ಹೊಚ್ಚ ಹೊಸ ಸ್ಕಾರ್ಪಿಯೋ ಕ್ಲಾಸಿಕ್ ಬೆಲೆ ಘೋಷಿಸಿದ ಮಹೀಂದ್ರ, ಕಡಿಮೆ ಬೆಲೆಯಲ್ಲಿ ದೊಡ್ಡ SUV ಕಾರು!

By Suvarna News  |  First Published Aug 22, 2022, 3:24 PM IST

ಎಸ್‌ಯುವಿ ವಾಹನ ವರ್ಗದಲ್ಲಿ ದಂತಕಥೆಯಾಗಿರುವ ಸ್ಕಾರ್ಪಿಯೋ ಹೊಸ ಅವತಾರ ಸ್ಕಾರ್ಪಿಯೋ ಕ್ಲಾಸಿಕ್ SUVಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಇದೀಗ ಸ್ಕಾರ್ಪಿಯೋ ಕ್ಲಾಸಿಕ್ ಕಾರಿನ ಬೆಲೆ ಘೋಷಿಸಿದೆ. ಕೈಗೆಟುಕುವ ದರದಲ್ಲಿ ಲಭ್ಯವಿರುವ ಅತೀ ದೊಡ್ಡ SUV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
 


ಮುಂಬೈ(ಆ.22): ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ ತನ್ನ ಅಪ್ರತಿಮ ಬ್ರಾಂಡ್ ಎನಿಸಿದ ʻಸ್ಕಾರ್ಪಿಯೋʼದ ಹೊಸ ಅವತಾರವಾದ ʻಸ್ಕಾರ್ಪಿಯೋ ಕ್ಲಾಸಿಕ್‌ʼನ ಹೊಸ ವೃತ್ತಿಗಳ ಬೆಲೆಗಳನ್ನು ಘೋಷಿಸಿದೆ. ತಾಜಾ ವಿನ್ಯಾಸ, ಸಮಕಾಲೀನ ಒಳಾಂಗಣಗಳು, ಬಿಲ್ಟ್‌-ಇನ್‌ ತಂತ್ರಜ್ಞಾನ ಮತ್ತು ಹೊಸ ಶಕ್ತಿಶಾಲಿ ಎಂಜಿನ್ ಹೊಂದಿರುವ ದಿಟ್ಟ ಮತ್ತು ನೈಜ ʻಎಸ್‌ಯುವಿʼಯು  ʻಕ್ಲಾಸಿಕ್ ಎಸ್‌ʼ ಮತ್ತು ʻಕ್ಲಾಸಿಕ್‌ ಎಸ್‌11ʼ ಎಂಬ ಎರಡು ಆವೃತ್ತಿಗಳಲ್ಲಿ ಲಭ್ಯವಿರುತ್ತದೆ ಮತ್ತು ಇದು ₹ 11.99 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ʻಸ್ಕಾರ್ಪಿಯೋʼ ಬ್ರಾಂಡ್ ತನ್ನ ಗ್ರಾಹಕರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಕಾಲಾನಂತರದಲ್ಲಿ ವಿಕಸನಗೊಂಡಿದೆ. ದಿಟ್ಟ, ಶಕ್ತಿಶಾಲಿ ಮತ್ತು ಸಮರ್ಥವಾದ ನೈಜ ʻಎಸ್‌ಯುವಿʼಯನ್ನು ಹುಡುಕುವ ಉತ್ಸಾಹಿಗಳ ಪಾಲಿಗೆ ʻಸ್ಕಾರ್ಪಿಯಯೋʼ ಜನಪ್ರಿಯ ಆಯ್ಕೆಯಾಗಿ ಉಳಿದಿದೆ. ʻಸ್ಕಾರ್ಪಿಯೋ ಕ್ಲಾಸಿಕ್ʼ ತನ್ನ ವಿಶಿಷ್ಟ ವಿನ್ಯಾಸ, ತಪ್ಪಿಸಿಲಾಗದ ಉಪಸ್ಥಿತಿ ಮತ್ತು ಶಕ್ತಿಯುತ ಕಾರ್ಯಕ್ಷಮತೆಯ ಗುಣಲಕ್ಷಣಗಳ ಪ್ರದರ್ಶನವನ್ನು ಮುಂದುವರಿಸುತ್ತದೆ. ʻಸ್ಕಾರ್ಪಿಯೋ ಕ್ಲಾಸಿಕ್ʼ ಆವೃತ್ತಿಯ ಬೆಲೆಗಳು ಈ ಕೆಳಗಿನಂತಿವೆ:

