New City e:HEV ಭಾರತದ ಮೊದಲ ಹೈಬ್ರಿಡ್ ಎಲೆಕ್ಟ್ರಿಕ್ ಹೋಂಡಾ ನ್ಯೂ ಸಿಟಿ e:HEV ಕಾರು ಬಿಡುಗಡೆ!

By Suvarna News  |  First Published May 4, 2022, 4:56 PM IST
  • 1 ಲೀಟರ್ ಪೆಟ್ರೋಲ್‌ಗೆ 26.5 ಕಿ.ಮೀ ಮೈಲೇಜ್
  • ಸೆಲ್ಫ್ ಚಾರ್ಜಿಂಗ್,  ಟೂ ಮೋಟಾರು ಎಲೆಕ್ಟ್ರಿಕ್ ಹೈಬ್ರಿಡ್ ಸಿಸ್ಟಮ್
  • ಇಂಟಲಿಜೆಂಟ್ ಸೇಫ್ಟಿ ಟೆಕ್ನಾಲಜಿ ಹೋಂಡಾ ಸೆನ್ಸಿಂಗ್
     

ನವದೆಹಲಿ(ಮೇ04): ಭಾರತದಲ್ಲಿ ಪ್ರೀಮಿಯಂ ಕಾರುಗಳ ಪ್ರಮುಖ ಉತ್ಪಾದಕ ಹೋಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ಹೊಚ್ಚ ಹೊಸ ನ್ಯೂ ಸಿಟಿ e:HEV  ಬಿಡುಗಡೆ ಮಾಡಿದೆ. 19,49,900 ರೂಪಾಯಿ ಬೆಲೆ ಹೊಂದಿರುವ, ನ್ಯೂ ಸಿಟಿ e:HEV ಬಲಿಷ್ಠ ಹೈಬ್ರಿಡ್ ಎಲೆಕ್ಟ್ರಿಕ್ ತಂತ್ರಜ್ಞಾನ ಹೊಂದಿರುವ  ಮೊದಲ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ನ್ಯೂ ಸಿಟಿ e:HEVಯಲ್ಲಿ ಹೋಂಡಾದ ವಿಶಿಷ್ಟ ಸೆಲ್ಫ್ ಚಾರ್ಜಿಂಗ್ ಮತ್ತು ಅತ್ಯಂತ ದಕ್ಷ ಟೂ ಮೋಟಾರು ಎಲೆಕ್ಟ್ರಿಕ್ ಹೈಬ್ರಿಡ್ ಸಿಸ್ಟಮ್ ಇದೆ. 

1.5 ಲೀಟರ್ ಅಟ್ಕಿನ್ಸನ್ ಸೈಕಲ್ ಡಿಒಎಚ್‍ಸಿ ಐ-ವಿಟಿಇಸಿ ಪೆಟ್ರೋಲ್ ಇಂಜಿನ್‍ಗೆ ಸಂಪರ್ಕ ಹೊಂದಿದೆ. ಇದು ವಿಶ್ವದ ಅತ್ಯುತ್ತಮ ಎಲೆಕ್ಟ್ರಿಕ್ ಹೈಬ್ರಿಡ್ ಪರ್ಫಾರ್ಮೆನ್ಸ್ ಅನ್ನು ಎಕ್ಸಿಲರೇಟಿಂಗ್ ಡ್ರೈವ್ ಜೊತೆಗೆ ನೀಡುತ್ತದೆ. ಅದ್ಭುತ ಇಂಧನ ದಕ್ಷತೆ 26.5 ಕಿ.ಮೀ/ಲೀ ಹಾಗೂ ಅತ್ಯಂತ ಕಡಿಮೆ ಎಮಿಷನ್ ಅನ್ನು ಇದು ಹೊಂದಿದೆ. ನ್ಯೂ ಸಿಟಿ ಇ:ಎಚ್‍ಇವಿ ಜೊತೆಗೆ ಭಾರತದಲ್ಲಿ ಮೊದಲ ಬಾರಿಗೆ ಸುಧಾರಿತ ಇಂಟಲಿಜೆಂಟ್ ಸೇಫ್ಟಿ ಟೆಕ್ನಾಲಜಿ ಹೋಂಡಾ ಸೆನ್ಸಿಂಗ್ ಅನ್ನು ಹೋಂಡಾ ಪರಿಚಯಿಸಿದೆ. ಕಾರ್ಬನ್ ನ್ಯೂಟ್ರಾಲಿಟಿ ಮತ್ತು ಶೂನ್ಯ ಡಿಕ್ಕಿ ಮಾರಣಾಂತಿಕತೆಗಳನ್ನು 2050 ಕ್ಕೆ ಸಾಧಿಸುವ ಜಾಗತಿಕ ದೃಷ್ಟಿಕೋನವನ್ನು ಕಂಪನಿ ಮರುದೃಢೀಕರಿಸಿದೆ.

