ಮೂರು ವರ್ಷಗಳ ಹಿಂದೆ ಕಿಯಾ ಮೋಟಾರ್ಸ್ ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸಿತು. ಕಿಯಾ ಸೆಲ್ಟೋಸ್ SUV ಕಾರು ಬಿಡುಗಡೆ ಮಾಡಿತು. ಇದೀಗ ಮೂರನೇ ವರ್ಷಾಚರಣೆಯಲ್ಲಿರುವ ಕಿಯಾ ಹೊಸ ದಾಖಲೆ ಬರೆದಿದೆ.
ಅನಂತಪುರಂ(ಆ.18): ದೇಶದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಕಾರು ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಕಿಯಾ ಇಂಡಿಯಾ ತನ್ನ ಫ್ಲಾಗ್‌ಶಿಪ್ ಮಧ್ಯಮ ಗಾತ್ರ ಎಸ್‌ಯುವಿ ಸೆಲ್ಟೋಸ್ ದೇಶದಲ್ಲಿ 3 ಲಕ್ಷ ಮಾರಾಟ ಮೈಲಿಗಲ್ಲು ಸಾಧಿಸಿದೆ. ಕೇವಲ 3 ವರ್ಷದಲ್ಲಿ ಕಿಯೋ ಮೋಟಾರ್ಸ್ ಈ ಸಾಧನೆ ಮಾಡಿದೆ. ಅತೀ ಕಡಿಮೆ ಅವಧಿಯಲ್ಲಿ 3 ಲಕ್ಷ ಮೈಲಿಗಲ್ಲು ಸಾಧಿಸಿದ ಎಸ್‌ಯುವಿ ಅನ್ನೋ ಹೆಗ್ಗಳಿಕೆಗೆ ಕಿಯೋ ಪಾತ್ರವಾಗಿದೆ. ಭಾರತದಲ್ಲಿ ಕಿಯಾ ಕಾರುಗಳು ಅತ್ಯಂತ ಜನಪ್ರಿಯವಾಗಿದೆ. ಎಲ್ಲ ವಿಭಾಗಗಳಲ್ಲೂ ಆರು ಏರ್‌ಬ್ಯಾಗ್‌ಗಳನ್ನು ಹೊಂದಿರುವ ಈ ಸೆಗ್ಮೆಂಟ್‌ನಲ್ಲೇ ಪ್ರಥಮ ಕಾರು ಇದಾಗಿದೆ. 2022 ಆಗಸ್ಟ್ 22 ರಂದು ಭಾರತದಲ್ಲಿ ತನ್ನ 3ನೇ ವರ್ಷದ ಆಚರಣೆಯನ್ನು ಕಿಯಾ ಇಂಡಿಯಾ ಆಚರಿಸಲಿದ್ದು, ಭಾರತದಲ್ಲಿ ಸೆಲ್ಟೋಸ್ ಬಿಡುಗಡೆ ಮಾಡಿ ಮೂರು ವರ್ಷ ಆಗಲಿದೆ.
ಭಾರತದಲ್ಲಿ ಕಿಯಾ ಸೆಲ್ಟೋಸ್ ಅತ್ಯಂತ ಜನಪ್ರಿಯ ಕಾರು ಆಗಿದ್ದು, ದೇಶದಲ್ಲಿ ಕಂಪನಿಯ ಒಟ್ಟು ಮಾರಾಟದ 60% ರಷ್ಟನ್ನು ಒಳಗೊಂಡಿದೆ. ಪರಿಚಯಿಸುತ್ತಿದ್ದಂತೆಯೇ ಹೊಸ ಕಾಲದ ಖರೀದಿದಾರರು ಈ ಮಾಡೆಲ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾಕೆಂದರೆ, ಇದು ಆಕರ್ಷಕ ವಿನ್ಯಾಸ, ಈ ವರ್ಗದಲ್ಲೇ ಪ್ರಮುಖ ಕನೆಕ್ಟಿವಿಟಿ ಸೌಲಭ್ಯಗಳು ಮತ್ತು ಅದ್ಭುತ ಅನುಭವವನ್ನು ಹೊಂದಿತ್ತು. ಭಾರತದ ಮಾರುಕಟ್ಟೆಯಲ್ಲಿ ಇದು ತನ್ನ ಪಯಣವನ್ನು ಯಶಸ್ವಿಯಾಗಿ ನಡೆಸಿರುವುದರ ಜೊತೆಗೆ, ಕಿಯಾ ಇಂಡಿಯಾ ಅನಂತಪುರ ಘಟಕದಿಂದ ಈವರೆಗೆ 91 ಕ್ಕೂ ಹೆಚ್ಚು ದೇಶಗಳಿಗೆ 103,033 ಸೆಲ್ಟೋಸ್ ಅನ್ನು ರಫ್ತು ಮಾಡಲಾಗಿದೆ.
