Upcoming Car 400 ಕಿ.ಮೀ ಮೈಲೇಜ್, 15 ಲಕ್ಷ ರೂ, ಮಹೀಂದ್ರ XUV300 ಎಲೆಕ್ಟ್ರಿಕ್ ಕಾರು ಬಿಡುಗಡೆ ದಿನಾಂಕ ಬಹಿರಂಗ!

By Suvarna News  |  First Published Feb 11, 2022, 9:12 PM IST
  • 2020ರ ಆಟೋ ಎಕ್ಸ್‌ಪೋದಲ್ಲಿ ಅನಾವರಣ ಮಾಡಿದ್ದ  XUV300 ಎಲೆಕ್ಟ್ರಿಕ್ ಕಾರು 
  • 350 ರಿಂದ 400 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ನೂತನ ಕಾರು
  • ಮಹೀಂದ್ರ XUV300 ಎಲೆಕ್ಟ್ರಿಕ್ ಕಾರಿನ ಅಂದಾಜು ಬೆಲೆ 15 ಲಕ್ಷ ರೂಪಾಯಿ 
     

ನವದೆಹಲಿ(ಫೆ.11): ಮಹೀಂದ್ರ ಈಗಾಗಲೇ ಮೂರು ಎಲೆಕ್ಟ್ರಿಕ್ SUV ಕಾರು ಅನಾವರಣ ಕುರಿತು ಟೀಸರ್ ಬಿಡುಗಡೆ ಮಾಡಿದೆ. ಇದರಲ್ಲಿನ ಮಹೀಂದ್ರ  XUV300 ಎಲೆಕ್ಟ್ರಿಕ್ ಕಾರು(Mahindra Electric Car) ಬಿಡುಗಡೆ ದಿನಾಂಕವನ್ನು ಮಹೀಂದ್ರ ಘೋಷಿಸಿದೆ. ಈ ಮೂಲಕ ಟಾಟಾ ನೆಕ್ಸಾನ್ ಇವಿ(Tata Nexon EV) ನೇರ ಪ್ರತಿಸ್ಪರ್ಧಿಯಾಗಿರುವ  XUV300 ಎಲೆಕ್ಟ್ರಿಕ್ ಕಾರು ಹೊಸ ಅಧ್ಯಾಯ ಬರೆಯಲು ಸಜ್ಜಾಗಿದೆ.

ಮಹೀಂದ್ರ XUV300 ಎಲೆಕ್ಟ್ರಿಕ್ ಕಾರಿನ ಬೆಲೆ:
ಮಹೀಂದ್ರ XUV300 ಎಲೆಕ್ಟ್ರಿಕ್ ಕಾರು ಈಗಾಗಲೇ ರೋಡ್ ಟೆಸ್ಟ್ ವೇಳೆ ಹಲವು ಬಾರಿ ಪ್ರತ್ಯಕ್ಷಗೊಂಡಿದೆ.  ನೆಕ್ಸಾನ್ ಪ್ರತಿಸ್ಪರ್ಧಿಯಾಗಿರುವ ಮಹೀಂದ್ರ XUV300 ಎಲೆಕ್ಟ್ರಿಕ್ ಕಾರು ಹಲವು ವಿಶೇಷತೆ ಹೊಂದಿದೆ. ನೂತನ ಎಲೆಕ್ಟ್ರಿಕ್ ಕಾರಿನ ಬೆಲೆ 15 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. ಪರ್ಫಾಮೆನ್ಸ್ ಹಾಗೂ ಮೈಲೇಜ್ ರೇಂಜ್‌(Mileage Range) ಹೋಲಿಸಿದರೆ ಎಂಜಿ ಮೋಟಾರ್ಸ್ ZSಗೂ ಹೊಡೆತ ನೀಡಲಿದೆ.  ನೆಕ್ಸಾನ್ ಇವಿ ಬೆಲೆ 15 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದ್ದರೆ, ಎಂಜಿ  ZS ಕಾರಿನ ಬೆಲೆ 21 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ.

Tap to resize

Latest Videos

Upcoming Car ಜುಲೈನಲ್ಲಿ 3 ಮಹೀಂದ್ರ ಎಲೆಕ್ಟ್ರಿಕ್ SUV ಕಾರು ಬಿಡುಗಡೆ, ಭಾರಿ ಮೆಚ್ಚುಗೆಗಳಿಸಿದ ಟೀಸರ್!

ಮೈಲೇಜ್ ರೇಂಜ್:
ಮಹೀಂದ್ರ XUV300 ಎಲೆಕ್ಟ್ರಿಕ್ ಕಾರು 350 ರಿಂದ 400 ಕಿ.ಮೀ ಮೈಲೇಜ್ ರೇಂಜ್ ಎಂದು ಹೇಳಲಾಗುತ್ತಿದೆ. ಪ್ರತಿಸ್ಪರ್ಧಿಯಾಗಿರುವ ನೆಕ್ಸಾನ್ ಇವಿ 312 ಕಿ.ಮೀ ಮೈಲೇಜ್ ರೇಂಜ್ ಹೊಂದಿದೆ. ಆದರೆ ನೆಕ್ಸಾನ್ ಇವಿ 400 ಪ್ಲಸ್ ಮೈಲೇಜ್ ರೇಂಜ್‌ಗೆ ಅಪ್‌ಗ್ರೇಡ್ ಮಾಡಲಾಗುತ್ತಿದೆ. ಇಷ್ಟೇ ಅಲ್ಲ ಮಹೀಂದ್ರ ಮಹೀಂದ್ರ ZS ಎಲೆಕ್ಟ್ರಿಕ್ ಕಾರಿಗೂ ಪೈಪೋಟಿ ನೀಡಲಿದೆ. 

