ಮಾರುತಿ ಸಿಎನ್‌ಜಿ ಕಾರುಗಳಿಗೆ ಭಾರಿ ಬೇಡಿಕೆ: ವಿತರಣೆಗೆ ಕಾಯುತ್ತಿದ್ದಾರೆ 1.29 ಲಕ್ಷ ಗ್ರಾಹಕರು

By Suvarna News  |  First Published May 7, 2022, 3:31 PM IST

2022 ಏಪ್ರಿಲ್ ಅಂತ್ಯದ ವೇಳೆಗೆ ದೇಶಾದ್ಯಂತ  ಒಟ್ಟು 1.29 ಲಕ್ಷ ಸಿಎನ್ಜಿ ಕಾರ್ ಆರ್ಡರ್ಗಳು ಬಾಕಿ ಉಳಿದಿವೆ.


ಇಂಧನ ಬೆಲೆಗಳ ಹೆಚ್ಚಳ ಮತ್ತು ಸಿಎನ್ಜಿ ಇಂಧನ ಕೇಂದ್ರಗಳ ಸುಲಭ ಲಭ್ಯತೆಯಿಂದಾಗಿ ದೇಶದಲ್ಲಿ ಸಿಎನ್ಜಿ ಕಾರುಗಳಿಗೆ ಬೇಡಿಕೆ ಹೆಚ್ಚಿದೆ.2022ರ ಏಪ್ರಿಲ್ ಅಂತ್ಯದ ವೇಳೆಗೆ ದೇಶಾದ್ಯಂತ  ಒಟ್ಟು 1.29 ಲಕ್ಷ ಸಿಎನ್ಜಿ ಕಾರ್ ಆರ್ಡರ್ಗಳು ಬಾಕಿ ಉಳಿದಿವೆ. ಮಾರುತಿ ಸುಜುಕಿ ಒಟ್ಟು 3.25 ಲಕ್ಷ ಕಾರು ಖರೀದಿದಾರರು ವಿತರಣೆಗಾಗಿ ಕಾಯುತ್ತಿದ್ದಾರೆ. ಈ ಪೈಕಿ ಸಿಎನ್ಜಿ 1,29,000 ಕಾರಿನ ಆರ್ಡರ್ಗಳಾಗಿವೆ. ಇದು ಕಂಪನಿಯಲ್ಲಿ ಬಾಕಿ ಉಳಿದಿರುವ ಒಟ್ಟು ಆರ್ಡರ್ಗಳ ಶೇ.40ಕ್ಕಿಂತ ಹೆಚ್ಚಾಗಿದೆ.

ಮಾರುತಿ ಸುಜುಕಿ 2010ರಲ್ಲಿ ಸಿಎನ್ಜಿ (CNG) ಕಾರುಗಳನ್ನು ಬಿಡುಗಡೆಗೊಳಿಸಿತ್ತು. ವ್ಯಾಗನ್ ಆರ್ (WagonR )ಇದರ ಮೊದಲ ಸಿಎನ್ಜಿ ಕಾರಾಗಿದೆ. ನಂತರದ ವರ್ಷಗಳಲ್ಲಿ, ಹಲವಾರು ಮಾರುತಿ ಕಾರುಗಳು ಸಿಎನ್ಜಿ ಆಯ್ಕೆಯನ್ನು ಪಡೆದುಕೊಂಡಿವೆ. ಸದ್ಯ 15 ಮಾರುತಿ ಕಾರುಗಳಲ್ಲಿ ಒಂಬತ್ತು ಸಿಎನ್ಜಿ ಆಯ್ಕೆಯನ್ನು ನೀಡುತ್ತವೆ. 

