Upcoming Car ಜುಲೈನಲ್ಲಿ 3 ಮಹೀಂದ್ರ ಎಲೆಕ್ಟ್ರಿಕ್ SUV ಕಾರು ಬಿಡುಗಡೆ, ಭಾರಿ ಮೆಚ್ಚುಗೆಗಳಿಸಿದ ಟೀಸರ್!

By Suvarna News  |  First Published Feb 11, 2022, 6:50 PM IST
  • ಭಾರತದ ಎಲೆಕ್ಟ್ರಿಕ್ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ಮಹೀಂದ್ರ
  • ಜುಲೈ ತಿಂಗಳಲ್ಲಿ ಮೂರು ಎಲೆಕ್ಟ್ರಿಕ್ SUV ಕಾರು ಬಿಡುಗಡೆ
  • ಟಾಟಾ, ಎಂಜಿ, ಹ್ಯುಂಡೈ ಸೇರಿದಂತೆ ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿ

ನವದೆಹಲಿ(ಫೆ.11):  ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ(Electric Car) ಬೇಡಿಕೆ ಹೆಚ್ಚಾಗಿದೆ. ಆದರೆ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್(Tata Motors Electric) ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಿ ಯಶಸ್ಸು ಸಾಧಿಸಿದೆ. ಇದೀಗ ಟಾಟಾ, ಎಂಜಿ ಮೋಟಾರ್ಸ್ ಸೇರಿದಂತೆ ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿ ನೀಡಲು ಮಹೀಂದ್ರ(Mahindra) ಸಜ್ಜಾಗಿದೆ. ಹೊಚ್ಚ ಹೊಸ ಮೂರು ಎಲೆಕ್ಟ್ರಿಕ್ ಕಾರುಗಳನ್ನು ಮಹೀಂದ್ರ ಬಿಡುಗಡೆ ಮಾಡುತ್ತಿದೆ.

ನೂತನ ಎಲೆಕ್ಟ್ರಿಕ್ ಕಾರುಗಳ ಕುರಿತು ಮಹೀಂದ್ರ ಟೀಸರ್ ಬಿಡುಗಡೆ ಮಾಡಿದೆ.  ಕಾರಿನ ಡಿಸೈನ್ ಲಂಡನ್‌ನಲ್ಲಿರುವ ಮಹೀಂದ್ರ ಅಡ್ವಾನ್ಸ್ ಡಿಸೈನ್ ಸ್ಟುಡಿಯೋ ಸೆಂಟರ್‌ನಲ್ಲಿ ಮಾಡಲಾಗಿದೆ. ಹೀಗಾಗಿ ವಿಶ್ವದ ಅತ್ಯುತ್ತಮ ವಿನ್ಯಾಸದ ಎಲೆಕ್ಟ್ರಿಕ್ ಕಾರಾಗಲಿದೆ ಅನ್ನೋದು ಆಟೋ ಪಂಡಿತರ ಮಾತಾಗಿದೆ. ಟೀಸರ್‌ನಲ್ಲಿ ಮಹೀಂದ್ರ ಮೂರು SUV ಎಲೆಕ್ಟ್ರಿಕ್ ಕಾರುಗಳನ್ನು(Mahindra SUV Electric Car) ಟೀಸ್ ಮಾಡಿದೆ. 

Latest Videos

undefined

ಟೀಸರ್‌ನಲ್ಲಿ ಎಲೆಕ್ಟ್ರಿಕ್ ಕಾರಿನ DRLs ಹಾಗೂ ಹಿಂಭಾಗ ಟೈಲ್‌ಲೈಟ್ಸ್ ಡಿಸೈನ್ ತೋರಿಸಲಾಗಿದೆ. ಜುಲೈ ತಿಂಗಳಲ್ಲಿ ಮಹೀಂದ್ರ ಮೂರು ಎಲೆಕ್ಟ್ರಿಕ್ ಕಾರನ್ನು ಅನಾವರಣ ಮಾಡುವುದಾಗಿ ಘೋಷಿಸಿದೆ. ಇನ್ನು 2022ರ ಅಂತ್ಯದಲ್ಲಿ ನೂತನ ಕಾರುಗಳು ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ.