Latest Videos

undefined

Electric Hybrid ಹೋಂಡಾ ಸಿಟಿ ಸುಪ್ರೀಂ ಎಲೆಕ್ಟ್ರಿಕ್ ಹೈಬ್ರಿಡ್ ಕಾರು ಉತ್ಪಾದನೆ ಆರಂಭ!

ಸುಧಾರಿತ ಇಂಟಲಿಜೆಂಟ್ ಸೇಫ್ಟಿ ಟೆಕ್ನಾಲಜಿ ಹೋಂಡಾ ಸೆನ್ಸಿಂಗ್, ಅಗಲ ಕೋನದ, ದೂರದವರೆಗೂ ಗುರುತಿಸುವ ಸಿಸ್ಟಮ್ ಸಹಿತ ಅಧಿಕ ಕಾರ್ಯಕ್ಷಮತೆಯ ಮುಂಬದಿ ಕ್ಯಾಮೆರಾವನ್ನು ಬಳಸಿ ಮುಂದಿನ ರಸ್ತೆಯನ್ನು ಸ್ಕ್ಯಾನ್ ಮಾಡುತ್ತದೆ ಮತ್ತು ಅಪಘಾತಗಳ ಅಪಾಯವನ್ನು ಕಡಿಮೆ ಮಾಡಲು ಚಾಲಕರಿಗೆ ಎಚ್ಚರಿಕೆ ನೀಡುತ್ತದೆ ಮತ್ತು ಕೆಲವು ಪ್ರಕರಣಗಳನ್ನು ಡಿಕ್ಕಿಯ ತೀವ್ರತೆಯನ್ನು ಕಡಿಮೆ ಮಾಡಲು ಅಥವಾ ದೂರವಿಡಲು ಮಧ್ಯಪ್ರವೇಶ ಮಾಡುತ್ತದೆ. ಕೊಲಿಶನ್ ಮಿಟಿಗೇಟಿಂಗ್ ಬ್ರೇಕಿಂಗ್ ಸಿಸ್ಟಮ್ (ಸಿಎಂಬಿಎಸ್), ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ರೋಡ್ ಡಿಪಾರ್ಚರ್ ಮಿಟಿಗೇಶನ್ (ಆರ್‍ಡಿಎಂ), ಲೇನ್ ಕೀಪಿಂಗ್ ಅಸಿಸ್ಟ್ ಸಿಸ್ಟಮ್ (ಎಲ್‍ಕೆಎಸ್) ಮತ್ತು ಆಟೋ ಹೈ ಬೀಮ್ ಇವು ಹೋಂಡಾ ಸೆನ್ಸಿಂಗ್‍ನ ಪ್ರಮುಖ ವೈಶಿಷ್ಟ್ಯಗಳಾಗಿವೆ.

ನ್ಯೂ ಸಿಟಿ ಇ:ಎಚ್‍ಇವಿಯಲ್ಲಿ 37 ಹೋಂಡಾ ಕನೆಕ್ಟ್ ವೈಶಿಷ್ಟ್ಯಗಳಿವೆ. ಕನೆಕ್ಟೆಡ್ ಕಾರ್ ಅನುಭವವನ್ನು ವರ್ಧಿಸುವ ನಿಟ್ಟಿನಲ್ಲಿ, ಹೋಂಡಾ ಕನೆಕ್ಟ್ ಈಗ ಸ್ಮಾರ್ಟ್ ವಾಚ್ ಸಾಧನಗಳಲ್ಲೂ ಕೆಲಸ ಮಾಡುತ್ತದೆ. ಈಗಾಗಲೇ ಇದು ಅಲೆಕ್ಸಾ ಮತ್ತು ಓಕೆ ಗೂಗಲ್ ಜೊತೆಗೆ ಕೆಲಸ ಮಾಡುತ್ತಿದೆ. 5ನೇ ತಲೆಮಾರಿನ ಹೋಂಡಾ ಸಿಟಿ ಪೆಟ್ರೋಲ್ ಮತ್ತು ಡೀಸೆಲ್ ಮಾಡೆಲ್‍ಗಳಲ್ಲೂ ಪ್ರಸ್ತುತ ಮತ್ತು ಹೊಸ ಗ್ರಾಹಕರಿಗೆ ಸ್ಮಾರ್ಟ್ ವಾಚ್ ಇಂಟಿಗ್ರೇಶನ್ ಲಭ್ಯವಿದೆ.

