ಮಾರುತಿ ಸುಜುಕಿ ಇದೀಗ ಹೊಚ್ಚ ಹೊಸ ಟೂರ್ H1 ಕಾರು ಬಿಡುಗಡೆ ಮಾಡಿದೆ. ನೂತನ ಕಾರಿನ ಬೆಲೆ ಕೇವಲ 4.80 ಲಕ್ಷ ರೂಪಾಯಿ. ಪೆಟ್ರೋಲ್ ಹಾಗೂ ಸಿಎನ್‌ಜಿ ಎರಡೂ ವೇರಿಯೆಂಟ್‌ನಲ್ಲಿ ನೂತನ ಕಾರು ಲಭ್ಯವಿದೆ.
ನವೆದೆಹಲಿ(ಜೂ.09): ಮಾರುತಿ ಸುಜುಕಿ ಹೊಚ್ಚ ಹೊಸ ಟೂರ್ H1 ಕಾರು ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ 4.80 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ವಾಣಿಜ್ಯ ಮಾರುಕಟ್ಟೆಗೆ ಮಾರುತಿ ಸುಜುಕಿ ಬಿಡುಗಡೆ ಮಾಡಿದ ಮೊದಲ ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಕಾರು ಇದಾಗಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ವೇರಿಯೆಂಟ್‌ನಲ್ಲಿ ನೂತನ ಕಾರು ಬಿಡುಗಡೆಯಾಗಿದೆ. ಕಮರ್ಷಿಯಲ್ ಮಾರುಕಟ್ಟೆಗೆ ಅನುಗುಣವಾಗಿ ಈ ಕಾರು ಬಿಡುಗಡೆ ಮಾಡಲಾಗಿದ್ದು, ಇದೀಗ ಹೊಸ ಸಂಚಲನ ಸೃಷ್ಟಿಸಿದೆ.
ನೂತನ ಸುಜುಕಿ ಟೂರ್ H1 ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಅಲ್ಟೋ ಕೆ10 ಕಾರಾಗಿದೆ. ಆದರೆ ಮಹತ್ತರ ಬದಲಾವಣೆ ಮಾಡಿ ನೂತನ ಕಾರು ಬಿಡುಗಡೆ ಮಾಡಲಾಗಿದೆ. ಕಾರಿನ ವಿನ್ಯಾಸದಲ್ಲಿ ವಿಶೇಷ ಬದಲಾವಣೆ ಮಾಡಲಾಗಿದೆ. ಮುಂಭಾಗದ ಬಂಪರ್, ಬೊನೆಟ್, ಹೆಡ್‌ಲ್ಯಾಂಪ್ಸ್, ಟೈಲ್ ಲೈಟ್ಸ್ ವಿನ್ಯಾಸಗಳು ಬದಲಾಗಿದೆ. ಆದರೆ ಎಂಜಿನ್‌ನಲ್ಲಿ ಬದಲಾವಣೆ ಮಾಡಿಲ್ಲ.
undefined
ಕೈಗೆಟುಕುವ ಬೆಲೆಯಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್ SUV ಕಾರು ಬಿಡುಗಡೆ!
ಅಲ್ಟೋ ಕೆ10 ಕಾರಿನ 1.0 ಲೀಟರ್ ಎಂಜಿನ್ ಹೊಂದಿದೆ. ಡ್ಯುಯೆಲ್ ಜೆಟ್ ಡ್ಯುಯೆಲ್ ವಿವಿಟಿ ಪೆಟ್ರೋಲ್ ಎಂಜಿನ್ ಕಾರು 65.68 BHP ಪವರ್ ಹಾಗೂ 89 NM ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು ಸಿಎನ್‌ಜಿ ವೇರಿಯೆಂಟ್ ಕಾರು 55.82 BHP ಪವರ್ ಹಾಗೂ 82.1 NM ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯಹೊಂದಿದೆ. 3530 ಎಂಎಂ ಉದ್ದ, 1490ಎಂಎಂ ಅಗಲ, 1520 ಎಂಎಂ ಎತ್ತರ ಹೊಂದಿದೆ. ಕಾರಿನ ವ್ಹೀಲ್‌ಬೇಲ್ 2380 ಎಂಎಂ ಹೊಂದಿದೆ.