Tap to resize

Latest Videos

ಇದನ್ನೂ ಓದಿ: ಭಾರತದಲ್ಲಿ ಮಾರಾಟವಾಗುವ ಅಗ್ರ 3 ಕಾರುಗಳಲ್ಲಿ ಟಾಟಾ ನೆಕ್ಸಾನ್

ಸಿಎನ್ಜಿ ವಿಭಾಗದಲ್ಲಿ ಮಾರುತಿ ಶೇ.85ಕ್ಕಿಂತ ಹೆಚ್ಚಿನ ಮಾರುಕಟ್ಟೆ ಪಾಲನ್ನು ಹೊಂದಿದೆ. ಸಿಎನ್ಜಿ ಕಾರುಗಳ ಯಶಸ್ಸಿನ ಬೆನ್ನಲ್ಲೇ ಹುಂಡೈ ಮತ್ತು ಟಾಟಾ ಮೋಟಾರ್ಸ್ನಂತಹ ಇತರ ಕಾರು ತಯಾರಕರು ತಮ್ಮ ಸಿಎನ್ಜಿ ಪೋರ್ಟ್ಫೋಲಿಯೊವನ್ನು ವಿಸ್ತರಿಸಲು ಮುಂದಾಗಿವೆ.

ಈ ಅಂಕಿಅಂಶಗಳನ್ನು ವಿವರಿಸಿದ ಎಂಎಸ್ಐಎಲ್ (MSIL), ಮಾರ್ಕೆಟಿಂಗ್ ಮತ್ತು ಮಾರಾಟದ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ, ಶಶಾಂಕ್ ಶ್ರೀವಾಸ್ತವ,  ತಮ್ಮ ಒಟ್ಟು ಮಾರಾಟದಲ್ಲಿ ಶೇ. 17ರಷ್ಟು ಸಿಎನ್ಜಿ ಮಾದರಿಗಳಿವೆ. ಇವುಗಳು ಒಟ್ಟು ಮಾರಾಟಕ್ಕೆ ಶೇ.33ರಷ್ಟು ಕೊಡುಗೆ ನೀಡುತ್ತವೆ.2022ರಲ್ಲಿ, ಮಾರುತಿ CNG ಕಾರುಗಳು 2,64,000 ಮಾರಾಟವನ್ನು ದಾಖಲಿಸಿವೆ. 2021 ಕ್ಕೆ ಹೋಲಿಸಿದರೆ ಇದು ಸುಮಾರು ಶೇ.44ರಷ್ಟು ಬೆಳವಣಿಗೆಯಾಗಿದೆ ಎಂದರು. 

ಮಾರುತಿ ಸಿಎನ್ಜಿ ಮಾರಾಟದಲ್ಲಿ ಗಮನಾರ್ಹ ಬೇಡಿಕೆ ಹೊಂದಿರುವುದು ವ್ಯಾಗನ್ಆರ್ ಮತ್ತು ಎರ್ಟಿಗಾ. ಜೊತೆಗೆ, ಆಲ್ಟೊ, ಸೆಲೆರಿಯೊ, ಎಸ್-ಪ್ರೆಸ್ಸೊ, ಡಿಜೈರ್ ಮತ್ತು ಇಕೊ ಕಾರುಗಳು ಕೂಡ ಸಿಎನ್ಜಿಯಲ್ಲಿವೆ. ಫ್ಲೀಟ್ ಆಪರೇಟರ್ಗಳಿಗಾಗಿ, ಟೂರ್ M ಮತ್ತು ಟೂರ್ H3 ಇವೆ.

ಇದನ್ನೂ ಓದಿ: EV charging ಬೆಂಗಳೂರಲ್ಲಿ ಆರಂಭಗೊಳ್ಳುತ್ತಿದೆ 50 ಎಲೆಕ್ಟ್ರಿಕ್ ವಾಹನ ಚಾರ್ಚಿಂಗ್ ಪಾಯಿಂಟ್!