ಹೋಂಡಾ ಸಿಟಿ ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆ, ಭಾರತಕ್ಕೆ ಯಾವಾಗ ಪ್ರವೇಶ?

ಎಚ್‍ಸಿಐಎಲ್‍ನಲ್ಲಿ ಇನ್ನೊಂದು ಪ್ರಥಮವಾಗಿ, ಸುಧಾರಿತ ಹೈಬ್ರಿಡ್ ಎಲೆಕ್ಟ್ರಿಕ್ ವಾಹನ ನ್ಯೂ ಸಿಟಿ ಇ:ಎಚ್‍ಇವಿಯನ್ನು ಭಾರತದಲ್ಲೇ, ರಾಜಸ್ಥಾನದ ತಪುಕಾರಾದಲ್ಲಿರುವ ಅತ್ಯಾಧುನಿಕ ಉತ್ಪಾದನಾ ಘಟಕದಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಬಿಡುಗಡೆಯ ನಂತರ ತಕ್ಷಣವೇ ದೇಶಾದ್ಯಂತ ಡೀಲರ್ ನೆಟ್‍ವರ್ಕ್‍ನಿಂದ ಮಾಡೆಲ್‍ನ ಡೆಲಿವರಿಗಳನ್ನು ಕಂಪನಿ ಆರಂಭಿಸಲಿದೆ.
 
ನ್ಯೂ ಸಿಟಿ ಇ:ಎಚ್‍ಇವಿ 3 ವರ್ಷದ ಅನಿಯಮಿತ ಕಿಲೋಮೀಟರುಗಳ ವಾರಂಟಿಯನ್ನು ಗ್ರಾಹಕರ ಅನುಕೂಲಕ್ಕೆ ಪ್ರಮಾಣಿತ ಪ್ರಯೋಜನವಾಗಿ ಒದಗಿಸಲಿದೆ. ಕಾರು ಖರೀದಿಯಿಂದ 5 ವರ್ಷಗಳವರೆಗೆ ವಿಸ್ತರಿಸಿದ ವಾರಂಟಿ ಮತ್ತು 10 ವರ್ಷಗಳವರೆಗೆ ಯಾವುದೇ ಸಮಯದಲ್ಲಿ ವಾರಂಟಿಯನ್ನೂ ಗ್ರಾಹಕರು ಪಡೆಯಬಹುದು. ಲೀಥಿಯಂ ಅಯಾನ್ ಬ್ಯಾಟರಿಯ ಮೇಲೆ ಲಭ್ಯವಿರುವ ವಾರಂಟಿಯು ಕಾರು ಖರೀದಿ ದಿನಾಂಕದಿಂದ 8 ವರ್ಷ ಅಥವಾ 1,60,000 ಕಿ.ಮೀ (ಯಾವುದು ಮೊದಲೋ ಅದು) ಆಗಿರುತ್ತದೆ.

ಬೆಲೆ (ದೆಹಲಿ ಎಕ್ಸ್ ಶೋರೂಮ್):
ಮಾಡೆಲ್    ಗ್ರೇಡ್    ಬೆಲೆ
ಹೋಂಡಾ ಸಿಟಿ e:HEV    ZX:  19,49,900 ರೂಪಾಯಿ

