Upcoming Car ಗ್ರಾಹಕರಿಗೆ ಗುಡ್ ನ್ಯೂಸ್, 11 ಸಾವಿರಕ್ಕೆ ಬುಕ್ ಮಾಡಿ ಹೊಸ ಮಾರುತಿ ಬಲೆನೋ ಕಾರು!

By Suvarna News  |  First Published Feb 11, 2022, 6:05 PM IST
  • ಹೊಚ್ಚ ಹೊಸ ಮಾರುತಿ ಬಲೆನೋ ಕಾರು ಬಿಡುಗಡೆಗೆ ರೆಡಿ
  • ಬುಕಿಂಗ್ ಆರಂಭಿಸಿದ ಮಾರುತಿ ಸುಜುಕಿ, 11,000ಕ್ಕೆ ಕಾರು ಬುಕಿಂಗ್
  • 9 ಇಂಚಿನ HD ಸ್ಕ್ರೀನ್ ಸೇರಿದಂತೆ ಹಲವು ವಿಶೇಷತೆಗಳ ಕಾರು
     

ನವದೆಹಲಿ(ಫೆ.11):  ಹೊಚ್ಚ ಹೊಸ, ಹೆಚ್ಚುವರಿ ಫೀಚರ್ಸ್, ಹೊಸ ವಿನ್ಯಾಸ ಸೇರಿದಂತೆ ಹಲವು ಬದಲಾವಣೆಯೊಂದಿಗೆ ಮಾರುತಿ ಸುಜುಕಿ ಬಲೆನೋ(Maruti Suzuki Baleno) ಕಾರು ಬಿಡುಗಡೆಗೆ ರೆಡಿಯಾಗಿದೆ. ಇದೀಗ ಕಾರಿನ ಅಧಿಕೃತ ಬುಕಿಂಗ್(Bookings) ಆರಂಭಗೊಂಡಿದೆ. ಆನ್‌ಲೈನ್ ಅಥವಾ ಸಮೀಪದ ಡೀಲರ್‌ಬಳಿ ಮಾರುತಿ ಸುಜುಕಿ ಕಾರು ಬುಕ್ ಮಾಡಿಕೊಳ್ಳಬಹುದು. ಹೊಚ್ಚ ಹೊಸ ಕಾರನ್ನು 11,000 ರೂಪಾಯಿ ನೀಡಿ ಬುಕ್ ಮಾಡಿಕೊಳ್ಳಬಹುದು.

ಮಾರುತಿ ಸುಜಕಿ ಕಾರುಗಳ ಪೈಕಿ ಬಲೆನೋ ಅತ್ಯಂತ ಯಶಸ್ವಿ ಕಾರು. ಮಾರಾಟದಲ್ಲಿ(Car sales) ದಾಖಲೆ ಬರೆದಿರುವ ಪ್ರಿಮಿಯಮಂ ಹ್ಯಾಚ್‌ಬ್ಯಾಕ್ ಕಾರು. ಬಲೆನೋ ಬಿಡುಗಡೆಯಾದ ಬಳಿಕ ಕೆಲ ಸಣ್ಣ ಬದಲಾವಣೆಗಳು, ಹೆಚ್ಚುವರಿ ಫೀಚರ್ಸ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದ ಕಾರು ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ.  ನೂತನ ಬಲೆನೋ ಕಾರಿನ ಟೀಸರ್ ಈಗಾಗಲೇ ಭಾರಿ ಸದ್ದು ಮಾಡಿದೆ.

Tap to resize

Latest Videos

Upcoming car ಮಾರುತಿ ವ್ಯಾಗನರ್ ಫೇಸ್‌ಲಿಫ್ಟ್ ಕಾರು ಫೆಬ್ರವರಿಯಲ್ಲಿ ಬಿಡುಗಡೆ, ಬೆಲೆ 5.18 ಲಕ್ಷ ರೂ!

ನೂತನ ಬಲೆನೋ ಕಾರಿನ ಬೆಲೆ:
ಹೊಚ್ಚ ಹೊಸ ಮಾರುತಿ ಸುಜುಕಿ ಬಲೆನೋ ಕಾರಿನ ಬೆಲೆ(Baleno Car Price) ಬಹಿರಂಗವಾಗಿಲ್ಲ. ಆದರೆ ಸದ್ಯ ಮಾರುಕಟ್ಟೆಯಲ್ಲಿರುವ ಬಲೆನೋ ಕಾರಿನ ಬೆಲೆ 6.14 ಲಕ್ಷ ರೂಪಾಯಿಯಿಂದ(ಎಕ್ಸ್ ಶೋ ರೂಂ) 9.66 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).  ಹೊಸ ಬಲೆನೋ ಕಾರಿನ ಬೆಲೆ ಕೊಂಚ ಏರಿಕೆಯಾಗುವ ಸಾಧ್ಯತೆ ಇದೆ. 

ಮಾರುತಿ ಬಲೆನೋ ಮುಂಭಾಗ ಗ್ರಿಲ್, ವಿನ್ಯಾಸ, ಬಂಪರ್, ಟೈಲ್ ಲೈಟ್ಸ್ ಸೇರಿದಂತೆ ಹಲವು ಬದಲಾವಣೆಗಳನ್ನು ಹೊಸ ಕಾರಿನಲ್ಲಿ ಕಾಣಬಹುದು.  ಹಲವು ಫೀಚರ್ಸ್ ಸೇರ್ಪಡೆ, ಹೊಸತನದಿಂದ ಗ್ರಾಹಕರಿಗೆ ನೂತನ ಬಲೆನೋ ಅತ್ಯುತ್ತಮ ಡ್ರೈವಿಂಗ್ ಅನುಭವ ನೀಡಲಿದೆ ಎಂದು ಕಂಪನಿ ಭರವಸೆ ನೀಡಿದೆ. 