27 ಲೀಟರ್ ಪೆಟ್ರೋಲ್ ಹಾಗೂ 55 ಲೀಟರ್ ಸಿಎನ್‌ಜಿ ಇಂಧನ ಸಾಮರ್ಥ್ಯ ಹೊಂದಿದೆ. ಪೆಟ್ರೋಲ್ ಕಾರು ಒಂದು ಲೀಟರ್‌ಗೆ ಬರೋಬ್ಬರಿ 24.60 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಸಿಎನ್‌ಜಿ ವೇರಿಯೆಂಟ್ ಕಾರು 34.46 ಕಿಲೋಮೀಟರ್ ಮೈಲೇಜ್ ನೀಡಲಿದೆ. ಸೇಫ್ಟಿಫೀಚರ್ಸ್ ಕೂಡ ಈಕಾರಿನಲ್ಲಿದೆ. ಡ್ಯುಯೆಲ್ ಏರ್‌ಬ್ಯಾಗ್, ಎಬಿಎಸ್ ಬ್ರೇಕ್, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಶನ್ ಸೇರಿದಂತರ ಕಡ್ಡಾಯ ಸುರಕ್ಷತಾ ಫೀಚರ್ಸ್ ಹೊಂದಿದೆ.
ಕೈಗೆಟುಕುವ ಬೆಲೆಯ ಹೊಚ್ಚ ಹೊಸ ಮಾರುತಿ ಬ್ರೆಜ್ಜಾ CNG ಕಾರು ಬಿಡುಗಡೆ, 26 ಕಿ.ಮೀ ಮೈಲೇಜ್!
ಪೆಟ್ರೋಲ್ ವೇರಿಯೆಂಟ್ ಕಾರಿನ ಬೆಲೆ 4,80,500 ರೂಪಾಯಿ(ಎಕ್ಸ್ ಶೋ ರೂಂ)
ಸಿಎನ್‌ಜಿ ವೇರಿಯೆಂಟ್ ಕಾರಿನ ಬೆಲೆ 5,70,500 ರೂಪಾಯಿ(ಎಕ್ಸ್ ಶೋ ರೂಂ)
ಮೇ ತಿಂಗಳಲ್ಲಿ ಮಾರುತಿ ಸುಜುಕಿ ಮಾರಾಟದಲ್ಲೂ ಗಣನೀಯ ಏರಿಕೆ ಕಂಡಿದೆ. ಜೊತೆಗೆ ಹೊಸ ಹೊಸ ಕಾರುಗಳನ್ನು ಬಿಡುಗಡೆ ಮಾಡಿದೆ. ಮಾರುತಿ ಸುಜುಕಿ ಫ್ರಾಂಕ್ಸ್, ಮಾರುತಿ ಸುಜುಕಿ ಜಿಮ್ಮಿ ಸೇರಿದಂತೆ ಪ್ರತಿಷ್ಠಿತ ಕಾರುಗಳು ಮಾರುಕಟ್ಟೆ ಪ್ರವೇಶಿಸಿದೆ. ಕಳೆದ ಮೇ ತಿಂಗಳಲ್ಲಿ ದೇಶದ ಬಹುತೇಕ ವಾಹನ ಮಾರಾಟ ಕಂಪನಿಗಳು ಉತ್ತಮ ಪ್ರಗತಿ ದಾಖಲಿಸಿವೆ. ಈ ಮೂಲಕ ಆರ್ಥಿಕತೆ ಚೇತರಿಕೆ ಹಾದಿಯಲ್ಲೇ ಮುಂದುವರೆದಿರುವ ಮತ್ತಷ್ಟುಲಕ್ಷಣಗಳು ಗೋಚರವಾಗಿದೆ.
ಮಾರುತಿ, ಹುಂಡೈ, ಮಹೀಂದ್ರಾ, ಟೊಯೋಟಾ, ಟಾಟಾ ಮೋಟಾರ್ಸ್, ಕಿಯಾ, ಎಂಜಿ ಮೋಟಾರ್ ಮೊದಲಾದವುಗಳು ಮಾರಾಟದಲ್ಲಿ ಉತ್ತಮ ಪ್ರಗತಿ ದಾಖಲಿಸಿವೆ. ಅದರಲ್ಲೂ ವಿಶೇಷವಾಗಿ ಎಸ್‌ಯುವಿಗಳಿಗೆ ಉತ್ತಮ ಬೇಡಿಕೆ ವ್ಯಕ್ತವಾಗಿದೆ. ಮಾರುತಿ ಸುಜುಕಿ 1.43 ಲಕ್ಷ ವಾಹನ ಮಾರಾಟ ಮಾಡುವ ಮೂಲಕ ಶೇ.15ರಷ್ಟುಪ್ರಗತಿ ದಾಖಲಿಸಿದೆ. ಹ್ಯುಂಡೈ 48601 (ಶೇ.15), ಟಾಟಾ ಮೋಟಾರ್ಸ್ 45878 (ಶೇ.6), ಮಹೀಂದ್ರಾ 26904 (ಶೇ.23), ಕಿಯಾ 24770 (ಶೇ.3), ಟೋಯೋಟಾ ಕಿರ್ಲೋಸ್ಕರ್ 20410, ಎಂಜಿ ಮೋಟಾರ್ 5006 (ಶೇ.25) ವಾಹನಗಳನ್ನು ಮಾರಾಟ ಮಾಡಿವೆ.