ಬಾಹ್ಯ ವಿನ್ಯಾಸ:
ಸಿಟಿ ಇ:ಎಚ್‍ಇವಿ ಹೊರಭಾಗದಲ್ಲಿ ನ್ಯೂ ಹೋಂಡಾ ಸಾಲಿಡ್ ವಿಂಗ್ ಫೇಸ್, ವಿಶಿಷ್ಟ ನೀಲಿ ಎಚ್ ಮಾರ್ಕ್ ಲೋಗೋ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ, ಹೊಸ ಕ್ಲಾ ವಿಧದ ಫಾಗ್ ಲೈಟ್ ಗಾರ್ನಿಶ್ ಮತ್ತು ಇ:ಎಚ್‍ಇವಿ ಚಿಹ್ನೆ ಹಿಂಬದಿಯಲ್ಲಿದೆ, ಹೊಸ ಕಪ್ಪು ಬಣ್ಣದ ಡೈಮಂಡ್ ಕಟ್ ಅಲಾಯ್ ವೀಲ್‍ಗಳು, ಹೊಸ ಟ್ರಂಕ್ ಲಿಪ್ ಸ್ಪಾಯ್ಲರ್ ಮತ್ತು ಹೊಸ ಹಿಂಬದಿ ಬಂಪರ್ ಡಿಫ್ಯೂಸರ್, ಕಾರ್ಬನ್ ಫಿನಿಶ್ ಸಹಿತ ಇದೆ. ಸಿಟಿಯ ವಿಶಿಷ್ಟ ಫುಲ್ ಎಲ್‍ಇಡಿ ಹೆಡ್‍ಲ್ಯಾಂಪ್‍ಗಳು 9 ಅರೇ ಇನ್‍ಲೈನ್ ಶೆಲ್, ಇಂಟಿಗ್ರೇಟೆಡ್ ಎಲ್‍ಇಡಿ ಡಿಆರ್‍ಎಲ್, ಎಲ್ ಆಕಾರದ ಎಲ್‍ಇಡಿ ಟರ್ನ್ ಸಿಗ್ನಲ್ ಹಾಗೂ ಝೆಡ್ ಆಕಾರದ 3ಡಿ ವ್ರ್ಯಾಪ್ ಅನ್ನು ಎಲ್‍ಇಡಿ ಟೇಲ್ ಲ್ಯಾಂಪ್ ಜೊತೆಗೆ ಲಭ್ಯವಿದೆ. ಇದು ಸಿಟಿ ಇ:ಎಚ್‍ಇವಿ ಪ್ರೀಮಿಯಂ ಲುಕ್ ಅನ್ನು ಪೆÇ್ರೀತ್ಸಾಹಿಸುತ್ತದೆ.