ಮಹೀಂದ್ರ ಸ್ಕಾರ್ಪಿಯೋ ಕ್ಲಾಸಿಕ್ ಕಾರಿನ ಬೆಲೆ:
ಕ್ಲಾಸಿಕ್ ಎಸ್‌ :  11.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಕ್ಲಾಸಿಕ್ ಎಸ್11:  15.49 ಲಕ್ಷ ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

Latest Videos

undefined

 

ಅತ್ಯಾಕರ್ಷಕ, ಐಕಾನಿಕ್ ಬ್ರ್ಯಾಂಡ್ ಮಹೀಂದ್ರ ಸ್ಕಾರ್ಪಿಯೋ ಕ್ಲಾಸಿಕ್ ಬಿಡುಗಡೆ!

ಹೊಸ ದಿಟ್ಟ ಗ್ರಿಲ್‌ ಮತ್ತು ಬಲಿಷ್ಠ ಬಾನೆಟ್‌ನೊಂದಿಗೆ ವಿಶಿಷ್ಟವೆನಿಸಿರುವ ʻಸ್ಕಾರ್ಪಿಯೋ ಕ್ಲಾಸಿಕ್‌ʼನ ಮೂಲ ನೋಟಕ್ಕೆ ಹೊಸ ಟ್ವಿನ್-ಪೀಕ್ಸ್ ಲೋಗೋ ಮತ್ತಷ್ಟು ವಿಶೇಷತೆಯನ್ನು ಸೇರ್ಪಡೆಗೊಳಿಸುತ್ತದೆ. ಇವುಗಳಿಗೆ ಮಕುಟಮಣಿಯೆಂಬಂತೆ ʻಸ್ಕಾರ್ಪಿಯೋ ಕ್ಲಾಸಿಕ್ʼ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ.  ಹಗುರವಾದ ʻಸಂಪೂರ್ಣ-ಅಲ್ಯೂಮಿನಿಯಂ ಜೆನ್-2 ಎಂಹಾಕ್ʼ (GEN-2 mHawk) ಎಂಜಿನ್‌ನಿಂದ ಚಾಲಿತವಾಗುವ ಇದು ಇದು 97 ಕಿಲೋವ್ಯಾಟ್ (132 ಪಿಎಸ್) ಶಕ್ತಿ ಮತ್ತು 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಚಾಲನಾ ಅನುಭವವನ್ನು ಮತ್ತಷ್ಟು ಸುಧಾರಿಸಲು, ಮ್ಯಾನುವಲ್ ಟ್ರಾನ್ಸ್‌ಮಿಷನ್‌ನಲ್ಲಿ ಹೊಸ ಆರು-ಸ್ಪೀಡ್ ಕೇಬಲ್ ಶಿಫ್ಟ್ ಅನ್ನು ಪರಿಚಯಿಸಲಾಗಿದೆ. ಉತ್ಕೃಷ್ಟ ಸವಾರಿ ಮತ್ತು ನಿರ್ವಹಣೆಯನ್ನು ನೀಡಲು ʻಎಂಟಿವಿ-ಸಿಎಲ್ʼ ತಂತ್ರಜ್ಞಾನದೊಂದಿಗೆ ಸಸ್ಪೆನ್ಷನ್ ವ್ಯವಸ್ಥೆಯನ್ನು ಸುಧಾರಿಸಲಾಗಿದೆ. ಸುಲಭವಾದ ಚಾಲನಾ ಕುಶಲತೆ ಮತ್ತು ನಿಯಂತ್ರಣಕ್ಕಾಗಿ ಸ್ಟೀರಿಂಗ್ ವ್ಯವಸ್ಥೆಯಲ್ಲಿ ಗಮನಾರ್ಹ ಸುಧಾರಣೆ ಮಾಡಲಾಗಿದೆ.

