಗಲೇ ಹಲವು ವಾಹನ ಬಿಡುಗಡೆ ಮಾಡಿ ಯಶಸ್ಸು ಸಾಧಿಸಿದೆ. ಇದೀಗ ನೂತನ ಥಾರ್ ಕೂಡ ಸ್ವಾತಂತ್ರ್ಯ ದಿನಾಚರಣೆ ದಿನ (Independence Day) ಅನಾವರಣಗೊಳ್ಳುತ್ತಿದೆ. ನೂತನ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಬಹಿರಂಗವಾಗಿಲ್ಲ.

ಸೌತ್ ಆಫ್ರಿಕಾದಲ್ಲಿ ನೂತನ ಥಾರ್ ಅನಾವರಣಗೊಳ್ಳಲಿದೆ. ಸೌತ್ ಆಫ್ರಿಕಾದಲ್ಲಿ ಮಹೀಂದ್ರ XUV300, ಮಹೀಂದ್ರ XUV700 ಕಾರುಗಳಿಗೆ ಭಾರಿ ಬೇಡಿಕೆ ಇದೆ. ಮಹೀಂದ್ರ ಸ್ಕಾರ್ಪಿಯೋ ಎನ್ ಕಾರು ಕೂಡ ಸೌತ್ ಆಫ್ರಿಕಾದಲ್ಲಿ ಜನರ ಅಚ್ಚುಮೆಚ್ಚಿನ ಕಾರಾಗಿದೆ. ಇದೀಗ ಸೌತ್ ಆಫ್ರಿಕಾದಲ್ಲಿ ನೂತನ ಮಹೀಂದ್ರ ಥಾರ್ ಕಾರು ಅನಾವರಣಗೊಳ್ಳತ್ತಿದೆ.

ಹೊಚ್ಚ ಹೊಸ ಮಹೀಂದ್ರ ಥಾರ್ 2WD ಬಿಡುಗಡೆ, ಅತ್ಯಾಕರ್ಷಕ ಬೆಲೆಯಲ್ಲಿ ಲಭ್ಯ!

ಇತ್ತೀಚೆಗೆ ಮಹೀಂದ್ರ ನೂತನ ಥಾರ್ ಬಿಡುಗಡೆ ಮಾಡಿತ್ತು. 3 ಡೋರಿನ ಈ ಕಾರು ಬ್ಲೇಸಿಂಗ್‌ ಬ್ರೌನ್‌, ಎವರೆಸ್ಟ್‌ ವೈಟ್‌ ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ರಿಯರ್‌ ವ್ಹೀಲ್‌ ಡ್ರೈವ್‌, ಎಲೆಕ್ಟ್ರಿಕ್‌ ಬ್ರೇಕ್‌ ಲಾಕಿಂಗ್‌ ವ್ಯವಸ್ಥೆ ಈ ಹೊಸ ವೇರಿಯಂಟ್‌ನಲ್ಲಿದೆ ಎಂದು ಕಂಪನಿ ತಿಳಿಸಿದೆ.ಸದ್ಯ ಮಾರುಕಟ್ಟೆಯಲ್ಲಿರುವ 3 ಡೋರಿನ ಥಾರ್ ಕಾರಿನ ಬೆಲೆ 10.55 ಲಕ್ಷ ರೂಪಾಯಿಂದ ಆರಂಭಗೊಳ್ಳುತ್ತಿದ್ದು, ಗರಿಷ್ಠ 16.78 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).ಇದೀಗ ಹೊಸ ಥಾರ್ ವಾಹನಕ್ಕೆ ಭಾರತದಲ್ಲಿ ಈಗಲೇ ಬೇಡಿಕೆ ಶುರುವಾಗಿದೆ. ಹೀಗಾಗಿ ನೂತನ ಥಾರ್ ಬುಕಿಂಗ್ ಬಳಿಕ ಕಾಯುವಿಕೆ ಅವಧಿ ಗರಿಷ್ಠವಾಗುವ ಸಾಧ್ಯತೆಗಳು ಗೋಚರಿಸುತ್ತಿದೆ.

PREV
Read more Articles on
click me!

Recommended Stories

Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ
ಭಾರತದ ಮೊದಲ 7 ಸೀಟರ್ ಎಲೆಕ್ಟ್ರಿಕ್ SUV ಕಾರು XEV 9S ಪರಿಚಯಿಸಿದ ಮಹೀಂದ್ರ,ಟಾಟಾಗೆ ಠಕ್ಕರ್