ಹೊಚ್ಚ ಹೊಸ ಮಾರುತಿ ಅಲ್ಟೋ ಕೆ10 ಬಿಡುಗಡೆ, 3.99 ಲಕ್ಷ ರೂಪಾಯಿ, 25 ಕಿ.ಮೀ ಮೈಲೇಜ್!

By Suvarna NewsFirst Published Aug 18, 2022, 3:51 PM IST
Highlights

ಬಹುನಿರೀಕ್ಷಿತ ಮಾರುತಿ ಸುಜುಕಿ ಅಲ್ಟೋ ಕೆ10 ಕಾರು ಬಿಡುಗಡೆಯಾಗಿದೆ. ಎಲೆಕ್ಟ್ರಿಕ್ OVRM, ಟಚ್‌ಸ್ಕ್ರೀನ್ , 1ಲೀಟರ್ ಪೆಟ್ರೋಲ್‌ಗೆ 24.90 ಕಿ.ಮೀ ಮೈಲೇಜ್ ಸಾಮರ್ಥ್ಯ ಹೊಸ ಕಾರು ಇದಾಗಿದೆ. ಇದರ ಬೆಲೆ 3.99 ಲಕ್ಷ ರೂಪಾಯಿ ಮಾತ್ರ.

ನವದೆಹಲಿ(ಆ.18): ಮಾರುತಿ ಸುಜುಕಿ ದೇಶದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಅತ್ಯಧಿಕ ಮಾರಾಟ ದಾಖಲೆ ಹೊಂದಿರುವ ಮಾರುತಿ ಅಲ್ಟೋ ಕೆ10 ಇದೀಗ ಹೊಸ ರೂಪದಲ್ಲಿ ಬಿಡುಗಡೆಯಾಗಿದೆ. ಮತ್ತಷ್ಟು ಆಕರ್ಷಕ ವಿನ್ಯಾಸ ಹೊಂದಿರುವ ನೂತನ ಅಲ್ಟೋ ಕೆ10 ಕಾರು ಅತ್ಯಾಧುನಿಕ ಫೀಚರ್ಸ್ ಹೊಂದಿದೆ. ಎಲೆಕ್ಟ್ರಿಕ್ OVRM, ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ. ನೂತನ ಆಲ್ಟೋ ಕೆ10 ಕಾರು ಹ್ಯುಂಡೈ ಸ್ಯಾಂಟ್ರೋ, ರೆನಾಲ್ಟ್ ಕ್ವಿಡ್ ಕಾರಿಗೆ ಪ್ರತಿಸ್ಪರ್ಧಿಯಾಗಿದೆ. ಅಲ್ಟೋ ಕೆ10 ಕಾರಿನ ಬೆಲೆ 3.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಿಕ ಬೆಲೆ ಹೊಂದಿದೆ. ಇನ್ನು ಈ ಕಾರನ್ನು11,000 ರೂಪಾಯಿ ನೀಡಿ ಬುಕ್ ಮಾಡಿಕೊಳ್ಳಬಹುದು. ಗಗನಕ್ಕೇರಿರುವ ಇಂಧನ ಬೆಲೆ ನಡುವೆ ಈ ನೂತನ ಅಲ್ಟೋ ಕೆ10 ಅತ್ಯುತ್ತಮ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. 1 ಲೀಟರ್ ಪೆಟ್ರೋಲ್‌ಗೆ 24.90 ಕಿ.ಮೀ ಮೈಲೇಜ್ ನೀಡಲಿದೆ. ಮಾರುತಿ ಅಲ್ಟೋ ಕೆ10 ಕಾರು 6 ವೇರಿಯೆಂಟ್‌ನಲ್ಲಿ ಲಭ್ಯವಿದೆ. ಜೊತೆಗೆ 6 ಬಣ್ಣಗಳ ಆಯ್ಕೆಯನ್ನು ಹೊಂದಿದೆ. 1.0 ಲೀಟರ್ ಎಂಜಿನ್ ಹೊಂದಿರುವ ಅಲ್ಟೋ ಕೆ10 ಕಾರು 66bhp ಪವರ್ ಹಾಗೂ  89Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆ ಹೊಂದಿದೆ. 