ಮಾರಾಟವನ್ನು ಮತ್ತಷ್ಟು ಹೆಚ್ಚಿಸಲು, ಮಾರುತಿ ತನ್ನ ಕೆಲವು ನೆಕ್ಸಾ ಕಾರುಗಳೊಂದಿಗೆ ಸಿಎನ್ಜಿ ಆಯ್ಕೆಯನ್ನು ಪರಿಚಯಿಸಲು ಯೋಜಿಸಿದೆ. ಇದು ಬಲೆನೊ ಮತ್ತು ಸಿಯಾಜ್ನಂತಹ ಕಾರುಗಳನ್ನು ಒಳಗೊಂಡಿದೆ. ಇಂಧನ ಬೆಲೆಗಳಲ್ಲಿ ಗಮನಾರ್ಹ ಏರಿಕೆ ಹಿನ್ನೆಲೆಯಲ್ಲಿ, ಪ್ರೀಮಿಯಂ ವಿಭಾಗದ ಗ್ರಾಹಕರು ಸಿಎನ್ಜಿ ಕಡೆ ನೋಡಲು ಆರಂಭಿಸಿದ್ದಾರೆ.

ಹಿಂದಿನ ಮಾರಾಟದ ಡೇಟಾವನ್ನು ನೋಡಿದರೆ, ಇತ್ತೀಚಿನ ವರ್ಷಗಳಲ್ಲಿ ಮಾರುತಿ ಸಿಎನ್ಜಿ ಮಾರಾಟವು ಸ್ಥಿರವಾಗಿ ಹೆಚ್ಚುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. 2018ರಲ್ಲಿ ಇದ್ದ 76,000 ವಾಹನಗಳು 2019ರಲ್ಲಿ 1,05,000 ವಾಹನಗಳಿಗೆ ಏರಿಕೆಯಾದವು. 2020ರಲ್ಲಿ ಸ್ವಲ್ಪ ನಿಧಾನ ಪ್ರಗತಿಯಲ್ಲಿ 1,06,000, 2021ರಲ್ಲಿ 1,16,000 ವಾಹನಗಳಿಗೆ ಏರಿಕೆಯಾಯಿತು. 

ರಷ್ಯಾ-ಉಕ್ರೇನ್ ಸಂಘರ್ಷದೊಂದಿಗೆ, ಸಿಎನ್ಜಿ ಸೇರಿದಂತೆ ಇಂಧನ ಬೆಲೆಗಳು ನಿರಂತರವಾಗಿ ಹೆಚ್ಚುತ್ತಿವೆ. ಕಳೆದ ವರ್ಷವಷ್ಟೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಿಎನ್ಜಿ ಬೆಲೆ ಕೆಜಿಗೆ 53 ರೂ.ಗಳಿಷ್ಟಿತ್ತು. ಇದು ಈಗ ಪ್ರತಿ ಕೆಜಿಗೆ 71 ರೂ.ಗೆ ಚಿಲ್ಲರೆಯಾಗಿ ಮಾರಾಟವಾಗುತ್ತಿದೆ, ಇದು ಸುಮಾರು ಶೇ.35ರಷ್ಟು ಹೆಚ್ಚಾಗಿದೆ. ಮುಂಬೈನಲ್ಲಿ, ಸಿಎನ್ಜಿ ಬೆಲೆ ಕೆಜಿಗೆ ಸುಮಾರು 76 ರೂ.ಗಳಷ್ಟಿದೆ. ಆದರೆ ಸಿಎನ್ಜಿ ಬೆಲೆ ಏರಿಕೆಯ ಹೊರತಾಗಿಯೂ, ಇದು ಪೆಟ್ರೋಲ್ ಮತ್ತು ಡೀಸೆಲ್ಗಿಂತ ಅಗ್ಗವಾಗಿದೆ. 

ಪ್ರಸ್ತುತ ದರದಲ್ಲಿ, ಸಿಎನ್ಜಿ ವಾಹನದ ನಿರ್ವಹಣಾ ವೆಚ್ಚವು ಪ್ರತಿ ಕಿ.ಮೀಗೆ ಸುಮಾರು 1.90 ರೂ.ಗೆ ಹೋಲಿಸಿದರೆ, ಇದೇ ಸಾಮರ್ಥ್ಯದ ಪೆಟ್ರೋಲ್,ಡೀಸೆಲ್ ವಾಹನದ ಚಾಲನೆಯ ವೆಚ್ಚವು ಪ್ರತಿ ಕಿ.ಮೀಗೆ ಸರಿಸುಮಾರು 5.20 ರೂ.ಗಳಷ್ಟಿದೆ. ಸಿಎ

click me!