7 ಇಂಚಿನ ಟಚ್‌ಸ್ಕ್ರೀನ್, ರೈನ್ ಸೆನ್ಸಿಂಗ್ ವೈಪರ್ಸ್, ಕನೆಕ್ಟೆಡ್ ಕಾರ್ ಟೆಕ್, ಸನ್‌ರೂಫ್, ಕ್ಲೈಮೇಟ್ ಕಂಟ್ರೋಲ್ ಸೇರಿದಂತೆ ಹಲವು ಅತ್ಯಾಧುನಿಕ ಫೀಚರ್ಸ್ ಹೊಂದಿದೆ. ಇನ್ನು ಸುರಕ್ಷತೆಯಲ್ಲೂ ಮಹೀಂದ್ರ ಹೆಚ್ಚು ಮುತುವರ್ಜಿವಹಿಸಿದೆ. 6 ಏರ್‌ಬ್ಯಾಗ್ಸ್, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್, ABS ಹಾಗೂ EBD ಸೇರಿದಂತೆ ಹಲವು ಸೇಫ್ಟಿ ಫೀಚರ್ಸ್ ಈ ಕಾರಿನಲ್ಲಿದೆ.

Tata Nano Electric ಎಲೆಕ್ಟ್ರಾ EV ಅಭಿವೃದ್ಧಿಪಡಿಸಿದ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು ಪಡೆದ ರತನ್ ಟಾಟಾ!

ನೂತನ ಮಹೀಂದ್ರ XUV300 ಎಲೆಕ್ಟ್ರಿಕ್ ಕಾರು 2023ರಲ್ಲಿ ಬಿಡುಗಡೆಯಾಗಲಿದೆ  ಎಂದು ಕಂಪನಿ ಖಚಿತಪಡಿಸಿದೆ. ಈಗಾಗಲೇ ಆಟೋ, ಕಾರ್ಗೋ ಆಟೋ ಸೇರಿದಂತ ಹಲವು ಎಲೆಕ್ಟ್ರಿಕ್ ವಾಹನ ಬಿಡುಗಡೆ ಮಾಡಿ ಯಶಸ್ಸು ಸಾಧಿಸಿರುವ ಮಹೀಂದ್ರ ಇದೀಗ ಎಲೆಕ್ಟ್ರಿಕ್ ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಪ್ಲಾನ್ ರೆಡಿ ಮಾಡಿದೆ. ಇದು ಟಾಟಾ ಮೋಟಾರ್ಸ್ ಸೇರಿದಂತೆ ಎಂಜಿ ಮೋಟಾರ್ಸ್, ಹ್ಯುಂಡೈಗೆ ತೀವ್ರ ಪ್ರತಿಸ್ಪರ್ಧೆ ನೀಡಲಿದೆ.

ಮಹೀಂದ್ರ XUV300 ಕಾರಿನ ಜೊತೆಗೆ XUV500 ಹಾಗೂ XUV700 ಎಲೆಕ್ಟ್ರಿಕ್ ಕಾರು ಅನಾವರಣ ದಿನಾಂಕ ಬಹಿರಂಗ ಪಡಿಸಿದೆ. ಜುಲೈ 2022ರಲ್ಲಿ ಮಹೀಂದ್ರ ಮೂರು ಎಲೆಕ್ಟ್ರಿಕ್ ಕಾರು ಅನಾವರಣ ಮಾಡುವುದಾಗಿ ಘೋಷಿಸಿದೆ. 

Upcoming Car ಪಂಚ್ ಕಾರನ್ನು ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಗೆ ಟಾಟಾ ತಯಾರಿ, ಕಡಿಮೆ ಬೆಲೆಗೆ EV ಕನಸು ನನಸು!

ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರು:
ಟಾಟಾ ಮೋಟಾರ್ಸ್ ಈಗಾಗಲೇ ಭಾರತದಲ್ಲಿ ಟಾಟಾ ನೆಕ್ಸಾನ್ ಇವಿ ಹಾಗೂ ಟಿಗೋರ್ ಇವಿ ಕಾರು ಬಿಡುಗಡೆ ಮಾಡಿ ಭಾರಿ ಯಶಸ್ಸು ಸಾಧಿಸಿದೆ. ಈ ವರ್ಷ ಟಾಟಾ ಮೋಟಾರ್ಸ್ ಅಲ್ಟ್ರೋಜ್ ಎಲೆಕ್ಟ್ರಿಕ್(Tata Altroz) ಕಾರುನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಟಾಟಾ ಸಿಯೆರಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ. ಇನ್ನು ಟಾಟಾ ಪಂಚ್ ಕಾರನ್ನು ಎಲೆಕ್ಟ್ರಿಕ್ ಕಾರಾಗಿ ಪರಿವರ್ತಿಸಿ ಬಿಡುಗಡೆ ಮಾಡಲು ಟಾಟಾ ಮೋಟಾರ್ಸ್ ಮುಂದಾಗಿದೆ. ಈ ಮೂಲಕ ಟಾಟಾ ಸಂಪೂರ್ಣವಾಗಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಮುಂದಾಗಿದೆ. 

click me!