Upcoming Car ಪಂಚ್ ಕಾರನ್ನು ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಗೆ ಟಾಟಾ ತಯಾರಿ, ಕಡಿಮೆ ಬೆಲೆಗೆ EV ಕನಸು ನನಸು!

ಮೂರು ಎಲೆಕ್ಟ್ರಿಕ್ ಕಾರುಗಳ ವಿವರ:
ಮಹೀಂದ್ರ XUV400, ಮಹೀಂದ್ರ XUV700 ಹಾಗೂ ಮಹೀಂದ್ರ XUV500 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಮಹೀಂದ್ರ ಈಗಾಗಲೇ XUV300 ಎಲೆಕ್ಟ್ರಿಕ್ ಕಾರನ್ನು ಅನಾವರಣ ಮಾಡಿತ್ತು. ಬಳಿಕ ಹಲವು ಕಾರಣಗಳಿಂದ ಕಾರು ಬಿಡುಗಡೆ ಸಾಧ್ಯವಾಗಲೇ ಇಲ್ಲ. ಆದರೆ ಇದೇ ಕಾರನ್ನು ಹೊಸ ವಿನ್ಯಾಸದಲ್ಲಿ ಇದೀಗ XUV400 ಎಲೆಕ್ಟ್ರಿಕ್ ಕಾರಾಗಿ ಬಿಡುಗಡೆ ಮಾಡಲಾಗುತ್ತಿದೆ.

ನೂತನ ಎಲೆಕ್ಟ್ರಿಕ್ ಕಾರಿನ ಬಲೆ:
ಮಹೀಂದ್ರ ಬಿಡುಗಡೆ ಮಾಡಲಿರುವ ನೂತನ ಕಾರುಗಳ ಬೆಲೆ 15 ಲಕ್ಷ ರೂಪಾಯಿಯಿಂದ ಆರಂಭಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಮಹೀಂದ್ರ XUV700 ಎಲೆಕ್ಟ್ರಿಕ್ ಕಾರಿನ ಬಲೆ 40 ಲಕ್ಷ ರೂಪಾಯಿ ಆಸುಪಾಸುನಲ್ಲಿರಲಿದೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ಕೈಗೆಟುವ ದರದಲ್ಲಿ ಮಹೀಂದ್ರ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.

Tata Nano Electric ಎಲೆಕ್ಟ್ರಾ EV ಅಭಿವೃದ್ಧಿಪಡಿಸಿದ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು ಪಡೆದ ರತನ್ ಟಾಟಾ!

ಈಗಾಗಲೇ ಮಹೀಂದ್ರ XUV300 ಎಲೆಕ್ಟ್ರಿಕ್ ಕಾರು ರೋಡ್ ಟೆಸ್ಟ್ ವೇಳೆ ಕಾಣಿಸಿಕೊಂಡಿದೆ. ಇದೇ ಕಾರು  XUV400 ಎಲೆಕ್ಟ್ರಿಕ್ ಕಾರಾಗಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದು ನೇರವಾಗಿ ಟಾಟಾ ಮೋಟಾರ್ಸ್ ನೆಕ್ಸಾನ್ ಇವಿಗೆ ಪ್ರತಿಸ್ಪರ್ಧಿಯಾಗಿದೆ. ಸದ್ಯ ನೆಕ್ಸಾನ್ ಇವಿ ಪ್ರತಿ ತಿಂಗಳು 1,500 ರಿಂದ 2,000 ಕಾರುಗಳು ಮಾರಾಟವಾಗುತ್ತಿದೆ. ಮಹೀಂದ್ರ ಎಲೆಕ್ಟ್ರಿಕ್ ಕಾರುಗಳು ಹಲವು ಪ್ರತಿಸ್ಪರ್ಧಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ರೋಡ್ ಟೆಸ್ಟ್ ವೇಳೆ ಕಾಣಿಸಿಕೊಂಡಿರುವ  XUV300(ಮಹೀಂದ್ರ  XUV400) ಎಲೆಕ್ಟ್ರಿಕ್ ಕಾರಿನಲ್ಲಿ 40kWh ಬ್ಯಾಟರಿ ಬಳಸುವ ಸಾಧ್ಯತೆ ಇದೆ. ಇದರಿಂದ 130 Bhp ಪವರ್ ಸಿಗಲಿದೆ. ಇನ್ನು ಒಂದು ಬಾರಿ ಚಾರ್ಜ್ ಮಾಡಿದರೆ 370 ಕಿಲೋಮೀಟರ್ ಮೈಲೇಜ್ ನೀಡುವ ಸಾಧ್ಯತೆ ಇದೆ.