ಪ್ರೀಮಿಯಂ ಭಾಗವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ʻಸ್ಕಾರ್ಪಿಯೋ ಕ್ಲಾಸಿಕ್ʼ, ಹೊಸ ಡ್ಯುಯಲ್‌ ಟೋನ್ಗಳ ʻಬೇಷ್‌-ಮತ್ತು-ಕಪ್ಪುʼ ಒಳಾಂಗಣ ಥೀಮ್, ಕ್ಲಾಸಿಕ್ ವುಡ್ ಪ್ಯಾಟರ್ನ್ ಕನ್ಸೋಲ್ ಮತ್ತು ಪ್ರೀಮಿಯಂ ಕ್ವಿಲ್ಟೆಡ್ ಅಪ್‌ಹೋಲ್ಸ್‌ಟರಿಯೊಂದಿಗೆ ಬರುತ್ತದೆ. ಈ ವಾಹನವು ʻಫೋನ್ ಮಿರರಿಂಗ್ʼ ಮತ್ತು ಇತರ ಆಧುನಿಕ ವೈಶಿಷ್ಟ್ಯಗಳೊಂದಿಗೆ ಹೊಸ 22.86 ಸೆಂ.ಮೀ ಟಚ್‌ಸ್ಕ್ರೀನ್‌ ಇನ್ಫೋಟೈನ್ಮೆಂಟ್ ವ್ಯವಸ್ಥೆಯನ್ನು ಹೊಂದಿದೆ. ʻರೆಡ್ ರೇಜ್ʼ, ʻನಪೋಲಿ ಬ್ಲ್ಯಾಕ್ʼ, ʻಡಿಸ್ಯಾಟ್ ಸಿಲ್ವರ್ʼ, ʻಪರ್ಲ್ ವೈಟ್ʼ ಮತ್ತು ಹೊಸದಾಗಿ ಪರಿಚಯಿಸಲಾದ ʻಗ್ಯಾಲಕ್ಸಿ ಗ್ರೇʼ ಎಂಬ ಐದು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಇದು ಮಹೀಂದ್ರಾ ಡೀಲರ್‌ಶಿಪ್‌ಗಳಲ್ಲಿ ಆಗಸ್ಟ್ 12, 2022 ರಿಂದ ಗ್ರಾಹಕರಿಗೆ ವೀಕ್ಷಣೆ ಮತ್ತು ಟೆಸ್ಟ್‌ಡ್ರೈವ್ ಮಾಡಲು ಲಭ್ಯವಾಗಲಿದೆ.  

 

5 ಮಹೀಂದ್ರಾ ಆಲ್ ಎಲೆಕ್ಟ್ರಿಕ್ ಎಸ್ಯುವಿ ವಿನ್ಯಾಸ, ಟೀಸರ್ ಬಿಡುಗಡೆ

ಕ್ಲಾಸಿಕ್ ಎಸ್‌
·       LED ಟೇಲ್ ಲ್ಯಾಂಪ್‌ಗಳು
·       2ನೇ ಸಾಲಿನ ಸೀಟ್‌ಗೆ ಎ.ಸಿ ವೆಂಟ್‌ಗಳು
·       ಹೈಡ್ರಾಲಿಕ್ ಅಸಿಸ್ಟೆಡ್ ಬಾನೆಟ್
·       ಬಾನೆಟ್ ಸ್ಕೂಪ್
·       ಡ್ಯುಯಲ್ ಏರ್‌ಬ್ಯಾಗ್
·       ಮೈಕ್ರೋ ಹೈಬ್ರಿಡ್ ಟೆಕ್
·       ಇಂಟೆಲಿಪಾರ್ಕ್‌ (Intellipark)

ಕ್ಲಾಸಿಕ್ ಎಸ್‌11
·       22.86 ಸೆಂ.ಮೀ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್
·       LED ಐಬ್ರೋಸ್‌
·       ಡಿ.ಆರ್.ಎಲ್.
·       ಸ್ಪಾಯ್ಲರ್
·       ಡೈಮಂಡ್ ಕಟ್ ಅಲಾಯ್ ವ್ಹೀಲ್‌ಗಳು
·       ಮುಂದಿನ ಸೀಟ್‌ಗಳಿಗೆ ಆರ್ಮ್ ರೆಸ್ಟ್

click me!