undefined
Kia EV6 ಹೊಚ್ಚ ಹೊಸ ಕಿಯಾ EV6 ಎಲೆಕ್ಟ್ರಿಕ್ ಕಾರು, 528 ಕಿ.ಮೀ ಮೈಲೇಜ್, ಬುಕಿಂಗ್ ಬೆಲೆ 3 ಲಕ್ಷ ರೂ!
ಭಾರತದಲ್ಲಿ ನಮ್ಮ ಮೊದಲ ಉತ್ಪನ್ನವಾಗಿರುವ ಸೆಲ್ಟೋಸ್ ಕಿಯಾದ ಯಶಸ್ಸಿನ ಕಥೆಯಲ್ಲಿ ಮಹತ್ವದ ಪಾತ್ರ ಹೊಂದಿದೆ. ಸೆಲ್ಟೋಸ್ ಮೂಲಕ ಕಿಯಾ ಇಂಡಿಯಾ ನಿಜವಾದ ಬದಲಾವಣೆ ಮಾಡುವ ಸಂಸ್ಥೆ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗಿದೆ ಮತ್ತು ದೇಶದಲ್ಲಿ ಮಾರಾಟ ಆರಂಭ ಮಾಡಿದ ಎರಡು ತಿಂಗಳಲ್ಲೇ 5 ಪ್ರಮುಖ ಕಾರು ಉತ್ಪಾದಕ ಸಂಸ್ಥೆಗಳಲ್ಲಿ ಒಂದಾಗಿ ಸ್ಥಾನ ಪಡೆಯಲು ಸಾಧ್ಯವಾಯಿತು. ಸೆಲ್ಟೋಸ್ ಮೂಲಕ ನಾವು ವಿಶ್ವದರ್ಜೆಯ ಉತ್ಪನ್ನವನ್ನು ಒದಗಿಸಲು ಬಯಸಿದ್ದೆವು. ಭಾರತೀಯರಿಂದ ನಮಗೆ ಸಿಕ್ಕ ಅದ್ಭುತ ಪ್ರತಿಕ್ರಿಯೆಯು ನಾವು ಅಂದುಕೊಂಡಿದ್ದನ್ನು ಸಾಧಿಸಿದ್ದೇವೆ ಎಂಬುದನ್ನು ತಿಳಿಸುತ್ತಿದೆ. ಈ ವಿಭಾಗದಲ್ಲಿ ಸೆಲ್ಟೋಸ್ ಮಹತ್ವದ ಛಾಪು ಮೂಡಿಸಿರುವುದಷ್ಟೇ ಅಲ್ಲ, ಒಟ್ಟಾರೆ ಭಾರತದ ವಾಹನ ಉದ್ಯಮದಲ್ಲೂ ಮಹತ್ವದ ಹೆಜ್ಜೆಯಾಗಿದೆ. ಹೊಸ ಕಾಲದ ಭಾರತೀಯ ಗ್ರಾಹಕರಿಗೆ ಅತ್ಯಂತ ಮೆಚ್ಚಿನ ಕಾರು ಇದಾಗಿದೆ ಎಂದು ಕಿಯಾ ಇಂಡಿಯಾ ಮುಖ್ಯ ಸೇಲ್ಸ್ ಆಫೀಸರ್ ಮ್ಯುಂಗ್ ಸಿಕ್ ಸಾಹ್ನ್ ಹೇಳಿದ್ದಾರೆ.