ಬಾಹ್ಯ ವಿನ್ಯಾಸ:
ಕಾರಿನ ಒಳಭಾಗದಲ್ಲಿ ಐಶ್ವರ್ಯಯುತ, ಪ್ರೀಮಿಯಂ ಮತ್ತು ವಿಶಾಲವಾದ ಕ್ಯಾಬಿನ್ ಇದ್ದು, ಹೊಸ ಲಕ್ಷುರಿಯಸ್ ಟೂ ಟೋನ್ ಐವರಿ ಮತ್ತು ಬ್ಲ್ಯಾಕ್ ಇಂಟೀರಿಯರ್ ಕಲರ್ ಥೀಮ್ ಇರುತ್ತದೆ. ಸುಲಭವಾಗಿ ನಿರ್ವಹಿಸುವ ಎಲೆಕ್ಟ್ರಿಕ್ ಪಾಕಿರ್ಂಗ್ ಬ್ರೇಕ್ (ಇಪಿಬಿ) ಹಾಗೂ ಆಟೋ ಬ್ರೇಕ್ ಹೋಲ್ಡ್ ಇದ್ದು, ಒಂದೇ ಸ್ವಿಚ್‍ನಲ್ಲಿ ಪಾಕಿರ್ಂಗ್ ಬ್ರೇಕ್ ಅನ್ನು ಎಂಗೇಜ್ ಮಾಡುತ್ತದೆ. ಇದನ್ನು ಸಿಟಿ ಇ:ಎಚ್‍ಇವಿಯಲ್ಲಿ ಅಳವಡಿಸಲಾಗಿದ್ದು, ಬ್ರೇಕ್ ಲೀವರ್ ಬಳಕೆ ಮಾಡುವ ಅಗತ್ಯ ಇರುವುದಿಲ್ಲ ಮತ್ತು ಸಣ್ಣ ಐಟಂಗಳ ಪಾಕೆಟ್ ಟಿಶ್ಯೂ, ಸ್ಮಾರ್ಟ್‍ಫೆÇೀನ್ ಅಥವಾ ಸಣ್ಣ ಟ್ಯಾಬ್‍ಲೆಟ್ ಅನ್ನು ಯುಟಿಲಿಟಿ ಟ್ರೇಯಲ್ಲಿ ಇಡಲು ಸೆಂಟರ್ ಕನ್ಸೋಲ್ ಅನ್ನು ಹೆಚ್ಚು ದಕ್ಷವಾಗಿ ಬಳಸಿಕೊಳ್ಳಬಹುದಾಗಿದೆ. ಹೊಸ 17.7 ಸೆಂ.ಮೀ. ಅಧಿಕ ಡೆಫಿನಿಶನ್ ಫುಲ್ ಕಲರ್ ಟಿಎಫ್‍ಟಿ ಮೀಟರ್ ಮಲ್ಟಿ ಇನ್‍ಫಾರ್ಮೇಶನ್ ಅನ್ನು ಪ್ರದರ್ಶಿಸುತ್ತದೆ. ಅಲ್ಲದೆ, ಇ:ಎಚ್‍ಇವಿ ಪವರ್ ಫೆÇ್ಲೀ ಮೀಟರುಗಳು, ಹೋಂಡಾ ಸೆನ್ಸಿಂಗ್ ಸಪೆÇೀರ್ಟ್ ಮತ್ತು ವಿವಿಧ ಇತರ ಅಲರ್ಟ್‍ಗಳು ಮತ್ತು ಎಚ್ಚರಿಕೆಗಳನ್ನೂ ಇದು ಒಳಗೊಂಡಿದೆ. ಇಂಟೀರಿಯರ್‍ನಲ್ಲಿ ಸಾಂಪ್ರದಾಯಿಕ ಸೀಟ್‍ಗಳಿವೆ. ಇವು ಪ್ರೀಮಿಯಂ ಲೆದರ್ ಅಪ್‍ಹೋಲಸ್ಟರಿ ಹೊಂದಿದ್ದು, 20.3 ಸೆಂ.ಮೀ ಅಡ್ವಾನ್ಸ್‍ಡ್ ಟಚ್‍ಸ್ಕ್ರೀನ್ ಡಿಸ್‍ಪ್ಲೇ ಆಡಿಯೋ ಮತ್ತು ಆಪಲ್ ಕಾರ್‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಹೊಂದಿದೆ. ಅಲ್ಲದೆ, ಒನ್ ಟಚ್ ಎಲೆಕ್ಟ್ರಿಕ್ ಸನ್‍ರೂಫ್, ಎಲ್‍ಇಡಿ ಇಂಟೀರಿಯರ್ ರೂಮ್ ಲ್ಯಾಂಪ್‍ಗಳು ಮತ್ತು ಆಹ್ಲಾದಕರವಾದ ಏಂಬಿಯಂಟ್ ಲೈಟಿಂಗ್ ಕೂಡ ಇದೆ.