ನೂತನ ಕಾರು ವಿನ್ಯಾಸದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಮುಂಭಾಗ ಹಾಗೂ ರೇರ್ ಬಂಪರ್ಸ್ ಹೊಸ ವಿನ್ಯಾಸದಲ್ಲಿದೆ. ಹ್ಯಾಲೋಜಿನ್ ಹೆಡ್‌ಲ್ಯಾಂಪ್ಸ್ , ಸಿಂಗಲ್ ಪೀಸ್ ಗ್ರಿಲ್,  ಬ್ಲಾಕ್ ಸ್ಟೀಲ್ ವ್ಹೀಲ್, ಸ್ಕ್ವಾರ್ ಟೈಲ್ ಲೈಟ್ಸ್, ಇಂಟಿಗ್ರೇಟೆಡ್ ಸ್ಪಾಯ್ಲರ್, ಹೈ ಮೌಂಟೆಡ್ ಸ್ಟಾಪ್ ಲ್ಯಾಂಪ್, ಫೆಂಡರ್ ಮೌಂಟೆಡ್ ಟರ್ನ್ ಇಂಡಿಕೇಟರ್ ಹೊಸ ವಿನ್ಯಾಸದಲ್ಲಿದೆ. ಹೀಗಾಗಿ ಅಲ್ಟೋ ಕೆ10 ಕಾರಿನ ಅಂದ ಮತ್ತಷ್ಟು ಹೆಚ್ಚಾಗಿದೆ.

31 ಕಿ.ಮೀ ಮೈಲೇಜ್, ಕೈಗೆಟುಕುವದ ದರದ ಮಾರುತಿ ಸುಜುಕಿ ಸ್ವಿಫ್ಟ್ CNG ಕಾರು ಬಿಡುಗಡೆ!

ಅಲ್ಟೋ 6 ವೇರಿಯೆಂಟ್ ಹಾಗೂ ಬೆಲೆ:
ಸ್ಟಾಂಡರ್ಡ್ MT :3,99,000 ರೂಪಾಯಿ(ಎಕ್ಸ್ ಶೋರೂಂ)
LXi MT:Rs 4,82,000 ರೂಪಾಯಿ(ಎಕ್ಸ್ ಶೋರೂಂ) 
VXi MT: Rs 4,99,500 ರೂಪಾಯಿ(ಎಕ್ಸ್ ಶೋರೂಂ)
VXi AGS: Rs 5,49,500 ರೂಪಾಯಿ(ಎಕ್ಸ್ ಶೋರೂಂ)
VXi+ MT: Rs 5,33,500 ರೂಪಾಯಿ(ಎಕ್ಸ್ ಶೋರೂಂ)
VXi+ AGS: Rs 5,83,500 ರೂಪಾಯಿ(ಎಕ್ಸ್ ಶೋರೂಂ)

ಮಾರುತಿ ಸುಜುಕಿ ಆಯ್ದ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್, ಆಫರ್ ಕೆಲ ದಿನ ಮಾತ್ರ!

ಕಡಿಮೆ ಬೆಲೆಯ ಹಾಗೂ ಅತ್ಯುತ್ತಮ ಮೈಲೇಜ್ ನೀಡಬಲ್ಲ ಕಾರು ಮಾತ್ರವಲ್ಲ, ಸುರಕ್ಷತೆ ಕಡೆಗೂ ಮಾರುತಿ ಹೆಚ್ಚಿನ ಗಮನಹರಿಸಿದೆ. ನೂತನ ಅಲ್ಟೋ ಕೆ10 ಕಾರಿನಲ್ಲಿ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್(ABS) ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಶನ್(EBD),ಡ್ಯುಯೆಲ್ ಫ್ರಂಟ್ ಏರ್‌ಬ್ಯಾಗ್, ಸ್ಪೀಡ್ ಸೆನ್ಸಿಂಗ್ ಅಲರಾಂ, ಡೂರ್ ಲಾಕ್ ಸೇರಿದಂತೆ ಹಲವು ಫೀಚರ್ಸ್ ನೀಡಲಾಗಿದೆ.
 

click me!