Upcoming Car ಮಾರುತಿ ಸುಜುಕಿ CNG ಕಾರು ಬಿಡುಗಡೆಗೂ ಮುನ್ನ ಬುಕಿಂಗ್ ಆರಂಭ!

ನೂತನ ಬಲೆನೋ ಕಾರಿನಲ್ಲಿ ಎದ್ದು ಕಾಣುವ ಮೊದಲ ಫೀಚರ್ಸ್ ಹೆಡ್ ಅಪ್ ಡಿಸ್‌ಪ್ಲೆ. ಇದರಿಂದ ಡ್ರೈವಿಂಗ್ ಮತ್ತಷ್ಟು ಸುಲಭ ಹಾಗೂ ಆರಾಮದಾಯಕವಾಗಲಿದೆ. ಹೆಡ್ಸ್ ಅಪ್ ಡಿಸ್‌ಪ್ಲೇನಿಂದ ಡ್ರೈವಿಂಗ್ ವೇಳೆ ರಸ್ತೆಯಿಂದ ಗಮನ ಬೇರೆಡೆಗೆ ಹರಿಸಬೇಕಾದ ಅಗತ್ಯವಿಲ್ಲ. ಈ ಟೆಕ್ನಾಲಜಿಯಿಂದ ಡಿಸ್‌ಪ್ಲೇ ನೋಡಲು ಗಮನವನ್ನು ರಸ್ತೆಯಿಂದ ಕಾರಿನ ಮಧ್ಯಭಾಗದಲ್ಲಿರುವ ಸಿಸ್ಟಮ್‌ನತ್ತ ಹೊರಳಿಸಬೇಕಾದ ಅಗತ್ಯವಿಲ್ಲ.

LED ಹೆಡ್‌ಲ್ಯಾಂಪ್ಸ್, ಟೈಲ್ ಲೈಟ್ಸ್, ಅಲೋಯ್ ವ್ಹೀಲ್, ದೊಡ್ಡ ಇನ್ಫೋಟೈನ್ಮೆಂಟ್ ಸಿಸ್ಟಮ್, ಕಾರಿನ ಇಂಟಿರಿಯರ್ ಡಿಸೈನ್, ಎಸಿ, ಸೀಟ್, ಸ್ಪೇಸ್ ಮ್ಯಾನೇಜ್ಮೆಂಟ್ ಸೇರಿದಂತೆ ಹಲವು ವಿಚಾರಗಳನ್ನು ಮತ್ತಷ್ಟು ಉತ್ತಮ ಪಡಿಸಲಾಗಿದೆ. ಇದರಿಂದ ಪ್ರಯಾಣಿಕರಿಗೂ ಅತ್ಯುತ್ತಮ ಪ್ರಯಾಣದ ಅನುಭವ ನೀಡಲಿದೆ ಎಂದು ಮಾರುತಿ ಸುಜುಕಿ ಹೇಳಿದೆ.

ಮಾರುತಿ ಬಲೆನೋ ಎಂಜಿನ್:
ಹೊಸ ಮಾರುತಿ ಬಲೆನೋ ಕಾರಿನ ಎಂಜಿನ್‌ನಲ್ಲಿ ಕೆಲ ಬದಲಾವಣೆಗಳಿದೆ. ಮಾರುತಿ ಈಗಾಗಲೇ ನೂತನ ಬಲೆನೋ ಕಾರು ಹೊಸ ವರ್ಷನ್ 1.2 ಲೀಟರ್ ಡ್ಯುಯೆಲ್ ಜೆಟ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ ಎಂದಿದೆ. ಪುಶ್ ಬಟನ್ ಸ್ಟಾರ್ಟ್, 90PS ಪವರ್ ಹೊಂದಿರುವ ಸಾಧ್ಯತೆ ಇದೆ. ಇನ್ನು 5 ಸ್ಪೀಡ್ ಮಾನ್ಯುಯೆಲ್ ಹಾಗೂ CVT ಟ್ರಾನ್ಸ್‌ಮಿಶನ್ ಆಯ್ಕೆ ಹೊಂದಿರುವ ಸಾಧ್ಯತೆ ಇದೆ.

ಶೀಘ್ರದಲ್ಲೇ ಮಾರುತಿ ಸುಜುಕಿ CNG ವೇರಿಯೆಂಟ್ ಬಲೆನೋ ಕಾರು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಮೂಲಕ ಸಿಎನ್‌ಜಿ ಕಾರಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯಲು ಮಾರುತಿ ಪ್ಲಾನ್ ಹಾಕಿಕೊಂಡಿದೆ. ಇತ್ತೀಚೆಗೆ ಟಾಟಾ ಮೋಟಾರ್ಸ್ ಟಾಟಾ ಟಿಯಾಗೋ  CNG ಹಾಗೂ ಟಿಗೋರ್  CNG ಕಾರುಗಳನ್ನು ಬಿಡುಗಡೆ ಮಾಡಿ ಮಾರುತಿಗೆ ಭಾರಿ ಪ್ರತಿಸ್ಪರ್ಧೆ ನೀಡುತ್ತಿದೆ. ಹೆಚ್ಚಾಗುತ್ತಿರುವ ಪೆಟ್ರೋಲ್ ಡೀಸೆಲ್ ದರದಿಂದ ಜನರು  CNG ಹಾಗೂ ಎಲೆಕ್ಟ್ರಿಕ್ ಕಾರುಗಳ ಮೊರ ಹೋಗುತ್ತಿದ್ದಾರೆ.

click me!