ಇತ್ತೀಚೆಗೆ ಸೆಲ್ಟೋಸ್‌ನಲ್ಲಿ ಪ್ರಮಾಣಿತವಾಗಿ ಆರು ಏರ್‌ಬ್ಯಾಗ್‌ಗಳನ್ನು ನಾವು ಪರಿಚಯಿಸಿದ್ದೇವೆ. ಇದು ಕೂಡ ಈ ಸೆಗ್ಮೆಂಟ್‌ನಲ್ಲಿ ಪ್ರಥಮವಾಗಿದೆ. ನಮ್ಮ ಉತ್ಪನ್ನದಲ್ಲಿ ಇಂತಹ ರೆಗ್ಯುಲರ್ ಅಪ್‌ಡೇಟ್‌ಗಳನ್ನು ನೀಡುವುದು ಮತ್ತು ಗ್ರಾಹಕ ಕೇಂದ್ರಿತ ಅಪ್ರೋಚ್‌ನಿಂದಾಗಿ ಈ ಬೆಳವಣಿಗೆ ಹೀಗೆಯೇ ಮುಂದುವರಿಯುತ್ತದೆ ಎಂದು ನಮಗೆ ಖಚಿತವಿದೆ ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಬಲವಾದ ಬ್ರ್ಯಾಂಡ್ ಆಗಿ ನಾವು ಬೆಳೆಯುತ್ತೇವೆ. ಎಂದು ಮ್ಯುಂಗ್ ಸಿಕ್ ಸಾಹ್ನ್ ಹೇಳಿದ್ದಾರೆ.
Kia Carens Car ದಾಖಲೆ ಬರೆದ ಕಿಯಾ ಕರೆನ್ಸ್, ಒಂದೇ ದಿನ 40 MPV ಕಾರು ವಿತರಣೆ!
ಕಿಯಾ ಇಂಡಿಯಾ ದೇಶದಲ್ಲಿ 5 ಲಕ್ಷ ಮಾರಾಟದ ಮೈಲಿಗಲ್ಲು ಸಾಧಿಸಿದೆ. ಒಟ್ಟಾರೆ ಮಾರಾಟದಲ್ಲಿ 60% ರಷ್ಟನ್ನು ಸೆಲ್ಟೋಸ್ ಹೊಂದಿದೆ. 58% ಸೆಲ್ಟೋಸ್ ಮಾರಾಟವು ಅಗ್ರ ವೇರಿಯಂಟ್‌ಗಳದ್ದಾಗಿದ್ದರೆ, ಈ ಮಾದರಿಯ ಆಟೊಮ್ಯಾಟಿಕ್ ಆವೃತ್ತಿಯು 25% ರಷ್ಟು ಮಾರಾಟವಾಗಿದೆ. ಕ್ರಾಂತಿಕಾರಿ ಐಎಂಟಿ ತಂತ್ರಜ್ಞಾನವು ಖರೀದಿದಾರರಲ್ಲಿ ಭಾರಿ ಆಸಕ್ತಿ ಮೂಡಿಸಿದ್ದು, 10 ಸೆಲ್ಟೋಸ್ ಖರೀದಿದಾರರ ಪೈಕಿ 1 ಗ್ರಾಹಕರು 2022 ರಲ್ಲಿ ಇದನ್ನು ಖರೀದಿ ಮಾಡಿದ್ದಾರೆ. ಹಾಗೆಯೇ, ಡೀಸೆಲ್ ವಾಹನದಲ್ಲಿ ಕಿಯಾ ಮೊದಲ ಬಾರಿಗೆ ಐಎಂಟಿ ಅನ್ನು ಒದಗಿಸುತ್ತಿದೆ. ಗ್ರಾಹಕರಲ್ಲಿ ಅತ್ಯಂತ ಜನಪ್ರಿಯ ವೇರಿಯಂಟ್ ಎಂದರೆ ಎಚ್‌ಟಿಎಕ್ಸ್ ಪೆಟ್ರೋಲ್ ಆಗಿದೆ ಮತ್ತು ಅತ್ಯಂತ ಜನಪ್ರಿಯ ಬಣ್ಣವು ಬಿಳಿಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ವೇರಿಯಂಟ್‌ನ ಬೇಡಿಕೆಯು ಸೆಲ್ಟೋಸ್‌ನಲ್ಲಿ ಸಮಾನವಾಗಿದ್ದು, 46% ಗ್ರಾಹಕರು ಸೆಲ್ಟೋಸ್‌ನ ಡೀಸೆಲ್ ಆವೃತ್ತಿಗೆ ಆದ್ಯತೆ ನೀಡಿದ್ದಾರೆ