ಪವರ್‍ಟ್ರೇನ್:
ಟೂ ಮೋಟರ್ ಇ-ಸಿವಟಿ ಹೈಬ್ರಿಡ್ ಸಿಸ್ಟಮ್ ಅನ್ನು 1.5 ಲೀಟರ್ ಅಟ್ಕಿನ್ಸನ್ ಸೈಕಲ್ ಡಿಒಎಚ್‍ಸಿ ಐ-ವಿಟಿಇಸಿ ಪೆಟ್ರೋಲ್ ಇಂಜಿನ್, ಇಂಟಲಿಜೆಂಟ್ ಪವರ್ ಯುನಿಟ್ (ಐಪಿಯು) ಹಾಗೂ ಸುಧಾರಿತ ಲೀಥಿಯಮ್ ಅಯಾನ್ ಬ್ಯಾಟರಿಯನ್ನು ಇದು ಹೊಂದಿದೆ ಹಾಗೂ ನ್ಯೂ ಸಿಟಿ ಇ:ಎಚ್‍ಇವಿಯಲ್ಲಿ ಇಂಜಿನ್ ಲಿಂಕ್ಡ್ ಡೈರೆಕ್ಟ್ ಕಪ್ಲಿಂಗ್ ಕ್ಲಚ್ ಇದೆ. ಇ:ಎಚ್‍ಇವಿ ಸಿಸ್ಟಮ್ ಮೂರು ಡ್ರೈವಿಂಗ್ ಮೋಡ್‍ಗಳನ್ನು ಬಳಸುತ್ತದೆ. ಅವುಗಳೆಂದರೆ, ಇವಿ ಡ್ರೈವ್ ಮೋಡ್, ಹೈಬ್ರಿಡ್ ಡ್ರೈವ್ ಮೋಡ್ ಮತ್ತು ಇಂಜಿನ್ ಡ್ರೈವ್ ಮೋಡ್. ಇದರ ಜೊತೆಗೆ ಡಿಸಲರೇಟ್ ಮಾಡುವಾಗ ರೀಜನರೇಶನ್ ಮೋಡ್ ಕೂಡಾ ಇದೆ. ಅತ್ಯುತ್ತಮ ಪವರ್ ಕಂಟ್ರೋಲ್ ಯೂನಿಟ್‍ನಿಂದಾಗಿ ಎಲ್ಲ ಸಿಸ್ಟಮ್ ಕಾಂಪೆÇನೆಂಟ್‍ಗಳು ಒಟ್ಟಾಗಿ ಕೆಲಸ ಮಾಡುವುದನ್ನು ಖಚಿತಪಡಿಸುತ್ತವೆ. ಅಲ್ಲದೆ, ಡ್ರೈವಿಂಗ್ ಕಂಡೀಷನ್‍ಗಳನ್ನು ಆಧರಿಸಿ ಮೂರು ಮೋಡ್‍ಗಳಲ್ಲಿ ಬದಲಾವಣೆಯನ್ನು ಸ್ವಯಂಚಾಲಿತವಾಗಿ ಮತ್ತು ಸರಾಗವಾಗಿ ಮಾಡುವುದನ್ನು ಖಚಿತಪಡಿಸುತ್ತವೆ.

ಸಿಸ್ಟಮ್ ಸಂಯೋಜಿತ ಗರಿಷ್ಠ 126 ಪಿಎಸ್ ಪವರ್ ಹೊಂದಿದ್ದು, 26.5 ಕಿ.ಮೀ/ಲೀ. ಇಂಧನ ದಕ್ಷತೆಯನ್ನು ಹೊಂದಿದೆ ಮತ್ತು ಗರಿಷ್ಠ ಮೋಟಾರ್ ಟಾರ್ಕ್ 253 ಎನ್‍ಎಂ @ 0 - 3,000 ಆರ್‍ಪಿಎಂ ಹೊಂದಿದೆ. ನ್ಯೂ ಸಿಟಿ ಇ:ಎಚ್‍ಇವಿಯಲ್ಲಿ ಎಲ್ಲ ಫೆÇೀರ್ ವೀಲ್ ಡಿಸ್ಕ್ ಬ್ರೇಕ್‍ಗಳಲ್ಲೂ ಸುಧಾರಿತ ಎಲೆಕ್ಟ್ರಿಕ್ ಸರ್ವೋ ಬ್ರೇಕ್ ಸಿಸ್ಟಮ್ ಇದೆ. ಇದು ಇಂಧನ ದಕ್ಷತೆಗೆ ಕೊಡುಗೆ ನೀಡುತ್ತದೆ ಮತ್ತು ಸರಾಗ ಬ್ರೇಕ್ ಫೀಲ್ ನೀಡುತ್ತದೆ. ಎಲೆಕ್ಟ್ರಿಕ್ ಸರ್ವೋ ಬ್ರೇಕ್ ಮೂಲಕ, ನ್ಯೂ ಸಿಟಿ ಇ:ಎಚ್‍ಇವಿಯಲ್ಲಿ ಎಲೆಕ್ಟ್ರಿಕ್ ರಿಜಿನರೇಟಿವ್ ಬ್ರೇಕಿಂಗ್‍ನಿಂದಾಗಿ ವಾಹನ ತ್ವರಿತವಾಗಿ ನಿಲ್ಲುತ್ತದೆ ಮತ್ತು ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಸೆಲ್ಫ್ ಚಾರ್ಜ್ ಆಗುತ್ತದೆ.