Electric Car ಟೆಸ್ಲಾಗೆ ಸೆಡ್ಡು, ಭಾರತದಲ್ಲಿ ಫಿಸ್ಕರ್ ಎಲೆಕ್ಟ್ರಿಕ್ ಕಾರು ಕಂಪನಿ ಘಟಕ ಆರಂಭಕ್ಕೆ ತಯಾರಿ, ನೇಮಕಾತಿ ಆರಂಭ!

ಎಲೆಕ್ಟ್ರಿಕ್ ಕಾರಿನಲ್ಲಿ ಟಾಟಾಗೆ ಮೊದಲ ಸ್ಥಾನ:
ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಪೈಕಿ ಟಾಟಾ ಮೋಟಾರ್ಸ್ ಮೊದಲ ಸ್ಥಾನದಲ್ಲಿದೆ. ಟಾಟಾ ನೆಕ್ಸಾನ್ ಇವಿ ಹಾಗೂ ಟಾಟಾ ಟಿಗೋರ್ ಇವಿ ಕಾರುಗಳನ್ನು ಬಿಡುಗಡೆ ಮಾಡಿ ಭಾರಿ ಯಶಸ್ಸು ಸಾಧಿಸಿದೆ. ನೆಕ್ಸಾನ್ ಇವಿ ಬೆಲೆ ಸರಿಸುಮಾರು 15 ಲಕ್ಷ ರೂಪಾಯಿಯಿಂದ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದ್ದರೆ, ಟಿಗೋರ್ ಇವಿ ಕಾರಿನ ಬೆಲೆ ಸರಿಸುಮಾರು 12 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಇಷ್ಟೇ ಅಲ್ಲ ಇತ್ತೀಚೆಗೆ ಟಿಗೋರ್ ಇವಿ ಕಾರನ್ನು ಜಿಪ್‌ಟ್ರಾನ್ ಟೆಕ್ನಾಲಜಿಗೆ ಅಪ್‌ಗ್ರೇಡ್ ಮಾಡಲಾಗಿದೆ. ಇದರಿಂದ ಟಿಗೋರ್ ಇವಿ ಕಾರಿನ ಮೈಲೇಜ್ 300 ದಾಟಿದೆ.

ಇನ್ನು ನೆಕ್ಸಾನ್ ಇವಿ ಕಾರ 313 ಕಿ.ಮೀ ಮೈಲೇಜ್ ನೀಡುತ್ತಿದೆ. ಶೀಘ್ರದಲ್ಲೇ ಟಾಟಾ ನೆಕ್ಸಾನ್ 400 ಪ್ಲಸ್ ಮೈಲೇಜ್ ಸಾಮರ್ಥ್ಯದ ಕಾರು ಬಿಡುಗಡೆಯಾಗುತ್ತಿದೆ. ಇದರ ಜೊತೆಗೆ ಟಾಟಾ ಅಲ್ಟ್ರೋಜ್ ಕಾರನ್ನು ಎಲೆಕ್ಟ್ರಿಕ್ ಕಾರಾಗಿ ಬಿಡುಗಡೆ ಮಾಡುತ್ತಿದೆ. ಅಲ್ಟ್ರೋಜ್ 400 ಪ್ಲಸ್ ಮೈಲೇಜ್ ಹಾಗೂ 10 ರಿಂದ 11 ಲಕ್ಷ ರೂಪಾಯಿ ಆರಂಭಿಕ ಬೆಲೆಯಿಂದ ಆರಂಭಗೊಳ್ಳುವ ಸಾಧ್ಯತೆ ಇದೆ. ಇನ್ನು ಟಾಟಾ ಸಿಯೆರಾ ಎಲೆಕ್ಟ್ರಿಕ್ ಕಾರನ್ನು 2020ರ ಆಟೋ ಎಕ್ಸ್‌ಪೋದಲ್ಲಿ ಅನಾವರಣ ಮಾಡಲಾಗಿದೆ. ನೂತನ ಸಿಯಾರೆ ಕಾರು 2023ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

 

click me!