ಸುರಕ್ಷತೆ ಸೌಲಭ್ಯಗಳು:
ಏಸ್ ಬಾಡಿ ಸ್ಟ್ರಕ್ಚರ್, ಅಲ್ಟ್ರಾ ಹೈ ಟೆನ್ಸಿಲ್ ಸ್ಟ್ರೆಂತ್ ಸ್ಟೀಲ್ ಫ್ರೇಮ್, ಸೂಪರ್ ಹೈ ಫಾರ್ಮಾಬಿಲಿಟಿ 980 ಎಂಪಿಎ ಗ್ರೇಡ್ ಸ್ಟೀಲ್, ಎವಿಎಎಸ್ (ಅಕೌಸ್ಟಿಕ್ ವೆಹಿಕಲ್ ಅಲಟಿರ್ಂಗ್ ಸಿಸ್ಟಮ್) ಅನ್ನು ಕಡಿಮೆ ಸ್ಪೀಡ್ ಇವಿ ಮೋಡ್, 6 ಏರ್‍ಬ್ಯಾಗ್‍ಗಳು, ಹೋಂಡಾ ಲೇನ್ ವಾಚ್, ಮಲ್ಟಿ ಆಂಗಲ್ ರಿಯರ್ ವ್ಯೂ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಡಿಫ್ಲೇಶನ್ ಎಚ್ಚರಿಕೆ ಸಹಿತ, ವಾಹನ ಸ್ಟೆಬಿಲಿಟಿ ಅಸಿಸ್ಟ್, ಅಜೈಲ್ ಹ್ಯಾಂಡ್ಲಿಂಗ್ ಅಸಿಸ್ಟ್ ಸಹಿತ, ಹಿಲ್ ಸ್ಟಾರ್ಟ್ ಅಸಿಸ್ಟ್, ಐಸೋಫಿಕ್ಸ್ ಕಂಪ್ಯಾಟಿಬಲ್ ರಿಯರ್ ಸೈಡ್ ಸೀಟ್‍ಗಳು, ಕೆಳ ಆಂಕರೇಜ್ ಮತ್ತು ಟಾಪ್ ಟೆದರ್ ಇತ್ಯಾದಿ ಸುಧಾರಿತ ಸುರಕ್ಷತೆ ಸೌಲಭ್ಯಗಳನ್ನು ಹೋಂಡಾ ಸಿಟಿ ಇ:ಎಚ್‍ಇವಿ ಹೊಂದಿದೆ.

ಕನೆಕ್ಟಿವಿಟಿ: 
ನ್ಯೂ ಸಿಟಿ ಇ:ಎಚ್‍ಇವಿಯಲ್ಲಿ 37 ಹೋಂಡಾ ಕನೆಕ್ಟ್ ವೈಶಿಷ್ಟ್ಯಗಳಿವೆ. ಕನೆಕ್ಟೆಡ್ ಕಾರ್ ಅನುಭವವನ್ನು ವರ್ಧಿಸುವ ನಿಟ್ಟಿನಲ್ಲಿ, ಹೋಂಡಾ ಕನೆಕ್ಟ್ ಈಗ ಸ್ಮಾರ್ಟ್ ವಾಚ್ ಸಾಧನಗಳಲ್ಲೂ ಕೆಲಸ ಮಾಡುತ್ತದೆ. ಈಗಾಗಲೇ ಇದು ಅಲೆಕ್ಸಾ ಮತ್ತು ಓಕೆ ಗೂಗಲ್ ಜೊತೆಗೆ ಕೆಲಸ ಮಾಡುತ್ತಿದೆ. ಸ್ಮಾರ್ಟ್‍ವಾಚ್ ಸಂಪರ್ಕದೊಂದಿಗೆ, ಕಾರ್ ಅನ್ನು ರಿಮೋಟ್‍ನಲ್ಲೇ ನಿಯಂತ್ರಿಸಬಹುದು ಮತ್ತು ಪ್ರಮುಖ ಸೂಚನೆಗಳೊಂದಿಗೆ ಬಳಕೆದಾರರು ಎಂದಿಗೂ ಅಪ್ ಟು ಡೇಟ್ ಆಗಿರಬಹುದು. ಈ ಇಂಟಿಗ್ರೇಶನ್ ಹೋಂಡಾ ಕನೆಕ್ಟ್ ಅನುಭವವನ್ನು ಮುಂದಿನ ಹಂತದ ಕನೆಕ್ಟೆಡ್ ಮೊಬಿಲಿಟಿಗೆ ಕೊಂಡೊಯ್ಯುತ್ತದೆ.

click me!